Asianet Suvarna News Asianet Suvarna News

ಮಂಟಪದಲ್ಲಿ ಕೂಲ್‌ಡ್ರಿಂಕ್ಸ್ ಕುಡಿದ ವರ ಕಕ್ಕಾಬಿಕ್ಕಿ, ಸಿಟ್ಟಾದ ವಧು..ಅಷ್ಟಕ್ಕೂ ಆಗಿದ್ದೇನು?

ಭಾರತದಲ್ಲಿ ಮದುವೆ ಅಂದ್ರೆ ಹಬ್ಬ. ಕುಟುಂಬ ಬಳಗದವರು, ಸ್ನೇಹಿತರು ಎಲ್ಲಾ ಸೇರಿ ಮೋಜು-ಮಸ್ತಿ ಸಖತ್ತಾಗಿರುತ್ತದೆ. ಮದುವೆ ದಿನ ವರ, ವಧುವಿಗೆ ಪ್ರ್ಯಾಂಕ್ ಮಾಡುವುದು ಸಹ ಹೊಸತೇನಲ್ಲ. ಹಾಗೆಯೇ ಇಲ್ಲೊಂದು ಮದ್ವೇಲಿ ವರನ ಫ್ರೆಂಡ್ಸ್ ಅದೇನ್ ಮಾಡಿದ್ದಾರೆ ನೋಡಿ.
 

Grooms friends make him drink sneakily on Wedding stage Vin
Author
First Published Jun 2, 2023, 5:48 PM IST

ಈಗ ಮದುವೆ ಸೀಸನ್ ನಡೆಯುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಮದುವೆ ಮನೆಯಲ್ಲಿ ನಡೆದ ಎಡವಟ್ಟು, ವಧುವಿನ ಅಲಂಕಾರ, ಊಟದ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದಿಷ್ಟು ವಿಡಿಯೋ ವಿಶೇಷ ಕಾರಣಗಳಿಂದಾಗಿ ವೈರಲ್​ ಆಗಿಬಿಡುತ್ತವೆ. ಇದೀಗ ಆ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ. ಮದುವೆ ಅಂದಮೇಲೆ ಅಲ್ಲಿ ಸ್ನೇಹಿತರ ತುಂಟಾಟಗಳು ಇದ್ದೇ ಇರುತ್ತವೆ. ಸದ್ಯ ವೈರಲ್​ ಆಗಿರುವ ವಿಡಿಯೋ ಕೂಡ ಅದಕ್ಕೆ ಸಂಬಂಧಿಸಿದೆ. ವೇದಿಕೆ ಮೇಲೆ ವಧುವಿನ ಜೊತೆಯಲ್ಲಿ ನಿಂತಿದ್ದ ವರನಿಗೆ ಆತನ ಸ್ನೇಹಿತರು ಥಮ್ಸಪ್ ಬಾಟಲ್​ನಲ್ಲಿ ಮದ್ಯ ಬೆರೆಸಿ ಕುಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.​

ಕನುಮೂರವಿ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 25 ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 2 ಮಿಲಿಯನ್​ಗೂ ಅಧಿಕ ಲೈಕ್ಸ್​ಗಳು ಹರಿದುಬಂದಿವೆ. ವಿಡಿಯೋದಲ್ಲಿರುವ ಪ್ರಕಾರ ಈ ಘಟನೆ ತೆಲಂಗಾಣ ಅಥವಾ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ವಧು, ವರ ಮತ್ತು ಹಾವು: ಯಪ್ಪಾ..ಇದೆಂಥಾ ಫೋಟೋಶೂಟ್, ನೋಡಿದ್ರೆ ಎದೆ ಝಲ್‌ ಅನ್ನುತ್ತೆ!

ವಿಡಿಯೋದಲ್ಲಿ ಏನಿದೆ?
ವೇದಿಕೆ ಮೇಲೆ ನಿಂತಿರುವ ವರ (Groom) ಸಾಫ್ಟ್​ ಡ್ರಿಂಕ್ಸ್​ ಬಾಟಲ್​ನಲ್ಲಿರುವ ಡಿಂಕ್ಸ್​ ಕುಡಿಯುತ್ತಾನೆ. ತಕ್ಷಣ ಆತನ ಮುಖದ ರಿಯಾಕ್ಷನ್ ಬದಲಾಗುತ್ತದೆ. ಅದರಲ್ಲಿರುವುದು ಸಾಫ್ಟ್​ ಡ್ರಿಂಕ್​ ಅಲ್ಲ ಬದಲಾಗಿ ಮದ್ಯ (Alcohol) ಎಂಬುದು ಅರಿವಿಗೆ ಬರುತ್ತದೆ.  ಅವನು ತನ್ನ ಸ್ನೇಹಿತರ ಕಿಡಿಗೇಡಿತನವನ್ನು ಬೇಗನೆ ಅರ್ಥಮಾಡಿಕೊಳ್ಳುತ್ತಾನೆ. ವರನ ಸ್ನೇಹಿತರು (Friends) ತಂಪು ಪಾನೀಯದ ಬಾಟಲಿಯಲ್ಲಿ ಮದ್ಯವನ್ನು ಬೆರೆಸಿ ಅವನಿಗೆ ಕೊಟ್ಟರು. ಸ್ನೇಹಿತರು ಥಮ್ಸಪ್​ ಬಾಟಲ್​ಗೆ ಮದ್ಯ ಬೆರೆಸಿರುವ ದೃಶ್ಯ ವಿಡಿಯೋದಲ್ಲಿ ಬರುತ್ತದೆ.  ಅಲ್ಕೋಹಾಲ್ ಮಿಶ್ರಿತ ತಂಪು ಪಾನೀಯವನ್ನು ಕುಡಿದ ತಕ್ಷಣ ವರನ ಮುಖದ ಭಾವಗಳನ್ನು ನೋಡಿದ ವಧು (Bride) ಕೂಡ ಏನೋ ಸರಿಯಿಲ್ಲ ಎಂದು ಅರ್ಥಮಾಡಿಕೊಂಡು, ವರನತ್ತ ಕೋಪದಿಂದ ನೋಡುತ್ತಾರೆ. ಆದರೆ ನಂತರ ಆಕೆ ನಗುತ್ತಿರುವುದನ್ನು ನೋಡಬಹುದು.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನೆಟಿಜನ್‌ಗಳು ಈ ವೀಡಿಯೊವನ್ನು ತಮಾಷೆಯಾಗಿ ಕಂಡುಕೊಂಡಿದ್ದು, ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿದ್ದಾರೆ. ನಿಮ್ಮ ಮದುವೆಗೂ (Marriage) ಇದೇ ರೀತಿ ಮಾಡುತ್ತೇವೆ ಎಂದು ಕಾಮೆಂಟಿಸಿ ನಗುವ ಎಮೋಜಿಯನ್ನು ಸೇರಿಸಿದ್ದಾರೆ. ಒಬ್ಬ ಬಳಕೆದಾರರು ಬರೆದಿದ್ದಾರೆ, 'ಇಂಥಾ ಫ್ರೆಂಡ್ಸ್ ಗ್ಯಾಂಗ್‌ ಬಗ್ಗೆ ಎಚ್ಚರದಿಂದಿರಿ' ಎಂದಿದ್ದಾರೆ. ಮತ್ತೊಬ್ಬರು 'ವಧುವಿಗೆ ವಿಷಯ ಗೊತ್ತಾಯಿತು' ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೆಯ ಬಳಕೆದಾರರು. 'ಫೇಸ್ ಎಕ್ಸ್‌ಪ್ರೆಶನ್‌ ಎಲ್ಲವನ್ನೂ ಹೇಳುತ್ತದೆ' ಎಂದು ಕಾಮೆಂಟಿಸಿದ್ದಾರೆ.

ಮದ್ವೆ ದಿನ ಓಡಿಹೋದ ವಧು, ಆಕೆಗಾಗಿ ಮಂಟಪದಲ್ಲೇ 13 ದಿನ ಕಾದು ಕುಳಿತ ವರ!


ಅರಿಶಿಣ ಶಾಸ್ತ್ರದ ವೇಳೆ ವರನಿಗೆ ಬಿಯರ್ ಅಭಿಷೇಕ ಮಾಡಿದ ಗೆಳೆಯರು
ಈ ಹಿಂದೆ ಹೀಗೆಯೇ ಮದುಮಗನ ಸ್ನೇಹಿತರು ಮಾಡಿದ ಕಿತಾಪತಿಯೊಂದು ಸಖತ್ ವೈರಲ್ ಆಗಿತ್ತು. ಇಲ್ಲಿ ವರನ ಸ್ನೇಹಿತರೆಲ್ಲಾ ಸೇರಿ ಮದ್ವೆ ದಿನ ಆತನಿಗೆ ಬಿಯರ್ ಅಭಿಷೇಕ ಮಾಡಿದ್ದರು. ಉತ್ತರ ಭಾರತದಲ್ಲಿ ಮದ್ವೆಯಷ್ಟೇ ಗ್ರ್ಯಾಂಡ್ ಹಿಂದಿನ ದಿನ ನಡೆಯುವ ಎಣ್ಣೆ ಅರಿಶಿಣ ಶಾಸ್ತ್ರ. ಈ ಸಂಪ್ರದಾಯದ ಪ್ರಕಾರ ವಧು ಅಥವಾ ವರನನ್ನು ಮನೆ ಮುಂದೆ ಕೂರಿಸಿ ಅವರಿಗೆ ಕುಟುಂಬದ ಹಿರಿಯರು ಮುತ್ತೈದೆಯರು, ಆತ್ಮೀಯ ಸ್ನೇಹಿತರು, ಆತ್ಮೀಯ ಬಂಧುಗಳು ಒಬ್ಬೊಬ್ಬರಾಗಿ ಅರಿಶಿಣ ಹಚ್ಚುತ್ತಾರೆ. ಅರಿಶಿನ ಹಚ್ಚಿದ ಬಳಿಕ ನೀರಿನ ಹಾಲಿನ ಅಭಿಷೇಕವನ್ನು ವಧು/ವರರ ಮೇಲೆ ಮಾಡಲಾಗುತ್ತದೆ. ಆದರೆ ಇಲ್ಲಿ ಇದೇ ಸಂದರ್ಭವನ್ನು ವರನ ಗೆಳೆಯರು ಕಿತಾಪತಿ ಮಾಡಲು ಬಳಸಿದ್ದು, ಹಾಲು ನೀರು ಅಭಿಷೇಕ ಮಾಡುವ ಬದಲು ತಮ್ಮ ಆತ್ಮೀಯ ಗೆಳೆಯನಿಗೆ ಬೀರಿನ ಅಭಿಷೇಕ ಮಾಡಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

Follow Us:
Download App:
  • android
  • ios