Asianet Suvarna News Asianet Suvarna News

Loveಗೆ ಕಣ್ಣಿಲ್ಲವೆಂತಾರೆ, ಆದರೆ ಈ ಪ್ರೀತಿ ಗೀತಿ ಹೀಗೂ ಹುಟ್ಟುತ್ತಾ?

ಪ್ರೀತಿ ಕುರುಡು ಎಂದು ಹಿರಿಯರು ಹೇಳ್ತಾರೆ. ಎಲ್ಲಿ ಬೇಕಾದ್ರೂ ಪ್ರೀತಿ ಹುಟ್ಟಬಹುದು. ಪ್ರೀತಿಸಿದ ವ್ಯಕ್ತಿಯೇ ಬಾಳ ಸಂಗಾತಿಯಾದಾಗ ಆ ಜೀವನ ಮತ್ತಷ್ಟು ಮಧುರವಾಗಿರುತ್ತದೆ. ಅವರ ಲವ್ ಸ್ಟೋರಿಗೊಂದು ತೂಕ ಬರುತ್ತೆ.
 

Women Shares here weired Love Story netizens reaction
Author
Bangalore, First Published Jul 19, 2022, 5:00 PM IST

ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾಗುವುದು ಅದೃಷ್ಟ. ಪ್ರೀತಿಸದ ವ್ಯಕ್ತಿಗೆ ಬಾಳ ಸಂಗಾತಿಯಾದ್ರೆ ಸ್ವರ್ಗಕ್ಕೆ ಮೂರೇ ಗೇಣು. ಅವರ ಮೊದಲ ಭೇಟಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮೊದಲ ಭೇಟಿಯಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ರೆ ಅವರು ನಮ್ಮ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎಂಬುದನ್ನು ಸ್ವಲ್ಪ ಮಟ್ಟಿಗೆ ತಿಳಿಯಬಹುದು. ಸಾಮಾಜಿಕ ಜಾಲತಾಣ ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳ ಈ ಯುಗದಲ್ಲಿ, ಪ್ರೀತಿ ಮತ್ತು ಸಂಗಾತಿಯ ವ್ಯಾಖ್ಯಾನ ಸಂಪೂರ್ಣವಾಗಿ ಬದಲಾಗಿದೆ. ಆದರೆ ಇದರ ಮಧ್ಯೆಯೂ ಅನೇಕರು ಸಂಗಾತಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ. ಪ್ರೀತಿ ಎಲ್ಲಿ, ಯಾವಾಗ ಬೇಕಾದ್ರೂ ಹುಟ್ಟಬಹುದು. ಕೆಲವರು ಕಾಲೇಜಿನಲ್ಲಿ ಪ್ರೀತಿ ಮಾಡಿದ್ರೆ ಮತ್ತೆ ಕೆಲವರು ಕಚೇರಿಯಲ್ಲಿ. ಇನ್ನು ಕೆಲವರಿಗೆ ವಿಚಿತ್ರ ಪರಿಸ್ಥಿತಿಯಲ್ಲಿ, ಜಾಗದಲ್ಲಿ ಪ್ರೀತಿ ಹುಟ್ಟುತ್ತದೆ. ಇಂದು ಕೆಲ ಮಹಿಳೆಯರು ತಮ್ಮ ಪ್ರೀತಿಯ ಬಗ್ಗೆ ಹೇಳಿದ್ದಾರೆ. ಅವರಿಗೆ ಪ್ರೀತಿ ಚಿಗುರಿದ್ದು ಎಲ್ಲಿ ಎಂಬ ಸಂಗತಿ ಇಲ್ಲಿದೆ.

ದುಃಖದ ಗಳಿಗೆಯಲ್ಲಿ ಒಂದಾದ ಜೋಡಿ: 29 ವರ್ಷದ ರೇಖಾ, ರಜತ್ ನನ್ನು ಪ್ರೀತಿ (Love) ಸುತ್ತಿದ್ದಳಂತೆ. ರಜತ್ ಒಳ್ಳೆ ಸ್ನೇಹಿತ (Friend) ನಾಗಿದ್ದ. ಆದ್ರೆ ನಾನು ಆತನಿಗೆ ಆಕರ್ಷಿತಳಾಗಿದ್ದೆ. ನನ್ನ ಪ್ರೀತಿಯನ್ನು ಅವನಿಗೆ ಹೇಳಿರಲಿಲ್ಲ. ಈ ಮಧ್ಯೆ ನನ್ನ ಅಜ್ಜಿ ಸಾವನ್ನಪ್ಪಿದ್ದಳು. ಈ ಸಮಯದಲ್ಲಿ ರಜತ್ ಟ್ರಿಪ್ (Trip) ಗೆ ಹೋಗಿದ್ದ. ನಾನು ಅಜ್ಜಿ ಸತ್ತ ವಿಷ್ಯ ಹೇಳ್ತಿದ್ದಂತೆ ನನ್ನನ್ನು ನೋಡಲು ಬಂದ ಆತನನ್ನು ನಾನು ವಿಮಾನ ನಿಲ್ದಾಣದಲ್ಲಿಯೆ ತಬ್ಬಿಕೊಂಡು ಅತ್ತಿದ್ದೆ. ನಾನು ಮುಖವೆತ್ತಿ ಅವನನ್ನು ನೋಡಿದಾಗ ಅವನ ಕಣ್ಣಿನಲ್ಲಿ ನನ್ನ ಮೇಲಿನ ಪ್ರೀತಿ ಸ್ಪಷ್ಟವಾಗಿ ಕಾಣ್ತಿತ್ತು ಎನ್ನುತ್ತಾರೆ ರೇಖಾ.

ದ್ವೇಷದಲ್ಲಿ ಹುಟ್ಟಿದ ಪ್ರೀತಿ : ಆರಂಭದಲ್ಲಿಯೇ ನಾವಿಬ್ಬರು ಸಂಬಂಧದಲ್ಲಿದ್ದೆವು. ಆದ್ರೆ ನಮ್ಮ ಸಂಬಂಧ ಮುಂದುವರೆಯುತ್ತದೆ ಎಂದು ನಾನು ಭಾವಿಸಿರಲಿಲ್ಲ. ರೊಟ್ಟಿಗೆ ತುಪ್ಪ ಹಚ್ಚಿಕೊಂಡು ತಿನ್ನುವ ಆತನ ಅಭ್ಯಾಸ ನನಗೆ ಇಷ್ಟವಿರಲಿಲ್ಲ. ನಾನು ಇದನ್ನು ದ್ವೇಷಿಸುತ್ತಿದ್ದೆ. ಆದ್ರೆ ಅವನು ಈ ಅಭ್ಯಾಸವನ್ನು ನನ್ನೊಂದಿಗೆ ಮಾತ್ರ ಮಾಡಲಿ ಎಂದು ನಾನು ಬಯಸಿದ್ದೆ. ಅವನ ಆಹಾರ ಸೇವನೆ ಅಭ್ಯಾಸವನ್ನು ದ್ವೇಷಿಸುತ್ತಲೇ ನಾವು ಅವನ ಪ್ರೀತಿಗೆ ಬಿದ್ದಿದ್ದೆ ಎನ್ನುತ್ತಾಳೆ ಉಷಾ.

ಒಂಟಿ ಒಂಟಿಯಾಗಿರೋದು ಬೋರೋ ಬೋರು ಅಂತ ಅನ್ಕೋಬೇಡಿ, ಅಂದ್ರಿಂದಾನೂ ಉಪಯೋಗವಿದೆ!

ಮದ್ಯದ ಗುಂಗು : ಆ ದಿನ ನಾನು ಪಬ್ ಗೆ ಹೋಗಿದ್ದೆ. ವಿಪರೀತ ಕುಡಿದಿದ್ದ ನಾನು ಆ ವ್ಯಕ್ತಿಯನ್ನು ನೋಡಿ ನಗ್ತಾ ಇದ್ದೆ. ಅವನನ್ನು ದಿಟ್ಟಿಸಿ ನೋಡಿದ್ದಲ್ಲದೆ ನಗ್ತಿರುವ ನನ್ನನ್ನು ನೋಡಿ ಕೊನೆಗೆ ಆತ ನಕ್ಕಿದ್ದ. ನನ್ನನ್ನು ವಾಶ್ ರೂಮಿಗೆ ಕರೆದುಕೊಂಡು ಹೋಗುವಂತೆ ಸ್ನೇಹಿತರಿಗೆ ಹೇಳಿದ್ದ. ಟಿಶ್ಯೂ ನೀಡಿದ್ದ. ಮರುದಿನ ನನ್ನ ವರ್ತನೆಗೆ ನಾನೇ ಬೇಸರಪಟ್ಟುಕೊಂಡು ಅಳ್ತಿದ್ದೆ. ಆಗ ನನಗೊಂದು ಸ್ಲಿಪ್ ಸಿಕ್ತು. ಅದರಲ್ಲಿ ಸ್ಮೈಲಿ ಚಿತ್ರದ ಜೊತೆ ಅಪರೂಪಕ್ಕೆ ಹೀಗೆ ಆಗುತ್ತೆ ಎಂದು ಬರೆಯಲಾಗಿತ್ತು. ಧೈರ್ಯ ಮಾಡಿ ಅಂದೇ ಆ ವ್ಯಕ್ತಿಗೆ ನಾನು ಪ್ರಪೋಸ್ ಮಾಡಿದ್ದೆ. ನಾಲ್ಕು ವರ್ಷದ ಡೇಟ್ ನಂತ್ರ ನಾವಿಬ್ಬರು ಮದುವೆಯಾಗಿದ್ದೇವೆ ಎನ್ನುತ್ತಾರೆ ರಿಯಾ. 

Feel free: ದಿನನಿತ್ಯ ಲೈಂಗಿಕ ಚಟುವಟಿಕೆಯಿಂದ ಹುಡುಗೀರು ದಪ್ಪಗಾಗ್ತಾರಾ?

ಅನಗತ್ಯ ಡೇಟಿಂಗ್ : ಕೇಕ್ ಖರೀದಿ ಮಾಡಲು ನಾನು ಬೇಕರಿಗೆ ಹೋಗಿದ್ದೆ. ಅಲ್ಲಿ ಒಬ್ಬ ವ್ಯಕ್ತಿ ಕಾಫಿ ಕುಡಿಯುತ್ತ ಬ್ಲೂಬೆರ್ರಿ ಕೇಕ್ ತಿನ್ನುತ್ತ ಕುಳಿತಿದ್ದ. ಆತನನ್ನು ಛೇಡಿಸಲು ಆತನ ಬಳಿ ಹೋಗಿ ಕುಳಿತಿದ್ದೆ. ಸಮಯವಿದ್ದಿದ್ದರಿಂದ ಅನಗತ್ಯ ಡೇಟಿಂಗ್ ಶುರು ಮಾಡಿದ್ದೆ. ಆದ್ರೆ ಇದೇ ವ್ಯಕ್ತಿ ಬಾಳ ಸಂಗಾತಿಯಾಗ್ತಾನೆ ಎಂದುಕೊಂಡಿರಲಿಲ್ಲ. ಈಗ ವಾರಕ್ಕೊಮ್ಮೆ ಆ ಬೇಕರಿಗೆ ನಾವು ಹೋಗ್ತೇವೆ ಎನ್ನುತ್ತಾಳೆ ಅಮೃತ.

Follow Us:
Download App:
  • android
  • ios