Asianet Suvarna News Asianet Suvarna News

Relationship Tips: ನೆರೆಹೊರೆ ಜೊತೆ ಸ್ನೇಹ, ಬೆಳೆಸುವಾಗ ಹುಷಾರು!

ಪಕ್ಕದ ಮನೆಯಲ್ಲಿ ಯಾರಿದ್ದಾರೆ ಅನ್ನೋದೇ ತಿಳಿಯದ ಜನರಿದ್ದಾರೆ. ಮತ್ತೆ ಕೆಲವರು ನೆರೆ ಮನೆಯವರನ್ನು ತಮ್ಮ ಕುಟುಂಬಸ್ಥರಂತೆ ನೋಡ್ತಾರೆ. ನೆರೆ ಹೊರೆಯವರ ಜೊತೆ ಉತ್ತಮ ಸ್ನೇಹ ಹೊಂದಿರುವುದು ಅತ್ಯಗತ್ಯ. ಅನೇಕ ಪರಿಸ್ಥಿತಿಯಲ್ಲಿ ಅವರ ಸಹಾಯ ನಮಗೆ ಅನಿವಾರ್ಯವಾಗುತ್ತದೆ.
 

How To Make Your Friendship Better With Your Neighbours
Author
Bangalore, First Published Jun 25, 2022, 12:29 PM IST

ಸ್ವಂತ ಮನೆ (Home) ಇರಲಿ ಇಲ್ಲ ಬಾಡಿಗೆ ಮನೆ ಇರಲಿ, ಮನೆ ನೋಡುವ ವೇಳೆ ನೆರೆ ಹೊರೆ (neighbours) ಯವರ ಬಗ್ಗೆಯೂ ಸ್ವಲ್ಪ ಗಮನ ನೀಡ್ತೇವೆ. ಯಾಕೆಂದ್ರೆ ಅನೇಕ ಸಂದರ್ಭದಲ್ಲಿ ನೆರೆ ಹೊರೆಯವರ ಅವಶ್ಯಕತೆ ನಮಗಿರುತ್ತದೆ. ಒಬ್ಬಂಟಿಯಾಗಿ ಜೀವನ (Life) ನಡೆಸುವುದು ಸುಲಭದ ಮಾತಲ್ಲ. ನೆರೆಹೊರೆಯವರ ಜೊತೆ ಉತ್ತಮ ಸಂಬಂಧ ಬೆಳೆದ್ರೆ ಜೀವನದ ಖುಷಿ ಹೆಚ್ಚಾಗುತ್ತದೆ. ಅನೇಕರು ಸುಲಭವಾಗಿ ನೆರೆಯವರ ಜೊತೆ ಸ್ನೇಹ ಬೆಳೆಸ್ತಾರೆ. ಮತ್ತೆ ಕೆಲವರಿಗೆ ಇದು ಕಷ್ಟ. ಇನ್ನು ಕೆಲವರು ಸದಾ ನೆರೆಯವರ ಜೊತೆ ಜಗಳವಾಡ್ತಾರೆ. ಜಗಳದಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ನಿಮ್ಮ ನೆರೆ ಹೊರೆಯವರನ್ನು ನೀವು ಸ್ನೇಹದಿಂದ ನೋಡ್ಬೇಕು. ಇಂದು ನೆರಯವರ ಜೊತೆ ಹೇಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಬೇಕು ಎಂಬುದನ್ನು ನಾವು ಹೇಳ್ತೇವೆ.  

ನೆರೆಹೊರೆಯವರೊಂದಿಗೆ ಹೀಗೆ ಸಂಬಂಧ ಸುಧಾರಿಸಿ :  
ನಗುವಿನ ಜೊತೆ ಒಂದು ವಿಶ್ (Wish) :
ಮೊದಲ ಬಾರಿ ಆ ಏರಿಯಾದಲ್ಲಿ ಮನೆ ಪಡೆದಿದ್ದೀರಿ ಎಂದಿಟ್ಟುಕೊಳ್ಳಿ, ನೆರೆಯವರ ಜೊತೆ ಉತ್ತಮ ಸ್ನೇಹ ಬಯಸುತ್ತೀರಿ ಎಂದಾದ್ರೆ ಅವರು ನಿಮ್ಮನ್ನು ನೋಡಿದಾಗ ಒಂದು ಸ್ಮೈಲ್ (Smile) ಮಾಡಿ. ಹೈ, ಹಲೋ ಎಂದು ಮಾತು ಪ್ರಾರಂಭಿಸಿ. ನೆರೆಹೊರೆಯವರ ಯೋಗಕ್ಷೇಮವನ್ನು ವಿಚಾರಿಸಿ. ಇದು ನಿಮ್ಮ ಸ್ನೇಹ ಶುರುವಾಗಲು ನೆರವಾಗುತ್ತದೆ. 

ಹುಟ್ಟಿದ ಮಗುವಿನಲ್ಲಿ ಇದು ಕಾಮನ್, ಗಾಬರಿಯಾಗೋದೇನೂ ಬೇಡ

ನೆರೆಯವರ (Neighbour) ಜೊತೆ ಆಹಾರ (Food) ಹಂಚಿಕೆಯಿರಲಿ : ನಿಮ್ಮ ಮನೆಯಲ್ಲಿ ವಿಶೇಷ ಅಡುಗೆ ಮಾಡಿದ್ದರೆ ಅಥವಾ ನೀವು ಸ್ಪೇಷಲ್ ಆಹಾರವನ್ನು ಹೊರಗಡೆಯಿಂದ ತಂದಿದ್ದರೆ ಅದನ್ನು ಹಂಚಿ ತಿನ್ನಿ. ಮನೆಯಲ್ಲಿ ಮಾಡಿದ ಅಡುಗೆಯನ್ನು ಅವರಿಗೆ ನೀಡಿ. ವಿಶೇಷವಾಗಿ ಹಬ್ಬದ ಸಂದರ್ಭಗಳಲ್ಲಿ ನೀವು ಅವರಿಗೆ ಅಡುಗೆ, ಸಿಹಿಯನ್ನು ನೀಡಬಹುದು. ಹೀಗೆ ಮಾಡಿದ್ರೆ ಇಬ್ಬರ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಯಾಗುತ್ತದೆ. 

ಅವರ ಆರೋಗ್ಯ (Health) ವಿಚಾರಿಸಿ : ಈಗ ಯಾರಿಗೂ ಕಾಲಹರಣ ಮಾಡಲು ಸಮಯವಿಲ್ಲ. ಅದ್ರಲ್ಲೂ ಕೆಲಸಕ್ಕೆ ಹೋಗುವವರು ಸದಾ ಬ್ಯುಸಿಯಿರ್ತಾರೆ. ನೆರೆಯವರ ದಿನಚರಿ ಬಗ್ಗೆ ನಿಮಗೆ ಗಮನವಿರಲಿ. ಒಂದ್ವೇಲೆ ಎರಡು ದಿನಗಳಿಂದ ನೆರೆಯವರು ಕಾಣಿಸಿಲ್ಲವೆಂದಾದ್ರೆ ಅವರ ಮನೆ ಡೋರ್ ಬಡಿಯಿರಿ. ಅವರು ಮನೆಯಲ್ಲಿದ್ದರೆ ಆರೋಗ್ಯ ವಿಚಾರಿಸಿ. ಅವರಿಗೆ ಅಗತ್ಯವಿದೆ ಎನ್ನಿಸಿದ್ರೆ ಸಹಾಯ ಮಾಡಿ.   

ನೆರೆಯವರ ಬಗ್ಗೆಯೂ ಗಮನವಿರಲಿ : ನಮ್ಮ ಮನೆಯಲ್ಲಿ ನಾವು ಬೇಕಾದ ಹಾಗೆ ಇರ್ತೇವೆ ಎನ್ನುವವರು ಅನೇಕ ಮಂದಿ. ಆದ್ರೆ ನಿಮ್ಮ ವರ್ತನೆ ನೆರಯವರಿಗೆ ಕಿರಿಕಿರಿಯಾಗ್ಬಾರದು. ಅನೇಕ ಬಾರಿ ಅನಾರೋಗ್ಯಕ್ಕೆ ಒಳಗಾದವರು, ಓದುವ ಮಕ್ಕಳು ಅಥವಾ ವೃದ್ಧರಿರುತ್ತಾರೆ. ಅವರಿಗೆ ಶಾಂತ ವಾತಾವರಣ ಬೇಕಾಗುತ್ತದೆ. ನೀವು ದೊಡ್ಡದಾಗಿ ಟಿವಿ ಅಥವಾ ಮ್ಯೂಜಿಕ್ ಹಚ್ಚಿದ್ರೆ ಅವರಿಗೆ ತೊಂದರೆಯಾಗುತ್ತದೆ. ತಡರಾತ್ರಿಯ ಪಾರ್ಟಿಯಲ್ಲಿ ಗಲಾಟೆ ಮಾಡುವ ಮೂಲಕ ಅವರ ನಿದ್ರೆಗೆ ಭಂಗ ತರಬೇಡಿ. ಕಾರು ನಿಲ್ಲಿಸುವಾಗ ಅಥವಾ ಯಾವುದೇ ವಾಹನ ನಿಲ್ಲಿಸುವಾಗ್ಲೂ ಅವರ ವಾಹನ, ಅವರ ಪ್ರಯಾಣದ ಬಗ್ಗೆ ಲಕ್ಷ್ಯವಿರಲಿ.  

ನೆರೆಯವರಿಗೆ ನೆರವು : ಸಣ್ಣಪುಟ್ಟ ಸಹಾಯವನ್ನು ನೀವು ನೆರೆ ಮನೆಯವರಿಗೆ ಮಾಡಬಹುದು. ಪಾರ್ಸಲ್ ತೆಗೆದುಕೊಳ್ಳುವುದು ಇಲ್ಲವೆ ಸಕ್ಕರೆ ಖಾಲಿಯಾದಾಗ ನೀಡುವುದು ಹೀಗೆ ಸಣ್ಣಪುಟ್ಟ ನೆರವು ನೀಡಬಹುದು. ಇದ್ರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಸೆಕ್ಸ್ ಅಂದ್ರೆ ಪತ್ನಿ ದೂರ ಓಡ್ತಾಳೆ ಅಂದ್ರೆ ಕಾರಣವೇನಿರಬಹುದು?

ಸ್ನೇಹ ಬೆಳೆಸುವ ವೇಳೆ ನೆನಪಿಡಬೇಕಾದ ಸಂಗತಿ :
ಪೂರ್ವಾಪರ ಆಲೋಚಿಸಿ : ಕೆಲವರು ದುರುದ್ದೇಶಕ್ಕೆ ನಿಮ್ಮ ಸ್ನೇಹ ಬಯಸಿರುತ್ತಾರೆ. ನೀವು ಕುರುಡರಾಗಿ ಸ್ನೇಹ ಬೆಳೆಸುವುದು ಸೂಕ್ತವಲ್ಲ. ಆರಂಭದಲ್ಲಿ ಅವರ ಚಲನವಲನಗಳನ್ನು ಗಮನಿಸಿ ನಂತ್ರ ಅವರ ಸ್ನೇಹ ಬೆಳೆಸಲು ನಿರ್ಧರಿಸಿ. ಹಾಗೆಯೇ ಅವರ ಯಾವುದೇ ಕೆಟ್ಟ ಕೆಲಸಕ್ಕೆ ಬೆಂಬಲ ನೀಡಬೇಡಿ. ಮಾತು ಅತಿಯಾಗಿ ಅವರ ಕೆಲಸಕ್ಕೆ ಅಡ್ಡಿ ಮಾಡ್ಬೇಡಿ. ಸಖಾಸುಮ್ಮನೆ ಅವರ ಮನೆಗೆ ಹೋಗಿ ಕುಳಿತುಕೊಳ್ಳಬೇಡಿ. 

62 ವರ್ಷದ ತಂದೆಗೆ ಪಕ್ಕದ ಮನೆಯಾಕೆಯೊಂದಿಗೆ  ಪ್ರೀತಿ, ಗೊಂದಲದಲ್ಲಿ ಮಗ
 

Follow Us:
Download App:
  • android
  • ios