ಹನಿಮೂನ್ ಅಂದ್ರೆ ಸ್ವರ್ಗಕ್ಕೆ ಮೂರೇ ಗೇಣು ಅಂತ ಅನ್ಕೋಬೇಡಿ!
ನವ ಜೋಡಿ ಹನಿಮೂನ್ ಬಗ್ಗೆ ಒಂದಿಷ್ಟು ಕನಸು ಕಂಡಿರ್ತಾರೆ. ಅದು ಈಡೇರದೆ ಹೋದಾಗ ಬೇಸಗೊಳ್ತಾರೆ. ಆದ್ರೆ ಫಸ್ಟ್ ನೈಟ್ ಬಗ್ಗೆ ಮೊದಲೇ ಅಲ್ಪ ಸ್ವಲ್ಪ ತಿಳಿದಿದ್ದರೆ, ವಾಸ್ತವದ ಅರಿವಿದ್ದರೆ ಹನಿಮೂನ್ ಮೋಜನ್ನು ದುಪ್ಪಟ್ಟು ಮಾಡ್ಬಹುದು.
ಮದುವೆ (Marriage) ಯ ಮೊದಲ ರಾತ್ರಿ (First Night) ಎಲ್ಲರಿಗೂ ವಿಶೇಷವಾಗಿರುತ್ತದೆ. ಮದುವೆಯಂತೆ ಮೊದಲ ರಾತ್ರಿ ಕೂಡ ಸದಾ ನೆನಪಿಟ್ಟುಕೊಳ್ಳುವಂತಿರಬೇಕೆಂದು ಎಲ್ಲರೂ ಬಯಸ್ತಾರೆ. ಇದೇ ಕಾರಣಕ್ಕೆ ಕೆಲವರು ಹೋಟೆಲ್ (Hotel) ನಲ್ಲಿ ಮತ್ತೆ ಕೆಲವರು ತಮ್ಮಿಷ್ಟದ ಜಾಗದಲ್ಲಿ ಮೊದಲ ರಾತ್ರಿಗೆ ವ್ಯವಸ್ಥೆ ಮಾಡ್ತಾರೆ. ಮದುವೆ ನಿಶ್ಚಯವಾಗಿದ್ದು, ಮೊದಲ ರಾತ್ರಿ ಬಗ್ಗೆ ಕನಸು ಕಾಣ್ತಿರುವ ಹುಡುಗ – ಹುಡುಗಿಯರು ಕೆಲವೊಂದು ವಿಷ್ಯವನ್ನು ತಿಳಿದಿರಬೇಕು. ಅನೇಕ ಬಾರಿ ಮೊದಲ ರಾತ್ರಿ ಬಗ್ಗೆ ನಾವು ಓದಿರ್ತೇವೆ ಇಲ್ಲ ಕೇಳಿರ್ತೇವೆ. ದೊಡ್ಡವರು ಒಂದಿಷ್ಟು ಸಲಹೆ ಕೂಡ ನೀಡಿರ್ತಾರೆ. ಹಾಗಾಗಿ ಹನಿಮೂನ್ (Honeymoon) ಬಗ್ಗೆ ನಿರೀಕ್ಷೆ ಮತ್ತು ಆಕಾಂಕ್ಷೆ ಹೆಚ್ಚಿರುತ್ತದೆ. ಆದ್ರೆ ಎಲ್ಲವೂ ಅಂದಕೊಂಡಂತೆ ನಡೆಯಲು ಸಾಧ್ಯವಿಲ್ಲ. ನಿಮಗೆ ವಾಸ್ತವದ ಅರಿವಿರಬೇಕಾಗುತ್ತದೆ. ಎಲ್ಲವೂ ಹೇಳಿದಂತೆ ನಡೆಯಲು ಸಾಧ್ಯವಿಲ್ಲ, ಮೊದಲ ರಾತ್ರಿ ಸಿನಿಮಾ (movie) ದಲ್ಲಿ ನಡೆದಂತೆ ಅಲ್ಲ ಎಂಬೆಲ್ಲ ಸಂಗತಿ ತಿಳಿದಿರಬೇಕು. ಮೊದಲ ರಾತ್ರಿಯಂದು ಯಾವ ಬಗ್ಗೆ ಅತಿಯಾದ ನಿರೀಕ್ಷೆ ಬೇಡ ಎಂಬುದನ್ನು ನಾವಿಂದು ಹೇಳ್ತೇವೆ.
ಮೊದಲ ರಾತ್ರಿ ಬಗ್ಗೆ ನಿಮಗಿರಲಿ ಜ್ಞಾನ (Knowledge) :
ಮದುವೆಯ ಮೊದಲ ರಾತ್ರಿಯಲ್ಲಿ ರಾಕಿಂಗ್ ಸೆಕ್ಸ್ : ಮದುವೆಯ ಮೊದಲ ರಾತ್ರಿಯೇ ಲೈಂಗಿಕ ಕ್ರಿಯೆ ನಡೆಸ್ಬೇಕು ಎಂಬ ಅಭಿಪ್ರಾಯ ಕೆಲವರಿಗಿದೆ. ಅನೇಕರು ಇದನ್ನು ನಂಬಿರ್ತಾರೆ. ಆದ್ರೆ ನೀವು ವಾಸ್ತವದ ಬಗ್ಗೆ ಆಲೋಚನೆ ಮಾಡಿ. ಮದುವೆ ಕೆಲಸ ಮುಗಿಸಿ ಇಬ್ಬರೂ ಆಯಾಸಗೊಂಡಿರುತ್ತೀರಿ. ಆಗ ಸಂಭೋಗ ಸಾಧ್ಯವಾಗದೆ ಇರಬಹುದು. ಸಂಭೋಗ ನಡೆದಿಲ್ಲವೆಂದ್ರೆ ಮೊದಲ ರಾತ್ರಿ ಹಾಳಾಯ್ತು ಎಂಬ ಅರ್ಥವಲ್ಲ. ಆ ಕ್ಷಣವನ್ನು ಹಾಳು ಮಾಡಿಕೊಳ್ಳಬೇಡಿ. ಅಪ್ಪುಗೆ, ಅನ್ಯೂನ್ಯತೆ ಮೂಲಕ ಸಂತೋಷವಾಗಿರಲು ಪ್ರಯತ್ನಿಸಿ. ಇದು ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.
ಮಡದಿಗೆ ತಪ್ಪದೇ ಮುತ್ತಿಟ್ಟರೆ ಹೆಚ್ಚುತ್ತಾ ಆಯಸ್ಸು?
ಪರಾಕಾಷ್ಠೆ : ಹನಿಮೂನ್‌ನಲ್ಲಿ ನೀವು ಪರಾಕಾಷ್ಠೆಯ ಅನುಭವವನ್ನು ಹೊಂದುವುದು ಅನಿವಾರ್ಯವಲ್ಲ. ಇದು ಅತಿಯಾಗಿ ನಿರೀಕ್ಷೆಯಾಗುತ್ತದೆ. ಪರಾಕಾಷ್ಠೆ ಆ ಕ್ಷಣದಲ್ಲಿ ತಲುಪಬೇಕೆಂದೇನಿಲ್ಲ. ಕೆಲವರಿಗೆ ಸಮಯ ಹಿಡಿಯುತ್ತದೆ. ಹಾಗಾಗಿ ಸಂಗಾತಿಗೆ ಸಮಯ ನೀಡುವ ಅಗತ್ಯವಿರುತ್ತದೆ. ಪರಾಕಾಷ್ಠೆ ತಲುಪಿಲ್ಲವೆಂದ್ರೆ ಸಂಭೋಗದಲ್ಲಿ ವಿಫಲರಾದ್ರು ಎಂಬ ಅರ್ಥವೂ ಅಲ್ಲ.
ನಕಲಿ ಪರಾಕಾಷ್ಠೆ ಅನಗತ್ಯ : ಸಂಗಾತಿ ಮುಂದೆ ನಕಲಿ ಪರಾಕಾಷ್ಠೆ ತೋರಿಸುವ ಅಗತ್ಯವಿಲ್ಲ. ನಿಮ್ಮ ಲೈಂಗಿಕ ಜೀವನದ ಮೊದಲ ರಾತ್ರಿ ಇದು. ಇಲ್ಲಿಂದಲೇ ಲೈಂಗಿಕ ಜೀವನ ಶುರುವಾಗ್ತಿದೆ. ಹಾಗಾಗಿ ಸಂಗಾತಿಯನ್ನು ಅತಿ ಸಂತೋಷಗೊಳಿಸಲು ಪ್ರಯತ್ನಿಸುವ ಅಗತ್ಯವಿಲ್ಲ. ಸ್ವಲ್ಪ ರೋಮ್ಯಾಂಟಿಕ್ ಆಗಿದ್ರೆ ಸಾಕು. ಅವರ ಆದ್ಯತೆಗಳು ಮತ್ತು ಲೈಂಗಿಕ ಭಂಗಿ ಬಗ್ಗೆ ನೀವು ಜ್ಞಾನ ಪಡೆಯಬೇಕು.
ಯಪ್ಪಾ..ಮದ್ವೆಗೆ ಬಂದ ಅತಿಥಿಗಳಿಂದ್ಲೇ ಹನಿಮೂನ್ ಹೋಗೋಕೆ ದುಡ್ಡು ಕಲೆಕ್ಟ್ ಮಾಡಿದ ವಧು !
ಮದುವೆಯ ಮೊದಲ ರಾತ್ರಿ ಸೆಕ್ಸ್ ಬಗ್ಗೆ ಮಾತು : ಮೊದಲ ರಾತ್ರಿ ಸೆಕ್ಸ್ ಬೆಟ್ಟ ಕಡಿದಂತೆ. ಆದ್ದರಿಂದ ನೀವು ಸೆಕ್ಸ್ ಬಗ್ಗೆ ಮಾತನಾಡಬೇಕು ಎಂದೇನೂ ಇಲ್ಲ. ಹಾಗಂತ ಇಲ್ಲಿಗೆ ನಿಮ್ಮ ಸೆಕ್ಸ್ ಲೈಫ್ ಮುಗೀತು ಎಂದಲ್ಲ. ಮೊದಲ ರಾತ್ರಿಯನ್ನು ಒಟ್ಟಿಗೆ ಆನಂದಿಸಬೇಕು. ಇಬ್ಬರು ಕೆಲವು ಆರಾಮದಾಯಕ ಕ್ಷಣಗಳನ್ನು ಕಳೆಯಲು ಪ್ರಯತ್ನಿಸಬೇಕು. ಶಾರೀರಿಕ ಸಂಬಂಧದ ಬಗ್ಗೆ ಪರಸ್ಪರರ ಒಲವನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು.
ಹುಡುಗನಿಂದಲೇ ಇದ್ರ ಆರಂಭ : ಮೊದಲ ರಾತ್ರಿ ಹುಡುಗನಿಂದಲೇ ಇಂಟರ್ಕೋರ್ಸ್ ಪ್ರಸ್ತಾಪ ಶುರುವಾಗ್ಬೇಕು ಎಂಬ ನಂಬಿಕೆಯೂ ಇದೆ. ಆದ್ರೆ ಇದು ಕೂಡ ಸರಿಯಲ್ಲ. ಕೆಲ ಹುಡುಗರು, ಹುಡುಗಿ ಪ್ರಾರಂಭವನ್ನು ಬಯಸ್ತಾರೆ. ಹಾಗಾಗಿ ಇಬ್ಬರೂ ಮುಕ್ತ ಮನಸ್ಸಿನವರಾಗಿರಬೇಕು. ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳಬೇಕು. ಆಗ ನಾನು, ತಾನು ಎಂಬುವು ಬರುವುದಿಲ್ಲ. ಪ್ರೀತಿ, ಗೌರವ, ಆತ್ಮವಿಶ್ವಾಸವಿದ್ದಾಗ ಯಾರು ಅಪ್ರೋಚ್ ಮಾಡಿದ್ರೂ ಅಲ್ಲಿ ಸಂತೋಷ ಸಿಗುವುದು ಮುಖ್ಯವಾಗುತ್ತದೆ.