man with two wives killed: ಆತನಿಗೆ ಇಬ್ಬರು ಹೆಂಡಿರಿದ್ದರು, ಇಬ್ಬರಿಂದಲೂ ತಲಾ ಒಂಭತ್ತು ಒಂಭತ್ತು ಮಕ್ಕಳಂತೆ ಒಟ್ಟು 18 ಮಕ್ಕಳಿದ್ದರು. ಅವರಲ್ಲೊಂದು ಮಗಳಿಗೆ ಮದುವೆಯೂ ಆಗಿತ್ತು. ಆದರೂ ಆತನ ಚಪಲ ಮಾತ್ರ ನಿಂತಿರಲಿಲ್ಲ, ಪರಸ್ತ್ರೀ ಮೇಲೆಯೂ ಆತ ಕಣ್ಣು ಹಾಕಿದ್ದ. ಆಮೇಲೇನಾಯ್ತು ನೋಡಿ…

ಕಾಲುವೆಯಲ್ಲಿ ಶವವಾಗಿ ಪತ್ತೆಯಾದ ಇಬ್ಬರು ಹೆಂಡಿರ ಮುದ್ದಿನ ಗಂಡ

ಆತನಿಗೆ ಇಬ್ಬರು ಹೆಂಡಿರಿದ್ದರು, ಇಬ್ಬರಿಂದಲೂ ತಲಾ ಒಂಭತ್ತು ಒಂಭತ್ತು ಮಕ್ಕಳಂತೆ ಒಟ್ಟು 18 ಮಕ್ಕಳಿದ್ದರು. ಅವರಲ್ಲೊಂದು ಮಗಳಿಗೆ ಮದುವೆಯೂ ಆಗಿತ್ತು. ಆದರೂ ಆತನ ಚಪಲ ಮಾತ್ರ ನಿಂತಿರಲಿಲ್ಲ, ಪರಸ್ತ್ರೀ ಮೇಲೆಯೂ ಆತ ಕಣ್ಣು ಹಾಕಿದ್ದ ಸಂಬಂಧ ಬೆಳೆಸುವಂತೆ ಒತ್ತಾಯ ಹೇರಿ ಬ್ಲಾಕ್‌ಮೇಲ್ ಶುರು ಮಾಡಿದ ಪರಿಣಾಮ ಈಗ ಆ ಚಪಲ ಚೆನ್ನಿಗರಾಯ ಮೂಟೆಯಲ್ಲಿ ಶವವಾಗಿ ಸಿಕ್ಕಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಪ್ರದೇಶದ ಸುಮೇರ್‌ಪುರದಲ್ಲಿ ಈ ಘಟನೆ ನಡೆದಿದೆ. ಮುಸ್ತಕ್ ಗುಲ್ಸನ್ ಅಲಿಯಾಸ್ ಮುನ್ನಾ ಎಂಬಾತನೇ ಹೀಗೆ ಇಬ್ಬರು ಹೆಂಡಿರಿದ್ದರೂ ಮತ್ತೊಬ್ಬಳ ಸಹವಾಸ ಮಾಡುವುದಕ್ಕೆ ಹೋಗಿ ಶವವಾದವ. ತನ್ನ ಗ್ರಾಮದ ಮಾಜಿ ಮುಖ್ಯಸ್ಥನಾಗಿದ್ದ ಈತ ನಾಪತ್ತೆಯಾದ ಮರುದಿನ ಶವವಾಗಿ ಪತ್ತೆಯಾಗಿದ್ದ. ಕಾಲುವೆಯಲ್ಲಿ ಸಿಕ್ಕಿದ ಮೂಟೆಯಲ್ಲಿ ಆತನ ಶವ ಸಿಕ್ಕಿತ್ತು. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮುನ್ನಾಗೆ ಮೊದಲು ಹೇಳಿದಂತೆ ಇಬ್ಬರು ಪತ್ನಿಯರಿದ್ದರು. ಇತ್ತೀಚೆಗೆ ಆತ ಮತ್ತೊಬ್ಬ ಸುಮನ್ ದೇವಿ ಎಂಬ ಮಹಿಳೆಯ ಜೊತೆ ಪ್ರೇಮ ಸಂಬಂಧವನ್ನು ಬೆಳೆಸಿಕೊಂಡಿದ್ದ. ಸುಮನ್ ದೇವಿಯ ಪತಿ ಕೆಲಸಕ್ಕಾಗಿ ಬೇರೆ ಊರಿಗೆ ಹೋಗುತ್ತಿದ್ದಿದ್ದರಿಂದ ಸುಮನ್ ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದಳು. ಮುನ್ನಾ ಆಕೆಗೆ ಏನಾದರೂ ಅಗತ್ಯವಿದ್ದರೆ ತಂದು ನೀಡುತ್ತಾ ಆಕೆಗೆ ಸಹಾಯ ಮಾಡುತ್ತಿದ್ದ ಇದೇ ಸಮಯದಲ್ಲಿ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದ್ದು, ಆಕೆಯ ಬಳಿ ತನ್ನ ಜೊತೆ ಸಂಬಂಧ ಹೊಂದುವಂತೆ ಆತ ಒತ್ತಾಯಿಸಿದ್ದ.

ಸಂಬಂಧ ಹೊಂದುವಂತೆ ಒತ್ತಾಯ ಒಪ್ಪದೇ ಹೋದಾಗ ಬ್ಲಾಕ್ಮೇಲ್

ಇದೇ ವಿಚಾರವಾಗಿ ಮುನ್ನಾ ಆಕೆಯನ್ನು ಒತ್ತಾಯಿಸುತ್ತಾ ಬ್ಲಾಕ್‌ಮೇಲ್ ಮಾಡುವುದಕ್ಕೆ ಶುರು ಮಾಡಿದಾಗ ಸುಮನ್ ಈತನಿಗೊಂದು ಗತಿ ಕಾಣಿಸಬೇಕು ಇಲ್ಲದೇ ಹೋದರೆ ನನ್ನ ಬದುಕು ಹಾಳಾಗುತ್ತದೆ ಎಂದು ಭಾವಿಸಿದ ಆಕೆ ತನ್ನ ಸೋದರನ ಬಳಿ ಈ ವಿಚಾರ ತಿಳಿಸಿದ್ದಾರೆ. ಅಲ್ಲದೇ ಮುನ್ನಾನ ಹತ್ಯೆ ಇಬ್ಬರು ಸೇರಿ ಪ್ಲಾನ್ ಮಾಡಿದ್ದಾರೆ. ಅದರಂತೆ ಸುಮನ್ ದೇವಿ ಮುನ್ನಾನನ್ನು ಆಕೆಯ ತವರು ಮನೆಗೆ ಬರುವಂತೆ ಕರೆದಿದ್ದಾಳೆ. ಆಕೆಯ ಕರೆಯಂತೆ ಸುಮನ್ ಮನೆಗೆ ಬಂದ ಮುನ್ನಾನನ್ನು ಆತ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಕಬ್ಬಿಣದ ರಾಡ್‌ನಲ್ಲಿ ತಲೆಗೆ ಬಡಿದು ಸಾಯಿಸಿದ್ದಾರೆ. ಆತ ಅಲ್ಲೇ ಪ್ರಾಣ ಬಿಟ್ಟಿದ್ದು ಬಳಿಕ ಶವವನ್ನು ಗೋಚಿಚೀಲಕ್ಕೆ ತುಂಬಿಸಿ ಕಾಲುವೆಗೆ ಎಸೆದಿದ್ದಾರೆ.

ಇತ್ತ ಮುನ್ನಾನ ಮನೆಯವರು ಆತ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ವೇಳೆ ಮುನ್ನಾನ ಮೋಟಾರ್ ಸೈಕಲ್ ಬೇರೆಯದೇ ಜಾಗದಲ್ಲಿ ಇರುವುದನ್ನು ಗಮನಿಸಿದ್ದು, ಬಳಿಕ ಆತನ ಫೋನ್ ಕಾಲ್ ರೆಕಾರ್ಡ್‌ಗಳನ್ನು ಪರಿಶೀಲಿಸಿದ್ದಾರೆ. ನಂತರ ಮಹಿಳೆ ಹಾಗೂ ಆತನ ಸೋದರನನ್ನು ಬಂಧಿಸಿದ್ದಾರೆ. ಈ ಕೃತ್ಯಕ್ಕೆ ಸಹಕರಿಸಿದ್ದ ಇನ್ನು ಕೆಲವರ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ಮುನ್ನಾ ಮುಂದಿನ ಗ್ರಾಮ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ. ಈತನಿಗೆ 18 ಮಕ್ಕಳಿದ್ದು, ಈತನ ಇಬ್ಬರು ಪತ್ನಿಯರಿಗೂ ತಲಾ 6 ಗಂಡು ಮೂರು ಹೆಣ್ಣು ಮಕ್ಕಳಿದ್ದಾರೆ. ಇವರಲ್ಲೊಬ್ಬ ಮಗಳಿಗೆ ಮದುವೆಯೂ ಆಗಿದೆ. ಆದರೇನು ಬಂತು ಹೆಣ್ಣಿನ ವ್ಯಾಮೋಹ ಆತನನ್ನು ಮಸಣ ಸೇರಿಸಿದೆ.