Asianet Suvarna News Asianet Suvarna News

ಸಂಗಾತಿ ಜೊತೆ ಮಿಲನದ ವೇಳೆ ಎಷ್ಟು ನಿಮಿಷಕ್ಕೆ ಕಾಂಡೋಮ್‌ ಬದಲಾಯಿಸಿದ್ರೆ ಒಳ್ಳೇದು?

condom change timing ಸಂಗಾತಿಗಳು ಸೆಕ್ಸ್‌ ನಡೆಸುವ ವೇಳೆ ಎಷ್ಟು ನಿಮಿಷಕ್ಕೊಮ್ಮೆ ಕಾಂಡೋಮ್‌ಅನ್ನು ಬದಲಾಯಿಸಬೇಕು ಎಂಬುವುದರ ಕುರಿತು ದಿ ಸನ್‌ ಅಧ್ಯಯನ ನಡೆಸಿದೆ. ಸುಮಾರು 500 ಜೋಡಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಸೆಕ್ಸ್ ಮಾಡುವಾಗ ಪ್ರತಿ 30 ನಿಮಿಷಕ್ಕೆ ಕಾಂಡೋಮ್ ಬದಲಾಯಿಸಬೇಕು ಎಂದು ತಿಳಿಸಿದೆ.

How many minutes is it good to change the condom during intercourse san
Author
First Published Aug 29, 2024, 10:29 PM IST | Last Updated Aug 29, 2024, 10:29 PM IST

ಇಂಗ್ಲೆಂಡ್‌ನ ಪ್ರಸಿದ್ಧ ಟಾಬ್ಯಾಯ್ಡ್‌ ಪತ್ರಿಕೆ ದಿ ಸನ್‌ ಇತ್ತೀಚೆಗೆ ದೊಡ್ಡ ಅಧ್ಯಯನವನ್ನು ನಡೆಸಿದೆ. ಇದರ ವಿಚಾರ ಏನೆಂದರೆ, ಸಂಗಾತಿಗಳು ಸೆಕ್ಸ್‌ ನಡೆಸುವ ವೇಳೆ ಎಷ್ಟು ನಿಮಿಷಕ್ಕೊಮ್ಮೆ ಕಾಂಡೋಮ್‌ಅನ್ನು ಬದಲಾಯಿಸಬೇಕು ಅನ್ನೋದು. ಅಂದಾಜು 500 ಜೋಡಿಗಳ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದೆ. ವಿಶ್ವದ ಅನೇಕ ಕಡೆಗಳಲ್ಲಿ ಕಾಂಡೋಮ್‌ ಅತ್ಯಂತ ಪ್ರಖ್ಯಾತ ಗರ್ಭನಿರೋಧಕ. ಸೆಕ್ಸ್‌ನ ಮೂಲಕ ಹರಡಬಲ್ಲ ರೋಗಗಳನ್ನು ತಡೆಗಟ್ಟಲು ಕೂಡ ಕಾಂಡೋಮ್‌ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ಮಿತಿಮೀರಿದ ಬಳಕೆ ಹಾಗೂ ಇವುಗಳನ್ನು ಸರಿಯಾಗಿ ಬಳಸದೇ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಅನೇಕ ಪುರುಷರು ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್‌ಅನ್ನು ಬಳಕೆ ಮಾಡುತ್ತಾರೆ. ಲೈಂಗಿಕ ರೋಗಗಳ ತಜ್ಞರು ಹೇಳುವ ಪ್ರಕಾರ, ದೀರ್ಘಕಾಲದವರೆಗೆ ದೈಹಿಕ ಸಂಪರ್ಕ ಸಾಧಿಸುವ ವೇಳೆ ಕಾಂಡೋಮ್‌ಅನ್ನು ಬದಲಾವಣೆ ಮಾಡುವುದು ಅತ್ಯಂತ ಅಗತ್ಯ ಎಂದಿದ್ದಾರೆ.

ಅಂದಾಜು 500 ಜೋಡಿಗಳು ಹಾಗೂ ಅವರು ಸೆಕ್ಸ್‌ಗಾಗಿ ತೆಗೆದುಕೊಂಡ ಸಮಯವನ್ನು ನೋಡಿ ಇದನ್ನು ಅಳೆಯಲಾಗಿದೆ. ಇದರ ಪ್ರಕಾರ, ಸೆಕ್ಸ್ ಮಾಡುವ ಸಮಯದಲ್ಲಿ ಪ್ರತಿ 30 ನಿಮಿಷಕ್ಕೆ ಕಾಂಡೋಮ್‌ಅನ್ನು ಬದಲಾಯಿಸಬೇಕು ಎಂದು ಹೇಳಲಾಗಿದೆ. ಇಲ್ಲದೇ ಇದ್ದಲ್ಲಿ ಸೆಕ್ಸ್‌ನಿಂದ ಹರಡಬಹುದಾದ ಕಾಯಿಲೆಯ ಅಪಾಯವೂ ಹೆಚ್ಚಿರುತ್ತದೆ. ಇನ್ನೂ ಕೆಲವರಿಗೆ ಸೆಕ್ಸ್‌ನ ವೇಳೆ ಡಬಲ್‌ ಬ್ಯಾಂಗಿಂಗ್‌ ಅಂದರೆ ಎರಡು ಕಾಂಡೋಮ್‌ಗಳನ್ನು ಧರಿಸುವ ಕೆಲಸ ಮಾಡುತ್ತಾರೆ. ಇದು ದೊಡ್ಡ ಅಪಾಯದ ಕೆಲಸ ಹೀಗೆ ಮಾಡಿದಲ್ಲಿ ಎರಡೂ ಕಾಂಡಮ್‌ಗಳು ಶೀಘ್ರವಾಗಿ ಹರಿದುಹೋಗುತ್ತದೆ ಎಂದು ಬ್ರಿಟನ್‌ನ ವೈದ್ಯಕೀಯ ಸಂಶೋಧನೆ ತಿಳಿಸಿದೆ.

ಸಾಮಾನ್ಯವಾಗಿ ಸರಾಸರಿ ಸೆಕ್ಸ್‌ ಸಮಯ 5 ನಿಮಿಷ ಎಂದು ವರದಿ ತಿಳಿಸಿದೆ. ಕೆಲ ಜೋಡಿಗಳು ಸೆಕ್ಸ್‌ ಹೊಂದಲು 0.55 ಸೆಕೆಂಡ್‌ ತೆಗೆದಯಕೊಂಡರೆ, ಇನ್ನೂ ಕೆಲವರು 44.1 ನಿಮಿಷಗಳವರೆಗೆ ಸಮಯ ತೆಗೆದುಕೊಂಡರು ಎಂದು ಈ ಅಧ್ಯಯನ ತಿಳಿಸಿದೆ. ಇನ್ನು ತೆಳುವಾದ ಕಾಂಡೋಮ್‌ಗಳನ್ನು ಧರಿಸುವುದು ಕೂಡ ಅಪಾಯಕಾರಿ ಸೆಕ್ಸ್‌ನ ಘರ್ಷಣೆಯಿಂದಾಗಿ ಇವುಗಳು ಹರಿದುಹೋಗುವ ಅಪಾಯ ಜಾಸ್ತಿ ಎಂದಿದ್ದಾರೆ.

ಪುರುಷರು ಕಾಂಡೋಮ್ ಅನ್ನು ಸರಿಯಾಗಿ ಬಳಸಿದರೆ, ಮಹಿಳೆಯರಲ್ಲಿ ಗರ್ಭಧಾರಣೆಯ ಸಾಧ್ಯತೆಯುಶೇ. 98ರಷ್ಟು ಕಡಿಮೆಯಾಗುತ್ತದೆ. ಆದರೆ ಕಾಂಡೋಮ್ ಗಳನ್ನು ಸರಿಯಾಗಿ ಬಳಸದಿದ್ದರೆ ಮಹಿಳೆಯರು ಗರ್ಭ ಧರಿಸುವ ಅಪಾಯ ಹೆಚ್ಚು ಎಂದು ಲಾಯ್ಡ್ಸ್ ಫಾರ್ಮಸಿ ಜಿಪಿ ಡಾ. ನೀಲ್ ಪಟೇಲ್ ಹೇಳಿದ್ದಾರೆ.  'ಸೆಕ್ಸ್‌ ಸಮಯದಲ್ಲಿ ನಮ್ಮ ಜನ ತುಂಬಾ ತಪ್ಪು ಮಾಡ್ತಾರೆ.  ಸಂಭೋಗ ಪ್ರಾರಂಭವಾದ ನಂತರ ಕಾಂಡೋಮ್‌ ಹಾಕಿಕೊಳ್ಳೋಕೆ ಯೋಚನೆ ಮಾಡ್ತಾರೆ. ಆದರೆ, ಇದು ಸೆಕ್ಸ್‌ ಟೈಮ್‌ನಲ್ಲಿ ಜಾರಿ ಹೋಗುವುದು ಅಥವಾ ಹರಿದು ಹೋಗುತ್ತದೆ. ಇಂಥ ಚಿಂತೆಗಳಿಂದ ಮುಕ್ತವಾಗಿ ಸೆಕ್ಸ್‌ಅನ್ನು ಆನಂದಿಸಬೇಕೆಂದಿದ್ದರೆ, ಸೆಕ್ಸ್‌ಗೂ ಮುನ್ನವೇ ಕಾಂಡೋಮ್‌ಅನ್ನು ಬಳಸಬೇಕು. ಇನ್ನು ಸೆಕ್ಸ್‌ ಪ್ರಾರಂಭ ಮಾಡಿ 30 ನಿಮಿಷ ಆಯ್ತು ಎಂದರೆ, ಕಾಂಡೋಮ್‌ಅನ್ನು ಬದಲಾವಣೆ ಮಾಡಿ. ಸೆಕ್ಸ್‌ನ ಟೈಮ್‌ನಲ್ಲಿ ಕಾಂಡೋಮ್‌ನ ಶಕ್ತಿ ಕೂಡ ಕ್ಷೀಣಿಸುತ್ತದೆ. ಆಗ ಹರಿದುಹೋಗುವ ಅಪಾಯ ಜಾಸ್ತಿ. ಇನ್ನು ಡಬಲ್‌ ಬ್ಯಾಗಿಂಗ್‌ ಪ್ರಯತ್ನ ಮಾಡಲೇಬೇಡಿ. ಅಂದರೆ, ಒಂದೇ ಟೈಮ್‌ನಲ್ಲಿ ಎರಡು ಕಾಂಡೋಮ್‌ ಧರಿಸುವುದು. ಇದು ನಿಮಗೆ ಹೆಚ್ಚಿನ ರಕ್ಷಣೆ ನೀಡುತ್ತದೆ ಎಂದು ಅನಿಸಬಹುದು. ಆದರೆ, ಇವು ಪರಸ್ಪರ ಉಜ್ಜುವ ಕಾರಣ ಹರಿದುಹೋಗುವ ಅಪಾಯ ಜಾಸ್ತಿ ಇರುತ್ತದೆ ಎಂದು ಡಬಲ್ ಬ್ಯಾಗಿಂಗ್ ಬಗ್ಗೆ ಡಾ. ನೀಲ್ ಪಟೇಲ್ ಹೇಳಿದ್ದಾರೆ.

ನ್ಯಾಯಬದ್ಧ ಸುರಕ್ಷಿತ ಆಟಕ್ಕೆ, ಒಪ್ಪಿಗೆಯ ಗೇಮ್; ಒಲಿಂಪಿಕ್ಸ್‌ನ ಕಾಂಡೋಮ್ ಸ್ಲೋಗನ್‌ಗೆ ನೆಟ್ಟಿಗರು ಸುಸ್ತು!

ಸುರಕ್ಷಿತವಾಗಿ ಬಳಸಿ: ಕಾಂಡೋಮ್‌ ಹಾಕುವ ಮುನ್ನ ಶಿಶ್ನ ಸಂಪೂರ್ಣ ಸಂಕ್ರಿಯವಾಗಿರಬೇಕು. ಯಾವುದೇ ಕಾರಣಕ್ಕೂ ಚೂಪಾದ ವಸ್ತುಗಳಿಂದ ಇವರನ್ನು ಕತ್ತಿರಿಸಬಾರದು. ಕೈಯಿಂದಲೇ ನಿಧಾನವಾಗಿ ಹರಿದು, ಕಾಂಡೋಮ್‌ನ ತುದಿಯನ್ನು ಹಿಡಿದುಕೊಳ್ಳಿ. ಇದರಿಂದ ವೀರ್ಯವನ್ನು ಸಂಗ್ರಹಿಸಲು ಸ್ವಲ್ಪ ಸ್ಥಳಾವಕಾಶವಿದೆ ಮತ್ತು ಅದು ಹರಿದುಹೋಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ನಂತರ ಕಾಂಡೋಮ್ ಅನ್ನು ಇನ್ನೊಂದು ಕೈಯಿಂದ ಶಿಶ್ನದ ತುದಿಯಲ್ಲಿ ಹಿಡಿದು ಕೆಳಕ್ಕೆ ಎಳೆಯಿರಿ. ಈ ಪ್ರಕ್ರಿಯೆಯನ್ನು ಸರಿಯಾಗಿ ಮಾಡಲಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಿ.

ಒಂದೇ ಬಾರಿಗೆ ಹೆಚ್ಚು ಕಾಂಡೋಮ್​ ಬಳಸಿದ್ರೆ ಏನಾಗತ್ತೆ? 'ಗಿಲ್ಲಿ' ನಟಿ ರಾಕುಲ್​ ಉತ್ತರ ಕೇಳಿ...

Latest Videos
Follow Us:
Download App:
  • android
  • ios