World Mental health day: ವಿಶ್ವ ಮಾನಸಿಕ ಆರೋಗ್ಯ ದಿನದ ಇತಿಹಾಸ, ಮಹತ್ವ ಹೀಗಿದೆ!
ವರ್ಲ್ಡ್ ಫೆಡರೇಶನ್ ಆಫ್ ಮೆಂಟಲ್ ಹೆಲ್ತ್ ಪ್ರಕಾರ ವಿಶ್ವ ಮಾನಸಿಕ ಆರೋಗ್ಯ ದಿನ ಎಂದರೇನು? ಈ ದಿನವನ್ನು ಆಚರಿಸುವ ಉದ್ದೇಶವೇನು? ಹಾಗೂ ಈ ದಿನದ ಮಹತ್ವವೇನು ಎಂಬುದರ ಜೊತೆಗೆ ಈ ವರ್ಷದ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್ ಏನು? ಎಂಬುದರ ಕುರಿತಾಗಿ ಮಾಹಿತಿ ಇಲ್ಲಿದೆ..
ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಎಂಬುದಾಗಿ ವಿಶ್ವದ ಎಲ್ಲೆಡೆಗಳಲ್ಲಿ ಆಚರಿಸಲಾಗುತ್ತದೆ. ಮಾನಸಿಕ ಆರೋಗ್ಯ ಒಬ್ಬ ವ್ಯಕ್ತಿಯ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ, ನಮ್ಮ ತಿಳುವಳಿಕೆ ಬೆಳೆದಂತೆ, ನಾವು ಅದರೊಂದಿಗೆ ಬೆಳೆಯುತ್ತೇವೆ. ಈ ಕುರಿತಾಗಿ ಸ್ವಯಂ-ಅರಿವು (Self awareness) ಮತ್ತು ಅದರ ಬಗೆಗಿನ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಜನರು ಇದನ್ನು ವಿಷಯಗಳನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿದ್ದಾರೆ. ಇದರಿಂದಾಗಿ ಜನರ ಅಭಿಪ್ರಾಯಗಳು (Opinions) ಹಾಗೂ ಅದರ ಕುರಿತಾಗಿ ನಮ್ಮ ಸಂಭಾಷಣೆ ಸುಧಾರಿಸಿದೆ. ಹೇಗೆಂದರೆ, ಹಿಂದೆ ಮಾನಸಿಕ ಅಸ್ವಸ್ಥತೆ ಇರುವ ವ್ಯಕ್ತಿಗಳನ್ನು "ಹುಚ್ಚು" ಅಥವಾ ಇದೇ ಅರ್ಥ ಬರುವ ಇನ್ನೂ ಕೆಲವು ಶಬ್ದಗಳನ್ನು ಬಳಸುವ ಮೂಲಕ ಕರೆಯಲಾಗುತ್ತಿತ್ತು ಆದರೆ ಈಗ ಇದು ಬದಲಾಗಿದೆ. ಇಂತಹ ಪಡಗಳು ಉದ್ದೇಶಪೂರ್ವಕವಾಗಿ ವ್ಯಕ್ತಿಯನ್ನು ನೋಯಿಸುತ್ತವೆ ಮತ್ತು ಕಳಂಕವನ್ನು ಉಂಟುಮಾಡಬಹುದು ಎಂದು ನಾವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ನಾವು ಬಹಳಷ್ಟು ಕಲಿತಿದ್ದರೂ, ಸಮಾಜವಾಗಿ ವಿಕಸನಗೊಳ್ಳಲು ನಾವು ಇನ್ನೂ ಹೆಚ್ಚಿನದನ್ನು ಮಾಡಬಹುದು.
ವಿಶ್ವ ಮಾನಸಿಕ ಆರೋಗ್ಯ ದಿನ: ಇತಿಹಾಸ (History)
ತೊಂಬತ್ತರ ದಶಕದ ಆರಂಭದಲ್ಲಿ ವರ್ಲ್ಡ್ ಫೆಡರೇಶನ್ ಆಫ್ ಮೆಂಟಲ್ ಹೆಲ್ತ್ (WFMH) ಅಧಿಕೃತವಾಗಿ (Officially) ಈ ದಿನವನ್ನು ಸ್ಥಾಪಿಸಿದಾಗಿನಿಂದ ಮಾನಸಿಕ ಆರೋಗ್ಯ ಎಂಬ ವಿಷಯವು ಬಹಳ ದೂರ ಸಾಗಿದೆ. ಮತ್ತು, ಅಂದಿನಿಂದ ಇದನ್ನು ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವದ ಹಲವೆಡೆಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
Feeling Anxiety: ಆತಂಕವೇ? ಸಿಂಪಲ್ಲಾಗಿ ನಿವಾರಿಸ್ಕೊಳಿ
ವಿಶ್ವ ಮಾನಸಿಕ ಆರೋಗ್ಯ ದಿನ: ಮಹತ್ವ (Importance)
ಇಂತಹ ಒಂದು ದಿನವನ್ನು ಆಚರಿಸುವುದು ಯಾಕೆ ಮುಖ್ಯವಾಗುತ್ತದೆ ಎಂದರೆ, ಮಾನಸಿಕ ಅಸ್ವಸ್ಥತೆ ಎಂಬುದು ಕೂಡ ದೇಹಕ್ಕೆ ಸಂಬಂಧಪಟ್ಟ ಕಾಯಿಲೆಯನ್ನು ಹೇಗೆ ಎದುರಿಸುತ್ತಿವೋ ಹಾಗೆಯೇ ಇದು ಕೂಡ ಒಂದು ಸಮಸ್ಯೆ ಅಷ್ಟೇ. ಇದರ ಬಗೆಗಿರುವ ಇತರೆ ಕಳಂಕವನ್ನು ತೊಡೆದುಹಾಕುವ ಅಗತ್ಯತೆಯೊಂದಿಗೆ ಮಾನಸಿಕ (Mental) ಆರೋಗ್ಯದ ಕುರಿತಾಗಿ ಹಲವಾರು ಮುಖ್ಯ ವಿಷಯಗಳನ್ನು ಎಲ್ಲೆಡೆಗಳಿಲ್ಲಿ ಪಸರಿಸಲು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಜೊತೆಗೆ, ಮಾನಸಿಕ ಅಸ್ವಸ್ಥತೆಯ ಕುರಿತು ಮುಂಚಿತವಾಗಿ ಜಾಗೃತಿ ಮತ್ತು ಚಿಕಿತ್ಸೆಯ ಅವಶ್ಯಕತೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ.
ಈ ದಿನವು ನಿಮಗೆ, ನೀವು ಏನು ಮಾಡುತ್ತಿದ್ದೀರಿ, ನೀವು ಒಬ್ಬಂಟಿಯಾಗಿಲ್ಲ. ಎಂಬುದನ್ನು ನೆನಪಿಸುತ್ತದೆ ಜೊತೆಗೆ ಕೆಲವೊಮ್ಮೆ ನಾವು ಮಾತ್ರ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ ಎಂದು ಆಗಾಗ್ಗೆ ನಾವು ಭಾವಿಸುತ್ತೇವೆ. ಆದರೆ, ಅದು ಸುಳ್ಳು. ಇತರ ಜನರು ಕೂಡ ಇಂತಹ ಸವಾಲುಗಳನ್ನು (Challenges) ಎದುರಿಸಿಯೇ ಮುಂದೆ ಸಾಗಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ, ನಿಮ್ಮ ಸ್ವಂತ ನೋವನ್ನು ನೀವು ಜಯಿಸಬಹುದು ಎಂದು ಈ ದಿನ ನಿಮಗೆ ನೆನಪಿಸುತ್ತದೆ.
ವಿಶ್ವ ಮಾನಸಿಕ ಆರೋಗ್ಯ ದಿನ 2022: ಉದ್ದೇಶ (Objective)
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಉದ್ದೇಶವು ಪ್ರಪಂಚದಾದ್ಯಂತ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಇನ್ನೂ ಹಲವು ಪ್ರಯತ್ನಗಳನ್ನು ಸಜ್ಜುಗೊಳಿಸುವುದು (Mobilize).
Mental Health: ಜೀವ ಹಿಂಡುವ ಒಂಟಿತನದಿಂದ ಹೊರ ಬರುವುದು ಹೇಗೆ?
ವಿಶ್ವ ಮಾನಸಿಕ ಆರೋಗ್ಯ ದಿನ 2022: ಥೀಮ್
2022 ರ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್ "ಅಸಮಾನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ (Mental Health is an Uneual World)" ಮತ್ತು ಇದನ್ನು ಅಧಿಕೃತವಾಗಿ ದಿ ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ (WHMF) ಘೋಷಿಸಿದೆ.