ದಂಪತಿಯನ್ನು ಮತ್ತಷ್ಟು ಹತ್ತಿರ ಮಾಡುತ್ತೆ sexting, ಅಷ್ಟಕ್ಕೂ ಏನಿದು?
ಶಾರೀರಿಕ ಸಂಬಂಧದಲ್ಲಿ ಹೊಸ ಹೊಸ ಪ್ರಯೋಗಗಳು ಅನಿವಾರ್ಯವಾಗುತ್ತವೆ. ಕೆಲವೊಮ್ಮೆ ಸಂಗಾತಿ ಗೈರುಹಾಜರಿ ಬೇಸರ ತರಿಸುತ್ತದೆ. ಇಂಥ ಸಂದರ್ಭದಲ್ಲಿ ಪ್ರೀತಿ ಹೆಚ್ಚಿಸಲು ಸಂಗಾತಿಗಳು ವಿಭಿನ್ನ ಪ್ರಯತ್ನ ನಡೆಸಬಹುದು. ಅದರಲ್ಲಿ ಫೋನ್ ಸೆಕ್ಸ್ ಕೂಡ ಒಂದು.
ಇಂಟರ್ ಕೋರ್ಸ್ (Intercourse) ದಂಪತಿ ಮಧ್ಯೆ ಸಾಮರಸ್ಯವನ್ನು ಹೆಚ್ಚಿಸುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಸಂಗಾತಿ (Partner ) ಮಧ್ಯೆ ಪ್ರೀತಿ (Love) ಮತ್ತಷ್ಟು ಗಟ್ಟಿಯಾಗಲು ದೈಹಿಕ ಸಂಭೋಗ (Physical Intercourse) ಬಹಳ ಮುಖ್ಯ. ಆದ್ರೆ ಒಂದೇ ರೀತಿಯ ಶಾರೀರಿಕ ಸಂಬಂಧ ಅನೇಕ ಬಾರಿ ಬೋರ್ ಎನ್ನಿಸುತ್ತದೆ. ಸಂಗಾತಿಗಳು ಹೊಸದನ್ನು ಬಯಸ್ತಾರೆ. ಸಂಬಂಧದಲ್ಲಿ ಸ್ವಲ್ಪ ಬದಲಾವಣೆ ಬೇಕು ಎನ್ನುವವರು ಫೋನ್ ಸೆಕ್ಸ್ ಆಯ್ಕೆಯನ್ನು ಆಯ್ದುಕೊಳ್ಳಬಹುದು. ಇದು ಭಿನ್ನ ಅನುಭವ ನೀಡುತ್ತದೆ. ಬೇರೆ ಬೇರೆ ಕಾರಣಕ್ಕೆ ಸಂಗಾತಿಗಳು ದೂರ ವಾಸವಾಗಿರ್ತಾರೆ. ಬೇರೆ ಬೇರೆ ಊರಿನಲ್ಲಿ ಕೆಲಸ ಮಾಡ್ತಿರುತ್ತಾರೆ. ಆ ಸಮಯದಲ್ಲಿ ನಿಮಗೆ ಫೋನ್ ಸೆಕ್ಸ್ (Phone Sex) ನೆರವಿಗೆ ಬರುತ್ತದೆ. ಅಪರಿಚಿತರ ಜೊತೆಯೂ ಫೋನ್ ಸೆಕ್ಸ್ ಮಾಡುವವರಿದ್ದಾರೆ. ಆದ್ರೆ ಆ ಸಂದರ್ಭದಲ್ಲಿ ಕೆಲ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ ಫೋನ್ ಸೆಕ್ಸ್ ಗೆ ಕೆಲ ತಯಾರಿ ಕೂಡ ಬೇಕು. ಇನ್ನೂ ಫೋನ್ ಸೆಕ್ಸ್ ಮಾಡಿಲ್ಲ ಎನ್ನುವವರು ಫೋನ್ ಸೆಕ್ಸ್ ಬಗ್ಗೆ ಒಂದಿಷ್ಟು ಟಿಪ್ಸ್ ಇದೆ ತಿಳಿದುಕೊಳ್ಳಿ.
ಫೋನ್ ಸೆಕ್ಸ್ ಮೊದಲು ತಯಾರಿ ಹೀಗಿರಲಿ :
ಮೊದಲು ಮನಸ್ಥಿತಿ ಬದಲಿಸಿಕೊಳ್ಳಿ : ಸಂಗಾತಿ ಹತ್ತಿರವಿಲ್ಲ ಎನ್ನುವ ಕಾರಣಕ್ಕೆ ವಿರಹ ವೇದನೆ ಅನುಭವಿಸಬೇಕಾಗಿಲ್ಲ. ಫೋನ್ ಸೆಕ್ಸ್ ಮೂಲಕ ನೀವು ಆನಂದ ಪಡೆಯಬಹುದು. ಇದಕ್ಕೆ ಮೊದಲು ನಿಮ್ಮ ಮೂಡ್ ಮುಖ್ಯವಾಗುತ್ತದೆ. ಫೋನ್ ಸೆಕ್ಸ್ ಸಮಯದಲ್ಲಿ ರೋಮ್ಯಾಂಟಿಕ್ ಆಗಿರಿ. ಉತ್ತಮ ಮನಸ್ಥಿತಿಗಾಗಿ ನೀವು ನಿಮ್ಮ ಕೋಣೆಯಲ್ಲಿ ಕೆಲ ಬದಲಾವಣೆ ಮಾಡಿ. ರೂಮ್ ದೀಪಗಳನ್ನು ಮಂದಗೊಳಿಸಿ. ಸೆಕ್ಸಿಯೆಸ್ಟ್ ಒಳ ಉಡುಪುಗಳನ್ನು ಧರಿಸಿ ಅಥವಾ ನೀವು ಬಯಸಿದಲ್ಲಿ ವಿವಸ್ತ್ರವಾಗಿ ಫೋನ್ ನಲ್ಲಿ ಮಾತನಾಡ್ಬಹುದು.
ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಆಸಕ್ತಿ ಕಮ್ಮಿ ಆಗ್ತಿದ್ಯಾ? ಹೀಗ್ ತಿಳಿಯಿರಿ
ಬಯಕೆ ಹೇಳಿ : ಫೋನ್ ಸೆಕ್ಸ್ ಪ್ರಾರಂಭಿಸುವ ಮೊದಲು, ನಿಮ್ಮ ಸಂಗಾತಿಗೆ ನಿಮಗೆ ಬೇಕಾದುದನ್ನು ಮುಕ್ತವಾಗಿ ಹೇಳಿ. ಹಾಗೆಯೇ ನಿಮ್ಮ ಸಂಗಾತಿ ಏನು ಬಯಸ್ತಾರೆ ಎಂಬುದನ್ನು ತಿಳಿದುಕೊಳ್ಳಿ. ಸಂಗಾತಿ ಜೊತೆ ನೀವು ರೋಮ್ಯಾಂಟಿಕ್ ಆಗಿ ಮಾತನಾಡಿ.
ಸಂಭಾಷಣೆ : ಇಲ್ಲಿ ಸಂಭಾಷಣೆ ಮುಖ್ಯವಾಗುತ್ತದೆ. ನೀವು ಯಾವ ಪದಗಳನ್ನು ಬಳಸುತ್ತೀರಿ ಎಂಬುದು ಮಹತ್ವಪಡೆಯುತ್ತದೆ. ಕೊಳಕು ಪದಗಳ ಬಳಕೆ ಬದಲು ನೀವು ಸಾಹಿತ್ಯವನ್ನು ಓದಿದ್ದರೆ ಅಲ್ಲಿ ಬರುವ ಪದಗಳನ್ನು ಬಳಸಬಹುದು. ಕಲ್ಪನೆಯನ್ನು ಮುಂದುವರೆಸ್ತಾ ನಿಮ್ಮ ಸಂಗಾತಿಗೆ ಯಾವ ಪದಗಳು ಇಷ್ಟ ಅದನ್ನು ಬಳಕೆ ಮಾಡಿ. ಒಂದ್ವೇಳೆ ನಿಮ್ಮ ಸಂಗಾತಿ ಕೊಳಕು ಪದಗಳನ್ನು ಇಷ್ಟಪಟ್ಟಲ್ಲಿ ನೀವು ಅದನ್ನು ಬಳಸಬಹುದು.
ಪತಿ ಮೇಲೆ colleague ಕಣ್ಣು ಹಾಕಿದ್ದಾಳಾ? ಹೀಗೆ ಕಂಡು ಹಿಡೀಬಹುದು!
ಪಾತ್ರವಾಗಿ ರೊಮ್ಯಾನ್ಸ್ (Romance) : ಇದು ನಿಮ್ಮ ಕಲ್ಪನೆಗಳಿಗೆ ಬಿಟ್ಟಿದ್ದಾಗಿದೆ. ನೀವು ಫೋನ್ ಸೆಕ್ಸ್ ನಲ್ಲಿ ಸಂಗಾತಿಯನ್ನು ಹೆಚ್ಚು ರೋಮಾಂಚನಗೊಳಿಸಲು ಬಯಸಿದ್ದರೆ ನೀವು ಒಂದು ಪಾತ್ರವಾಗಿ ಮಾತನಾಡ್ಬಹುದು. ರೋಗಿಯಾಗುವ ಮೂಲಕ ಲೈಂಗಿಕತೆಯ ಬಗ್ಗೆ ವೈದ್ಯರೊಂದಿಗೆ ಮಾತನಾಡುವಂತೆ ನೀವು ಸಂಗಾತಿ ಜೊತೆ ಮಾತನಾಡಬಹುದು. ಇದು ತುಂಬಾ ಸುಲಭ ಮತ್ತು ವಿನೋದಮಯವಾಗಿರುತ್ತದೆ.
ಫೋನ್ ಸೆಕ್ಸ್ ಗೆ (Phone Sex) ಮೊದಲು ಎಚ್ಚರಿಕೆ : ಸಂಗಾತಿ ಜೊತೆ ಫೋನ್ ಸೆಕ್ಸ್ ಆರಂಭಿಸುವು ಮೊದಲು ಅವರು ನಂಬಲು ಅರ್ಹರೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಅನೇಕ ಬಾರಿ ನೀವು ಮೋಸ ಹೋಗುವ ಸಾಧ್ಯತೆಯಿರುತ್ತದೆ. ಹಾಗೆಯೇ ನಿಮ್ಮ ಮಾತುಗಳು ರೆಕಾರ್ಡ್ ಆಗುವ ಸಂಭವಿರುತ್ತದೆ. ಬೇರೆಯವರು ಕೇಳಿಸಿಕೊಳ್ಳುವ ಅಪಾಯವಿರುತ್ತದೆ. ಹಾಗಾಗಿ ಎಲ್ಲವನ್ನೂ ಪರೀಕ್ಷಿಸಿದ ನಂತ್ರ ನೀವು ಫೋನ್ ಸೆಕ್ಸ್ ಶುರು ಮಾಡುವುದು ಸೂಕ್ತ. ಒಂದು ವೇಳೆ ಸಂಗಾತಿ ನಂಬಲರ್ಹರು ಎಂದಾದ್ರೆ ನೀವು ಮುಕ್ತವಾಗಿ ಅವರ ಜೊತೆ ಮಾತನಾಡಬಹುದು. ಫೋನ್ ಸೆಕ್ಸ್ ಸುಖವನ್ನು ಇಬ್ಬರೂ ಆನಂದಿಸಬಹುದು.