Lazy Partner: ಸೋಮಾರಿ ಸಂಗಾತಿ ಜೊತೆ ಜಗಳವಾಡಿದ್ರೆ ಸಮಸ್ಯೆ ಸರಿಹೋಗೋದಿಲ್ಲ

ಮದುವೆಯಾಗುವಾಗ ಕಂಡ ನಿರೀಕ್ಷೆಗಳೆಲ್ಲ ಹುಸಿಯಾಗಿ, ನಿಮ್ಮ ಸಂಗಾತಿ ಸೋಮಾರಿಯಾಗಿದ್ದರೆ ಏನು ಮಾಡುತ್ತೀರಿ? ಅವರೊಂದಿಗೆ ಹೇಗೆ ಏಗುತ್ತೀರಿ? ಮಾತುಮಾತಿಗೆ ಕೋಪಿಸಿಕೊಳ್ಳುವುದರಿಂದ, ಲೇವಡಿ ಮಾಡುವುದರಿಂದ ಅವರು ಸುಧಾರಿಸಿಕೊಳ್ಳುವುದಿಲ್ಲ. ಇಲ್ಲಿ ವರ್ಕೌಟ್‌ ಆಗುವ ಮಂತ್ರವೆಂದರೆ, “ನನಗೆ ನೀನು, ನಿನಗೆ ನಾನುʼ. ನಯವಾಗಿಯೇ ಅವರಿಂದ ಕೆಲಸ ಮಾಡಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.
 

How to behave with lazy partner

ಮದುವೆಯಾಗುವಾಗ (Marriage) ಹುಡುಗ-ಹುಡುಗಿಯರಿಗೆ ಒಂದಿಷ್ಟು ಅಪೇಕ್ಷೆಗಳಿರುತ್ತವೆ. ಪರಸ್ಪರ ನಿರೀಕ್ಷೆಗಳೂ (Expectation) ಇರುತ್ತವೆ. ಹೆಂಡತಿ(Wife)ಯಾಗುವವಳು ತಮ್ಮ ಬಟ್ಟೆಬರೆ ನೀಟಾಗಿ ಇಡುತ್ತಾಳೆ, ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು, ಹೊತ್ತುಹೊತ್ತಿಗೆ ಊಟ-ತಿಂಡಿ ಮಾಡುತ್ತಾಳೆ, ತಮ್ಮೊಂದಿಗೆ ಹೊರಗೆ ಸುತ್ತಾಡಲು ಬರುತ್ತಾಳೆ ಎನ್ನುವಂತಹ ಸಾಮಾನ್ಯ ನಿರೀಕ್ಷೆಗಳು ಪುರುಷರಿಗಿದ್ದರೆ, ಯುವತಿಯರಿಗೂ ತಮ್ಮ ಪತಿ(Husband)ಯಾಗುವವನು ತಮಗೆ ಮನೆ ಕೆಲಸದಲ್ಲಿ (House Chores) ಸಹಾಯ ಮಾಡುತ್ತಾನೆ, ತನ್ನ ಬೇಕು-ಬೇಡಗಳನ್ನು ಗಮನಿಸಿಕೊಳ್ಳುತ್ತಾನೆ, ವೀಕೆಂಡ್‌ ದಿನವಾದರೂ ಅಡುಗೆ ಮಾಡುತ್ತಾನೆ, ಮನೆಯ ಸ್ವಚ್ಛತಾ ಕಾರ್ಯಗಳಲ್ಲಿ ಕೈಜೋಡಿಸುತ್ತಾನೆ ಎಂದೆಲ್ಲ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಇಂದಿನ ದಿನಗಳಲ್ಲಂತೂ ಇಬ್ಬರೂ ಸೇರಿಯೇ ಎಲ್ಲ ಕೆಲಸಗಳನ್ನು ಪ್ಲಾನ್‌ ಮಾಡುವುದು ಅತಿ ಸಾಮಾನ್ಯ. ಆದರೆ, ಎಲ್ಲರ ನಿರೀಕ್ಷೆಗಳೂ ಅಂದುಕೊಂಡಂತೆ ಆಗಬೇಕೆಂದಿಲ್ಲ. ನಿಮ್ಮ ಸಂಗಾತಿ ಕೆಲಸ ಮಾಡಲು ಬೇಸರಪಟ್ಟುಕೊಳ್ಳುವವರು ಅಂದರೆ ಸೋಮಾರಿಗಳಾಗಿರಬಹುದು. ಆಗ ನಿಮ್ಮ ನಿರೀಕ್ಷೆ ಹುಸಿಯಾಗಿ ಬೇಸರ ಉಂಟಾಗಬಹುದು. 

ಹೌದು, ಸೋಮಾರಿ (Lazy) ಗಂಡನೇ ಆಗಿರಲಿ, ಸೋಮಾರಿ ಹೆಂಡತಿಯೇ ಆಗಲಿ. ಇಬ್ಬರೂ ಇನ್ನೊಬ್ಬರಿಗೆ ಭಾರೀ ಕಷ್ಟ ಕೊಡುತ್ತಿರುತ್ತಾರೆ. ತಮ್ಮ ಬಟ್ಟೆಬರೆಗಳನ್ನು ನೀಟಾಗಿ ಮಡಚಿಟ್ಟುಕೊಳ್ಳಲೂ ಬಾರದ, ಕಾಫಿ ಲೋಟವನ್ನು ಎತ್ತಿ ಸಿಂಕಿಗೂ ಇಡದ ಗಂಡನ ಬಗ್ಗೆ ಕ್ರಮೇಣ ಉದಾಸೀನ ಬೆಳೆಯುತ್ತದೆ. ಹಾಗೆಯೇ, ಅಡುಗೆ ಮಾಡಲು ಬೇಸರಿಸಿಕೊಳ್ಳುವ, ಮನೆಯನ್ನು ಸ್ವಚ್ಛ ಮಾಡಲು ಮುಂದಾಗದ ಹೆಂಡತಿಯ ಬಗ್ಗೆ ಗಂಡನೂ ಕೋಪಿಸಿಕೊಳ್ಳುತ್ತಾನೆ. ಆಗ ಮನೆಯಲ್ಲಿ ಸಮಾಧಾನದ ವಾತಾವರಣ ಇರುವುದಿಲ್ಲ. ಪದೇ ಪದೆ ಮುನಿಸುಗಳು ಉಂಟಾಗಿ ಸಂಬಂಧಕ್ಕೇ ಧಕ್ಕೆ ಉಂಟಾಗಬಹುದು. ಹೀಗಾಗಬಾರದು ಎಂದಾದರೆ, ಸೋಮಾರಿ ಸಂಗಾತಿಯ ಜತೆ ಹೇಗೆ ವ್ಯವಹರಿಸಬೇಕೆಂದು ತಿಳಿದುಕೊಳ್ಳಿ.

•    ಭಯಪಟ್ಟುಕೊಳ್ಳಬೇಡಿ (No Fear):
ಹೌದು, ಮದುವೆಯಾದ ಹೊಸತರಲ್ಲಿ ಪರಸ್ಪರ ಸ್ವಲ್ಪ ಭಯ ಇರುವುದು ಸಹಜ. ಲವ್‌ ಮ್ಯಾರೇಜ್‌ ಆಗಿದ್ದರೆ ಪರವಾಗಿಲ್ಲ, ಹಿರಿಯರು ನೋಡಿ ನಿಶ್ಚಯಿಸಿದ್ದರೆ ಪರಸ್ಪರ ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಆದರೆ, ಆ ಸಮಯದಲ್ಲಿ ಸಂಗಾತಿಯ ಬಗ್ಗೆ ಭಯ ಪಡುವುದು ಬೇಡ. ಆತ್ಮೀಯವಾಗಿ ಮಾತನಾಡುತ್ತ ವಿಶ್ವಾಸ ಮೂಡಿಸಿಕೊಳ್ಳಿ. ಅವರಲ್ಲಿ ಸಹಾಯ ಕೇಳಲು ಮುಜುಗರ ಬೇಡ. ಆದರೆ, ಕೆಲಸ ಹೇಳುವ ವಿಧಾನದಲ್ಲಿ ಸ್ವಲ್ಪ ನಯವಿರಲಿ. ಅವರು ಸೋಮಾರಿಗಳೆಂದು ಅರಿವಿಗೆ ಬಂದಲ್ಲಿ ನಯವಾಗಿಯೇ ಕೆಲಸಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸಿ. ಆಗ ಅವರಿಗೆ ಅದನ್ನು ಮಾಡಲು ಸ್ವಲ್ಪ ಸಮಯ ದೊರೆತಂತೆ ಆಗುತ್ತದೆ. ಹಾಗೆಯೇ ಪ್ರತಿ ಕೆಲಸಕ್ಕೂ ಸಮಯ ನಿಗದಿ ಮಾಡಿಕೊಳ್ಳಿ. ಕೆಲವೊಮ್ಮೆ ನೀವೂ ಸಹಾಯ ಮಾಡಿ. ಮುಕ್ತವಾಗಿ ಮಾತನಾಡಿ.

ಇದನ್ನೂ ಓದಿ: ಹುಡುಗಿಯರನ್ನು ಇಂಪ್ರೆಸ್ ಮಾಡುವುದು ತುಂಬಾ ಸುಲಭ, ಹೇಗೆ ತಿಳ್ಕೊಳ್ಳಿ

•    ಪೂರ್ಣಗೊಳಿಸಿದ ಕೆಲಸದ ಬಗ್ಗೆ ಮೆಚ್ಚುಗೆ (Appreciate) ವ್ಯಕ್ತಪಡಿಸಿ:
“ನಿನಗೆ ಇಂತಹ ಕೆಲಸ ಮಾಡಿ ಅಭ್ಯಾಸವಿದೆಯೋ ಇಲ್ಲವೋ, ಆದರೆ, ಈಗ ಹೀಗೆ ಮಾಡಬೇಕುʼ ಎನ್ನುವ ಸಹಕಾರ ನಿಮ್ಮದೂ ಇರಲಿ. ಅವರು ಆ ಕೆಲಸವನ್ನು ಪೂರ್ಣಗೊಳಿಸಿದಾಗ ಅದಕ್ಕೊಂದು ಮೆಚ್ಚುಗೆ ಇರಲಿ. ನಿಮ್ಮ ಎಲ್ಲ ಕೆಲಸಗಳನ್ನು ನೀವು ಮಾಡಿಕೊಳ್ಳಬಹುದು. ಅವರು ಏನನ್ನೂ ಮಾಡಿಕೊಡದಿರಬಹುದು. ಆದರೂ ಕೋಪಿಸಿಕೊಳ್ಳಬೇಡಿ. ನಿಮ್ಮ ಎಲ್ಲ ಕೆಲಸವನ್ನೂ ಅವರು ಮಾಡಬೇಕೆಂದಿಲ್ಲ. ಎಷ್ಟೋ ಮನೆಗಳಲ್ಲಿ “ಮನೆಕೆಲಸʼ ಎಂದರೆ ಹೆಂಗಸರದ್ದು ಎನ್ನುವಂತೆ ನೋಡುತ್ತಾರೆ. ಹಾಗೆ ಬಿಹೇವ್‌ (Behave) ಮಾಡುವುದು ಸರಿಯಲ್ಲ. ನಿಮ್ಮದೇ ಮನೆ, ನೀವೂ ಕೈಜೋಡಿಸಬೇಕು. ಆದರೆ, ನೀವು ನಿಮ್ಮದೇ ಕಚೇರಿಯ ಕಾರ್ಯಗಳಲ್ಲಿ ಒತ್ತಡದಲ್ಲಿದ್ದರೆ ಅದನ್ನು ಮುಕ್ತವಾಗಿ ಸಂಗಾತಿಯೊಂದಿಗೆ ಮಾತನಾಡಬೇಕು. ಪುರುಷರೂ ತಮ್ಮ ಬಟ್ಟೆ ನೀಟಾಗಿ ಇಟ್ಟುಕೊಳ್ಳುವುದನ್ನು, ಎಂದಾದರೊಮ್ಮೆ ಅಡುಗೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೆಯೇ, ಮಹಿಳೆಯರೂ ಅವರಿಗೆ ಯಾವುದಾದರೂ ಸಹಾಯ ಮಾಡಲು ಹಿಂದೆ ಮುಂದೆ ನೋಡಬಾರದು. ಇಂಥದ್ದೊಂದು ಹೊಂದಾಣಿಕೆ ಬಂದಾಗಲೇ ಸಂಸಾರ ಸುಗಮವಾಗುತ್ತದೆ.

ಇದನ್ನೂ ಓದಿ: ಹುಡುಗಿಯರಿಗೆ ಇಷ್ಟವೇ ಆಗದ ಐದು ವಿಚಾರಗಳು 

•    ಮನೆ ಕೆಲಸದಲ್ಲಿ ಅವರಿಗೆ ಸಾಕಷ್ಟು ಸ್ವಾತಂತ್ರ್ಯ (Freedom) ಕೊಡಿ.
ಮನೆಯ ಕೆಲಸಗಳನ್ನು ಹೀಗೆಯೇ ಮಾಡಬೇಕು, ಹಾಗೆಯೇ ಇಡಬೇಕು ಎನ್ನುವ ನಿಯಮಗಳನ್ನು ಹೇರಬೇಡಿ. ಮನೆ ಸ್ವಚ್ಛವಾಗಿ, ನೀಟಾಗಿರುವಂತೆ ನೋಡಿಕೊಳ್ಳಲಿ. ಆಮೇಲೆ ನಿಮ್ಮ ಅಭಿರುಚಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬಹುದು. 

Latest Videos
Follow Us:
Download App:
  • android
  • ios