ಪತಿಗೆ ಮೋಸ ಮಾಡುವ ಪತ್ನಿಗೆ ಚೀನಾದಲ್ಲಿ ಈ ಘೋರ ಶಿಕ್ಷೆ ಕೊಡ್ತಿದ್ರು!

ಪ್ರಾಚೀನ ಚೀನಾದಲ್ಲಿ ಪತಿಗೆ ಮೋಸ ಮಾಡುವ ಪತ್ನಿಗೆ ನೀಡುತ್ತಿದ್ದ ಶಿಕ್ಷೆ ಕೇಳಿದ್ರೆ ನೀವು ಒಂದು ಕ್ಷಣ ಶಾಕ್ ಆಗ್ತೀರಿ. ಪುರುಷರಿಗೂ ಶಿಕ್ಷೆ ನೀಡಲಾಗುತ್ತಿತ್ತು.

an ancient china punishment for illicit relationship mrq

ಬೀಜಿಂಗ್: ಸಂಬಂಧದಲ್ಲಿ ನಂಬಿಕೆ ಇರಬೇಕು. ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ಪ್ರಾಮಾಣಿಕರಾಗಿರಬೇಕು. ಇದರಲ್ಲಿ ಯಾರೇ ತಪ್ಪೇ ಮಾಡಿದರೂ ತಪ್ಪು. ಒಂದು ರೀತಿ ಇದು ಕ್ಷಮೆಗೆ ಅರ್ಹನಲ್ಲದ ಅಪರಾಧ. ಆದ್ರೆ ಇಂತಹ ಪರಿಸ್ಥಿತಿ ಉಂಟಾದ್ರೆ ಮಾತುಕತೆ ನಡೆಸಿ ಡಿವೋರ್ಸ್ ಪಡೆಯುತ್ತಾರೆ. ಪ್ರಾಚೀನ ಚೀನಾದಲ್ಲಿ ಅನೈತಿಕ ಸಂಬಂಧ ಅಥವಾ ಗಂಡನಿಗೆ ಮೋಸ ಮಾಡುವ ಮಹಿಳೆಗೆ ಅತಿ ಕಠಿಣ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಈಗಲೂ ಕೆಲವು ದೇಶಗಳಲ್ಲಿ ತಪ್ಪು ಸಾಬೀತಾದ್ರೆ ಬಹಿರಂಗವಾಗಿಯೇ ಕಠಿಣ ಶಿಕ್ಷೆಗಳನ್ನು ನೀಡಲಾಗುತ್ತದೆ. 

ಇಂದು ಅನೈತಿಕ ಸಂಬಂಧಕ್ಕೆ ಕೊಲೆ ಆಗುತ್ತಿರೋದು ವರದಿಗಳನ್ನು ಪ್ರತಿನಿತ್ಯ ನೋಡಿರುತ್ತವೆ. ಇಂದು ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಅದರಲ್ಲಿಯೂ ಇಂದಿನ ಯುವ ಜನತೆ ಮದುವೆಯಾದ ಒಂದೆರಡು ವರ್ಷದಲ್ಲಿ ಡಿವೋರ್ಸ್ ಪಡೆಯಲು ಮುಂದಾಗುತ್ತಾರೆ.

ಪ್ರಾಚೀನ ಚೀನಾದಲ್ಲಿ ಪತಿಗೆ ಮೋಸ ಮಾಡಿ ಅಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ತುಂಬಾ ಕ್ರೂರವಾದ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಮಹಿಳೆಯರಿಗೆ ಮಾತ್ರವಲ್ಲ ಪತ್ನಿಗೆ ಮೋಸ ಮಾಡುವ  ಗಂಡನಿಗೂ ಕಠೋರ ಶಿಕ್ಷೆಗಳನ್ನು ನೀಡಲಾಗುತ್ತತ್ತು. ಆ ಶಿಕ್ಷೆಗಳು ಏನು ಎಂಬುದರ ಮಾಹಿತಿ ಇಲ್ಲಿದೆ. 

ವಿವಾಹಿತ ಮಹಿಳೆ ಅಥವಾ ಪುರುಷನ ಜೊತೆ ಸಂಬಂಧಕ್ಕೆ ಬೇರೆ ಬೇರೆ ಶಿಕ್ಷೆ!

ಪ್ರಾಚೀನ ಚೀನಾದಲ್ಲಿ ಪುರುಷರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ಮಹಿಳೆಯರ ಮೇಲೆ ಹೆಚ್ಚು ನಿಬಂಧನೆಗಳನ್ನು ಹಾಕಲಾಗುತ್ತಿತ್ತು. ಮದುವೆಗೂ ಮುನ್ನ ಅಥವಾ ನಂತರ ಒಂದಕ್ಕಿಂತ ಹೆಚ್ಚು ಸಂಬಂಧ ಹೊಂದಲು ಪುರುಷನಿಗೆ ಯಾವುದೇ ಮಿತಿ ಇರಲಿಲ್ಲ. ಆದ್ರೆ ಮಹಿಳೆಯರು ಮಾತ್ರ ಗಂಡನಿಗೆ ನಿಷ್ಠರಾಗಿರಬೇಕಿತ್ತು.

ಸಂಗಾತಿಗೆ ಮೋಸ ಮಾಡೋದ ತಪ್ಪು. ಚೀನಾದಲ್ಲಿ ಸಂಗಾತಿಗೆ ಮೋಸ ಮಾಡುವ ಮಹಿಳೆಯರು ಘೋರ ಶಿಕ್ಷೆಗೆ ತುತ್ತಾಗಬೇಕಿತ್ತು. ಮಹಿಳೆ ಮೋಸ ಮಾಡಿರೋದು ಸಾಬೀತಾದಲ್ಲಿ ಜನರ  ಮುಂದೆ ಕಟ್ಟಿಹಾಕಿ, ಕಲ್ಲುಗಳಿಂದ ಹೊಡೆಯಲಾಗುತ್ತಿತ್ತು. ನಂತರ ಮಹಿಳೆಯ ಕಣ್ಣುಗಳನ್ನು ಕೀಳಲಾಗುತ್ತಿತ್ತು.

ಒಂದು  ವೇಳೆ ವಂಚಿಸಿದ ಆರೋಪ ಸಾಬೀತಾದ್ರೆ ಅಪರಾಧಿಗಳನ್ನು ಹುಲಿಗೆ ಆಹಾರವಾಗಿ ನೀಡಲಾಗುತ್ತಿತ್ತು. ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವ ಪುರುಷರಿಗೆ ಇದೇ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಕೆಲವು ಪ್ರಕರಣಗಳಲ್ಲಿ ನೇಣು ಸಹ ಹಾಕಲಾಗುತ್ತಿತ್ತು. ಶಿರಚ್ಛೇದ, ಥಳಿಸುವಿಕೆ, ಬೆಂಕಿ ಹಚ್ಚುವಿಕೆ, ಜೀವಂತ ಸಮಾಧಿ ಮಾಡುವುದರ ಜೊತೆಗೆ ದೂರ ನಿಲ್ಲಿಸಿ ಬಾಣಗಳನ್ನು ಬಿಟ್ಟು ಕೊಲ್ಲಲಾಗುತ್ತಿತ್ತು.

ಈ ಐದು ರಹಸ್ಯಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ; ನಿಮ್ಮ ನಗುವೇ ಮಾಯ ಆಗುತ್ತೆ!

ಮದುವೆಗೂ ಮುನ್ನ ತಾಯಿಯಾದ್ರೆ?

ಮದುವೆಗೂ ಮುನ್ನ ತಾಯಿಯಾಗುವ ಮಹಿಳೆಯರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು. ಗರ್ಭಿಣಿಯರನ್ನು ಮರಕ್ಕೆ ಕಟ್ಟಿ ಹೊಟ್ಟೆಯ ಮೇಲೆ ಹಲ್ಲೆ ನಡೆಸಲಾಗುತ್ತಿತ್ತು. ಇಂತಹ ಮಹಿಳೆಯರಿಗೆ ಪದೇ ಪದೇ ಶಿಕ್ಷೆ ನೀಡಲಾಗುತ್ತಿತ್ತು.

11 ವರ್ಷದ ಬಾಲಕ ತಂದೆ ಆಗಬಹುದೇ? ಯಾವ ವಯಸ್ಸಿನಲ್ಲಿ ವೀರ್ಯ ಉತ್ಪಾದನೆ ಆರಂಭ ಆಗುತ್ತೆ?

ಪುರುಷರಿಗೂ ಇತ್ತು ಶಿಕ್ಷೆ

ಒಂದಕ್ಕಿಂತ ಹೆಚ್ಚು ಸಂಬಂಧ ಹೊಂದುವ ಅವಕಾಶ ಪುರುಷರಿಗೆ ಇತ್ತು. ಬಲವಂತವಾಗಿ ಸಂಬಂಧ ಹೊಂದುವ ಪುರುಷರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಮಹಿಳೆ ಜೊತೆ ಅನುಚಿತ ವರ್ತನೆಗೂ ಶಿಕ್ಷೆ ಇತ್ತು. ಇಂತಹ ಪುರುಷರಿಗೆ ಹಂತ ಹಂತವಾಗಿ ಶಿಕ್ಷೆ  ನೀಡಲಾಗುತ್ತಿತ್ತು.

Latest Videos
Follow Us:
Download App:
  • android
  • ios