ಸಂಗಾತಿಯೊಂದಿಗೆ ಹೀಗ್ ನಡಕೊಂಡ್ರೆ ಸಂಬಂಧ ಸುಲಭ, ಸುಂದರ

ಸಂಬಂಧದಲ್ಲಿ ಪ್ರೀತಿಯನ್ನು ಕೇವಲ ವಿಶೇಷ ದಿನಗಳಲ್ಲಿ ಮಾತ್ರ ವ್ಯಕ್ತಪಡಿಸಲು ಶೇಖರಿಸಿಡಬೇಡಿ. ಹಾಗಂಥ ಪ್ರತಿ ದಿನವೂ ನೀವು ನಿಮ್ಮ ಸಂಗಾತಿಯನ್ನು ಎಷ್ಟು ಪ್ರೀತಿಸುತ್ತೀರೆಂದು ಹೇಳುತ್ತಿರಬೇಕಾಗಿಲ್ಲ. ಪ್ರೀತಿಯನ್ನು ಹೇಳಬೇಡಿ. ವ್ಯಕ್ತಪಡಿಸಿ. 
Ways to be more loving towards your partner
ಧೀರ್ಘಕಾಲೀನ ಸಂಬಂಧವೆಂದರೆ ಪ್ರೀತಿಯ ಅರ್ಥ, ವ್ಯಾಖ್ಯಾನಗಳು ನಿಧಾನವಾಗಿ ಬದಲಾಗುತ್ತವೆ. ಆರಂಭದಲ್ಲಿ ಇರುವ ಆ ವಿಚಿತ್ರ ಆಕರ್ಷಣೆ ಉಳಿದಿರುವುದಿಲ್ಲ. ಆದರೆ, ನಿಜವಾದ ಪ್ರೀತಿ ಶುರುವಾಗೋದು ಆನಂತರವೇ. ದುರಂತ ಎಂದರೆ ಆರಂಭದ ಆಕರ್ಷಣಾ ಹಂತದಲ್ಲಿ ಪ್ರೀತಿಯನ್ನು ಹೇಳಿಕೊಳ್ಳುವಂತೆ ಆನಂತರದಲ್ಲಿ ಹೇಳಲಾಗದು. ಹಾಗೊಂದು ವೇಳೆ ಹೇಳಿದರೂ ಅದೇ ಏಕತಾನತೆಯಾಗಿ, ಅಭ್ಯಾಸದಂತೆ ಭಾಸವಾಗುವ ಸಾಧ್ಯತೆಗಳು ಹೆಚ್ಚು. ಆಮೇಲೇನಿದ್ದರೂ ಪ್ರೀತಿಯನ್ನು ಹೇಳುವುದಕ್ಕಿಂತ ವ್ಯಕ್ತಪಡಿಸುವುದು ಹೆಚ್ಚು ಪ್ರಬುದ್ಧ ಎನಿಸಿಕೊಳ್ಳುತ್ತದೆ. ಆದರೆ, ಹಲವಾರು ಮಂದಿ ಈ ವ್ಯಕ್ತಪಡಿಸುವಿಕೆ ಅರಿವಿಲ್ಲದೆ ತಮ್ಮ ನಡುವಿನ ಪ್ರೀತಿಯ ಗಿಡ ಬಾಡುತ್ತಿರುವುದನ್ನು ನೋಡಿ ದುಃಖ ಪಟ್ಟುಕೊಳ್ಳುತ್ತಾ ಕೂರುತ್ತಾರೆ. ಆದರೆ, ಕೆಲ ಸರಳ ವಿಷಯಗಳನ್ನು ಅರ್ಥ ಮಾಡಿಕೊಂಡಿರೆ ನೀವು ಹೆಚ್ಚು ಲವಿಂಗ್ ಪಾರ್ಟ್ನರ್ ಆಗುವುದರಲ್ಲಿ ಅನುಮಾನವಿಲ್ಲ. 

ನೀವು ಹಾಗೂ ನಿಮ್ಮ ಸಂಗಾತಿ ಸಣ್ಣಪುಟ್ಟದ್ದಕ್ಕೂ ವಾದ ಮಾಡುತ್ತಾ ಕಳೆಯುತ್ತಿದ್ದರೆ, ಇದನ್ನು ಮೀರಿ ಅವರಿಗೆ ನಿಮ್ಮೊಳಗಿರುವ ಪ್ರೀತಿಯನ್ನು ಅರ್ಥ ಮಾಡಿಸುವ ಬಯಕೆ ಇದ್ದರೆ ನೀವು ಮಾಡಬೇಕಾದುದಿಷ್ಟು. 

ಮಾಸ್ಕ್ ಬಳಕೆ ಬಗ್ಗೆ ಡಾ. ದೇವಿ ಶೆಟ್ಟಿ ಅಮೂಲ್ಯ ಸಲಹೆ

ಸಮಯ ನೀಡಿ
ಯಾರಿಗೇ ಆಗಲಿ, ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ಬಹುಸುಲಭವಾದ ಆದರೆ, ಪರಿಣಾಮಕಾರಿಯಾದ ಮಾರ್ಗವೆಂದರೆ ನಿಮ್ಮ ಅಮೂಲ್ಯ ಸಮಯವನ್ನು ಅವರಿಗೆ ನೀಡುವುದು. ನೀವು ಯಾರಿಗಾದರೂ ಪ್ರೀತಿಸುತ್ತೇನೆ ಎಂದು ಹೇಳಿ ಸಮಯವನ್ನೇ ನೀಡದಿದ್ದರೆ ಅದು ಪ್ರೀತಿ ಎನಿಸಿಕೊಳ್ಳುವುದಿಲ್ಲ. 

ಬೆಂಬಲವಾಗಿ ನಿಲ್ಲಿ
ಸಣ್ಣ ವಿಷಯವೇ ಆಗಲಿ, ದೊಡ್ಡದೇ ಇರಲಿ, ಸಂಗಾತಿಯ ಎಲ್ಲ ಕಷ್ಟಸುಖಗಳಿಗೆ, ಕನಸುಗಳಿಗೆ, ಗುರಿ ಮುಟ್ಟುವವರೆಗೆ ಬೆಂಬಲವಾಗಿ ನಿಲ್ಲಿ. ಇದು ಅವರಿಗೆ ಯಶಸ್ಸಿನತ್ತ ಮುನ್ನಡೆಯಲು ಪ್ರೇರಣೆ ನೀಡುತ್ತದೆ. 

ಮಿ ಟೈಂ ಕೊಡಿ
ಎಲ್ಲರಿಗೂ ಪ್ರೀತಿಸಲ್ಪಡುವುದು ಇಷ್ಟವೇ. ಹಾಗಂಥ, ಒಂದು ಕ್ಷಣವೂ ಅವರನ್ನು ಬಿಟ್ಟಿರಲಾರದಂತೆ ಇದ್ದರೆ ಉಸಿರಾಟ ಕಷ್ಟವಾದಂತೆನಿಸುತ್ತದೆ. ಎಲ್ಲರಿಗೂ ಸ್ವಲ್ಪವಾದರೂ ತಮ್ಮದೇ ಆದ ಸಮಯವೆಂಬುದು ಬೇಕು. ಅದು ಅವರಿಗೆ ಸಿಗುವಂತೆ ನೋಡಿಕೊಳ್ಳಿ. ಕೆಲವೊಂದನ್ನು ಅವರು ಖಾಸಗಿ ಎಂದರೆ ಅದರೊಳಗೆ ತಲೆ ತೂರಿಸಬೇಡಿ.

ಹೀಗೂ ಬದುಕಬಹುದೆಂದು ಕಲಿಸಿದ ಕೊರೋನಾ

ಜವಾಬ್ದಾರಿಗಳನ್ನು ಹಂಚಿಕೊಳ್ಳಿ
ನಿಮ್ಮ ಸಂಗಾತಿಯೇ ಎಲ್ಲ ಕೆಲಸಗಳನ್ನು ಮಾಡುತ್ತಿದ್ದು ನೀವು ತೆಪ್ಪಗೆ ಮಜವಾಗಿದ್ದರೆ, ಅವರಿಗೆ ನೀವು ಅವರನ್ನು ಬಳಸಿಕೊಳ್ಳುತ್ತಿರುವಂತೆ ಎನಿಸುತ್ತದೆ. ಹೀಗಾಗದಿರಲು ಜವಾಬ್ದಾರಿಗಳನ್ನು ಸಾಧ್ಯವಾದಷ್ಟು ಸಮನಾಗಿ ಹಂಚಿಕೊಳ್ಳಿ. 

ಪ್ರೀತಿಮಾತುಗಳಿರಲಿ
ಪ್ರೀತಿ ಮಾತುಗಳು ಸಂಬಂಧಕ್ಕೆ ಬಣ್ಣ ಬಳಿಯುತ್ತವೆ. ಅದರಲ್ಲೂ ಪದಗಳಿಗಿಂತ ಕೃತಿ ಹೆಚ್ಚು ಜೋರಾಗಿ ಮಾತನಾಡುತ್ತದೆ. ಪ್ರೀತಿ ಮಾತುಗಳನ್ನು ಸಾಧ್ಯವಾದಷ್ಟು ಕೃತಿಯ ಮೂಲಕ ವ್ಯಕ್ತಪಡಿಸಿ. 

ಪ್ರಯತ್ನಗಳನ್ನು ಪ್ರಶಂಸಿಸಿ
ನಿಮ್ಮ ಸಂಗಾತಿ ನಿಮ್ಮ ಮೇಲಿನ ಪ್ರೀತಿ ವ್ಯಕ್ತಪಡಿಸಲು ತಮ್ಮ ಸಾಮಾನ್ಯ ವ್ಯಕ್ತಿತ್ವದಿಂದ ಹೊರಬಂದರೆ, ನೀವು ಬಹಳ ವಿಶೇಷ ಎಂದು ಫೀಲ್ ಮಾಡಿಸಿದರೆ ಅದನ್ನು ಗಮನಿಸಿದ್ದೀರಾಗಿ ಮೆಚ್ಚುಗೆಯ ಮಾತುಗಳ ಮೂಲಕ ತೋರಿಸಿಕೊಡಿ. ಅವರನ್ನು ನಿಮ್ಮ ಅದೀನರಂತೆ ಭಾವಿಸದೆ ಆಸ್ತಿಯಂತೆ ಕಾಣಿ. ಮನೆ ನಡೆಸಲು ಅವರು ಪ್ರತಿದಿನ ಮಾಡುವು ಸಣ್ಣಪುಟ್ಟ ಕೆಲಸಗಳನ್ನೂ ಗುರುತಿಸಿ. 

ಬದುಕು ಇಷ್ಟೊಂದು ಸರಳವಾ? ಲಾಕ್‌ಡೌನ್‌ ಜ್ಞಾನೋದಯ

ಹೊಂದಾಣಿಕೆ ಕಲಿಯಿರಿ
ಜೀವನ ಯಾವಾಗಲೂ ಕಲ್ಪನೆಯಂತಲ್ಲ, ಸಂಬಂಧಗಳೆಲ್ಲ ಪರ್ಫೆಕ್ಟ್ ಆಗಿರುವುದೂ ಸಾಧ್ಯವಿಲ್ಲ. ಜೀವನದಲ್ಲಿ ಆಗಾಗ ಅನಿರೀಕ್ಷಿತ ಸವಾಲುಗಳು ಎದುರಾಗುತ್ತವೆ. ಅಂಥ ಸಂದರ್ಭದಲ್ಲಿ ಹೊಂದಾಣಿಕೆ ಮಾಡಲು ನೀವು ಮನಸ್ಸು ಮಾಡಿದರೆ ಬಹಳಷ್ಟು ಸಮಸ್ಯೆಗಳು ಅಲ್ಲಿಯೇ ಮಾಯವಾಗುತ್ತವೆ. 

ಅವರ ಮಾತುಗಳಿಗೆ ಕಿವಿಗೊಡಿ
ಬಹಳಷ್ಟು ಸಮಯ ನೀವು ಸಂಗಾತಿಯ ಮಾತುಗಳಿಗೆ ತಲೆಯಾಡಿಸುತ್ತೀರಿ. ಆದರೆ ನಿಮ್ಮ ಮನಸ್ಸು ಎತ್ತೆತ್ತಲೋ ಸುತ್ತಾಡುತ್ತಿರುತ್ತದೆ. ಅದು ನಿಜವಾದ ಕೇಳುವ ಲಕ್ಷಣವಲ್ಲ. ಪ್ರೀತಿಪಾತ್ರರ ಮಾತುಗಳು, ಭಾವನೆಗಳಿಗೆ ಹೆಚ್ಚು ಗಮನವಿಟ್ಟು ಕಿವಿಗೊಡಿ. ಅದನ್ನು ಮನಸ್ಸಿಗೆ ಹಾಕಿಕೊಳ್ಳಿ. ಅವರು ನಿಮ್ಮ ಜೀವನದ ಅತಿ ಮುಖ್ಯ ವ್ಯಕ್ತಿ ಎಂಬುದನ್ನು ಮರೆಯಬೇಡಿ. ಹೀಗೆ ಅಟೆಂಟಿವ್ ಆಗಿ ಕೇಳುವುದು ಕೂಡಾ ನೀವು ಅವರನ್ನು ಕೇರ್ ಮಾಡುತ್ತೀರಿ ಎಂಬುದನ್ನು ಕಮ್ಯುನಿಕೇಟ್ ಮಾಡುತ್ತಿರುತ್ತದೆ. 

ಸೆಕ್ಸ್‌ನಿಂದ ವಿಚಿತ್ರ ಅಲರ್ಜಿ, ಅರ್ಥವಾಗದ ಪತಿ ಕಂಗಾಲು

ಕ್ಷಮೆ ಕೇಳಿ
ಹಲವಾರು ಬಾರಿ ನೀವು ಕ್ಷಮೆ ಕೇಳುತ್ತೀರಿ ನಿಜ. ಆದರೆ, ಅದು ಪ್ರಾಮಾಣಿಕವಾಗಿದ್ದಿದ್ದೇ ಅಪರೂಪ. ಸುಮ್ಮನೇ ವಾಗ್ವಾದ ನಿಲ್ಲಿಸಲೋ, ಅಥವಾ ರಗಳೆ ಬೇಡವೆಂದೋ ಕ್ಷಮೆ ಕೇಳಿರುತ್ತೀರಿ. ಆದರೆ ಕೇಳಿಸಿಕೊಂಡವರು ಖಂಡಿತವಾಗಿಯೂ ನೀವು ಕೇಳಿದ ಕ್ಷಮೆ ಅದೆಷ್ಟು ಪ್ರಾಮಾಣಿಕವಾದುದೆಂಬುದನ್ನು ಸೆನ್ಸ್ ಮಾಡಬಲ್ಲರು. 

ಹಳೆಯದನ್ನು ಬಿಟ್ಟುಬಿಡಿ
ಬಹುತೇಕ ಸಂಬಂಧಗಳಲ್ಲಿ ಜೋಡಿಗೆ ಇಬ್ಬರ ಬದುಕಿನ ಬಗ್ಗೆಯೂ ಸಾಕಷ್ಟು ಗೊತ್ತಿರುತ್ತದೆ. ಅವರು ಜೀವನದಲ್ಲಿ ಮಾಡಿದ ತಪ್ಪುಒಪ್ಪುಗಳ ಅರಿವಿರುತ್ತದೆ. ಹಾಗಂಥ ವಾದ ಆಗುವಾಗೆಲ್ಲ ಅದನ್ನು ಮತ್ತೆ ಮತ್ತೆ ಕೆದಕಿ ತರುವುದು ನಿಮ್ಮ ಸಂಕುಚಿತ ಮನೋಭಾವವನ್ನು ತೋರುತ್ತದೆ. ಇತಿಹಾಸ ಬಳಸಿಕೊಂಡು ಸಂಗಾತಿಯನ್ನು ವಾದದಲ್ಲಿ ಸೋಲಿಸಲು ನೋಡುವುದು ಚೀಪ್ ಎನಿಸಿಕೊಳ್ಳುತ್ತದೆ. ಅವರೀಗ ಹಳೆಯದನ್ನು ಬದಲಿಸಲಾರರು. ಹಾಗಾಗಿ ಇಂದಿನ ದಿನಗಳತ್ತ ಗಮನ ಹರಿಸಿ. 

ಪ್ರೀತಿಯನ್ನು ವ್ಯಕ್ತಪಡಿಸಲಾರದ ನಿಮ್ಮ ವೀಕ್ನೆಸ್ ಹಾಗೂ ಮಿಸ್‌ಅಂಡರ್ಸ್ಟಾಂಡಿಂಗ್‌ಗಳಿಗೆ ಸುಂದರವಾದ ಸಂಬಂಧವೊಂದು ಬಲಿಯಾಗಲು ಬಿಡಬೇಡಿ. ನಿಮ್ಮ ಸಂಬಂಧ ಹಳಿ ತಪ್ಪುತ್ತಿದ್ದರೆ, ಈ ಟಿಪ್ಸ್‌ಗಳನ್ನು ಬಳಸಿಕೊಂಡು ಅದನ್ನು ದಾರಿಗೆ ತನ್ನಿ. 
Latest Videos
Follow Us:
Download App:
  • android
  • ios