ಎಲ್ಲೀವರೆಗೆ ಶಾರೀರಿಕ ಸಂಬಂಧ ಬೆಳೆಸದರೆ ಓಕೆ? ಅಧ್ಯಯನ ಹೇಳುವುದೇನು?
ಆರೋಗ್ಯಕರ ದೈಹಿಕ ಸಂಬಂಧದ ಬಗ್ಗೆ ಪ್ರತಿಯೊಬ್ಬ ವ್ಯಕ್ತಿ ತಿಳಿಯುವ ಅಗತ್ಯವಿದೆ. ಶಾರೀರಿಕ ಸಂಬಂಧ ಆರೋಗ್ಯ ವೃದ್ಧಿ ಜೊತೆ ದಂಪತಿಯನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತದೆ. ಈಗ ಸಂಬಂಧದ ಸಮಯಕ್ಕೆ ಸಂಬಂಧಿಸಿದಂತೆ ಅಧ್ಯಯನವೊಂದು ನಡೆದಿದೆ.
ದಂಪತಿ (Couple) ಮಧ್ಯೆ ಪ್ರೀತಿ (love), ನಂಬಿಕೆಯನ್ನು ಇನ್ನಷ್ಟು ಬಲಪಡಿಸುವುದು ಶಾರೀರಿಕ ಸಂಬಂಧ. ಇದು ಜನರ ಆರೋಗ್ಯಕ್ಕೆ ಬಹಳ ಮುಖ್ಯ ಎಂದು ಈಗಾಗಲೇ ಅನೇಕ ಸಂಶೋಧನೆಗಳು, ಅಧ್ಯಯನಗಳು ದೃಢಪಡಿಸಿವೆ. ವಯಸ್ಸಿ (age)ಗೆ ತಕ್ಕಂತೆ ಶಾರೀರಿಕ ಸಂಬಂಧದಲ್ಲಿ ಬದಲಾವಣೆ ಸಹಜ. ಒಬ್ಬ ಮನುಷ್ಯ ಎಷ್ಟು ಸಮಯ ದೈಹಿಕ ಸಂಬಂಧ (physical relationship) ಬೆಳೆಸಿದ್ರೆ ಸೂಕ್ತ ಎನ್ನುವ ಬಗ್ಗೆ ಅಧ್ಯಯನವೊಂದು ನಡೆದಿದೆ. ಅದ್ರಲ್ಲಿ ದಂಪತಿಯ ತೃಪ್ತಿಕರ ಲೈಂಗಿಕ ಜೀವನಕ್ಕೆ ಎಷ್ಟು ಸಮಯದ ಸಂಬಂಧ ಪರ್ಫೆಕ್ಟ್ ಎಂಬುದನ್ನು ಹೇಳಲಾಗಿದೆ.
ಶಾರೀರಿಕ ಸಂಬಂಧ ಬೆಳೆಸಲು ಯಾವುದೇ ನಿರ್ದಿಷ್ಟ ಸಮಯವಿಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ಥಿತಿ (mental state)ಯನ್ನು ಅವಲಂಭಿಸಿರುತ್ತದೆ. ಹಾಗೆಯೇ ದಂಪತಿಯ ಇಚ್ಛೆಯನ್ನು ಇದು ಒಳಗೊಂಡಿರುತ್ತದೆ. ಆದ್ರೆ ತಜ್ಞರು (experts), ದಂಪತಿ ಎಷ್ಟು ಸಮಯ ಸಂಬಂಧದಲ್ಲಿ ತೊಡಗಿಕೊಂಡಿದ್ರೆ ಹೆಚ್ಚು ನೆಮ್ಮದಿ, ಸಂತೋಷ (happiness) ಪಡೆಯುತ್ತಾರೆ ಎಂಬುದನ್ನು ಪತ್ತೆ ಮಾಡಿದ್ದಾರೆ.
ಕುಮಾರ್ ಸಾನುಗೆ ಪತ್ನಿ ಕಾಟ ! ಖಿನ್ನತೆಗೊಳಗಾಗಿದ್ದ ಗಾಯಕನ ಜೊತೆ ನಟಿಯ ಸಿಕ್ರೇಟ್ ರಿಲೇಶನ್ಶಿಪ್
ಅಧ್ಯಯನ (study)ದಲ್ಲಿ ಏನು ಹೇಳಲಾಗಿದೆ? : ಸೊಸೈಟಿ ಫಾರ್ ಥೆರಪಿ ಮತ್ತು ರಿಸರ್ಚ್ (Society for Therapy and Research) ನಡೆಸಿದ ಅಧ್ಯಯನದ ಪ್ರಕಾರ, ಸಾಮಾನ್ಯವಾಗಿ ಶಾರೀರಿಕ ಸಂಬಂಧದ ಅವಧಿ 3 -7 ನಿಮಿಷವಾಗಿರುತ್ತದೆ. ಬಹುತೇಕ ದಂಪತಿ ಈ ಸಮಯಕ್ಕೆ ಒಗ್ಗಿಕೊಂಡಿದ್ದಾರೆ. ಆದ್ರೆ ಇದೊಂದು ಸಾಮಾನ್ಯ ಲೆಕ್ಕವೇ ಹೊರತು, ಇದೇ ಅಂತಿಮ ಅಲ್ಲ ಎನ್ನುವ ತಜ್ಞರು, ಸಂಬಂಧದ ಸಮಯವನ್ನು ಮೂರು ಭಾಗಗಳಾಗಿ ವಿಂಗಡಿಸಿ ಅದ್ರ ಲಾಭ, ನಷ್ಟವನ್ನು ವಿವರಿಸುವ ಪ್ರಯತ್ನ ನಡೆಸಿದ್ದಾರೆ.
ಶಾರೀರಿಕ ಸಂಬಂಧದ ಸಮಯ :
3 -7 ನಿಮಿಷ : ತಜ್ಞರ ಪ್ರಕಾರ, ಶಾರೀರಿಕ ಸಂಬಂಧ ಬೆಳೆಸಲು ಈ ಸಮಯ ಬಹಳ ಕಡಿಮೆ. ಸಂಗಾತಿಗಳು ಸಂಪೂರ್ಣ ತೃಪ್ತಿಗೆ ಇದು ಸಹಕಾರಿಯಲ್ಲ. ಅತಿ ಬೇಗ ತೃಪ್ತಿ ಹೊಂದುವ, ಕೇವಲ ದೈಹಿಕ ತೃಪ್ತಿ ಮಾತ್ರ ಬಯಸುವ ದಂಪತಿಗೆ ಮಾತ್ರ ಇದು ಯೋಗ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
7 ರಿಂದ 13 ನಿಮಿಷದ ಸಂಬಂಧ : ಅನೇಕ ಸಂಶೋಧನೆ ಹಾಗೂ ಅಧ್ಯಯನಗಳು ಏಳರಿಂದ ಹದಿಮೂರು ನಿಮಿಷವನ್ನು ಅತ್ಯಂತ ತೃಪ್ತಿಕರ ಎಂದಿವೆ. ಈ ಸಮಯದಲ್ಲಿ ದಂಪತಿ ಮಾನಸಿಕ ಹಾಗೂ ದೈಹಿಕ ಎರಡೂ ಸಂತೋಷ ಪಡೆಯಲು ಸಾಧ್ಯವಾಗುತ್ತದೆ. ಇಬ್ಬರು ಮತ್ತಷ್ಟು ಹತ್ತಿರವಾಗಲು, ಒಬ್ಬರನ್ನೊಬ್ಬರು ಅರಿಯಲು ಈ ಸಮಯ ಸೂಕ್ತವಾಗಿದೆ. ಇದು ರೋಮ್ಯಾಂಟಿಕ್ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಅಧ್ಯಯನ ವರದಿ ಮಾಡಿದೆ.
ಹೆಂಗಸರ ಬಗ್ಗೆ ತಪ್ಪು ತಿಳಿವಳಿಕೆ ಬೇಡ, 70ರಲ್ಲೂ ಅವಳಿಗೆ ಸೆಕ್ಸ್ ಆಸಕ್ತಿ ಜೀವಂತವಾಗಿರಬಹುದು!
10 -30 ನಿಮಿಷದ ಸಂಬಂಧ : ಮೊದಲೇ ಹೇಳಿದಂತೆ ದೈಹಿಕ ಸಂಬಂಧಕ್ಕೆ ಸಮಯದ ಮಿತಿ ಇಲ್ಲ. ಕೆಲವರು ದೀರ್ಘಕಾಲ ಸಂಬಂಧ ಬೆಳೆಸಲು ಇಚ್ಛಿಸುತ್ತಾರೆ. ಹತ್ತರಿಂದ ಮೂವತ್ತು ನಿಮಿಷಗಳ ಕಾಲ ಶಾರೀರಿಕ ಸಂಬಂಧ ಬೆಳೆಸುವುದು ಎಷ್ಟು ಸೂಕ್ತ ಎನ್ನುವ ಬಗ್ಗೆಯೂ ಅಧ್ಯಯನ ನಡೆದಿದೆ. ಸಂಶೋಧಕರ ಪ್ರಕಾರ, ಇದು ಮಾನಸಿಕ ಹಾಗೂ ದೈಹಿಕ ಸಂಬಂಧವನ್ನು ಬಲಗೊಳಿಸಲು ಸಹಕಾರಿ. ಆದ್ರೆ ಸುಸ್ತು ಹಾಗೂ ಅಸಹಜತೆ ಕಾಡುವ ಸಾಧ್ಯತೆ ಇದ್ರಲ್ಲಿದೆ. ಇಬ್ಬರಲ್ಲಿ ಒಬ್ಬರ ಶಕ್ತಿ ಕುಸಿಯಬಹುದು. ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಯಾಗಬಹುದು ಎನ್ನುವ ಸಂಶೋಧಕರು, ಒಂದ್ವೇಳೆ ಇಬ್ಬರೂ ಇದಕ್ಕೆ ಒಪ್ಪಿಗೆ ಸೂಚಿಸಿದಲ್ಲಿ, ಸಮರ್ಥವಾಗಿ ನಿಭಾಯಿಸಲು ಯೋಗ್ಯವಾಗಿದ್ದಲ್ಲಿ ಇದು ಕೂಡ ಒಳ್ಳೆಯ ಟೈಂ. ಇಲ್ಲಿ ರೋಮ್ಯಾನ್ಸ್, ಪ್ರೀತಿ ಹೆಚ್ಚಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.