Love Story: 62 ವರ್ಷದ ತಂದೆಗೆ ಪಕ್ಕದ ಮನೆಯಾಕೆ ಮೇಲೆ ಪ್ರೀತಿ! ಗೊಂದಲದಲ್ಲಿ ಮಗ

ವಯಸ್ಸಾದ್ಮೇಲೆ ರಾಮಾ, ಶಿವಾ ಅಂತಾ ಇರ್ಬೇಕು.. ಹೀಗಂತ ಯೌವನದಲ್ಲಿರುವಾಗ ಸುಲಭವಾಗಿ ಹೇಳ್ತೇವೆ. ಆದ್ರೆ ಆ ವಯಸ್ಸಿಗೆ ಬಂದಾಗ ಅದ್ರ ಕಷ್ಟ ಗೊತ್ತಾಗುತ್ತದೆ. ವಯಸ್ಸು ಎಷ್ಟೇ ಆಗಿರಲಿ, ಒಂಟಿಯಾಗಿರುವುದು ಬಹಳ ಕಷ್ಟ. 
 

62 year old father wants to marry neighbor son in confusion

ಮಕ್ಕಳ (Children) ನ್ನು ಎಷ್ಟೇ ಪ್ರೀತಿ (Love) ಮಾಡ್ಲಿ, ಮಕ್ಕಳು ನಿಮ್ಮನ್ನು ಎಷ್ಟೇ ಪ್ರೀತಿಯಿಂದ ನೋಡಿಕೊಳ್ಳಲಿ ಸುಖ (Happy) - ದುಃಖಗಳನ್ನು ಹಂಚಿಕೊಳ್ಳಲು ಸಂಗಾತಿ (Partner) ಅತ್ಯಗತ್ಯ. ಮಕ್ಕಳು ದೊಡ್ಡವರಾದ್ಮೇಲೆ ಅವರ ದಾರಿ ನೋಡಿಕೊಳ್ತಾರೆ. ಅವರ ಓದು, ವೃತ್ತಿ, ಸಂಸಾರ ಹೀಗೆ ಅವರ ಜವಾಬ್ದಾರಿ ಹೆಚ್ಚಾಗುತ್ತ ಹೋಗುತ್ತದೆ. ಆಗ ಮಕ್ಕಳು ಮೊದಲಿನಂತೆ ಸದಾ ಪಾಲಕರ ಜೊತೆಗಿರಲು ಸಾಧ್ಯವಿಲ್ಲ. ವೃದ್ಧಾಪ್ಯದಲ್ಲೂ ಪತಿ-ಪತ್ನಿ ಒಟ್ಟಿಗಿದ್ದರೆ ಒಬ್ಬರಿಗೊಬ್ಬರು ಆಸರೆಯಾಗಬಹುದು. ಆದ್ರೆ ಎಲ್ಲರಿಗೂ ಆ ಅದೃಷ್ಟವಿರುವುದಿಲ್ಲ. ಒಬ್ಬರು ಬಹುಬೇಗ ಇಹಲೋಕ ತ್ಯಜಿಸಿರುತ್ತಾರೆ. ಆಗ ಇನ್ನೊಬ್ಬ ಸಂಗಾತಿ ಒಂಟಿಯಾಗ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಸಂಗಾತಿಯನ್ನು ಕಳೆದುಕೊಂಡ ಕೆಲವರು ಇನ್ನೊಂದು ವಿವಾಹವಾಗಿದ್ದಿದೆ. ಮತ್ತೆ ಕೆಲವರು ಮಕ್ಕಳ ಕಾರಣಕ್ಕೆ ಇನ್ನೊಂದು ಮದುವೆಯಾಗುವುದಿಲ್ಲ. ಮಕ್ಕಳ ಲಾಲನೆ-ಪಾಲನೆಯಲ್ಲಿ ಸಮಯ ಕಳೆದಿರುತ್ತದೆ. ಆದ್ರೆ ಮಕ್ಕಳು ವಯಸ್ಸಿಗೆ ಬಂದಂತೆ ಪಾಲಕರು ಒಂಟಿಯಾಗ್ತಾರೆ. ಒಂಟಿಯಾಗಿದ್ದ 62 ವರ್ಷದ ತಂದೆಯೊಬ್ಬನ ನಿರ್ಧಾರವನ್ನು ಮಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ತಜ್ಞರಿಂದ ಮುಂದೇನು ಮಾಡ್ಬೇಕೆಂದು ಸಲಹೆ ಕೂಡ ಕೇಳಿದ್ದಾನೆ.

ಮಗನ ಸಮಸ್ಯೆ ಏನು ? : ಸಾಮಾಜಿಕ ಜಾಲತಾಣದಲ್ಲಿ ತಂದೆಯ ಬಗ್ಗೆ ಮಗ ತನ್ನ ಸಮಸ್ಯೆ ಹಂಚಿಕೊಂಡಿದ್ದಾನೆ. ಮಗ ಚಿಕ್ಕವನಿರುವಾಗ್ಲೇ ತಾಯಿ ತೀರಿಕೊಂಡಿದ್ದರಂತೆ. ಮಗನ ಜವಾಬ್ದಾರಿಯನ್ನು ತಂದೆ ಹೊತ್ತುಕೊಂಡಿದ್ದರಂತೆ. ಎಂದೂ ತಾಯಿಯ ಕೊರತೆ ಕಾಣದಂತೆ ಮಗನನ್ನು ತಂದೆ ಸಾಕಿದ್ದರಂತೆ. ಈಗ ಮಗನಿಗೆ ಮದುವೆಯಾಗಿದೆ. ಮಗ ಪತ್ನಿ ಜೊತೆ ಬೇರೆ ಊರಿನಲ್ಲಿ ವಾಸ ಶುರು ಮಾಡಿದ್ದಾನಂತೆ. ಮಗನನ್ನು ಅತಿಯಾಗಿ ಪ್ರೀತಿಸುತ್ತಿದ್ದ ತಂದೆಗೆ ಮಗ ದೂರವಾಗಿರುವುದನ್ನು ಸಹಿಸಲು ಆಗ್ತಿಲ್ಲ. ಒಂಟಿತನ ವಿಪರೀತವಾಗಿ ಕಾಡ್ತಿದೆ. ಈ ಬಗ್ಗೆ ತಂದೆ, ಮಗನ ಬಳಿ ಅನೇಕ ಬಾರಿ ಹೇಳಿಕೊಂಡಿದ್ದಿದೆ. ಇಷ್ಟೇ ಅಲ್ಲ ದಿನವಿಡಿ ಬ್ಯುಸಿಯಾಗಿರಬೇಕೆಂಬ ಕಾರಣಕ್ಕೆ ಅನೇಕ ಕ್ಲಾಸ್ ಗಳಿಗೆ ಸೇರಿಕೊಂಡಿದ್ದಾರೆ ತಂದೆ. ಮಗನ ಸಮಸ್ಯೆ ಇದ್ಯಾವುದೂ ಅಲ್ಲ. ತಂದೆಯ ಮದುವೆ ನಿರ್ಧಾರ.

ಹೌದು, 62 ವರ್ಷದ ತಂದೆ, ಪಕ್ಕದ ಮನೆ ಮಹಿಳೆ ಜೊತೆ ವಿವಾಹವಾಗುವ ಮಾತನಾಡಿದ್ದಾರೆ. ನಾವಿಬ್ಬರೂ ಸಂಬಂಧದಲ್ಲಿದ್ದೇವೆಂದು ಮಗನಿಗೆ ಹೇಳಿದ್ದಾರೆ. ಇದು ಮಗನಿಗೆ ಶಾಕ್ ಆಗಿದೆ. ಆ ಮಹಿಳೆ ಕೂಡ ಒಂಟಿಯಾಗಿ ವಾಸವಾಗಿದ್ದಾಳಂತೆ. ಇಬ್ಬರೂ ಅನೇಕ ಕ್ಲಾಸ್ ಗಳಿಗೆ ಒಟ್ಟಿಗೆ ಹೋಗ್ತಾರೆ. ಜೀವನದಲ್ಲಿ ಪ್ರೀತಿ ಬೇಕು ಎಂಬ ಕಾರಣಕ್ಕೆ ಮಹಿಳೆ, ಮದುವೆ ನಿರ್ಧಾರ ಕೈಗೊಂಡಿದ್ದಾಳಂತೆ. ಈ ವಯಸ್ಸಿನಲ್ಲಿ ಮದುವೆ ಮಾಡಿಕೊಳ್ಳುವುದು ಎಷ್ಟು ಸರಿ? ಸಮಾಜ ಏನು ಹೇಳುತ್ತದೆ ಎಂಬುದು ಮಗನ ಪ್ರಶ್ನೆ. ಇದೇ ಕಾರಣಕ್ಕೆ ತಂದೆ-ಮಗನ ಮಧ್ಯೆ ಗಲಾಟೆ ಶುರುವಾಗಿದೆಯಂತೆ.

Extramarital Affair: ಟೆರೆಸ್ ನಲ್ಲಿ ಜಿಮ್ ಮಾಡ್ತಾ ಟ್ರೇನರ್ ಜೊತೆ ಒಂದಾದ ವಿವಾಹಿತ ಮಹಿಳೆ

ತಜ್ಞರ ಸಲಹೆ : ತಜ್ಞರು ಮಗನ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ನಡೆಸಿದ್ದಾರೆ. ಮೊದಲನೆಯದಾಗಿ ತಂದೆ ಸಂತೋಷ ಮುಖ್ಯವೋ ಅಥವಾ ಸಮಾಜದ ಮಾತುಗಳಾ ಎಂಬುದನ್ನು ನಿರ್ಧರಿಸಬೇಕೆಂದು ಮಗನಿಗೆ ತಜ್ಞರು ಹೇಳಿದ್ದಾರೆ. ತಂದೆಯನ್ನು ಅರ್ಥ ಮಾಡಿಕೊಳ್ಳುವ ಅಗತ್ಯ ಮಗನಿಗಿದೆ. ತಂದೆ ಬಾಲ್ಯದಿಂದಲೇ ಮಗನನ್ನು ಪ್ರೀತಿಯಿಂದ ಸಾಕಿದ್ದಾರೆ.  ಇಡೀ ಜೀವನವನ್ನು ಮಗನಿಗಾಗಿ ಮೀಸಲಿಟ್ಟಿದ್ದರು. ಮಗ ದೂರವಾದ್ಮೇಲೆ ಒಂಟಿತನ ಹೋಗಲಾಡಿಸಲು ಮಹಿಳೆ ಜೊತೆ ಸ್ನೇಹ ಬೆಳೆಸಿದ್ದಾರೆ. ಈಗ ಮಗನಾದವನು ತಂದೆ ಆಸೆ ಈಡೇರಿಸಬೇಕು. ಅವರ ಜೀವನದಲ್ಲೂ ಪ್ರೀತಿಯ ಅವಶ್ಯಕತೆಯಿದೆ. ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಪ್ರತಿಯೊಬ್ಬರಿಗೂ ಪ್ರೀತಿಸುವ ಹಕ್ಕಿದೆ.

Sex Life : ಲೈಂಗಿಕ ಜೀವನದ ಪ್ರಯೋಜನ ತಿಳಿದ್ರೆ ಅಚ್ಚರಿ ಪಡುತ್ತೀರಿ!

ವರ್ಷ 62 ಆಯ್ತು ಎನ್ನುವ ಕಾರಣಕ್ಕೆ ಮದುವೆಯಾಗ್ಬೇಡ ಎಂಬುದು ಸೂಕ್ತವಲ್ಲ. ಮೊದಲು ತಂದೆ ಜೊತೆ ಸರಿಯಾಗಿ ಮಾತನಾಡಿ. ಮಹಿಳೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಆಕೆ ನಿಜವಾಗಲೂ ತಂದೆಯನ್ನು ಪ್ರೀತಿಸುತ್ತಾರೆಂದ್ರೆ ತಂದೆ ನಿರ್ಧಾರವನ್ನು ಗೌರವಿಸಿ. ವೃದ್ಧಾಪ್ಯದಲ್ಲಿ ತಂದೆ ಸಂತೋಷ ಬಹಳ ಮುಖ್ಯ ಎಂಬುದನ್ನು ನೀವು ನೆನಪಿಡಿ ಎಂದು ತಜ್ಞರು ಮಗನಿಗೆ ಸಲಹೆ ನೀಡಿದ್ದಾರೆ.

Latest Videos
Follow Us:
Download App:
  • android
  • ios