ಮಕ್ಕಳನ್ನು ಬೆಳ್ಳಂಬೆಳಗ್ಗೆ ಏಳೋ Early Birds ಆಗಿಸೋಕೆ ಸುಲಭ Tips

ಸೂರ್ಯ ನೆತ್ತಿಗೆ ಬಂದ್ರೂ ಕೆಲವರ ನಿದ್ರೆ ಹೋಗಿರುವುದಿಲ್ಲ. ಮಕ್ಕಳು ಇದೇ ರೂಢಿ ಮಾಡಿಕೊಂಡ್ರೆ ಶಾಲೆಗೆ ಹೋಗೋದು ಕಷ್ಟವಾಗುತ್ತೆ. ಮಕ್ಕಳಿಗೆ ಹೆಲ್ದಿlifestyle ಕಲಿಸುವುದು ಪಾಲಕರ ಜವಾಬ್ದಾರಿಯಾಗಿದೆ. 
 

Easy Ways To Get Kids To Sleep Early And Wake Up Early In The Morning


ಆನ್ಲೈನ್ (Online) ಕ್ಲಾಸ್ ಗಳು ಮುಗಿದಿವೆ. ಬಹುತೇಕ ಶಾಲೆ (School) ಗಳು ತೆರೆದಿವೆ. ಇಷ್ಟು ದಿನ ಆನ್ಲೈನ್ ಕ್ಲಾಸ್ ಕಾರಣಕ್ಕೆ ತಡವಾಗಿ ಏಳ್ತಿದ್ದ ಮಕ್ಕಳು (Children) ಈಗ ಬೇಗ ಹಾಸಿಗೆಯಿಂದ ಎದ್ದೇಳಬೇಕು. ಶಾಲೆಗೆ ಹೋಗುವ ಮಕ್ಕಳನ್ನು ಬೆಳಿಗ್ಗೆ ಏಳಿಸುವುದು ದೊಡ್ಡ ಸಮಸ್ಯೆ. ಕೆಲ ಮಕ್ಕಳು ಹಾಸಿಗೆಯಿಂದ ಎದ್ದೇಳುವುದಿಲ್ಲ. ಪೋಷಕರು ಕೂಗಾಡಿ, ಕಿರುಚಾಡಿ ಹೊಡೆದ್ರೂ ನಿದ್ರೆಯಲ್ಲಿರುವ ಮಕ್ಕಳಿದ್ದಾರೆ. ಪೋಷಕರ ಈ ಕೆಲಸದಿಂದ ಮಕ್ಕಳು ಸುಧಾರಿಸಲು ಸಾಧ್ಯವಿಲ್ಲ. ಮಕ್ಕಳನ್ನು ಬೇಗ ಏಳಿಸಬೇಕೆಂದ್ರೆ ರಾತ್ರಿ ಬೇಗ ಮಲಗಬೇಕು. ಆಗ ಮಕ್ಕಳಿಗೆ ಸಂಪೂರ್ಣ ನಿದ್ರೆಯಾಗುತ್ತದೆ. ಆಗ ಪಾಲಕರು ಕರೆದ ತಕ್ಷಣ ಎದ್ದು ಬರ್ತಾರೆ. ನೀವು ಮಕ್ಕಳನ್ನು ಹೇಗೆ ಏಳಿಸುವುದು ಎಂಬ ತಲೆಬಿಸಿಯಲ್ಲಿದ್ದರೆ ಈ ಕೆಳಗಿನ ಟ್ರಿಕ್ಸ್ ಪಾಲನೆ ಮಾಡಿ.  

ದಿನಚರಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ : ಮಕ್ಕಳು ಏಳುವ ಮತ್ತು ಮಲಗುವ ಸಮಯ ನಿಗದಿ ಮಾಡಿ. ಭಾನುವಾರವಾಗಿರಲಿ ಇಲ್ಲ ಬೇರೆ ರಜೆಗಳಲ್ಲಿಯೂ ಮಕ್ಕಳ ಈ ದಿನಚರಿ ಬದಲಿಸಬೇಡಿ. ಒಂದೆರಡು ದಿನ ಕಷ್ಟವಾದ್ರೂ ನಂತ್ರ ಮಕ್ಕಳು ಈ ಸಮಯಕ್ಕೆ ಹೊಂದಿಕೊಳ್ತಾರೆ. ನೀವು ಕರೆಯದೆ ಅವರು ಹಾಸಿಗೆಯಿಂದ ಎದ್ದಿರುತ್ತಾರೆ.   

Baby Care: ಮಗುವನ್ನು ಥಿಯೇಟರ್‌ಗೆ ಕರೆದೊಯ್ಯಲು ಯಾವ ವಯಸ್ಸು ಬೆಸ್ಟ್?

ಎಂಟು ಗಂಟೆಗಳ ನಿದ್ರೆ ಅಗತ್ಯ : ನಿದ್ರೆ ಎಲ್ಲರಿಗೂ ಅತ್ಯಗತ್ಯ. ಅದ್ರಲ್ಲೂ ಮಕ್ಕಳಿಗೆ ಎಂಟರಿಂದ ಒಂಬತ್ತು ಗಂಟೆ ನಿದ್ರೆ ಬೇಕಾಗುತ್ತದೆ.  ಒಂದು ವೇಳೆ ತಡವಾಗಿ ಮಲಗಿ ಬೇಗ ಎದ್ದಾಗ ನಿದ್ರೆ ಸರಿಯಾಗಿ ಆಗುವುದಿಲ್ಲ. ಇದ್ರಿಂದ ಇಡೀ ದಿನ ಮಕ್ಕಳ ಮೂಡ್ ಹಾಳಾಗಿರುತ್ತದೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಕ್ಕಳು 8 ಗಂಟೆ ನಿದ್ರೆ ಮಾಡುವಂತೆ ನೋಡಿಕೊಳ್ಳಿ. 

ಮಧ್ಯಾಹ್ನ ಮಲಗಿಸಬೇಡಿ : ಅನೇಕ ಪಾಲಕರು ಮಧ್ಯಾಹ್ನ ಮಕ್ಕಳನ್ನು ಮಲಗಿಸ್ತಾರೆ. ಬೇಸಿಗೆ ಸಂದರ್ಭದಲ್ಲಿ ಹೊಟ್ಟೆಗೆ ಆಹಾರ ಹೋಗ್ತಿದ್ದಂತೆ ಮಕ್ಕಳಿಗೂ ನಿದ್ರೆ ಬರಲು ಶುರುವಾಗುತ್ತದೆ. ಶಾಲೆಯಿಂದ ಸುಸ್ತಾಗಿ ಬರುವ ಮಕ್ಕಳು ನಿದ್ರೆ ಮಾಡುವ ಸಾಧ್ಯತೆಯಿರುತ್ತದೆ. ಆ ಸಂದರ್ಭದಲ್ಲಿ ಮಕ್ಕಳನ್ನು ಬೇರೆ ಕೆಲಸದಲ್ಲಿ ತೊಡಗಿಸಿ. ಅವರನ್ನು ಆಟವಾಡಿಸಿ. ಮಧ್ಯಾಹ್ನ ಮಲಗಿದ್ರೆ ರಾತ್ರಿ ತಡವಾಗಿ ಮಲಗ್ತಾರೆ. ರಾತ್ರಿ ತಡವಾದ್ರೆ ಬೆಳಿಗ್ಗೆ ಏಳುವುದು ಕಷ್ಟ.      

ದೈಹಿಕ ಆಟಕ್ಕೆ ಪ್ರೋತ್ಸಾಹ : ಮಕ್ಕಳನ್ನು ಸಂಜೆ ಸಮಯದಲ್ಲಿ ಆಟ ಆಡುವಂತೆ ಪ್ರೋತ್ಸಾಹಿಸಿ. ಮಕ್ಕಳು ದಣಿದರೆ ನಿದ್ರೆ ಬೇಗ ಬರುತ್ತದೆ. ಮನೆ ಅಕ್ಕಪಕ್ಕ ಪಾರ್ಕ್ ಗಳಿದ್ದರೆ ಅಲ್ಲಿಗೆ ಕರೆದುಕೊಂಡು ಹೋಗಿ.  ಇಲ್ಲವೆ ಬೇರೆ ಯಾವುದಾದ್ರೂ ಆಟದಲ್ಲಿ ಅವರು ಬ್ಯುಸಿಯಾಗಿರುವಂತೆ ನೋಡಿಕೊಳ್ಳಿ.

Viral Video: ಜೀವಂತ ಹಲ್ಲಿಯನ್ನು ತಿನ್ನಲು ಮುಂದಾದ ಮಗು. ಮುಂದೆ ಆಗಿದ್ದೇನು ?

ಮಕ್ಕಳು ಬೇಗ ಮಲಗಲು ಈ ಟ್ರಿಕ್ಸ್ ಕೂಡ ಬಳಸಬಹುದು : 

  • ರಾತ್ರಿ ಮಲಗುವ ಕನಿಷ್ಠ 30 ನಿಮಿಷಗಳ ಮೊದಲು ತಮ್ಮೆಲ್ಲ ಕೆಲಸ ಮುಗಿಸುವಂತೆ ಮಕ್ಕಳಿಗೆ ಹೇಳಿ.
  • ಮಲಗುವ 20 ನಿಮಿಷಗಳ ಮೊದಲು ಪುಸ್ತಕವನ್ನು ಓದುವ ಅಭ್ಯಾಸ ಮಾಡಿಸಿ. ಮನೆಯ ವಾತಾವರಣ ಶಾಂತವಾಗಿರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಟಿವಿ ಅಥವಾ ಮೊಬೈಲ್ ಇತ್ಯಾದಿಗಳು ಆಫ್ ಮಾಡಿ.
  • ಮನೆಯಲ್ಲಿರುವ ದೀಪಗಳನ್ನು ಆರಿಸಿ. ಕತ್ತಲೆಯಲ್ಲಿ ಮಕ್ಕಳು ಬೇಗ ನಿದ್ರೆ ಮಾಡುತ್ತಾರೆ. ಅವಶ್ಯಕವೆನಿಸಿದ್ರೆ ಮಕ್ಕಳ ಜೊತೆ ನೀವೂ ಮಲಗಿ. ಮಲಗುವ ಮುನ್ನ ಶೌಚಾಲಯಕ್ಕೆ ಹೋಗುವುದನ್ನು ಮಕ್ಕಳಿಗೆ ರೂಢಿ ಮಾಡಿ.
  • ಮಕ್ಕಳ ಕಾಲು ಹಾಗೂ ಪಾದಗಳನ್ನು ಸ್ವಲ್ಪ ಮಸಾಜ್ ಮಾಡಿದ್ರೆ ಅವರಿಗೆ ಬೇಗ ನಿದ್ರೆ ಬರುತ್ತದೆ.  
  • ಮಲಗುವ ಮೊದಲು ಕಾಲುಗಳನ್ನು ತೊಳೆದು ಬೇರೆ ಬಟ್ಟೆ ಹಾಕಿ ಮಲಗಿಸಿ. ಬಟ್ಟೆ ಆರಾಮದಾಯಕವಾಗಿದ್ದರೆ ಅವರಿಗೆ ಬೇಗ ನಿದ್ರೆ ಆವರಿಸುತ್ತದೆ.
  • ಮನೆಯಲ್ಲಿ ತಾಜಾ ಗಾಳಿ ಬರುವಂತೆ ನೋಡಿಕೊಳ್ಳಿ. ಪ್ರತಿದಿನ ಒಂದೇ ಸಮಯದಲ್ಲಿ ಮಗುವನ್ನು ಮಲಗಿಸಿ.    
  • ಮಕ್ಕಳನ್ನು ಬೇಗ ಎಬ್ಬಿಸಲು ಅಲಾರಾಂ ಸೆಟ್ ಮಾಡಿ. ಅಲಾರಾಂ ರಿಂಗಣಿಸಿದ ತಕ್ಷಣ  ಮಗುವನ್ನು ಏಳಿಸಿ ದೈನಂದಿನ ಕೆಲಸ ಶುರು ಮಾಡಿ. ಅಲಾರಾಂ ಆದ ನಂತ್ರವೂ ಮಗು ಹಾಸಿಗೆಯಲ್ಲಿದ್ದರೆ ಮತ್ತೆ ಮಲಗುತ್ತದೆ. 
  • ಮಗು ಎದ್ದ ತಕ್ಷಣ ಅವರ ಹಲ್ಲುಜ್ಜಿ,ಮುಖ ತೊಳೆಯಿರಿ. ಇದ್ರಿಂದ ಮಗುವಿನ ನಿದ್ರೆ ಮಾಯವಾಗುತ್ತದೆ.   
Latest Videos
Follow Us:
Download App:
  • android
  • ios