ಮಕ್ಕಳಿಗೆ ಅಡುಗೆ ಕಲಿಸಬೇಕು ನಿಜ, ಆದರೆ, ಜೋಪಾನ

ಇಂಗು,ತೆಂಗು ಕೊಟ್ರೆ ಮಂಗನೂ ಅಡುಗೆ ಮಾಡುತ್ತೆ ಎಂಬ ಕಾರಣಕ್ಕೆ ನಾನೂ ಅಡುಗೆ ಮಾಡುತ್ತೇನೆ ಅನ್ನೋ ಮಗುವನ್ನು ಅಡುಗೆ ಮನೆಯಲ್ಲಿ ಒಂಟಿಯಾಗಿ ಬಿಟ್ರೆ ಆಪತ್ತು ಗ್ಯಾರಂಟಿ. ಆದಕಾರಣ ಮಕ್ಕಳನ್ನು ಅಡುಗೆ ಮನೆಯೊಳಗೆ ಬಿಟ್ಟುಕೊಳ್ಳೋ ಮುನ್ನ ಕೆಲವು ಸುರಕ್ಷಿತ ಕ್ರಮಗಳನ್ನು ಅನುಸರಿಸೋದು ಒಳ್ಳೆಯದು. 

Precautions should be taken before leaving kid in the kitchen

'ಬಾಲ್ಯ ಅದೆಷ್ಟು ಚೆಂದ. ನಾನು ಇನ್ನೂ ಚಿಕ್ಕವನಾಗಿರ್ಬೇಕಿತ್ತುʼ ಎಂದು ಮಕ್ಕಳನ್ನು ನೋಡಿದಾಗಲೆಲ್ಲ ದೊಡ್ಡವರಿಗೆ ಅನಿಸಿದ್ರೆ,ಮಕ್ಕಳಿಗೆ ನಾವು ಬೇಗ ದೊಡ್ಡವರಾಗಿಬಿಡ್ಬೇಕು,ಆಗ ಸ್ಕೂಲ್ಗೆ ಹೋಗೋ ಟೆನ್ಷನ್ ಇರಲ್ಲ,ಆಫೀಸ್ಗೆ ಹೋಗ್ಬಹುದು,ಕೈತುಂಬಾ ಹಣ ಗಳಿಸಬಹುದು, ಬೇಕಾದ ತಿಂಡಿ-ಆಟಿಕೆ ಖರೀದಿಸಬಹುದುʼ ಎಂಬ ಕನಸು.ಇದೇ ಕಾರಣಕ್ಕೆ ಮಕ್ಕಳು ದೊಡ್ಡವರ ಕೆಲ್ಸಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ಆ ಕೆಲ್ಸ ಮಾಡಿದ್ರೆ ನಾನು ಅಮ್ಮನಂತೆ ದೊಡ್ಡವಳಾದೆ ಎಂಬ ಭಾವನೆ ಅವರದ್ದು. ಅದ್ರಲ್ಲೂಅಡುಗೆಮನೆಯಲ್ಲಿ ಅಮ್ಮ ಒಂದು ಕೈಯಲ್ಲಿ ಸೌಟು ಹಿಡಿದು ಇನ್ನೊಂದು ಕೈಯಲ್ಲಿ ಚಪಾತಿ ಲಟ್ಟಿಸುತ್ತ ಗಡಿಬಿಡಿಯಲ್ಲಿ ಕೆಲ್ಸ ಮಾಡುತ್ತಿದ್ರೆ ಅವರ ಕಣ್ಣಿಗೆ ಆಕೆ ಸೂಪರ್ ವುಮೆನ್. ಅವಳಂತೆ ತಾವು ಅಡುಗೆ ಮಾಡ್ಬೇಕು ಎಂಬ ಸಣ್ಣ ಆಸೆಯೂ  ಅವರ ಮನಸ್ಸಿನಲ್ಲಿ ಮೂಡುತ್ತೆ. ಇದೇ ಕಾರಣಕ್ಕೆ ಅಡುಗೆಮನೆ ಅವರ ನೆಚ್ಚಿನ ತಾಣ. ತಾವೂ ಸೌಟು ಹಿಡಿದು ಅಮ್ಮನಂತೆ ಅಡುಗೆ ಮಾಡಲು ಮುಂದಾಗುತ್ತಾರೆ. ಆದ್ರೆ ಮಕ್ಕಳನ್ನು ಅಡುಗೆಮನೆಯೊಳಗೆ ಬಿಟ್ಟುಕೊಳ್ಳೋ ಮುನ್ನ ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸೋದು ಅಗತ್ಯ.

ಮೊಸರಿನಲ್ಲಿ ಇಸಬ್‌ಗೋಲ್ ಬೆರೆಸಿ ತಿನ್ನೋದರಿಂದೇನು ಪ್ರಯೋಜನ?

ಒಂಟಿಯಾಗಿ ಬಿಡಬೇಡಿ
ಮಕ್ಕಳು ಆಸಕ್ತಿ ತೋರಿದ್ರೆಂಬ ಕಾರಣಕ್ಕೆ ಅವರನ್ನು ಅಡುಗೆಮನೆಯಲ್ಲಿ ಒಂಟಿಯಾಗಿ ಬಿಟ್ರೆ ಆಪತ್ತು ಗ್ಯಾರಂಟಿ. ಆದಕಾರಣ ಮಕ್ಕಳು ಅಡುಗೆಮನೆಯಲ್ಲಿರೋವಾಗ ದೊಡ್ಡವರೊಬ್ಬರು ಅವರನ್ನು ಗಮನಿಸುತ್ತಿರೋದು ಅಗತ್ಯ. ಇಲ್ಲವಾದ್ರೆ ಮಕ್ಕಳು ತಿಳಿಯದೇ ಒಂದಿಷ್ಟು ಅನಾಹುತ ಸೃಷ್ಟಿಸೋದು ಪಕ್ಕಾ. ದೊಡ್ಡವರ ಮೇಲ್ವಿಚಾರಣೆಯಲ್ಲಿ ಮಗು ತರಕಾರಿ ಕತ್ತರಿಸೋದು, ಚಾಟ್ಸ್, ಸಲಾಡ್, ಲೆಮನ್ ಜ್ಯೂಸ್ನಂತಹ ಸಿಂಪಲ್ ರೆಸಿಪಿಗಳನ್ನು ಟ್ರೈ ಮಾಡೋದು ಉತ್ತಮ. ಹೈಸ್ಕೂಲ್ ಹಂತಕ್ಕೆ ಬಂದ ಮಕ್ಕಳಿಗೆ ಸ್ಟೌವ್ ಬಳಕೆ ಬಗ್ಗೆ ತಿಳಿವಳಿಕೆ ನೀಡಿದ್ರೂ ಕೂಡ ಅವರು ಅಡುಗೆ ಮಾಡೋವಾಗ ಪಾಲಕರು ಗಮನಿಸೋ ಜೊತೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ರೆ ರೆಸಿಪಿ ರುಚಿಯಾಗಿರೋ ಜೊತೆ ಯಾವುದೇ ತೊಂದ್ರೆ ಆಗಲ್ಲ.

Precautions should be taken before leaving kid in the kitchen

ಹರಿತವಾದ ವಸ್ತುಗಳ ಬಳಕೆ ಬಗ್ಗೆ ತಿಳಿಸಿ
ಅಡುಗೆಮನೆಯಲ್ಲಿ ಚಾಕು ಸೇರಿದಂತೆ ಹರಿತವಾದ ವಸ್ತುಗಳಿದ್ರೆ, ಪುಟ್ಟ ಮಕ್ಕಳಿಂದ ಅವುಗಳನ್ನು ದೂರವಿಡೋದು ಉತ್ತಮ. ಚಿಕ್ಕವರು ಅಡುಗೆ ಮಾಡಲು ಆಸಕ್ತಿ ತೋರಿದ್ರೆ ಅವರಿಗೆ ಅಗತ್ಯವಾಗಿರೋ ತರಕಾರಿ, ಈರುಳ್ಳಿ ಮತ್ತಿತರ ಸಾಮಗ್ರಿಗಳನ್ನು ದೊಡ್ಡವರೇ ಕತ್ತರಿಸಿ ಕೊಡೋದು ಉತ್ತಮ. ಇಲ್ಲವಾದ್ರೆ ಮಕ್ಕಳು ಕೈಗಳಿಗೆ ಗಾಯ ಮಾಡಿಕೊಳ್ಳೋ ಸಾಧ್ಯತೆಯಿದೆ. ಚಾಕುವನ್ನು ಹೇಗೆ ಹಿಡಿಯಬೇಕು, ಕೈಗಳಿಗೆ ತಗುಲದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬ ವಿಷಯಗಳನ್ನು ಪೋಷಕರು ಮಕ್ಕಳಿಗೆ ತಿಳಿಸಿ ಕೊಡಬೇಕು.

ಸಿಹಿ ಕಲ್ಲಂಗಡಿಯಿಂದ ಸ್ಪೈಸಿ ಸೂಪ್..! 

ಬಿಸಿ ವಸ್ತುಗಳ ಬಗ್ಗೆ ಎಚ್ಚರಿಕೆ
ಕಾಯಿಸಿದ ನೀರು, ಹಾಲು, ಸಾಂಬಾರು ಸೇರಿದಂತೆ ಬಿಸಿ ವಸ್ತುಗಳನ್ನು ಮಕ್ಕಳು ಮುಟ್ಟಿ ಕೈ ಸುಟ್ಟುಕೊಳ್ಳೋ ಅಥವಾ ಮೈ ಮೇಲೆ ಬೀಳಿಸಿಕೊಳ್ಳೋ ಅಪಾಯವಿರುತ್ತೆ. ಹೀಗಾಗಿ ಮಕ್ಕಳು ಅಡುಗೆಮನೆಯಲ್ಲಿರೋವಾಗ ಬಿಸಿ ವಸ್ತುಗಳನ್ನು ಅವರ ಕೈಗೆ ಸಿಗದ ಸ್ಥಳದಲ್ಲಿಡಿ ಇಲ್ಲವೆ ಆ ಬಗ್ಗೆ ಎಚ್ಚರಿಕೆ ನೀಡಿ.

ಅಡುಗೆ ಅನಿಲದ ಬಗ್ಗೆ ಮಾಹಿತಿ
ಅಡುಗೆಮನೆಯಲ್ಲಿರೋ ಅಪಾಯಕಾರಿ ವಸ್ತುವೆಂದ್ರೆ ಅದು ಸ್ಟೌವ್. ಹೌದು, ಚಿಕ್ಕ ಮಕ್ಕಳಾದ್ರೆ ಅವರು ಸ್ಟೌವ್ ಮುಟ್ಟದಂತೆ ಎಚ್ಚರ ವಹಿಸೋದು ಉತ್ತಮ. ದೊಡ್ಡವರಾದ್ರೆ ಅವರಿಗೆ ಅಡುಗೆ ಅನಿಲದ ಬಗ್ಗೆ ಯಾವ ರೀತಿ ಎಚ್ಚರಿಕೆ ವಹಿಸಬೇಕು, ಅದ್ರ ಸೋರಿಕೆಯಿಂದ ಉಂಟಾಗೋ ಅಪಾಯದ ಬಗ್ಗೆ ಮಾಹಿತಿ ನೀಡಬೇಕು. ಸ್ಟೌವ್ ಆನ್, ಆಫ್ ಮಾಡೋದು ಹೇಗೆ ಎಂಬುದನ್ನು ಕಲಿಸಬೇಕು. ಅಡುಗೆಮನೆಯ ಕಿಟಕಿಗಳನ್ನು ತೆರೆದಿಡುವಂತೆಯೂ ಸೂಚಿಸಬೇಕು. ಅಡುಗೆಯಾದ ಬಳಿಕ ಸಿಲಿಂಡರ್ನಲ್ಲಿ ಗ್ಯಾಸ್ ಪೂರೈಕೆ ಸ್ಥಗಿತಗೊಳಿಸಲು ತಿಳಿಸೋದು ಕೂಡ ಉತ್ತಮ. 

ವಿದೌಟ್ ಫೈರ್ ಡಿಸ್ ಸಿದ್ಧಪಡಿಸಲು ಪ್ರೋತ್ಸಾಹಿಸಿ
ಬೆಂಕಿ ಬಳಸದೆ ಮಾಡೋ ಡಿಸ್ಗಳನ್ನು ಟ್ರೈ ಮಾಡುವಂತೆ ಮಕ್ಕಳಿಗೆ ಪ್ರೋತ್ಸಾಹ ನೀಡೋದು ಉತ್ತಮ. ಇದ್ರಿಂದ ಸ್ಟೌವ್ ಬಳಸಬೇಕಾದ ಪ್ರಮೇಯವೇ ಎದುರಾಗೋದಿಲ್ಲ.ಇದೊಂದು ರೀತಿಯಲ್ಲಿ ಸುರಕ್ಷಿತ ವಿಧಾನ.

ನೀಲಿ ಜಾವ ಬಾಳೆಹಣ್ಣು ಗೊತ್ತಾ ? 

ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ
ಅಡುಗೆಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳೋದು ಅತ್ಯಗತ್ಯ. ಈ ಬಗ್ಗೆ ಮಗುವಿಗೆ ಮಾಹಿತಿ ನೀಡೋದು ದೊಡ್ಡವರ ಜವಾಬ್ದಾರಿ. ಆಗಾಗ ಕೈಗಳನ್ನು ತೊಳೆಯೋದು, ಬಳಕೆಗೂ ಮುನ್ನ ಪಾತ್ರೆ, ತರಕಾರಿಗಳನ್ನು ಕ್ಲೀನ್ ಮಾಡೋದು ಎಷ್ಟು ಅಗತ್ಯ ಎಂಬುದನ್ನು ಅವರಿಗೆ ಮನವರಿಕೆ ಮಾಡಿಸಬೇಕು. ಅಡುಗೆಯಾದ ಬಳಿಕ ಬಳಸಿದ ಪಾತ್ರೆಗಳು, ಅಡುಗೆಮನೆಯ ಸ್ಲ್ಯಾಬ್, ನೆಲ, ಸಿಂಕ್ಗಳನ್ನು ಕ್ಲೀನ್ ಮಾಡುವಂತೆ ಹೇಳಬೇಕು. ಜೊತೆಗೆ ಎಲ್ಲ ವಸ್ತುಗಳನ್ನು ಅವುಗಳ ಸ್ವಸ್ಥಾನದಲ್ಲಿರಿಸುವಂತೆ ತಿಳಿಸಬೇಕು. 
 

Latest Videos
Follow Us:
Download App:
  • android
  • ios