Mental Health: ಜೀವ ಹಿಂಡುವ ಒಂಟಿತನದಿಂದ ಹೊರ ಬರುವುದು ಹೇಗೆ?

ಒಂಟಿತನವು ಮನುಷ್ಯನಿಗೆ ಮಾನಸಿಕ ಹಾಗೂ ದೈಹಿಕವಾಗಿ ತುಂಬಾ ತೊಂದರೆ ಉಂಟು ಮಾಡುತ್ತದೆ. ಇದರ ಲಕ್ಷಣಗಳು ಹಾಗೂ ಒಂಟಿತನದಿಂದ ಹೊರ ಬರುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

How to Avoid Loneliness

ಒಂಟಿತನವು ಮಾನಸಿಕ ಹಾಗೂ ದೈಹಿಕವಾಗಿ ತುಂಬಾ ಪರಿಣಾಮ ಬೀರಲಿದೆ. ಇದು ಮನುಷ್ಯನನ್ನು ತುಂಬಾ ತೊಂದರೆಗೀಡುಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಒಂಟಿತನ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬದಲಾಗುತ್ತಿರುವ ಜೀವನಶೈಲಿ, ಕುಟುಂಬದ ಸಮಸ್ಯೆ ಮತ್ತು ಶಿಕ್ಷಣ, ಉದ್ಯೋಗಕ್ಕಾಗಿ ವಲಸೆ ಹೋಗುವವರು ಹೆಚ್ಚಾಗಿ ಈ ಸಮಸ್ಯೆ ಎದುರಿಸುತ್ತಾರೆ. ಇದು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಗಂಭೀರ ಸಮಸ್ಯೆ ಉಂಟು ಮಾಡುತ್ತದೆ. ಒತ್ತಡಕ್ಕೆ ಒಳಗಾದ ವ್ಯಕ್ತಿ ಎಲ್ಲದರೆಡೆಗೂ ನಿರ್ಲಕ್ಷ್ಯ ತೋರುವುದಿಲ್ಲ. ವ್ಯಾಯಾಮ, ಯೋಗ ಮಾಡದೇ ದೇಹದ ತೂಕ ಸೇರಿದಂತೆ ಅನೇಕ ಸಮಸ್ಯೆ ಬರುತ್ತವೆ. ಇವು ಇನ್ನಷ್ಟು ಚಿಂತೆ ಮಾಡುತ್ತ ಮಾನಸಿಕ ಒತ್ತಡಕ್ಕೆ ಒಳಗಾಗುವ  ಸಾಧ್ಯತೆ ಹೆಚ್ಚು.

ಒಂಟಿತನದ ಲಕ್ಷಣಗಳು ಹೀಗಿವೆ:

ಒಂಟಿತನವೆಂಬುದು ಮುಖ್ಯವಾಗಿ ಭಾವನಾತ್ಮಕ ಸಮಸ್ಯೆಯಾಗಿದೆ. ಸುತ್ತಲೂ ಸ್ನೇಹಿತರು, ಕುಟುಂಬ ‌(Family) ಅಥವಾ ಸಹೋದ್ಯೋಗಿಗಳು ಇದ್ದರೂ ಕೆಲವರು ಒಂಟಿತನವನ್ನು ಅನುಭವಿಸುತ್ತಿರುತ್ತಾರೆ. ಇತರರೊಂದಿಗೆ ತೊಡಗಿಸಿಕೊಳ್ಳಲು, ಸಂಪರ್ಕಿಸಲು ಅಥವಾ ಸಂವಹನ (Communication) ನಡೆಸಲು ಹೆಣಗಾಡಬಹುದು. ಇದರರ್ಥ ನಿಯಮಿತ ಸಂಪರ್ಕ ಮತ್ತು ಸಂಭಾಷಣೆಗಳನ್ನು ನಡೆಸುತ್ತಿದ್ದರೂ ಸಹ, ಸಂವಾದವು ತೃಪ್ತಿಕರವಾಗಿ ಅಥವಾ ಗಣನೀಯವಾಗಿ ಅನುಭವಿಸುವುದಿಲ್ಲ. ಇತರ ಜನರಿಂದ ಸುತ್ತುವರಿದಿದ್ದರೂ ಸಹ ನೀವು ಬದಲಾಯಿಸಲಾಗದ ರೀತಿಯಲ್ಲಿ ಪ್ರತ್ಯೇಕಿಸಲ್ಪಟ್ಟಿರುವಂತೆ, ಹೊರಗುಳಿದಿರುವ ಅನುಭವ ಉಂಟಾಗುತ್ತದೆ.

ಒಂಟಿತನವು ಪ್ರತಿಯೊಬ್ಬ ವ್ಯಕ್ತಿಗೆ ವಿಭಿನ್ನವಾಗಿದ್ದರೂ, ಪ್ರತಿಯೊಬ್ಬರೂ ತಮ್ಮ ಆಲೋಚನೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕು ಎಂದು ಭಾವಿಸುತ್ತಾರೆ. ಅಂತಹ ಸಮಯದಲ್ಲಿ ಅವರ ಭಾವನೆಗಳನ್ನು ಹಂಚಿಕೊಳ್ಳಲು ಯಾರೂ ಇಲ್ಲದಿದ್ದರೆ, ಅದು ಅವನ ಮಾನಸಿಕ ಆರೋಗ್ಯದ (Mental Health) ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಸುತ್ತಮುತ್ತಲಿನ ಜನರು ತಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂಬ ಭಾವನೆ ಮೂಡುತ್ತದೆ. ತಾವು ಬಯಸಿದ ರೀತಿಯಲ್ಲಿ ಬೆಂಬಲಿಸಲು ಅಥವಾ ಕಾಳಜಿ ವಹಿಸಲು ಜನರು ಸಿದ್ಧರಿಲ್ಲ ಎಂದು ಭಾವಿಸಿದಾಗ ಒಂಟಿತನವು ಸಹ ಉಂಟಾಗುತ್ತದೆ. ಒಂಟಿತನವು (loneliness)  ಖಿನ್ನತೆ, ಒತ್ತಡ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: INDIAN LAW: ಅನಾಥಾಶ್ರಮ ಸೇರ್ಬೇಕಾಗಿಲ್ಲ, ಮಗನ ಆಸ್ತಿಯಲ್ಲಿ ತಾಯಿಗೂ ಇದೆ ಹಕ್ಕು

ಒಂಟಿತನದಿಂದ ಹೊರ ಬರುವುದು ಹೇಗೆ..?

ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಏನು ಮಾಡಲು ಇಷ್ಟಪಡುತ್ತೀರಿ, ನೆಚ್ಚಿನ ಆಹಾರ (Food), ಆಟ ಸೇರಿ ಇನ್ನಿತರ ಕೆಲಸಗಳು ನಿಮಗೆ ನಿಜವಾಗಿಯೂ ಆನಂದ ನೀಡುತ್ತಿವೆಯಾ ಎಂದು ಆಲೋಚಿಸಿ. ನಿಮ್ಮ ಏಳಿಗೆಯನ್ನು ಬಯಸುವ ಮತ್ತು ನಿಮ್ಮ ಜೀವನದ ಮೌಲ್ಯ ಹೆಚ್ಚಿಸುವ ಜನರೊಂದಿಗೆ ಸಕಾರಾತ್ಮಕ ಸಂಬಂಧಗಳನ್ನು ಗುರುತಿಸಿ. ನಿಮಗೆ ಎಷ್ಟು ಜನ ಸ್ನೇಹಿತರಿದ್ದಾರೆ (Friends)  ಅನ್ನುವುದು ಮುಖ್ಯವಲ್ಲ. ಅವರು ನಿಮಗೆಷ್ಟು ಆಪ್ತರಾಗಿದ್ದಾರೆ ಅನ್ನುವುದು ಕೂಡಾ ಮುಖ್ಯವಾಗುತ್ತದೆ. ಆದ್ದರಿಂದ ನಿಮಗೆ ಆಪ್ತವಿರುವ ಸ್ನೇಹಿತರೊಂದಿಗೆ ಕಾಲ ಕಳೆಯಿರಿ. ಸ್ನೇಹಿತರನ್ನು, ಆಪ್ತರನ್ನು ಭೇಟಿಯಾಗಿ ಮಾತನಾಡಿದರೆ ನಿಮಗೆ ನೆಮ್ಮದಿ ಸಿಗಲಿದೆ. ಇದರಿಂದ ಒಂಟಿತನ ನಿಮ್ಮಿಂದ ದೂರ ಓಡಲಿದೆ.

ಇದನ್ನೂ ಓದಿ: ಪತಿಯಿಂದ ದೂರವಾದ ಮಹಿಳೆಯ ಗರ್ಭಪಾತಕ್ಕೆ ಗಂಡನ ಒಪ್ಪಿಗೆ ಅಗತ್ಯವಿಲ್ಲ; ಕೇರಳ ಹೈಕೋರ್ಟ್

ಒಂಟಿತನದ ಸಮಸ್ಯೆಯಿಂದ ಬಳಲುತ್ತಿರುವವರು ಮುಖ್ಯವಾಗಿ ಟಿ.ವಿ, ಮೊಬೈಲ್ (Mobile), ಸೋಶಿಯಲ್ ಮೀಡಿಯಾದಿಂದ ಆದಷ್ಟು ದೂರವಿರಿ. ಇದರಿಂದ ಒಂಟಿತನಕ್ಕೆ ಪರಿಹಾರ ಸಿಗುವುದಿಲ್ಲ, ಹೆಚ್ಚಾಗಿ ಅನೇಕ ಗೊಂದಲಗಳು ಶುರುವಾಗುತ್ತವೆ. ಇದರ ಬದಲಾಗಿ ಉತ್ತಮ ಪುಸ್ತಕಗಳನ್ನು ಓದಲು ಶುರು ಮಾಡಿ. ಪುಸ್ತಕಗಳು ಉತ್ತಮ ಸ್ನೇಹಿತ ಇದ್ದಂತೆ. ಓದುವುದರಿಂದ ನಮಗೆ ಮಾನಸಿಕ ನೆಮ್ಮದಿಯ ಜೊತೆಗೆ ಆತ್ಮವಿಶ್ವಾಸವು ಮೂಡುತ್ತದೆ. ಇದರಿಂದ ನಾವು ಒಂಟಿತದಿಂದ ದೂರ ಬರಬಹುದು. ಜೊತೆಗೆ ಸಾಕು ಪ್ರಾಣಿಗಳನ್ನು ಸಾಕಿ. ಇದು ನಿಮ್ಮ ಸಂತೋಷದ (Happy) ಮಟ್ಟವನ್ನು ಹೆಚ್ಚುತ್ತದೆ. ಸಾಕುಪ್ರಾಣಿಗಳೊಂದಿಗೆ ಆಟವಾಡಿ ಸಮಯ ಕಳೆಯಿರಿ. ಇದು ನಿಮ್ಮ ಮನಸ್ಸಿಗೆ ಉಲ್ಲಾಸ ನೀಡಲಿದೆ. ಯಾವಾಗಲು ಒಳ್ಳೆಯದನ್ನೇ ಯೋಚಿಸಿ, ಸುತ್ತಲಿನವರ ಜೊತೆ ಉತ್ತಮ ಸ್ನೇಹ ಬೆಳೆಸಿ ಉಳಿಸಿಕೊಳ್ಳಿ. ಇದರಿಂದ ನೀವು ಒಂಟಿತನಕ್ಕೆ ಗುಡ್ ಬೈ ಹೇಳಬಹುದು.

Latest Videos
Follow Us:
Download App:
  • android
  • ios