Asianet Suvarna News Asianet Suvarna News

ಪ್ರೀತಿಸ್ದೋರನ್ನ ದೂರ ಮಾಡ್ಬೇಕು ಅಂದ್ರೆ ಕಷ್ಟ ಕಷ್ಟ!

ಇಷ್ಟು ದಿನ ಪ್ರೀತಿಸಿದವರ ಬದುಕೇ ತನ್ನದು ಎಂದುಕೊಂಡಿರುವವರಿಗೆ ಏಕಾಏಕಿ ಅವರನ್ನು ಮರೆಯುವ ಕಾಲ ಬಂದರೆ ಜಗತ್ತೇ ಬಾಯ್ದೆರೆದು ನುಂಗುತ್ತಿರುವಂತೆ ಅನಿಸುತ್ತದೆ. ಬದುಕಿದ್ದು ಪ್ರಯೋಜನವೇನು ಎನ್ನುವ ಭಾವನೆಗಳೂ ಕಾಡಬಹುದು. ಆದರೆ, ಅಂತಹ ಸಮಯದಲ್ಲಿ ಕೆಲವು ಕ್ರಮಗಳ ಮೂಲಕ ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕು. ಈ ಒಂದು ಕಷ್ಟದ ಹಂತ ದಾಟಿಬಿಟ್ಟರೆ ಮುಂದೆಲ್ಲ ನಿಮ್ಮದೇ ಸ್ವತಂತ್ರ ಬದುಕು.    

How to stop love somebody
Author
First Published Nov 9, 2022, 4:16 PM IST

ಪ್ರೀತಿಸುವ ಸಮಯದಲ್ಲಿ ಜಗತ್ತೆಲ್ಲ ಮೋಹಕವಾಗಿರುವಂತೆ ಭಾಸವಾಗುತ್ತದೆ. ಒಂದೊಮ್ಮೆ ಅದೇ ಪ್ರೀತಿ ಕೈಕೊಟ್ಟರೆ ಜಗತ್ತೇ ನೋವಿನಿಂದ ಕೂಡಿರುವಂತೆ ಕಾಣುತ್ತದೆ. ಭ್ರಮನಿರಸನವಾಗಿ ಜೀವನವೇ ಬೇಡ ಎನ್ನುವಂತಾಗುತ್ತದೆ. ಅಷ್ಟೆಲ್ಲ ನೋವಿಗೆ ಒಳಗಾಗುವ ಬದಲು ಆ ವ್ಯಕ್ತಿಯನ್ನು ದೂರ ಮಾಡುವುದು ಉತ್ತಮ. ಪ್ರೀತಿ ಒಮ್ಮುಖವಾಗಿದ್ದಾಗ, ಯಾರಾದರೂ ಪ್ರೀತಿಸುವ ಭಾವನೆಯನ್ನು ನಮ್ಮಲ್ಲಿ ಮೂಡಿಸಿ ದೂರವಾದಾಗ, ಸಂಬಂಧ ತೀವ್ರವಾಗಿ ಹದಗೆಟ್ಟಾಗ ಅವರಿಂದ ದೂರವಾಗುವುದು ಮಾತ್ರವೇ ಪರಿಹಾರವಾಗಿರುತ್ತದೆ. ನಮ್ಮನ್ನು ನಾವು ಬಚಾವು ಮಾಡಿಕೊಳ್ಳಬೇಕು, ನಮ್ಮ ಚೈತನ್ಯವನ್ನು ರಕ್ಷಿಸಿಕೊಳ್ಳಬೇಕು ಎಂದಾದರೆ ಅವರನ್ನು ಮರೆಯಬೇಕಾಗುತ್ತದೆ. ಮನಸ್ಸಿನಿಂದಲೇ ಅವರನ್ನು ಕಿತ್ತೊಗೆಯಬೇಕಾಗುತ್ತದೆ. ಆದರೆ, ಅದು ಸುಲಭದ ಕೆಲಸವಲ್ಲ. ಅಷ್ಟು ದಿನ ಅವರನ್ನೇ ಪ್ರೀತಿಯ ಪ್ರಪಂಚ ಎಂದುಕೊಂಡಿದ್ದವರಿಗೆ ಏಕಾಏಕಿ ಮನದಿಂದ ಅವರನ್ನು ಹೊರಗಿಡುವುದು ಸಾಧ್ಯವಾಗುವುದಿಲ್ಲ. ಆದರೆ, ಪ್ರಯತ್ನಪಟ್ಟರೆ ಸಾಧ್ಯವಾಗದಿರುವುದು ಯಾವುದೂ ಇಲ್ಲ. ಕಷ್ಟವಾದರೂ ಶ್ರಮವಹಿಸಿದರೆ, ಸ್ವಲ್ಪ ಕಾಲ ಸಂಯಮದಿಂದ ಭಾವನೆಗಳನ್ನು ನಿಯಂತ್ರಿಸಿದರೆ ಅವರನ್ನು ಮರೆಯಬಹುದು. ಅದಕ್ಕಾಗಿ ಕೆಲವು ಮಾರ್ಗೋಪಾಯಗಳನ್ನು ಅನುಸರಿಸಬೇಕು. ಆ ಸಮಯದಲ್ಲಿ ಭಾವನಾತ್ಮಕ ಪ್ರಪಂಚದಿಂದ ಹೊರಬಂದು ವಾಸ್ತವವನ್ನು ಅರಿತುಕೊಳ್ಳಲು ಯತ್ನಿಸಬೇಕು. “ಜಗತ್ತು ಇಷ್ಟೇ ಅಲ್ಲʼ ಎನ್ನುವ ವಿಶಾಲ ದೃಷ್ಟಿಕೋನ ಹೊಂದಬೇಕು. ಆಗ ಆ ವ್ಯಕ್ತಿಯನ್ನು ಮರೆಯುವುದು ಸುಲಭವಾಗುತ್ತದೆ. ಅದಕ್ಕಾಗಿ ಒಂದಿಷ್ಟು ಟಿಪ್ಸ್.

•    ಸತ್ಯ ಒಪ್ಪಿಕೊಳ್ಳಿ (Accept Truth)
ನಮ್ಮ ಪ್ರೀತಿಯ ಆಯ್ಕೆ ಸರಿ ಇಲ್ಲದಿರುವುದನ್ನು ಒಪ್ಪಿಕೊಳ್ಳುವುದು ಮೊದಲ ಮಾರ್ಗ. ಇದು ಕಷ್ಟವಾಗಬಹುದು. ಆದರೆ, ಪ್ರಾಮಾಣಿಕವಾಗಿ (Honest) ಸತ್ಯವನ್ನು ಒಪ್ಪಿಕೊಂಡಾಗ ಸಾಧ್ಯವಾಗುತ್ತದೆ. ಪ್ರೀತಿಯ (Love) ಭಾವನೆ ವ್ಯಕ್ತಿ ಕೇಂದ್ರಿತವಾಗಿದ್ದಾಗ ನೋವಾಗುತ್ತದೆ. ಬದಲಿಗೆ, ಜೀವನಪ್ರೀತಿಯ ಬೃಹತ್‌ ಸ್ವರೂಪಕ್ಕೆ ಬಂದಾಗ ನೋವು ಇಲ್ಲವಾಗುತ್ತದೆ. ಆ ವ್ಯಕ್ತಿಯಿಂದ ದೂರವಾಗುವುದರಿಂದ ಏನೆಲ್ಲ ಲಾಭವಿದೆ ಎನ್ನುವುದನ್ನು ಪರಿಗಣಿಸಿ, ಅನುಭವವೊಂದು (Experience) ಪಾಠವಾಗಲಿ.

Love Guru: ಮದ್ವೆಯಾಗಿ ವರ್ಷಗಳೇ ಕಳೆದರೂ ಪ್ರೀತಿ ಹೊಸದರಂತಿರಲು ಇಲ್ಲಿದೆ ಲವ್ ಮೆಡಿಸಿನ್

•    ಸ್ವ ಪ್ರೀತಿ (Self Love) ಹೆಚ್ಚಿಸಿಕೊಳ್ಳಿ
ನಮ್ಮ ಜೀವನದ ಪ್ರಮುಖ ಅಂಶಗಳಲ್ಲಿ ಸ್ವಯಂ ಪ್ರೀತಿಯೂ ಒಂದು. ಆತ್ಮಗೌರವ (Respect) ಇಲ್ಲದಿದ್ದರೆ ಯಾರೂ ನಮ್ಮನ್ನು ಗೌರವಿಸುವುದಿಲ್ಲ. ನಮ್ಮ ಬಗ್ಗೆ ನಮಗೆ ಧನಾತ್ಮಕ ಪ್ರೀತಿ (Positive Love) ಇದ್ದಾಗ ನಮ್ಮಲ್ಲಿ ಸಹಾನುಭೂತಿ, ಕರುಣೆ, ಆಶಾವಾದಿತ್ವ ತುಂಬಿರುತ್ತದೆ. ಸಾಮಾನ್ಯವಾಗಿ ಪ್ರೀತಿಯಲ್ಲಿರುವಾಗ ನಾವು ಇನ್ನೊಬ್ಬರ ಆದ್ಯತೆಗೆ ಹೆಚ್ಚು ಗಮನ ನೀಡುತ್ತೇವೆ. ಆದರೆ, ನೀವು ಏಕಾಂಗಿಯಾದಾಗ ನಿಮ್ಮ ಕುರಿತೂ ಗಮನ ನೀಡುವುದನ್ನು ಕಲಿತುಕೊಳ್ಳಬೇಕು. ಇದುವರೆಗೆ ಆಗದ ಕನಸುಗಳನ್ನು ಈಡೇರಿಸಿಕೊಂಡು ಜೀವನ ನಶ್ವರ ಎನ್ನುವ ಭಾವನೆಯಿಂದ ಹೊರಬರಬಹುದು. ಎಲ್ಲರ ಬಗೆಗೆ, ಎಲ್ಲದರ ಬಗೆಗೆ ಕೃತಜ್ಞತೆ (Gratitude) ಬೆಳೆಸಿಕೊಳ್ಳಬೇಕು. ನಿಮಗೆ ಬೆಂಬಲ (Support) ನೀಡುವ ಸ್ನೇಹ ವಲಯದಲ್ಲಿರಬೇಕು, ನಿಮ್ಮನ್ನು ನೀವು ಕ್ಷಮಿಸಿಕೊಳ್ಳಬೇಕು, ಈ ಕ್ಷಣವನ್ನು ಎಂಜಾಯ್‌ (Enjoy) ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು, ಸ್ನೇಹಿತರೊಂದಿಗೆ ಸಂಪರ್ಕದಲ್ಲಿ ಇರಬೇಕು, ನೆಗೆಟಿವ್‌ (Negative) ಭಾವನೆಗಳಿಂದ ಮುಕ್ತಿ ಪಡೆಯಬೇಕು. 

•    ಸಹಾಯ ಪಡೆಯಲು (Seek Help) ವಿಳಂಬಿಸಬಾರದು
ಪ್ರೀತಿಪಾತ್ರರಿಂದ ದೂರವಾದ ಸಮಯದಲ್ಲಿ ಶೂನ್ಯ ಕಾಡುವುದು ಸಹಜ. ಜೀವಿಸಿ ಏನು ಮಾಡಬೇಕು ಎನ್ನುವ ಭಾವನೆಯೂ ಕಾಡಬಹುದು. ಹೀಗಾಗಿ, ಸ್ನೇಹಿತರು (Friends) ಮತ್ತು ಆಪ್ತಸಮಾಲೋಚಕರ ನೆರವು ಪಡೆದುಕೊಳ್ಳಿ. ಅವರು ಹೇಳುವ ಮಾರ್ಗೋಪಾಯಗಳನ್ನು ದೃಢಚಿತ್ತದಿಂದ ಅನುಸರಿಸಿ. ಕೆಲವೇ ದಿನಗಳಲ್ಲಿ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಳೆಯ ಜೀವನದಲ್ಲಿ (Old Memories) ಮುಳುಗದೆ ಇಂದಿನ ಬದುಕಿನ ಬಗ್ಗೆ ಗಮನ ನೀಡಿ. 

ಯಾವಾಗ್ ನೋಡಿದ್ರೂ ಬೆಸ್ಟೀ ಅಂತಾಳೆ, ಫ್ರೆಂಡ್ ಝೋನ್‌ನಿಂದ ಲವ್‌ಗೆ ಶಿಫ್ಟ್ ಆಗೋದ್ಹೇಗೆ ?

•    ಅವಲೋಕನ (Introspect)
ನಿಮ್ಮನ್ನು ಪ್ರೀತಿಸಿಯೇ ಇರದವರನ್ನು, ಮೋಸ ಮಾಡಿದವರನ್ನು, ಪ್ರೀತಿಯ ಹೆಸರಿನಲ್ಲಿ ಭಾವನೆಗಳಿಗೆ ಧಕ್ಕೆ ತಂದವರನ್ನು ಮನದಲ್ಲಿರಿಸಿಕೊಂಡು ಏನು ಪ್ರಯೋಜನ ಎನ್ನುವಂತಹ ಅವಲೋಕನಕ್ಕೆ ನಿಮ್ಮನ್ನು ಒಡ್ಡಿಕೊಳ್ಳಿ. ಈ ರೀತಿಯ ಅವಲೋಕನದಿಂದ ನಿಮ್ಮ ಮನಸ್ಸು ಸದೃಢವಾಗುತ್ತದೆ. ಗಟ್ಟಿಯಾಗಿ  ನಿರ್ಧಾರ (Decision) ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಎಲ್ಲ ರೀತಿಯ ನೆಗೆಟಿವ್‌ ಚಿಂತನೆಗಳಿಗೆ ಮನಸ್ಸು ಬಲಿಯಾಗದಂತೆ ನೋಡಿಕೊಳ್ಳಬೇಕು. 
 
 

Follow Us:
Download App:
  • android
  • ios