Asianet Suvarna News Asianet Suvarna News

ನ್ಯಾಯಬದ್ಧ ಸುರಕ್ಷಿತ ಆಟಕ್ಕೆ, ಒಪ್ಪಿಗೆಯ ಗೇಮ್; ಒಲಿಂಪಿಕ್ಸ್‌ನ ಕಾಂಡೋಮ್ ಸ್ಲೋಗನ್‌ಗೆ ನೆಟ್ಟಿಗರು ಸುಸ್ತು!

ನ್ಯಾಯಬದ್ಧ, ಸುರಕ್ಷಿತ ಆಟಕ್ಕಾಗಿ, ಇದನ್ನು ಧರಿಸಲು ಪದಕ ಗೆಲ್ಲಬೇಕಿಲ್ಲ,  ಆಟಕ್ಕೂ ಮುನ್ನ ಒಪ್ಪಿಗೆ ಇರಲಿ. ಇವೆಲ್ಲಾ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳಿಗೆ ನೀಡಿದ ಕಾಂಡೋಮ್ ಪ್ಯಾಕೆಟ್ ಮೇಲಿನ ಬರಹಗಳು. ಇದೀಗ ಈ ಕಾಂಡೋಮ್ ಬರಹಗಳು ಭಾರಿ ಚರ್ಚೆಯಾಗುತ್ತಿದೆ.

Fair play safe play pairs Olympics condoms slogan with powerful message goes viral ckm
Author
First Published Aug 8, 2024, 3:30 PM IST | Last Updated Aug 8, 2024, 3:30 PM IST

ಪ್ಯಾರಿಸ್(ಆ.08)  ಒಲಿಂಪಿಕ್ಸ್ ಗ್ರಾಮದಲ್ಲಿ ಕ್ರೀಡಾಪಟುಗಳಿಗೆ ನೀಡಿರುವ ಕಾಂಡೋಮ್ ಮೇಲಿನ ಬರಹ ಇದೀಗ ಭಾರಿ ಚರ್ಚೆಯಾಗುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 3 ಲಕ್ಷಕ್ಕೂ ಹೆಚ್ಚಿನ ಕಾಂಡೋಮ್‌ಗಳನ್ನು ಕ್ರೀಡಾಪಟುಗಳಿಗೆ ವಿತರಿಸಲಾಗಿದೆ. ಪ್ರತಿ ಕಾಂಡೋಮ್ ಪ್ಯಾಕೆಟ್ ಮೇಲೆ ತಮಾಷೆಯಾಗಿ, ಕ್ರೀಡೆಗೆ ಹೋಲಿಕೆ ಮಾಡಿ ಹಲವು ಸಂದೇಶಗಳನ್ನು ಬರೆಯಲಾಗಿದೆ. ಈ ಕಾಂಡೋಮ್ ಧರಿಸಲು ಒಲಿಂಪಿಕ್ ಗೋಲ್ಡ್ ಮೆಡಲ್ ಗೆಲ್ಲಬೇಕಿಲ್ಲ, ನ್ಯಾಯಬದ್ಧ ಆಟ,ಸುರಕ್ಷಿತ ಆಟ, ಆದರೆ ಒಪ್ಪಿಗೆ ಇರಲಿ. ಪ್ರೀತಿಯ ಮೈದಾನದಲ್ಲಿನ ನ್ಯಾಯಬದ್ಧ ಆಟಕ್ಕಾಗಿ. ಹೀಗೆ ಒಂದಕ್ಕಿಂತ ಮತ್ತೊಂದು ಮಿಗಿಲಾದ ಬರಹಗಳನ್ನು ಕಾಂಡೋಮ್ ಪ್ಯಾಕ್ ಮೇಲೆ ಮುದ್ರಿಸಲಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್ ಗ್ರಾಮದಲ್ಲಿ 3 ಲಕ್ಷಕ್ಕೂ ಅಧಿಕ ಕಾಂಡೋಮ್‌ಗಳನ್ನು ವಿತರಿಸಲಾಗಿದೆ. ಈ ಪೈಕಿ ಓಟಗಾರರು ಹೆಚ್ಚಿನ ಕಾಂಡೋಮ್ ಪಡೆದುಕೊಂಡಿದ್ದಾರೆ. ಸರಾಸರಿ ಒಬ್ಬೊಬ್ಬ ಓಟಗಾರರು 21ಕ್ಕೂ ಹೆಚ್ಚು ಕಾಂಡೋಮ್ ಪಡೆದಿದ್ದಾರೆ. ಈ ಕಾಂಡೋಮ್ ಮೇಲೆ ಈ ರೀತಿಯ ವಿಶೇಷ ಸ್ಲೋಗನ್ ಮುದ್ರಿಸಿ ನೀಡಲಾಗಿದೆ.

ಒಲಿಂಪಿಕ್ಸ್ ನಲ್ಲಿ ನೀಡಲಾಗಿದ್ದ ಕಾಂಡೋಮ್ ಅನ್‌ ಬಾಕ್ಸಿಂಗ್ ಮಾಡಿದ ಮಹಿಳಾ ಸ್ಪರ್ಧಿ, ವಿಡಿಯೋ ವೈರಲ್

ಕ್ರೀಡಾಪಟುಗಳಿಗೆ ಕಾಂಡೋಮ್ ಮೇಲೆ ಸಂದೇಶ ನೀಡುತ್ತಾ ಜಾಗೃತಿ ಮೂಡಿಸುವ ಕೆಲಸವನ್ನು ಹಾಸ್ಯವಾಗಿಯೇ ಸಮಿತಿ ಮಾಡಿದೆ. ಪ್ಯಾರಿಸ್ ಒಲಿಂಪಿಕ್ಸ್ ಸಮಿತಿ ಈ ಬಾರಿ ಕ್ರೀಡಾಕೂಟದಲ್ಲಿ ಮಿಲನಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಈ ಹಿಂದಿನ ಟೋಕಿಯೋ ಒಲಿಂಪಿಕ್ಸ್ ವೇಳೆ ಮಿನಲ ಕ್ರಿಯೆಗೆ ನಿರ್ಬಂಧ ಹೇರಲಾಗಿತ್ತು. ಪ್ರಮುಖವಾಗಿ ಈ ವೇಳೆ ಕೋವಿಡ್ ಕಾರಣದಿಂದ ಈ ನಿರ್ಭಂಧ ಹೇರಲಾಗಿತ್ತು. ಆದರೆ ಈ ಬಾರಿ ಯಾವುದೇ ಅಡ್ಡಿ ಆತಂಕಗಳಿಲ್ಲದ ಕಾರಣ ನಿರ್ಬಂಧ ಹೇರಿಲ್ಲ. 

ಹೀಗಾಗಿ ಸಮಿತಿ ಕ್ರೀಡಾಪಟುಗಳಿಗೆ ವಿತರಿಸಿರುವ ಕಾಂಡೋಮ್‌ಗಳಲ್ಲಿ ಉಯುಕ್ತ ಸ್ಲೋಗನ್ ಮುದ್ರಿಸಿ ನೀಡಿದೆ. ಕೆಲ ಪ್ಯಾಕೆಟ್ ಕಾಂಡೋಮ್‌‌ಗಳ ಮೇಲಿನ ಸ್ಲೋಗನ್ ಚಿತ್ರಿ ವಿಚಿತ್ರವಾಗಿದ್ದರೂ ಅರ್ಥಗರ್ಭಿತವಾಗಿದೆ. ಗೆಲುವಿಗಿಂತ ಹೆಚ್ಚು ಹಂಚಿಕೊಳ್ಳಬೇಡಿ, ಧರಿಸಲು ಮರೆಯಬೇಡಿ ಎಂಬೆಲ್ಲಾ ಸ್ಲೋಗನ್ ಇದೀಗ ವೈರಲ್ ಆಗಿದೆ. 

 

 

2020ರಲ್ಲಿ ಟೋಕಿಯೋ ಒಲಿಂಪಿಕ್ಸ್ ಆಯೋಜನೆಗೊಂಡಿತ್ತು. ಕೋವಿಡ್ ಮಹಾಮಾರಿ ಕಾರಣ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಈ ಪೈಕಿ ಮಿಲನ ಕ್ರಿಯೆಗೂ ನಿರ್ಬಂಧ ಹೇರಲಾಗಿತ್ತು. ಒಲಿಂಪಿಕ್ಸ್ ಆಯೋಜನೆ ವೇಳೆ ಕಾಂಡೋಮ್ ಹಂಚಿಕೆಯಲ್ಲೇ ದಾಖಲೆ ಬರೆದಿದೆ.  ಲಕ್ಷ ಲಕ್ಷ ಕಾಂಡೋಮ್‌ಗಳ ವಿತರಣೆ ಮೂಲಕ ಪ್ರತಿ ಬಾರಿ ಹೊಸ ಹೊಸ ದಾಖಲೆಗಳು ನಿರ್ಮಾಣವಾಗಿದೆ. ಇದಕ್ಕೆ ಪ್ಯಾರಿಸ್ ಒಲಿಂಪಿಕ್ಸ್ 2024 ಕೂಡ ಹೊರತಾಗಿಲ್ಲ 

ನಿಮಗಿದು ಗೊತ್ತೆ? ಸೆಕ್ಸ್ ವೇಳೆ ಕಾಂಡೋಮ್ ಹರಿದರೆ ಪುರುಷನ ಮೇಲೆ ಕೇಸೂ ಹಾಕಬಹುದು!
 

Latest Videos
Follow Us:
Download App:
  • android
  • ios