ಹುಡುಗಿಯರನ್ನು ಇಂಪ್ರೆಸ್ ಮಾಡುವುದು ತುಂಬಾ ಸುಲಭ, ಹೇಗೆ ತಿಳ್ಕೊಳ್ಳಿ

ನಾವು ಇಷ್ಟಪಡುವ ವ್ಯಕ್ತಿ ನಮ್ಮನ್ನು ಮರಳಿ ಇಷ್ಟಪಡದಿದ್ದಾಗ ನಾವು ನಿಜವಾಗಿಯೂ ನಿರಾಶೆಗೊಳ್ಳುತ್ತೇವೆ. ಹುಡುಗಿಯನ್ನು (Girls) ಮೆಚ್ಚಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಕಾಲ್‌, ಮೆಸೇಜ್‌. ಉಡುಗೊರೆಗಳನ್ನು ನೀಡುತ್ತವೆ.  ಹೀಗಿದ್ದೂ ಆಕೆ ನೀವು ಅವಳ ಪ್ರೀತಿ (Love) ಗೆ ಅರ್ಹರು ಎಂದು ಭಾವಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವೇನು ಮಾಡಬಹುದು ? 

How To Impress A Girl, Typical Secrets You Need to Know Vin

ದೀರ್ಘಾವಧಿಯಲ್ಲಿ, ಪ್ರೀತಿ (Love) ಮತ್ತು ಸಂಬಂಧ (Relationship)ಗಳನ್ನು ನಿಜವಾಗಿಯೂ ಗೌರವಿಸುವ ಹುಡುಗಿ ಹುಡುಗರ ಎಲ್ಲಾ ಸ್ವಭಾವವನ್ನು ಇಷ್ಟಪಡುವುದಿಲ್ಲ. ಬದಲಿಗೆ ಉತ್ತಮ ವ್ಯಕ್ತಿತ್ವದ ಹುಡುಗನೊಂದಿಗೆ ಪ್ರೀತಿಯಲ್ಲಿ ಬೀಳಲು ಇಷ್ಟಪಡುತ್ತಾಳೆ. ಆದರೆ ಹಲವು ಸಂದರ್ಭಗಳಲ್ಲಿ ಹುಡುಗರು (Boys) ಹುಡುಗಿಯರ ಮನಸ್ಸನ್ನು ಅರಿತುಕೊಳ್ಳುವಲ್ಲಿ ವಿಫಲರಾಗುತ್ತಾರೆ. ಹೀಗಾಗಿ ಯಾವೊಬ್ಬ ಹುಡುಗಿಯೂ ಅವರನ್ನು ಇಷ್ಟಪಡುವುದಿಲ್ಲ. ಇಷ್ಟ ಪಟ್ಟ ಹುಡುಗಿಯೂ (Girls) ನಿಜ ಸ್ವಭಾವ ಅರಿತ ಬಳಿಕ ದೂರ ಸರಿಯುತ್ತಾಳೆ. ಹಾಗಾದರೆ ಹುಡುಗಿಯನ್ನು ಮೆಚ್ಚಿಸಲು ಹುಡುಗರು ಏನು ಮಾಡಬಹುದು ?

1. ನಿಮ್ಮನ್ನು ಪ್ರೀತಿಸುವ ಮೂಲಕ ಪ್ರಾರಂಭಿಸಿ
ಬೇರೊಬ್ಬರನ್ನು ಪ್ರೀತಿಸಲು ಆರಂಭಿಸುವುದಕ್ಕೂ ಮೊದಲು ನೀವು ನಿಮ್ಮನ್ನು ಪ್ರೀತಿಸಬೇಕು. ನಿಮ್ಮ ಬಗ್ಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಒಂದಲ್ಲ ಒಂದು ಅರ್ಥದಲ್ಲಿ ಪರಿಪೂರ್ಣರಲ್ಲ. ಆ ಅಪೂರ್ಣತೆಯನ್ನು ಹಾಗೆಯೇ ಸ್ವೀಕರಿಸಬೇಕು. ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇದು ಇತರರಿಗೂ ನೀವು ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ನಿಮ್ಮ ಅಭದ್ರತೆಯ ಬಗ್ಗೆ ಕಾಳಜಿ ವಹಿಸದಿರುವುದು ಮತ್ತು ಸಮಾಜದಲ್ಲಿ ಹೊಂದಿಕೊಳ್ಳಲು ನೀವು ಆದರ್ಶ ಮಾನದಂಡಗಳು ಅಥವಾ ನಿರೀಕ್ಷೆಗಳನ್ನು ಪೂರೈಸಬೇಕಾಗಿಲ್ಲ ಎಂದು ಅರಿತುಕೊಳ್ಳುವುದು ನಿಮ್ಮನ್ನು ಪ್ರೀತಿಸುವುದು ಅಥವಾ ಒಪ್ಪಿಕೊಳ್ಳುವ ಮಾರ್ಗವಾಗಿದೆ. ಈ ಆತ್ಮವಿಶ್ವಾಸದಿಂದ ನೀವು ಮತ್ತೊಬ್ಬರನ್ನು ಪ್ರೀತಿಸಲು ಸಾಧ್ಯವಾಗುತ್ತದೆ.

ನಿಮ್ಮಿಬ್ಬರ ಈ ಗುಟ್ಟನ್ನು ಯಾರಿಗೂ ಬಿಟ್ಟುಕೊಡ್ಬೇಡಿ

2. ಮಹತ್ವಾಕಾಂಕ್ಷೆಯನ್ನು ಸಾಧಿಸುವತ್ತ ಕೆಲಸ ಮಾಡಿ
ನಿಮ್ಮ ಹವ್ಯಾಸ, ಮಹತ್ವಾಕಾಂಕ್ಷೆಯನ್ನು ಸಾಧಿಸುವತ್ತ ಕೆಲಸ ಮಾಡಿ. ಯಾವುದೇ ಹವ್ಯಾಸವನ್ನು ಪೋಷಿಸುವುದು ಕೆಲಸ-ಜೀವನದ ಸಮತೋಲನವನ್ನು ಮಾಡುವ ಜೊತೆಗೆ ವೈಯಕ್ತಿಕ ಸಾಧನೆಯ ಅರ್ಥವನ್ನು ನೀಡುತ್ತದೆ. ಹವ್ಯಾಸಗಳು ವ್ಯಕ್ತಿಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಆತ್ಮವಿಶ್ವಾಸವಿರುವ ವ್ಯಕ್ತಿತ್ವ ಹುಡುಗಿಯರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. ಹುಡುಗಿಯರು ಮಹತ್ವಾಕಾಂಕ್ಷೆಯ ಹುಡುಗರತ್ತ ಆಕರ್ಷಿತರಾಗುತ್ತಾರೆ ಮತ್ತು ದೀರ್ಘಾವಧಿಯಲ್ಲಿ ತಮ್ಮ ಜೀವನದಿಂದ ಅವರು ಏನು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ.

3. ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಿ
ಮಹಿಳೆಯರು ಯಾವಾಗಲೂ ನಟರು ಅಥವಾ ಸೆಲೆಬ್ರಿಟಿಗಳ ಬಗ್ಗೆ ಏಕೆ ಮಾತನಾಡುತ್ತಾರೆ ಎಂದು ನಿಮಗೆ ತಿಳಿದಿದೆಯೇ ? ಎಲ್ಲರೂ ಬಾಹ್ಯ ಸೌಂದರ್ಯ ಮುಖ್ಯವಲ್ಲ, ಆಂತರಿಕ ಸೌಂದರ್ಯವಷ್ಟೇ ಮುಖ್ಯ ಎಂದೇನೋ ಹೇಳುತ್ತಾರೆ. ಹಾಗಂದ ಮಾತ್ರಕ್ಕೆ ಕೆಟ್ಟದಾಗಿ ರೆಡಿಯಾಗಿ ಅಂತೇನು ಅಲ್ಲವಲ್ಲ. ಯಾವಾಗಲೂ ಪರ್ಫೆಕ್ಟ್‌ ಆಗಿ ರೆಡಿಯಾಗಿ. ಇದು ನಿಮ್ಮ ಕಾನ್ಫಿಡೆನ್ಸ್‌ನ್ನು ಹೆಚ್ಚಿಸುತ್ತದೆ.  ಮಹಿಳೆ ತನ್ನ ಪುರುಷನು ಕೆಟ್ಟದಾಗಿ ರೆಡಿಯಾಗುವುದನ್ನು ಬಯಸುವುದಿಲ್ಲ. ಆಕೆಗೆ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸದಿರುವ ಸ್ವಭಾವವೂ ಇಷ್‌ಟವಾಗುವುದಿಲ್ಲ.

Girls Secret:ಬಾಯ್ ಫ್ರೆಂಡ್ ನೆನಪು ಬರ್ತಿದ್ದಂತೆ ಹುಡುಗಿಯರು ಮಾಡೋದು ಇದನ್ನೇ !

4. ವೈಯಕ್ತಿಕ, ಅರ್ಥಪೂರ್ಣ ಸಂಭಾಷಣೆಯನ್ನು ಹೊಂದಿರಿ
ಆರೋಗ್ಯಕರ ಸಂಬಂಧವನ್ನು ಸ್ಥಾಪಿಸುವ ಕೀಲಿಯು ಸರಳವಾಗಿ ಮಾತನಾಡುವುದು. ಆದ್ದರಿಂದ, ಹುಡುಗಿಯನ್ನು ಸಮೀಪಿಸುವ ಆರಂಭಿಕ ಹಂತದಿಂದ ನಿಮ್ಮ ಈ ಅಭ್ಯಾಸವನ್ನು ಹೊಂದಿರಿ. ಅವಳು ನಿಜವಾಗಿಯೂ ತನ್ನ ಎಲ್ಲಾ ಸಮಯವನ್ನು ನಿಮಗೆ ನೀಡಲು ಬಯಸಿದರೆ, ಅವಳು ಬಹುಶಃ ನಿಮ್ಮೊಂದಿಗೆ ಆಳವಾದ, ಅರ್ಥಪೂರ್ಣ ಸಂಭಾಷಣೆಯನ್ನು ಹೊಂದಲು ಬಯಸುತ್ತಾಳೆ. ಆದರೆ ಅದಕ್ಕೂ ಮೊದಲು, ನಿಮ್ಮಿಬ್ಬರಿಗೂ ಸಾಮಾನ್ಯವಾಗಿರುವ ಎಲ್ಲಾ ವಿಷಯಗಳು ಯಾವುವು ಎಂಬುದನ್ನು ಕಂಡುಹಿಡಿಯಲು ಖಚಿತಪಡಿಸಿಕೊಳ್ಳಿ. ಮತ್ತು ಅದರ ಪ್ರಕಾರ, ಉತ್ತಮ ಸಂಭಾಷಣೆಯನ್ನು ಪ್ರಾರಂಭಿಸಿ ಏಕೆಂದರೆ, ದೀರ್ಘಾವಧಿಯಲ್ಲಿ, ಅವರು ನಿಮ್ಮೊಂದಿಗೆ ವೈಯಕ್ತಿಕ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಬಯಸುತ್ತಾರೆ.

5. ಗಮನ ಕೊಡಿ ಮತ್ತು ಉತ್ತಮ ಕೇಳುಗರಾಗಿರಿ
ಯಾರಾದರೂ ತನ್ನ ಮಾತನ್ನು ಪೂರ್ಣ ಗಮನದಿಂದ ಕೇಳಿದಾಗ ಹುಡುಗಿ ಅದನ್ನು ಯಾವಾಗಲೂ ಗೌರವಿಸುತ್ತಾಳೆ. ಇತ್ತೀಚಿನ ದಿನಗಳಲ್ಲಿ, ಗೆಳತಿಗೆ ಉಡುಗೊರೆಗಳನ್ನು ಕೊಡುವ ಮೂಲಕ ಅವರನ್ನು ಇಂಪ್ರೆಸ್ ಮಾಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಹೆಚ್ಚಿನ ಹುಡುಗಿಯರು ಕೆಲಸ ಮಾಡುತ್ತಾರೆ. ಹೀಗಾಗಿ ತಮಗೆ ಬೇಕೆನಿಸಿದ್ದನ್ನು ಖರೀದಿಸಲು ಶಕ್ತರಾಗಿರುತ್ತಾರೆ. ಆದ್ದರಿಂದ ಮನಸ್ಸಿಟ್ಟು ಅವಳ ಮಾತನ್ನು ಕೇಳುವ ಅಭ್ಯಾಸ ರೂಢಿಸಿಕೊಳ್ಳಿ. ಇದು ಆಕೆಗೆ ಅತ್ಯಂತ ಆಪ್ತ ಉಡುಗೊರೆಯೆನಿಸಿಕೊಳ್ಳುತ್ತದೆ. ತಾವು ಸ್ಪೆಷಲ್ ವ್ಯಕ್ತಿಯೆಂಬ ಭಾವನೆಯನ್ನು ಮೂಡಿಸುತ್ತದೆ.

Latest Videos
Follow Us:
Download App:
  • android
  • ios