ಸ್ನೇಹದಲ್ಲಿ ಜಗಳ ಮಾಮೂಲಿ. ಹೀಗಂತ ಪ್ರತಿ ದಿನ ಕಿತ್ತಾಡಿ, ಸಾರಿ ಕೇಳದೆ ಹೋದ್ರೆ ಗೆಳೆತನ ಬಹಳ ದಿನ ಉಳಿಯೋದಿಲ್ಲ. ಗೆಳೆತನ ಯಾವಾಗ್ಲೂ ಸಿಹಿಯಾಗಿರಬೇಕೆಂದ್ರೆ ಕಹಿ ಘಟನೆಯಲ್ಲೂ ಇಬ್ಬರು ಒಂದಾಗಿರಬೇಕು.
ಸ್ನೇಹಿತರಿಲ್ಲದ ಜೀವನ ಶೂನ್ಯ ಅಂದ್ರೆ ತಪ್ಪಾಗೋದಿಲ್ಲ. ಹೆಸರಿಗೆ ನೂರಾರು ಸ್ನೇಹಿತರನ್ನು ಹೊಂದುವ ಬದಲು ಕಷ್ಟ ಸುಖದಲ್ಲಿ ಭಾಗಿಯಾಗುವ ಒಬ್ಬ ಸ್ನೇಹಿತನಿದ್ರೂ ಜೀವನ ಸಾರ್ಥಕ. ಪ್ರಸಿದ್ಧಿ, ಆಸ್ತಿ ನೋಡದೆ ಬರುವ ಸ್ನೇಹಿತ ಯಾವಾಗ್ಲೂ ನಿಮ್ಮ ಜೊತೆಗಿರ್ತಾನೆ. ಸ್ನೇಹಿತರ ಮಧ್ಯೆ ಯಾವುದೇ ಮುಚ್ಚುಮರೆ ಇರೋದಿಲ್ಲ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆ, ಜಗಳ ಕೂಡ ನಡೆಯುತ್ತಿರುತ್ತದೆ. ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡಿ, ಕೆಲವೇ ನಿಮಿಷದಲ್ಲಿ ಸ್ನೇಹಿತರು ಮತ್ತೆ ಒಂದಾಗ್ತಾರೆ. ಆದ್ರೆ ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪು ನಮ್ಮ ಆಪ್ತ ಗೆಳೆಯನಿಗೆ ನೋವುಂಟು ಮಾಡಬಹುದು. ಇದ್ರಿಂದ ದೀರ್ಘಕಾಲದ ಸ್ನೇಹದಲ್ಲಿ ಬಿರುಕು ಮೂಡಬಹುದು. ಆತನಿಲ್ಲದೆ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಬಹುದು. ಹಾಗಾಗಿ ವರ್ಷದ ಸ್ನೇಹ ನಿಮಿಷದಲ್ಲಿ ಹಾಳಾಗಬಾರದು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
ತಪ್ಪಿಗೆ ಕ್ಷಮೆ (Apologize) ಕೇಳೋದು ತಪ್ಪಲ್ಲ : ಸ್ನೇಹ (Friendship) ದಲ್ಲಿ ನೋ ಸಾರಿ, ನೋ ಥ್ಯಾಂಕ್ಸ್ ಎನ್ನುವ ಮಾತಿದೆ. ಆದ್ರೆ ಕೆಲವೊಮ್ಮೆ ಸ್ನೇಹಿತರ ಬಳಿ ಕ್ಷಮೆ ಕೇಳುವ ಅಗತ್ಯವಿರುತ್ತದೆ. ಇದು ನಿಮ್ಮ ಗೆಳೆತನವನ್ನು ಉಳಿಸುತ್ತದೆ. ನಿಮ್ಮಂದಿ ಯಾವುದೋ ತಪ್ಪಾಗಿರುತ್ತದೆ. ಆಗ ಅದ್ರ ಬಗ್ಗೆ ವಿನಃ ವಾದ ಮಾಡುವ ಬದಲು ನೀವು ಕ್ಷಮೆ ಕೇಳುವುದು ಒಳ್ಳೆಯದು. ವಿವಾದ (Dispute) ವನ್ನು ಹಾಗೆ ಬಿಟ್ಟರೆ ಇಬ್ಬರ ಮಧ್ಯೆ ಒಂದು ಗೆರೆ ಎಳೆದಂತಾಗುತ್ತದೆ. ಅದ್ರ ಬದಲು ತಕ್ಷಣ ಕರೆ ಮಾಡಿ, ಈ ಬಗ್ಗೆ ಮಾತನಾಡಿದ್ರೆ ಅವರ ಮನಸ್ಸು ಕೂಡ ತಿಳಿಯಾಗುತ್ತದೆ. ಇದ್ರಿಂದ ನಿಮ್ಮ ಗೆಳೆತನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.
ಗೆಳೆಯರಿಗೆ ಕರೆ ಮಾಡೋದನ್ನು ಮರೆಯಬೇಡಿ : ಇಂದಿನ ಬ್ಯುಸಿ ಲೈಫ್ ನಲ್ಲಿ ಅನೇಕ ಬಾರಿ ನಮ್ಮ ಸ್ನೇಹಿತರಿಗೆ ಕರೆ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ಕೆಲಸದಲ್ಲಿ ನಾವು ಮುಳುಗಿ ಹೋಗ್ತೇವೆ. ಗೆಳೆಯರ ಜೀವನದಲ್ಲಿ ದೊಡ್ಡ ಬದಲಾವಣೆಯಾದ್ರೂ ನಮಗೆ ತಿಳಿದಿರೋದಿಲ್ಲ. ಇದ್ರಿಂದ ಸ್ನೇಹಿತರ ನಡುವೆ ಅಂತರ ಬರಲು ಶುರುವಾಗುತ್ತದೆ. ಸ್ನೇಹ ಉಳಿಸಿಕೊಳ್ಳಬೇಕೆಂದ್ರೆ ಸಂಪರ್ಕದಲ್ಲಿರುವುದು ಮುಖ್ಯವಾಗುತ್ತದೆ. ಕಾಲಕಾಲಕ್ಕೆ ನಮ್ಮ ಸ್ನೇಹಿತರಿಗೆ ಕರೆ ಮಾಡಲು ಸಮಯ ಹೊಂದಿಸಿಕೊಳ್ಳಬೇಕು. ಸ್ನೇಹಿತರೊಂದಿಗೆ ಫೋನ್ (Phone) ನಲ್ಲಿ ಮಾತನಾಡುವ ಜೊತೆಗೆ ಆಗಾಗ ಭೇಟಿಯಾಗ್ಬೇಕು. ಆಗ್ಲೇ ಸ್ನೇಹ ಮತ್ತಷ್ಟು ಗಟ್ಟಿಯಾಗಲು ಸಾಧ್ಯ.
ಪ್ರೀತಿಸ್ದೋರನ್ನ ದೂರ ಮಾಡ್ಬೇಕು ಅಂದ್ರೆ ಕಷ್ಟ ಕಷ್ಟ!
ಸ್ನೇಹಿತನಿಗೆ ಕೆಟ್ಟದ್ದು ಮಾಡ್ಬೇಡಿ : ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಸ್ನೇಹಿತರಿಗೆ ಎಂದೂ ಕೆಟ್ಟದ್ದು ಮಾಡಬಾರದು. ಸ್ನೇಹಿತರ ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಕೂಡ ಮಾಡಬಾರದು. ಇದು ಸ್ನೇಹಕ್ಕೆ ಮಾಡುವ ದೊಡ್ಡ ಮೋಸ. ಸ್ನೇಹಿತರ ಅಭ್ಯಾಸ ಇಷ್ಟವಾಗಿಲ್ಲವೆಂದ್ರೆ ನೀವು ಅದನ್ನು ಅವರಿಗೆ ಹೇಳಬೇಕು. ಅವರನ್ನು ತಿದ್ದುವ ಪ್ರಯತ್ನ ನಡೆಸಬೇಕು. ಹಾಗಂತ ಅವರ ಮನಸ್ಸು ನೋಯಿಸುವ ಕೆಲಸ ಮಾಡಬಾರದು.
ಸಂಗಾತಿಯನ್ನು ಕಂಡ್ರೆ ಲೈಂಗಿಕ ಬಯಕೆ ಮೂಡ್ತಿಲ್ವಾ ? ಸ್ಪಾರ್ಕ್ ಮರಳಿ ತರಲು ಹೀಗೆ ಮಾಡಿ
ಕಷ್ಟದಲ್ಲಿರುವಾಗ ನೆರವಾಗಿ (Help in need): ಸ್ನೇಹ ಅನ್ನೋದು ಬರಿ ಸುಖ, ಸಂತೋಷದಲ್ಲಿರುವಾಗ ಮಾತ್ರ ಅನುಭವಿಸುವಂತಹದ್ದಲ್ಲ. ಸ್ನೇಹದಲ್ಲಿ ಕಷ್ಟಗಳು ಬಂದಾಗ ಜೊತೆಯಾಗಿ ನಿಲ್ಲುವ ಗುಣವಿರಬೇಕು. ಸ್ನೇಹಿತರಿಗೆ ಕಷ್ಟವೆಂದಾಗ ಅವರ ಸಹಾಯಕ್ಕೆ ಬರುವವನೇ ನಿಜವಾದ ಗೆಳೆಯ. ಅನೇಕರು ಸ್ನೇಹಿತರಂತೆ ನಟಿಸ್ತಾರೆ. ಕಷ್ಟ ಬಂದಾಗ ಓಡಿ ಹೋಗ್ತಾರೆ. ಇದನ್ನು ಎಂದಿಗೂ ಮಾಡಬೇಡಿ. ಸ್ನೇಹದಲ್ಲಿ ಪರಸ್ಪರ ಸಹಾಯ ಬಹಳ ಮುಖ್ಯ. ಅನೇಕ ಬಾರಿ ಒಂದು ಕಡೆಯಿಂದ ಮಾತ್ರ ಸಹಾಯ ಬರ್ತಿರುತ್ತದೆ. ಇನ್ನೊಂದು ಕಡೆಯಿಂದ ಯಾವುದೇ ನೆರವು ಸಿಗೋದಿಲ್ಲ. ಆಗ ಆ ಸ್ನೇಹಿತನ ಮನಸ್ಸಿಗೆ ನೋವಾಗುತ್ತದೆ. ಸ್ನೇಹಿತನಿಂದ ನೀವು ಸಹಾಯ ಪಡೆಯುತ್ತಿದ್ದು, ಆತನಿಗೆ ನೆರವಾಗ್ತಿಲ್ಲ ಎಂದಾದ್ರೆ ಈಗ್ಲೇ ನಿಮ್ಮ ಅಭ್ಯಾಸ ಬದಲಿಸಿಕೊಳ್ಳಿ.
