ಟೋಕಿಯೋ(ಏ.23): ಉಡುಗೊರೆ ಅಂದ್ರೆ ಯಾರಿಗಿಷ್ಟವಿಲ್ಲ ಹೇಳಿ. ಸರ್ಪೈಸ್ ಗಿಫ್ಟ್ ಚಿಕ್ಕದಿರಲಿ, ದೊಡ್ಡದಿರಲಿ ಮನಸಿಗೆ ಖುಷಿಯಾಗೋ ವಿಚಾರ. ಹಾಗಂತ ಗಿಫ್ಟ್ ಪ್ರತಿದಿನ ಸಿಗಲ್ಲ. ಆದರೆ ಇಲ್ಲೊಬ್ಬ ಗಿಫ್ಟ್ ಆಸೆಗೆ ಬಿದ್ದು ಅವಾಂತರ ಮಾಡಿಕೊಂಡಿದ್ದಾನೆ.

ಫ್ಲರ್ಟ್ ಮಾಡೋರು ಬಹಳಷ್ಟು ಜನ ಗರ್ಲ್‌ಫ್ರೆಂಡ್ಸ್‌ಗಳನ್ನು ಇಟ್ಟಕೊಳ್ಳುತ್ತಾರೆ. ಆದ್ರೆ ಇವನಿಗೆ ಪ್ರೀತಿ, ಪ್ರೇಮ, ಪ್ರಣಯ ಯಾವುದೂ ಬೇಡ. ಮದವೆಯೂ ಬೇಡ. ಬೇಕಾದ್ದು ಗಿಫ್ಟ್ ಮಾತ್ರ..!

ಗರ್ಲ್ ಫ್ರೆಂಡ್ ಮೀಟ್ ಮಾಡೋದು ಅಗತ್ಯ ಸೇವೆಯಡಿ ಬರಲ್ವಲ್ಲಪ್ಪಾ!

ಸುಳ್ಳು ಬರ್ತ್ಡೇ ದಿನ ಹೇಳಿ ಉಡುಗೊರೆಗಳನ್ನು ಪಡೆಯುವ ಸಲುವಾಗಿ ಜಪಾನಿನ ವ್ಯಕ್ತಿಯೊಬ್ಬ ಒಂದೇ ಸಮಯದಲ್ಲಿ 35 ಯುವತಿಯರ ಜೊತೆ ಸಂಬಂಧ ಬೆಳೆಸಿದ್ದಾನೆ. 39 ವರ್ಷದ ತಕಾಶಿ ಮಿಯಾಗಾವಾ ಅವರು 35 ಮಹಿಳೆಯರನ್ನು ಡೇಟ್ ಮಾಡಿದ ನಂತರ ಆತನನ್ನು ಬಂಧಿಸಲಾಗಿದೆ.

ಜಪಾನ್‌ನ ದಕ್ಷಿಣ ಪ್ರದೇಶದ ಕನ್ಸಾಯ್ ಪ್ರದೇಶದ ಪಾರ್ಟ್‌ಟೈಂ ಕೆಲಸಗಾರ ಎಲ್ಲಾ ಮಹಿಳೆಯರಿಂದ ನಿರಂತರವಾಗಿ ಉಡುಗೊರೆಗಳನ್ನು ಪಡೆಯಲು ವಿಭಿನ್ನ ದಿನ ಬರ್ತ್‌ಡೇ ಆಚರಿಸುತ್ತಲೇ ಇರುತ್ತಾನೆ ಎಂದು ಹೇಳಿದ್ದಾನೆ.

ಆತ ಜನ್ಮದಿನ ಫೆಬ್ರವರಿ 22 ರಂದು ಎಂದು 47 ವರ್ಷದ ಪ್ರೇಮಿಗೆ ತಿಳಿಸಿದ್ದ. ಇನ್ನೊಬ್ಬರಿಗೆ ಜುಲೈನಲ್ಲಿ ಎಂದು ಹೇಳಿದ್ದ. ಇನ್ನೊಬ್ಬ ಮಹಿಳೆಗೆ ಜನ್ಮದಿನ ಏಪ್ರಿಲ್‌ನಲ್ಲಿದೆ ಎಂದು ತಿಳಿಸಿದ್ದ. ಆತನ ನಿಜವಾದ ಜನ್ಮದಿನ ನವೆಂಬರ್ 14 ರಂದು.