ಉದ್ಯೋಗಸ್ಥ ಮಹಿಳೆಗೆ ಪ್ರತಿದಿನವೂ ಹೊಸ ಸವಾಲೇ.ಈಗಂತೂ ಕೊರೋನಾ ಕಾರಣಕ್ಕೆ ಮನೆಯಿಂದಲೇ ಕೆಲ್ಸ ಮಾಡ್ಬೇಕಾದ ಅನಿವಾರ್ಯತೆ ಬೇರೆ. ಮನೆ,ಮಕ್ಕಳು,ಆಫೀಸ್ ಕೆಲ್ಸ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗೋದು ನಿಜಕ್ಕೂ ದೊಡ್ಡ ಸರ್ಕಸ್. ಅದ್ರಲ್ಲೂ ಅವಿಭಕ್ತ ಕುಟುಂಬವಾಗಿದ್ದು,ಬೆಂಬಲಕ್ಕೆ ಯಾರೂ ಇಲ್ಲವೆಂದ್ರೆ ಕೇಳೋದೇ ಬೇಡ. ದಿನದ 24 ಗಂಟೆ ಕೆಲ್ಸ ಮಾಡಿದ್ರೂ ಎಲ್ಲ ಜವಾಬ್ದಾರಿಗಳನ್ನುಸಮರ್ಥವಾಗಿ ನಿಭಾಯಿಸೋದು ಕಷ್ಟವೇ ಸರಿ. ಇಂಥ ಸಮಯದಲ್ಲಿ ಮಹಿಳೆಗೆ ಪತಿ ಹೆಗಲು ನೀಡಿದ್ರೆ ಆಕೆ ಮೇಲಿನ ಅರ್ಧ ಭಾರ ತಗ್ಗುತ್ತೆ. ಜೊತೆಗೆ ಪತಿ ಮೇಲಿನ ಪತ್ನಿ ಪ್ರೀತಿ ಹಾಗೂ ಗೌರವ ಕೂಡ ಹೆಚ್ಚಿ ದಾಂಪತ್ಯದಲ್ಲಿ ನೆಮ್ಮದಿ ನೆಲೆಸುತ್ತೆ. ಹಾಗಾದ್ರೆ ಉದ್ಯೋಗಸ್ಥ ಪತ್ನಿ ಒತ್ತಡ ತಗ್ಗಿಸಲು ಪತಿ ಏನ್ ಮಾಡ್ಬೇಕು?

ಮಕ್ಕಳಿಗೆ ಅಡುಗೆ ಕಲಿಸಬೇಕು ನಿಜ, ಆದರೆ, ಜೋಪಾನ

ಕೂತಲ್ಲೇ ಆರ್ಡರ್ ಮಾಡೋದನ್ನು ಬಿಡಿ
ಮಹಿಳೆ ಉದ್ಯೋಗಸ್ಥೆಯಾಗಿದ್ರೂ ಮನೆಯಲ್ಲಿ ಆಕೆಯ ಸ್ಥಾನಮಾನಗಳಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಆಫೀಸ್ನಿಂದ ದಣಿದು ಮನೆಗೆ ಬಂದ ಆಕೆಗೆ ಯಾರೂ ಕಾಫಿ ಮಾಡಿ ಕೊಟ್ಟು ಉಪಚರಿಸೋದಿಲ್ಲ. ಬದಲಿಗೆ ಆಕೆ ತನ್ನ ಜೊತೆ ಪತಿಗೂ ಕಾಫಿ ಮಾಡಿ ಆತ ಕೂತಲ್ಲಿಗೆ ಸರ್ವ್ ಮಾಡ್ಬೇಕಾದ ಪರಿಸ್ಥಿತಿ ಇಂದಿಗೂ ಆಧುನಿಕ ಕುಟುಂಬಗಳಲ್ಲಿದೆ. ಕೆಲವು ಗಂಡಂದಿರಂತೂ ನೀರು ಬೇಕಾದ್ರೂ ಅಡುಗೆಮನೆಗೆ ಹೋಗಿ ಕುಡಿಯಲ್ಲ,ಕೂತಲ್ಲಿಗೆ ತಂದು ಕೊಡುವಂತೆ ಪತ್ನಿಗೆ ಆರ್ಡರ್ ಮಾಡುತ್ತಾರೆ. ಹೀಗೆ ನೀರು, ಟೀ, ಕಾಫಿ, ಊಟ ಎಲ್ಲದಕ್ಕೂ ಕೂತಲ್ಲಿಂದಲೇ ಆರ್ಡರ್ ಮಾಡೋದನ್ನು ಪತಿ ಬಿಟ್ರೆ ಉದ್ಯೋಗಸ್ಥ ಪತ್ನಿ ಮೇಲಿನ ಅರ್ಧ ಹೊರೆ ತಗ್ಗುತ್ತೆ. 

ಮನೆಗೆಲ್ಸದಲ್ಲಿ ನೆರವು
ಮನೆಗೆಲಸ, ಅಡುಗೆ ಎಲ್ಲವೂ ಪತ್ನಿಯ ಜವಾಬ್ದಾರಿ ಎಂದು ಬೆಳಗ್ಗೆ ತಡವಾಗಿ ಎದ್ದು, ಪತ್ನಿ ಮಾಡಿಟ್ಟಿದ್ದನ್ನು ಆರಾಮವಾಗಿ ತಿಂದು ರೂಮ್ ಸೇರಿ ಸಮಯಕ್ಕೆ ಸರಿಯಾಗಿ ಲಾಗಿನ್ ಆಗಿ ಆಫೀಸ್ ಕೆಲ್ಸ ಮಾಡೋ ಗಂಡಂದಿರ ಸಂಖ್ಯೆ ದೊಡ್ಡದೇ ಇರುತ್ತೆ. ಇಂಥ ಪುರುಷರಿಗೆ ತಮ್ಮ ಆಫೀಸ್ ಕೆಲ್ಸವೂ ಸಮರ್ಪಕವಾಗಿ ನಡೆಯಬೇಕು ಜೊತೆಗೆ ಊಟ, ತಿಂಡಿ ಎಲ್ಲವೂ ಸಮಯಕ್ಕೆ ಸರಿಯಾಗಿ ಸಿದ್ಧವಿರಬೇಕು. ಇಂಥ ಮನೋಭಾವ ಬಿಟ್ಟು ಮನೆ ಕ್ಲೀನಿಂಗ್, ಅಡುಗೆ ಕೆಲ್ಸಗಳಲ್ಲಿ ಪತ್ನಿಗೆ ಅಲ್ಪಸ್ವಲ್ಪ ಸಹಾಯ ಮಾಡಿದ್ರೂ ಸಾಕು, ಆಕೆ ಉಳಿದ ಕೆಲ್ಸಗಳನ್ನು ಸಲೀಸಾಗಿ ನಿಭಾಯಿಸುತ್ತಾಳೆ. 

ಗಿಫ್ಟ್ ಆಸೆಯಿಂದ 35 ಜನ ಗರ್ಲ್‌ಫ್ರೆಂಡ್ಸ್ ಜೊತೆ ಡೇಟಿಂಗ್..!

ತನ್ನ ಕೆಲ್ಸ ತಾನೇ ಮಾಡಿಕೊಳ್ಳೋದು
ಕೆಲವು ಪುರುಷರಿಗೆ ತಾವು ಹಾಕೋ ಶರ್ಟ್ನಿಂದ ಹಿಡಿದು ಸ್ನಾನಕ್ಕೆ ಹೋಗೋ ಮುನ್ನ ಗೀಸರ್ ಕೂಡ ಪತ್ನಿಯೇ ಆನ್ ಮಾಡಿಡಬೇಕು. ಹೀಗೆ ಪ್ರತಿ ಕೆಲ್ಸಕ್ಕೂ ಪತ್ನಿಯನ್ನು ಅವಲಂಬಿಸೋದ್ರಿಂದ ಆಕೆ ಮೇಲಿನ ಒತ್ತಡ ಹೆಚ್ಚುತ್ತೆ. ಪತಿ ತನ್ನ ಕೆಲ್ಸಗಳನ್ನು ತಾನೇ ಮಾಡಿಕೊಡ್ರೆ ಪತ್ನಿ ಮೇಲಿನ ಒತ್ತಡ ತಗ್ಗುತ್ತೆ. ಆಫೀಸ್ ಕೆಲ್ಸಗಳ ನಡುವೆ ಟೀ ಕುಡಿಯೋ ಬಯಕೆಯಾದ್ರೆ ಪತ್ನಿಗೆ ಹೇಳೋ ಬದಲು ನೀವೇ ಹೋಗಿ ಟೀ ಮಾಡಿ ನೀವು ಕುಡಿಯೋ ಜೊತೆ ಆಕೆಗೂ ಒಂದು ಕಪ್ ನೀಡಿದ್ರೆ ಅವಳ ಕಣ್ಣುಗಳಲ್ಲಿ ನಿಮ್ಮ ಬಗ್ಗೆ ಪ್ರೀತಿ ಮೂಡದೇ ಇರದು.

ಮಕ್ಕಳ ಪಾಲನೆಯಲ್ಲಿ ಸಮಪಾಲು 
ಮಕ್ಕಳ ಸ್ನಾನ, ಊಟ, ತಿಂಡಿ, ಸ್ಕೂಲ್ ಕೆಲ್ಸಗಳನ್ನೆಲ್ಲ ಪತ್ನಿ ಮೇಲೆ ಹಾಕೋ ಬದಲು ಅದ್ರಲ್ಲೂ ಸಮಪಾಲು ತೆಗೆದುಕೊಳ್ಳೋದು ಒಳ್ಳೆಯದು. ಪತ್ನಿಗೆ ಆಫೀಸ್ ಕೆಲ್ಸ ಹೆಚ್ಚಿರೋ ಸಮಯದಲ್ಲಿ ಎಲ್ಲದಕ್ಕೂ ಆಕೆಯೇ ಬರಲಿ ಎಂದು ಕಾಯೋ ಬದಲು ಮಕ್ಕಳ ಊಟ-ತಿಂಡಿ ಕಡೆ ನೀವು ಗಮನ ಹರಿಸೋದು ಉತ್ತಮ. 

ಮನಸ್ಸನ್ನು ಬೆಸೆಯುವ ಮಿಲನಕ್ರಿಯೆ ನಿಲ್ಸಿದ್ರೆ ಏನು ಪ್ರಾಬ್ಲಂ?

ಕೆಲಸದೊತ್ತಡ ಅರ್ಥೈಸಿಕೊಳ್ಳೋದು
ಆಫೀಸ್ ಕೆಲಸದೊತ್ತಡ ಹೇಗಿರುತ್ತೆ ಎಂಬುದು ಪತಿಗೂ ತಿಳಿದಿರುತ್ತೆ. ಹೀಗಾಗಿ ಪತ್ನಿಗೆ ಆಫೀಸ್ ಕೆಲ್ಸ ಜಾಸ್ತಿಯಿರೋ ದಿನ ಆದಷ್ಟು ಆಕೆಯ ಮನೆಗೆಲಸದೊತ್ತಡವನ್ನು ತಗ್ಗಿಸಲು ಪ್ರಯತ್ನಿಸಿ. ಇಲ್ಲವಾದ್ರೆ ಆಕೆಗೆ ಶಾರೀರಿಕ ಆಯಾಸದ ಜೊತೆ ಮಾನಸಿಕ ಒತ್ತಡವೂ ಹೆಚ್ಚುತ್ತೆ. 

ಪ್ರತಿದಿನ ಸಂವಹನ ನಡೆಸಿ
ವರ್ಕ್ ಫ್ರಂ ಹೋಮ್ ಪ್ರಾರಂಭವಾದ ದಿನದಿಂದ ಪತಿ, ಪತ್ನಿ ಇಬ್ಬರೂ ಬೆಳಗ್ಗೆಯಿಂದ ರಾತ್ರಿ ತನಕ ಬಿಜಿ. ಕೆಲವರಂತೂ ತಡರಾತ್ರಿ ತನಕ ಕೆಲ್ಸ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಕುಳಿತು ಮಾತನಾಡಲು ಸಾಧ್ಯವಾಗದಿರಬಹುದು. ಆದ್ರೆ ಆದೆಷ್ಟೇ ಕೆಲ್ಸವಿದ್ರೂ ದಿನದಲ್ಲಿ ಕನಿಷ್ಠ 15 ನಿಮಿಷವಾದ್ರೂ ಪತ್ನಿ ಜೊತೆ ಕುಳಿತು ಮಾತನಾಡಿ. ಇದ್ರಿಂದ ಆಕೆ ಆಫೀಸ್ ಅಥವಾ ಮನೆಗೆಲಸಕ್ಕೆ ಸಂಬಂಧಿಸಿ ತನಗಾಗುತ್ತಿರೋ ಸಮಸ್ಯೆಗಳನ್ನು ನಿಮ್ಮ ಬಳಿ ಹೇಳಿಕೊಳ್ಳಲು ಸಾಧ್ಯವಾಗುತ್ತೆ. ಇದ್ರಿಂದ ಪರಿಸ್ಥಿತಿ ನಿಮ್ಮ ಅರಿವಿಗೂ ಬರೋ ಜೊತೆ ಅಗತ್ಯ ನೆರವು ನೀಡಲು ಸಾಧ್ಯವಾಗುತ್ತೆ.