ಪ್ರತಿ ದಿನವೂ ವೀರ್ಯ ಹೊರಹಾಕುವುದು ಆರೋಗ್ಯಕ್ಕೆ ಎಷ್ಟು ಒಳಿತು?

ಇದು ಛೀ ಎನ್ನುವ ವಿಷ್ಯವಲ್ಲ. ಪ್ರತಿಯೊಬ್ಬರೂ ಲೈಂಗಿಕತೆ ಬಗ್ಗೆ ಮಾಹಿತಿ ಪಡೆಯಬೇಕು. ನಮಗೆ ಗೊತ್ತಿಲ್ಲದ ವಿಷ್ಯವನ್ನು ಓದಿ ತಿಳಿಯುವ ಅಗತ್ಯವಿದೆ. ವೀರ್ಯದ ಬಗ್ಗೆಯೂ ಜನರಲ್ಲಿ ಅನೇಕ ನಂಬಿಕೆಗಳಿವೆ. ಸರಿಯಾದ ಜ್ಞಾನ, ಉತ್ತಮ ಆರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.
 

How good releasing sperms everyday for health

ಹಸ್ತಮೈಥುನ (Masturbation) ಸೆಕ್ಸ್ (Sex )ನಂತೆ ಒಂದು ಲೈಂಗಿಕ ಚಟುವಟಿಕೆಯಾಗಿದೆ. ಇದು ಮಹಿಳೆಯರು ಮತ್ತು ಪುರುಷರಲ್ಲಿ ಸಾಮಾನ್ಯವಾಗಿದೆ. ಸಂಶೋಧನೆಯ ಪ್ರಕಾರ, 14 ರಿಂದ 17 ವರ್ಷ ವಯಸ್ಸಿನ ಶೇಕಡಾ 74ರಷ್ಟು ಹುಡುಗರು ಮತ್ತು ಶೇಕಡಾ 48ರಷ್ಟು ಹುಡುಗಿಯರು ಹಸ್ತಮೈಥುನ ಮಾಡುತ್ತಾರೆ. 57 ರಿಂದ 64 ವರ್ಷ ವಯಸ್ಸಿನ ಸುಮಾರು ಶೇಕಡಾ 63ರಷ್ಟು ಪುರುಷರು ಮತ್ತು ಶೇಕಡಾ 32ರಷ್ಟು ಮಹಿಳೆಯರು ಹಸ್ತಮೈಥುನ ಮಾಡ್ತಾರೆ. ಈ ನಡುವೆ ಅನೇಕರ ಮನಸ್ಸಿಗೆ ಬರುವ ಒಂದು ವಿಷಯವೆಂದರೆ ಪ್ರತಿನಿತ್ಯ ವೀರ್ಯ(Sperm)ವನ್ನು ಹೊರಗೆ ಹಾಕುವುದು ಸರಿಯೋ ತಪ್ಪೋ ಎಂಬುದು. ಅನೇಕರು ವೀರ್ಯ ವ್ಯರ್ಥ ಮಾಡುವುದ್ರಿಂದ ದೇಹಕ್ಕೆ ಹಾನಿಯಾಗುತ್ತದೆ ಎಂದು ಭಾವಿಸುತ್ತಾರೆ. ಆದ್ರೆ  ಪ್ರತಿದಿನ ಲೈಂಗಿಕ ಕ್ರಿಯೆಯಿಂದ ಪ್ರಯೋಜನಗಳಿವೆ. ಪ್ರತಿದಿನ ವೀರ್ಯವನ್ನು ದೇಹದಿಂದ ಹೊರಹಾಕುವುದ್ರಿಂದ ಪ್ರಯೋಜನಗಳಿವೆ. ಇಂದು ಇದ್ರ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿ ದಿನ ವೀರ್ಯ ಹೊರಹಾಕುವ ಬಗ್ಗೆ ಇರುವ ವದಂತಿ : ಪ್ರತಿ ದಿನ ವೀರ್ಯ ಬಿಡುಗಡೆ ಮಾಡುವುದ್ರಿಂದ ಅನೇಕ ಸಮಸ್ಯೆಗಳಾಗುತ್ತವೆ ಎಂದು ನಂಬಲಾಗಿದೆ. ಕಣ್ಣುಗಳು ದುರ್ಬಲವಾಗುತ್ತವೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಖಾಸಗಿ ಅಂಗ ಸಂಕೋಚನ ಇತ್ಯಾದಿ ಸಮಸ್ಯೆ ಕಾಡುತ್ತದೆ ಎಂದು ನಂಬಲಾಗಿದೆ. ವೀರ್ಯದ ಪ್ರಮಾಣ ಇದ್ರಿಂದ ಕಡಿಮೆಯಾಗುತ್ತದೆ ಎಂದು ಜನರು ಭಾವಿಸುತ್ತಾರೆ.  

ಪ್ರತಿ ದಿನ ವೀರ್ಯ ಹೊರ ಹಾಕುವುದ್ರಿಂದ ಪ್ರಯೋಜನ : ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಪ್ರತಿದಿನ ವೀರ್ಯವನ್ನು ಬಿಡುಗಡೆ ಮಾಡುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ. ಪ್ರತಿ ದಿನ ವೀರ್ಯ ಹೊರ ಹಾಕುವುದ್ರಿಂದ ಡೋಪಮೈನ್ ಬಿಡುಗಡೆಯಾಗಿ ಸಂತೋಷ ಹೆಚ್ಚಾಗುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.ದೇಹದ ಎಂಟು ಭಾಗಗಳು ಸಕ್ರಿಯವಾಗುತ್ತವೆ. ಪುರುಷರು ಪ್ರತಿ ದಿನ ವೀರ್ಯ ಹೊರ ಹಾಕುವುದ್ರಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ.

Sex Life : ಮಹಿಳೆಗೆ ಬೆಡ್‌ರೂಂನಲ್ಲಿ ಏನಿಷ್ಟವಾಗೋಲ್ಲ ತಿಳ್ಕೊಳಿ..

ಪುರುಷನು ಪ್ರತಿದಿನ ವೀರ್ಯವನ್ನು ಬಿಡುಗಡೆ ಮಾಡಿದರೆ ಏನಾಗುತ್ತದೆ? : ಒಬ್ಬ ವ್ಯಕ್ತಿಯು ಪ್ರತಿದಿನ ವೀರ್ಯವನ್ನು ಬಿಡುಗಡೆ ಮಾಡಿದರೆ, ಅದು ಅವನ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಪ್ರತಿದಿನ ವೀರ್ಯವನ್ನು ಹೊರಹಾಕುವುದು ಅಥವಾ ಬಿಡುಗಡೆ ಮಾಡುವುದು ಅತ್ಯುತ್ತಮ ಒತ್ತಡ ನಿವಾರಣೆಯಾಗಿದೆ. ವೀರ್ಯವನ್ನು ಬಿಡುಗಡೆ ಮಾಡಿದಾಗ, ಡೋಪಮೈನ್ ಮತ್ತು ಆಕ್ಸಿಟೋಸಿನ್ ನಂತಹ ಹಾರ್ಮೋನುಗಳು ದೇಹದಲ್ಲಿ ಬಿಡುಗಡೆಯಾಗುತ್ತವೆ. ಡೋಪಮೈನ್ ಸಂತೋಷವನ್ನು ಹೆಚ್ಚಿಸುತ್ತದೆ.  ಆಕ್ಸಿಟೋಸಿನ್ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.ಕೆಲವು ಸಂದರ್ಭಗಳಲ್ಲಿ, ವೀರ್ಯವನ್ನು ಬಿಡುಗಡೆ ಮಾಡುವುದು ಹೊಸ ವೀರ್ಯವನ್ನು ಸರಿಹೊಂದಿಸಲು ಹಳೆಯ ವೀರ್ಯವನ್ನು ತೊಡೆದುಹಾಕಲು ದೇಹದ ಮಾರ್ಗವಾಗಿದೆ. 

Valentines Day: ಗಿಫ್ಟ್ ಕೊಟ್ರೆ ಪ್ರೀತಿ ಹೆಚ್ಚಾಗುತ್ತಾ ?

ಪ್ರತಿದಿನ ವೀರ್ಯ ಬಿಡುಗಡೆ ಮಾಡುವುದು ಹಾನಿಕಾರಕವೇ?
ಇಲ್ಲ, ಪ್ರತಿದಿನ ವೀರ್ಯವನ್ನು ಬಿಡುಗಡೆ ಮಾಡುವುದು ಹಾನಿಕಾರಕವಲ್ಲ. ಏಕೆಂದರೆ ನಿಮ್ಮ ದೇಹವು ಪ್ರತಿದಿನ ಲಕ್ಷಾಂತರ ವೀರ್ಯವನ್ನು ಉತ್ಪಾದಿಸುತ್ತದೆ. ಸರಾಸರಿ ವೀರ್ಯಾಣು ಸಂಪೂರ್ಣವಾಗಿ ಪ್ರಬುದ್ಧವಾಗಲು 74 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಧ್ಯಯನಗಳು ಹೇಳುತ್ತದೆ.   

ವೀರ್ಯಾಣು ತಿನ್ನುವುದು ಆರೋಗ್ಯಕರವೇ? : ಹೌದು, ವೀರ್ಯವನ್ನು ತಿನ್ನುವುದು ಆರೋಗ್ಯಕರ ಮತ್ತು ಸುರಕ್ಷಿತವಾಗಿದೆ. ದ್ರವ ಪಾನೀಯಗಳನ್ನು ತೆಗೆದುಕೊಳ್ಳುವಂತೆಯೇ ವೀರ್ಯವನ್ನು ನುಂಗಬಹುದು. ಅಲರ್ಜಿ ಸಮಸ್ಯೆಯಿರುವವರು ಇದರ ಸೇವನೆ ಒಳ್ಳೆಯದಲ್ಲ.

ವೀರ್ಯ ಬಿಡುಗಡೆ ಮಾಡಲು ಸಾಮಾನ್ಯ ಸಮಯ ಯಾವುದು? :
ಹಸ್ತಮೈಥುನ ಮಾಡುವಾಗ ವೀರ್ಯವನ್ನು ಬಿಡುಗಡೆ ಮಾಡಲು ಯಾವುದೇ ನಿಗದಿತ ಸಮಯವಿಲ್ಲ. ನೀವು 5 ನಿಮಿಷಗಳಲ್ಲಿ ವೀರ್ಯವನ್ನು ಬಿಡುಗಡೆ ಮಾಡಬಹುದು ಅಥವಾ 30-60 ನಿಮಿಷಗಳ ಕಾಲ ನಿಧಾನವಾಗಿ ಹಸ್ತಮೈಥುನ ಮಾಡಬಹುದು. ಇದು ಸಂಪೂರ್ಣವಾಗಿ ನಿಮ್ಮ ಮೇಲೆ ಅವಲಂಬಿತವಾಗಿದೆ.  ವೀರ್ಯವನ್ನು ಬಿಡುಗಡೆ ಮಾಡುವ ಸಾಮಾನ್ಯ ಸಮಯ ಯಾವುದು ಎಂಬುದಕ್ಕೆ ಯಾವುದೇ ನಿರ್ಣಾಯಕ ಉತ್ತರವಿಲ್ಲ.

Latest Videos
Follow Us:
Download App:
  • android
  • ios