ಮಕ್ಕಳ ಮೇಲೆ ಬೇಕಾಬಿಟ್ಟಿ ಕಿರುಚಾಡ್ತೀರಾ ? ತಾಳ್ಮೆಯಿಂದ ಇರೋದು ಹೇಗೆ ನಾವ್ ಹೇಳ್ತೀವಿ

ಮಕ್ಕಳು (Children) ಗೊತ್ತಲ್ಲಾ, ಸಣ್ಣ ಪುಟ್ಟ ವಿಷಯಗಳಿಗೆ ಹಠ ಮಾಡ್ತಾನೆ ಇರ್ತಾರೆ. ಹೀಗಿದ್ದಾಗ ಪೋಷಕರು (Parent) ತಾಳ್ಮೆ (Patience) ಕಳೆದುಕೊಂಡು ಮಕ್ಕಳ ಮೇಲೆ ಕಿರುಚಾಡಿ ಆಗಿರುತ್ತದೆ. ಆಮೇಲೆ ಅಷ್ಟು ರೇಗಾಡೋದು ಬೇಡವಾಗಿತ್ತು ಅನಿಸುತ್ತೆ. ಹಾಗಿದ್ರೆ ತಾಳ್ಮೆಯಿರುವ ಪೋಷಕರಾಗೋದು ಹೇಗೆ. ನಾವು ಕೆಲವೊಂದು ಸಿಂಪಲ್ ಟಿಪ್ಸ್ ಕೊಡ್ತೀವಿ.

How To Be A More Patient Parent Tips On Parenting Patience Vin

ಪೋಷಕರಾಗುವ ಮೊದಲು ತಾಳ್ಮೆ (Patience) ಯನ್ನು ಕಲಿತುಕೊಳ್ಳುವುದು ಮುಖ್ಯವಾಗಿದೆ. ಮಕ್ಕಳನ್ನು (Children) ಬೆಳೆಸುವುದು ಸುಲಭದ ಕೆಲಸವಲ್ಲ. ಇದು ಅತ್ಯಂತ ಸವಾಲಿನ ಸಂಗತಿಯಾಗಿದೆ. ಹೆಚ್ಚಿನ ಮಕ್ಕಳು ಹಿರಿಯರು ಹೇಳಿದ ವಿಚಾರವನ್ನು ಸುಲಭವಾಗಿ ಒಪ್ಪುವುದಿಲ್ಲ. ನೀವು ಹೇಳಿದ ವಿಷಯಗಳು ಯಾವಾಗಲೂ ಮಕ್ಕಳಿಗೆ ಒಪ್ಪಿಗೆಯಾಗದಿರಬಹುದು. ಅಂಬೆಗಾಲಿಡುವ ಮಗು ಅಥವಾ ದೊಡ್ಡವರಾದ ಮಗುವಿನೊಂದಿಗೆ ಸಹ, ಪೋಷಕರಿಗೆ (Parent) ಸಾಕಷ್ಟು ತಾಳ್ಮೆ ಅಗತ್ಯವಿರುತ್ತದೆ. ಪೋಷಕರು ಮತ್ತು ಮಕ್ಕಳ ನಡುವಿನ ಉತ್ತಮ ಪಾಲನೆ ಮತ್ತು ಸಾಮರಸ್ಯದ ಸಂಬಂಧಗಳಿಗೆ ತಾಳ್ಮೆ ಮುಖ್ಯವಾಗಿದೆ. ಮಕ್ಕಳ ಮುಂದೆ ಉದ್ಧಟತನ ಮಾಡುವುದು ಅಥವಾ ಬೇಗ ಅವರು ಹೇಳಿದ ಮಾತನ್ನು ಒಪ್ಪುವುದು ಸಹ ಸರಿಯಲ್ಲ. ಮಕ್ಕಳ ಮೊಂಡುತನದ  ನಡವಳಿಕೆಗಳನ್ನು ಸ್ವೀಕರಿಸಲು ಮತ್ತು ಅನುಕರಿಸಲು ನೀವು ಹೆಚ್ಚು ತಾಳ್ಮೆಯ ಪೋಷಕರಾಗಬೇಕು

ಮನಸ್ಸನ್ನು ಶಾಂತಗೊಳಿಸಲು ಪ್ರಯತ್ನಿಸಿ
ನೀವು ಮಗುವಿನ ಮೇಲೆ ಸಿಟ್ಟಾಗಿದ್ದೀರಿ, ಇನ್ನೇನು ಕಿರುಚಿಬಿಡುತ್ತೀರಿ ಎಂದು ಅನಿಸಿದಾಗ ಮನಸ್ಸನ್ನು ಶಾಂತವಾಗಿಸಿಕೊಳ್ಳಿ. ಮನಸ್ಸಿನಲ್ಲೇ ಹತ್ತರಿಂದ ಒಂದಕ್ಕೆ ನಿಧಾನವಾಗಿ ಎಣಿಸುವ ಮೂಲಕ ನಿಮ್ಮನ್ನು ಶಾಂತ (Calmdown)ಗೊಳಿಸಲು ಪ್ರಯತ್ನಿಸಿ. ನೀವು ಸಿಟ್ಟಿಗೆದ್ದ ಕೂಡಲೇ ಮಗುವಿನ ಮೇಲೆ ರೇಗಾಡುವುದರಿಂದ ಇದು ಮಕ್ಕಳ ಮನಸ್ಸಿನ ಮೇಲೆ ಋಣಾತ್ಮಕವಾಗಿ ಪರಿಣಾಮವನ್ನು ಬೀರುತ್ತದೆ. ಇಂಥಾ ನಡವಳಿಕೆ ಮಕ್ಕಳಲ್ಲಿ ಮೊಂಡುತನದ ವರ್ತನೆಗೆ ಕಾರಣವಾಗಬಹುದು.

ಮಕ್ಕಳನ್ನು ಬೆಳ್ಳಂಬೆಳಗ್ಗೆ ಏಳೋ Early Birds ಆಗಿಸೋಕೆ ಸುಲಭ

ಮಗುವಿನೊಂದಿಗೆ ಸಂವಹನ ನಡೆಸಿ
ನಿಮ್ಮ ಮಗುವಿನೊಂದಿಗೆ ಸರಿಯಾಗಿ ಸಂವಹನ ಮಾಡುವುದು ಸಿಟ್ಟು (Angry) ಕಡಿಮೆಯಾಗಲು ಕಾರಣವಾಗುತ್ತದೆ. ಮಕ್ಕಳ ಮನಸ್ಸನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನೀವು ಆ ತಿಳುವಳಿಕೆಯನ್ನು ಬೆಳೆಸಿಕೊಂಡರೆ, ಪ್ರತಿಕ್ರಿಯೆಗಳು ಮತ್ತು ಪ್ರಕೋಪಗಳನ್ನು ನಿರ್ವಹಿಸಲು ಮತ್ತು ಕ್ರಮೇಣ ಅವುಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಮಕ್ಕಳ ಜತೆ ಆತ್ಮೀಯವಾಗಿ ಸಂವಹನ ನಡೆಸಿ. ಇದು ಸಿಟ್ಟನ್ನು ಆದಷ್ಟು ಕಡಿಮೆ ಮಾಡುತ್ತದೆ.

ಮಕ್ಕಳ ಹಠಕ್ಕೆ ಕಾರಣವೇನೆಂದು ತಿಳಿಯಿರಿ
ಮಕ್ಕಳು ಹಠ (Stubborn) ಮಾಡುತ್ತಿದ್ದಾರೆ ಎಂದು ತಕ್ಷಣ ಕಿರುಚಾಡುವ ಬದಲು ಆ ಹಠಕ್ಕೆ ಕಾರಣವೇನೆಂದು ತಿಳಿಯಿರಿ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಿ. ಮಕ್ಕಳ ಹಠಕ್ಕೆ ಪ್ರತಿಬಾರಿಯೂ ಕಾರಣವಿರುತ್ತದೆ. ಅದೇನೆಂದು ತಿಳಿದುಕೊಂಡಾಗ ಮಾತ್ರ ಅದನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯ.ವಾಗುತ್ತದೆ.  ತಾಳ್ಮೆಯನ್ನು ಪರೀಕ್ಷಿಸುವ ಕೆಲವು ಕ್ರಿಯೆಗಳಿವೆ ಆದರೆ ಆಧಾರವಾಗಿರುವ ಅಗತ್ಯಗಳನ್ನು ಗುರುತಿಸುವುದು ನಿಮ್ಮ ಮಗುವಿನ ನಡವಳಿಕೆಗಳೊಂದಿಗೆ ತಾಳ್ಮೆಯಿಂದಿರಲು ಮತ್ತು ಸಂದರ್ಭಗಳನ್ನು ಮೊದಲೇ ತಿರುಗಿಸಲು ಸಹಾಯ ಮಾಡುತ್ತದೆ.

ಓದು ಓದು ಅಂತಾ ಮಕ್ಕಳಿಗೆ ಒತ್ತಾಯ ಮಾಡೋ ಮುನ್ನ ಇದನ್ನೋದಿ

ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದಾಗ ನಿರ್ವಹಿಸಿ
ಇಮೋಶನಲ್ ಬ್ಲ್ಯಾಕ್‌ಮೇಲ್ ಮಕ್ಕಳು ಹೆಚ್ಚಾಗಿ ಬಳಸುತ್ತಾರೆ. ಆದರೆ ಇಂಥಾ ಸಂದರ್ಭದಲ್ಲಿ ಪೋಷಕರು ತಕ್ಷಣ ಅವರ ಮಾತನ್ನು ಒಪ್ಪಿಕೊಳ್ಳಬಾರದು. ಮೆಲ್ಟ್‌ಡೌನ್‌ಗಳು ಅತಿಯಾದ ಋಣಾತ್ಮಕತೆಯ ಮೂಲವಾಗಿದೆ ಮತ್ತು ನಿಮ್ಮ ಮಗುವಿನ ಭಾವನಾತ್ಮಕ (Emotional) ಸ್ಥಿರತೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. 

ನಿಮ್ಮ ವರ್ತನೆಯನ್ನು ಮೌಲ್ಯಮಾಪನ ಮಾಡಿ
ನಿಮ್ಮನ್ನು ಮತ್ತು ನಿಮ್ಮ ನಡವಳಿಕೆ (Behaviour)ಯನ್ನು ನಿರ್ಣಯಿಸುವುದು ನಿಮಗೆ ಮುಖ್ಯವಾಗಿದೆ. ಅತಿಯಾದ ಸಿಟ್ಟು, ತಾಳ್ಮೆ ಇಲ್ಲರಿರುವ ಸ್ವಭಾವವನ್ನು ಬದಿಗಿಡಿ. ಇಂಥಾ ವರ್ತನೆಯಿಂದ ಕೆಲವೊಮ್ಮೆ ನಿಮಗೂ ಸಮಸ್ಯೆಯಾಗಬಹುದು. ಅತಿ ಬೇಗ ತಾಳ್ಮೆ ಕಳೆದುಕೊಳ್ಳುತೀರಾದರೆ ವೃತ್ತಿಪರ ಸಹಾಯವನ್ನು ಪಡೆಯುವ ಮೂಲಕ ನಿಮ್ಮ ಕೋಪವನ್ನು ನೀವು ನಿರ್ವಹಿಸಬಹುದು.

ಮಾನಸಿಕ ಆರೋಗ್ಯದ ಮೇಲೆ ಕೇಂದ್ರೀಕರಿಸಿ
ನಿಮಗೆ ಸಂತೋಷವನ್ನುಂಟುಮಾಡುವ ಕೆಲಸಗಳನ್ನು ಮಾಡುವ ಮೂಲಕ ನಿಮ್ಮನ್ನು ನೀವು  ಖುಷಿಯಾಗಿಟ್ಟುಕೊಳ್ಳಬಹುದು. ಇದು ಕೋಪದ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡುತ್ತದೆ.  ಇದು ಭಾವನಾತ್ಮಕವಾಗಿ ಸ್ಥಿರವಾಗಿರಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಮಗುವಿನೊಂದಿಗೆ ನೀವು ಇಷ್ಟಪಡುವ ಚಟುವಟಿಕೆಗಳನ್ನು ಮಾಡುವುದರಿಂದ ನೀವು ಹೆಚ್ಚು ಉಲ್ಲಸಿತರಾಗಿರುತ್ತೀರಿ.  ಈ ಮೂಲಕ ನಿಮ್ಮ ಕೋಪವನ್ನು ಉತ್ತಮವಾಗಿ ನಿರ್ವಹಿಸಬಹುದು.

Latest Videos
Follow Us:
Download App:
  • android
  • ios