ವೆಡ್ಡಿಂಗ್ ಡೇ ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ಜನರು ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಳ್ಳೋದು ಇತ್ತೀಚಿಗೆ ಟ್ರೆಂಡ್ ಆಗಿದೆ. ಜನರು ಚಿತ್ರ-ವಿಚಿತ್ರವಾಗಿ ಫೋಟೋಶೂಟ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಂದು ಜೋಡಿ ಹಾವಿನ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಎಲ್ಲೆಡೆ ವೈರಲ್ ಆಗ್ತಿದೆ.

ಮದ್ವೆ ಅನ್ನೋದು ಎಲ್ಲರ ಜೀವನದಲ್ಲಿಯೂ ಪ್ರಮುಖವಾದ ದಿನ. ಹೀಗಾಗಿಯೇ ವೆಡ್ಡಿಂಗ್ ಡೇ ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ಜನರು ಏನೇನೋ ಹೊಸ ಹೊಸ ಕಾನ್ಸೆಪ್ಟ್ ನೊಂದಿಗೆ ಬರುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ಕೆಲ ವರ್ಷಗಳಿಂದ, ಮದ್ವೆ ಫೋಟೋ ಶೂಟ್, ಪ್ರೀ ವೆಡ್ಡಿಂಗ್ ಫೋಟೋ ಶೂಟ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಅನ್ನೋದು ಹೆಚ್ಚು ಟ್ರೆಂಡ್ ಆಗ್ತಿದೆ. ಜನರು ಗ್ರ್ಯಾಂಡ್ ಲೊಕೇಷನ್‌ನಲ್ಲಿ ತುಂಬಾ ಅದ್ಧೂರಿಯಾಗಿ ಫೋಟೋಶೂಟ್‌ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಸಿಂಪಲ್ ಆಗಿ, ಮತ್ತೆ ಕೆಲವರು ಚಿತ್ರ-ವಿಚಿತ್ರವಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಕೆಲವು ಜೋಡಿ ತುಂಬಾ ವಿಭಿನ್ನವಾಗಿರಬೇಕೆಂದು ಸಾಹಸಕ್ಕೂ ಕೈಹಾಕುತ್ತಾರೆ. ಅದರಲ್ಲಿ ಕೆಲವು ತುಂಬಾ ವಿಚಿತ್ರವಾದವುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. 

ಅರೆ ಬೆತ್ತಲಾಗಿ ಫೋಟೋ ಶೂಟ್, ಕೆಸರಿನಲ್ಲಿ ಫೋಟೋ ಶೂಟ್, ನೀರಿನಲ್ಲಿ ಫೋಟೋ ಶೂಟ್, ಗದ್ದೆಯಲ್ಲಿ, ಗ್ರಾಮೀಣ ಗೆಟಪ್, ಸಂತೆಯಲ್ಲಿ, ಮರ್ಡರ್ ನಡೆದಂತೆ ಹೀಗೆ ವಿಚಿತ್ರ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳೋ ಜೋಡಿಯ ಫೋಟೋ ವೈರಲ್ ಆಗುತ್ತಿರುತ್ತದೆ. ಹಾಗೆಯೇ ಇಲ್ಲೊಂದು ಜೋಡಿ (Couple) ಹಾವನ್ನು ರಕ್ಷಿಸುವ ಥೀಮ್‍ನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಂಡಿದೆ. 

ಇದು ಚೇಸಿಂಗ್ ದೃಶ್ಯವಲ್ಲ: ನವ ಜೋಡಿಯ ಮದುವೆ ಫೋಟೋಶೂಟ್ ವೈರಲ್

ನವಜೋಡಿಯೊಂದು ವಿಷಕಾರಿ ನಾಗರಹಾವಿನ (Snake) ಜತೆ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿಕೊಂಡಿದ್ದು, ಫೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹಾವಿನಿಂದ ಹುಡುಗ-ಹುಡುಗಿ ಮಧ್ಯೆ ಹೇಗೆ ಪ್ರೇಮಾಂಕುರವಾಗುತ್ತದೆ ಎಂಬ ಕಲ್ಪನೆಯಲ್ಲಿ ಈ ಫೋಟೋಶೂಟ್​ ಮೂಡಿಬಂದಿದ್ದು, ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ದಾರಿಯಲ್ಲಿ ಸಾಗುತ್ತಿದ್ದ ಯುವತಿ ಹಾವನ್ನು ಕಂಡು ಭಯಗೊಳ್ಳುತ್ತಾಳೆ. ರಕ್ಷಣೆಗೆ ಉರಗ ರಕ್ಷಕರಿಗೆ ಫೋನ್ ಮಾಡುತ್ತಾಳೆ. ಹೀಗೆ ಹಾವನ್ನು ರಕ್ಷಿಸುವ ಯುವಕನೊಂದಿಗೆ ಆಕೆಗೆ ಪ್ರೇಮಾಂಕುರವಾಗುತ್ತದೆ ಎಂಬ ಕಥೆಯ ರೀತಿ ಈ ಫೋಟೋಶೂಟ್ ಇದೆ. ವಿವೇಕ್ ಎಂಬ ಟ್ವಿಟ್ಟರ್ ಬಳಕೆದಾರರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋಶೂಟ್ ಥೀಮ್ ಏನು?
ಯುವತಿ ತಮ್ಮ ಮನೆಯ ಬಳಿ ನಾಗರಹಾವೊಂದನ್ನು ನೋಡಿ, ಹೆದರಿ ತಕ್ಷಣ ಹಾವು ರಕ್ಷಿಸುವವರಿಗೆ ಕರೆ ಮಾಡುತ್ತಾಳೆ. ಇದೇ ವೇಳೆ ಇಬ್ಬರು ಸ್ಕೂಟರ್​ನಲ್ಲಿ ಬರುತ್ತಾರೆ. ಅದರಲ್ಲಿ ಓರ್ವ ಯುವಕ, ಯುವತಿಯನ್ನು ನೋಡಿ ನಗುತ್ತಾನೆ. ಬಳಿಕ ಅವರು ಹಾವನ್ನು ಹಿಡಿದು ಬಾಕ್ಸ್​ ಒಳಗೆ ಹಾಕಿಕೊಳ್ಳುತ್ತಾರೆ. ಹಾವನ್ನು ಅಲ್ಲಿಂದ ತೆಗೆದುಕೊಂಡು ಹೋಗುವಾಗ ಕರೆ ಮಾಡುವಂತೆ ಯುವತಿಗೆ ಯುವಕ ಸಿಗ್ನಲ್​ ನೀಡುತ್ತಾನೆ. ಬಳಿಕ ಇಬ್ಬರು ಫೋನ್​ ಮೂಲಕ ಮಾತನಾಡಲು ಆರಂಭಿಸುತ್ತಾರೆ. ಕ್ರಮೇಣ ಪ್ರೀತಿಯಲ್ಲಿ ಬೀಳುತ್ತಾರೆ. ಇದಿಷ್ಟು ದೃಶ್ಯ ವಿಡಿಯೋದಲ್ಲಿದೆ.

ರಸ್ತೆ ಹೊಂಡಗಳ ನಡುವೆ Pre Wedding Photoshoot: ವೈರಲ್ ಆದ್ಲು ಕೇರಳದ ವಧು

ಇದು ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಜನರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಟ್ವಿಟರ್​ನಲ್ಲಿ ನಾನು ನೋಡಿದ ಉತ್ತಮ ಫೋಟೋಗಳಿವು ಎಂದು ಒಬ್ಬರು ಪ್ರಶಂಸಿದ್ದಾರೆ. ಇನ್ನೊಬ್ಬರು ಈ ವಿಡಿಯೋವನ್ನು ಆಸ್ಕರ್​ಗೆ ಆಯ್ಕೆ (Selection) ಮಾಡಬೇಕೆಂದು ತಮಾಷೆಯಾಗಿ ಹೇಳಿದ್ದಾರೆ. ಮತ್ತೊಬ್ಬರು ಜನರು ಫೋಟೋಶೂಟ್ ಡಿಫರೆಂಟ್ ಮಾಡಬೇಕೆಂದು ಇಂಥಾ ರಿಸ್ಕ್ ತೆಗೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.

Scroll to load tweet…