ತುಂಬಾ ದಿನ ಸೆಕ್ಸ್ ಅನುಭವಿಸದಿದ್ದರೆ ನಿಮ್ಮ ದೇಹವೇ ಹೀಗೆಲ್ಲಾ ಹೇಳುತ್ತೆ!
ಬಲು ದೀರ್ಘ ಕಾಲ ನೀವು ಸೆಕ್ಸ್ ಸುಖ ಅನುಭವಿಸದೇ ಹೋದರೆ, ಅದರ ಪರಿಣಾಮ ದೇಹದ ಮೇಲಾಗುತ್ತದೆ. ಅದು ದೇಹದಲ್ಲಿ ನಾನಾ ರೀತಿ ಕಾಣಿಸಿಕೊಳ್ಳುತ್ತದೆ. ಅದು ಹೇಗೆ ಅಂತ ನೀವೇ ನೋಡಿ.
ಒಳ್ಳೆಯ ಸಂಭೋಗ ದೇಹಕ್ಕೆ ಅತ್ಯದ್ಭುತ ರಿಲೀಫ್ ನೀಡುತ್ತದೆ. ದೇಹವನ್ನು ಸದಾ ಚುರುಕಾಗಿ ಇಡುವುದಕ್ಕೂ ಇದು ಸಹಾಯಕ. ಬಲು ದೀರ್ಘ ಕಾಲ ನೀವು ಸೆಕ್ಸ್ ಸುಖ ಅನುಭವಿಸದೇ ಹೋದರೆ, ಅದರ ಪರಿಣಾಮ ದೇಹದ ಮೇಲಾಗುತ್ತದೆ. ಅದು ದೇಹದಲ್ಲಿ ನಾನಾ ರೀತಿ ಕಾಣಿಸಿಕೊಳ್ಳುತ್ತದೆ. ಅದು ಹೇಗೆ ಅಂತ ನೀವೇ ನೋಡಿ.
ಹೆಚ್ಚು ಆತಂಕ ಅನುಭವಿಸಬಹುದು
ನೀವು ಒತ್ತಡದಲ್ಲಿರುವಾಗ, ಲೈಂಗಿಕ ಸಕ್ರಿಯತೆಯು ನಿಮ್ಮ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೆಕ್ಸ್ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ನಿಮ್ಮ ದೇಹವು ಬಿಡುಗಡೆ ಮಾಡುವ ಹಾರ್ಮೋನುಗಳು ಒತ್ತಡದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಸಕ್ರಿಯ ಲೈಂಗಿಕ ಜೀವನ ನಿಮ್ಮನ್ನು ಸಂತೋಷದಿಂದ ಮತ್ತು ಆರೋಗ್ಯಕರವಾಗಿ ಇಡುತ್ತದೆ. ಅಂದರೆ ನೀವು ಹೆಚ್ಚು ದಿನಗಳ ಕಾಲ ಸೆಕ್ಸ್‌ನಿಂದ ದೂರ ಉಳಿದಷ್ಟೂ ಒತ್ತಡ ಹೆಚ್ಚಾಗುವ ಆತಂಕ ಹೆಚ್ಚು.
ಹೃದ್ರೋಗದ ಅಪಾಯ
ತಿಂಗಳಿಗೊಮ್ಮೆ ಅಥವಾ ಅದಕ್ಕಿಂತ ಕಡಿಮೆ ಸಲ ಲೈಂಗಿಕ ಕ್ರಿಯೆ ನಡೆಸುವವರು, ವಾರಕ್ಕೆ ಎರಡು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ನಡೆಸುವವರಿಗಿಂತ ಹೆಚ್ಚು ಹೃದ್ರೋಗವನ್ನು ಹೊಂದುವ ಸಾಧ್ಯತೆ ಇದೆ ಎಂದು ಸಂಶೋಧನೆ ಹೇಳುತ್ತದೆ. ಸ್ವಲ್ಪ ಹೆಚ್ಚು ವ್ಯಾಯಾಮ ಅಥವಾ ವ್ಯಾಯಾಮಕ್ಕೆ ಸಮಾನವಾದ ಸೆಕ್ಸ್ ಮಾಡುವುದರ ಮೂಲಕ ಆತಂಕ ಅಥವಾ ಖಿನ್ನತೆಯಿಂದ ಪಾರಾಗಬಹುದು. ಇದೂ ಅದರ ಒಂದು ಭಾಗ. ನೀವು ಹೆಚ್ಚು ಸೆಕ್ಸ್ ಮಾಡಿದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುತ್ತೀರಿ.
ಕೊಲೆಸ್ಟ್ರಾಲ್ ಹೆಚ್ಚುತ್ತದೆ
ಮೈತೂಕ ಹೆಚ್ಚಾಗಬಹುದು. ಸೆಕ್ಸ್ ಸಾಮಾನ್ಯವಾಗಿ ನಿಮಿಷಕ್ಕೆ 5 ಕ್ಯಾಲೊರಿಗಳನ್ನು ಸುಡುತ್ತದೆ. ಅದು ವೇಗದ ನಡಿಗೆಗೆ ಸಮಾನ. ಮತ್ತು ನೀವು ಸ್ವಲ್ಪ ಹೆಚ್ಚು ಆಮ್ಲಜನಕ ಸಹ ಬಳಸುತ್ತೀರಿ. ಇದೆಲ್ಲದರ ಕೊರತೆಯಾದಾಗ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ.
ನೀವು ನಾಚಿಕೆ ಸ್ವಭಾವದ ವ್ಯಕ್ತಿಯೇ? ಅದರಿಂದ ಹೊರಬರೋ ಗುಟ್ಟು ತಿಳಿಯಿರಿ
ಮನಸ್ಸಿನಲ್ಲಿ ಕಿರಿಕಿರಿ
ದೀರ್ಘಾವಧಿಯಲ್ಲಿ ಇದು ಡಿಪ್ರೆಶನ್‌ಗೆ ಸೇರಬಹುದು. ಲೈಂಗಿಕತೆಯು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಮರೆವಿನ ಕಾಟ
ನಿಯಮಿತ ಲೈಂಗಿಕತೆಗೂ ಒಲ್ಳೆಯ ನೆನಪಿಗೂ ಸಂಬಂಧವಿದೆ. ವಿಶೇಷವಾಗಿ ನೀವು 50ರಿಂದ 89 ವರ್ಷ ವಯಸ್ಸಿನವರಾಗಿದ್ದರೆ ಇದು ಮುಖ್ಯ. ಸೆಕ್ಸ್ ವೇಳೆ ಸೃಷ್ಟಿಯಾಗುವ ಆನಂದದ ಹಾರ್ಮೋನ್‌ಗಳು ಮೆದುಳನ್ನು ಚುರುಕಾಗಿಡುತ್ತವೆ. ಇಲ್ಲದಿದ್ದರೆ ಮೆದುಳು ಮಂಕಾಗುತ್ತದೆ.
ರೋಗನಿರೋಧಕತೆ ಕಡಿಮೆ
ವಾರಕ್ಕೊಮ್ಮೆಯಾದರೂ ಸೆಕ್ಸ್ ಮಾಡುವವರು, ಅದಕ್ಕಿಂತ ಕಡಿಮೆ ಬಾರಿ ಹೊಂದಿರುವವರಿಗೆ ಹೋಲಿಸಿದರೆ ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿರುತ್ತಾರೆ. ಇಮ್ಯುನೊಗ್ಲಾಬ್ಯುಲಿನ್ A, ಅಥವಾ IgA ಎಂಬ ಸೂಕ್ಷ್ಮಾಣು- ಹೋರಾಟದ ವಸ್ತುವಿನ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಂತ ವಾರದಲ್ಲಿ ಎರಡು ಬಾರಿಗಿಂತ ಹೆಚ್ಚು ಸಂಭೋಗ ಮಾಡುವ ಜನರು, ಸ್ವಲ್ಪ ಕಡಿಮೆ IgA ಅನ್ನು ಹೊಂದಿರುತ್ತಾರೆ.
ದಾಂಪತ್ಯದಲ್ಲಿ ಬಿರುಕು
ಲೈಂಗಿಕತೆಯು ನಿಮ್ಮ ಮೆದುಳನ್ನು "ಆಫ್ಟರ್‌ಗ್ಲೋ" ಎಂಬ ರಾಸಾಯನಿಕದಲ್ಲಿ ಮುಳುಗೇಳಿಸುತ್ತದೆ. ಇದು ಸುಮಾರು 2 ದಿನಗಳವರೆಗೆ ಇರುತ್ತದೆ, ದೀರ್ಘಾವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ನಿಮ್ಮನ್ನು ಬಂಧಿಸಲು ಸಹಾಯ ಮಾಡುತ್ತದೆ. ಇದು ಇಲ್ಲದೆ ಹೋದರೆ ನಿಮ್ಮ ಸಂಬಂಧದ ಪ್ರಮುಖ ಭಾಗವೇ ಕಳಚಬಹುದು. ಆರೋಗ್ಯಕರ, ಸಂತೋಷದ ಲೈಂಗಿಕ ಸಂಬಂಧ- ವಾರಕ್ಕೊಮ್ಮೆ ಅಥವಾ ಎರಡು ಬಾರಿ- ಅದನ್ನು ಮಾಡುವ ದಂಪತಿಗಳನ್ನು ಸಂತೋಷದಿಂದ ಇಡುತ್ತದೆ. ಸಂಗಾತಿಗಳ ನಡುವೆ ನಂಬಿಕೆ ಮತ್ತು ತಿಳುವಳಿಕೆಯನ್ನು ಬೆಳೆಸುತ್ತದೆ.
ಪ್ರಾಸ್ಟೇಟ್ ಕ್ಯಾನ್ಸರ್:
ಸೆಕ್ಸ್ ನಿಯಮಿತವಾಗಿ ಮಾಡದ ಅಥವಾ ಸ್ಖಲನ ಹೊಂದದ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಒಂದು ಅಧ್ಯಯನದಲ್ಲಿ, ತಿಂಗಳಿಗೆ ಕನಿಷ್ಠ 21 ಬಾರಿ ಮಾಡಿದವರಿಗೆ ಹೋಲಿಸಿದರೆ ತಿಂಗಳಿಗೆ ಏಳು ಬಾರಿ ಕಡಿಮೆ ಸ್ಖಲನ ಮಾಡುವ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಕಂಡುಬಂದಿದೆ.
ಎಂಗೇಜ್ಮೆಂಟ್ ಆಗಿರುವ ಗರ್ಲ್, ಸಾಯಲು ಹೊರಟಿರುವ ಬಾಯ್ ಮಧ್ಯೆ ಯಾಕೆ ಹುಟ್ಕೊಂಡ್ತು ಲವ್..!
ನಿದ್ರೆಯಿಲ್ಲದ ರಾತ್ರಿಗಳು
ಲೈಂಗಿಕತೆಯಿಲ್ಲದೆ ಹೋದರೆ, ಪ್ರೋಲ್ಯಾಕ್ಟಿನ್ ಮತ್ತು ಆಕ್ಸಿಟೋಸಿನ್‌ನಂತಹ ಶಾಂತ ನಿದ್ರೆಯನ್ನು ಉತ್ತೇಜಿಸುವ ಹಾರ್ಮೋನುಗಳನ್ನು ನೀವು ಕಳೆದುಕೊಳ್ಳುತ್ತೀರಿ. ಮಹಿಳೆಯರು ಈಸ್ಟ್ರೊಜೆನ್ ಹಾರ್ಮೋನ್ ಪಡೆಯುವುದಿಲ್ಲ. ನೀವು ಮತ್ತೆ ಸೆಕ್ಸ್ ಮಾಡಿದ ದಿವಸ ಸೊಗಸಾಗಿ ಒಳ್ಳೆಯ ರಾತ್ರಿಯ ನಿದ್ರೆಯನ್ನು ಅನುಭವಿಸುತ್ತೀರಿ.
ನೋವಿನಿಂದ ಮುಕ್ತಿಯಿಲ್ಲ: ಗಂಟು ನೋವು, ಬೆನ್ನು ನೋವು ಇತ್ಯಾದಿ ಹೆಚ್ಚಬಹುದು. ನೀವು ಹೊಂದಿರುವ ಯಾವುದೇ ನೋವುಗಳನ್ನು ತೆಗೆದುಹಾಕಲು ಲೈಂಗಿಕತೆಯು ಉತ್ತಮ ಮಾರ್ಗ. ಸೆಕ್ಸ್‌ನ ಪರಾಕಾಷ್ಠೆಯು, ನಿಮ್ಮ ದೇಹವು ಎಂಡಾರ್ಫಿನ್‌ಗಳು ಮತ್ತು ಇತರ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಕಾರಣವಾಗುತ್ತದೆ. ಅದು ತಲೆ, ಬೆನ್ನು ಮತ್ತು ಕಾಲು ನೋವುಗಳನ್ನು ನಿವಾರಿಸುತ್ತದೆ. ಇದು ಸಂಧಿವಾತ ನೋವು ಮತ್ತು ಮುಟ್ಟಿನ ಸೆಳೆತ ನಿವಾರಣೆಗೆ ಸಹಾಯ ಮಾಡಬಹುದು.
ನಿಮಿರು ದೌರ್ಬಲ್ಯ: ಕೆಲವು ಸಂಶೋಧನೆಗಳು ಹೇಳುವಂತೆ ವಾರಕ್ಕೊಮ್ಮೆಗಿಂತಲೂ ಕಡಿಮೆ ಸಂಭೋಗ ಮಾಡುವ ಪುರುಷರು ನಿಮಿರುವಿಕೆಯ ದೌರ್ಬಲ್ಯ (ED) ಹೊಂದುವ ಸಾಧ್ಯತೆ ಎರಡು ಪಟ್ಟು ಹೆಚ್ಚು. ಹಾಗೆಯೇ ಋತುಬಂಧದಲ್ಲಿರುವ ಮಹಿಳೆಯರಿಗೆ ನಿಯಮಿತವಾದ ಸಂಭೋಗವಿಲ್ಲದೆ ಹೋದರೆ ಯೋನಿ ಅಂಗಾಂಶವು ತೆಳುವಾಗಬಹುದು, ಕುಗ್ಗಬಹುದು ಮತ್ತು ಒಣಗಬಹುದು. ಅದು ಸೆಕ್ಸ್ ವೇಳೆ ನೋವು ಉಂಟುಮಾಡಬಹುದು.
ರಕ್ತದೊತ್ತಡ ಹೆಚ್ಚಳ: ಸೆಕ್ಸ್ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸ್ವಲ್ಪ ಏರೋಬಿಕ್ ಮತ್ತು ಸ್ನಾಯು ವ್ಯಾಯಾಮವನ್ನು ಮಾಡಿದಂತೆ. ಇದು ಆತಂಕವನ್ನು ಕಡಿಮೆ ಮಾಡುತ್ತದೆ.