ನ್ಯೂಲಿ ವೆಡ್‌ ಕಪಲ್‌ ಹನಿಮೂನ್‌ಗಾಗಿ ಕಾತುರದಿಂದ ಕಾಯ್ತಿರ್ತಾರೆ. ಇದು ನೂತನ ಜೋಡಿ ಪರಸ್ಪರ ಅರ್ಥ ಮಾಡಿಕೊಳ್ಳಲು ಸೂಕ್ತ ಸಮಯವಾಗಿರುತ್ತದೆ. ಆದ್ರೆ ಇಲ್ಲೊಬ್ಬ ವರ ಮಾತ್ರ ಹನಿಮೂನ್‌ ದಿನ ರಾತ್ರಿ ಪಕ್ಕದ ಮನೆಯಲ್ಲಿ ಬಚ್ಚಿಟ್ಕೊಂಡಿದ್ದ. ಅದ್ಯಾಕೆ ?

ಮದುವೆಯ ಮೊದಲ ರಾತ್ರಿ ಎಲ್ಲರಿಗೂ ವಿಶೇಷವಾಗಿರುತ್ತದೆ. ಮದುವೆಯಂತೆ ಮೊದಲ ರಾತ್ರಿ ಕೂಡ ಸದಾ ನೆನಪಿಟ್ಟುಕೊಳ್ಳುವಂತೆ ಇರಬೇಕೆಂದು ಎಲ್ಲರೂ ಬಯಸ್ತಾರೆ. ಇದೇ ಕಾರಣಕ್ಕೆ ಕೆಲವರು ಹೋಟೆಲ್ ನಲ್ಲಿ ಮತ್ತೆ ಕೆಲವರು ತಮ್ಮಿಷ್ಟದ ಜಾಗದಲ್ಲಿ ಮೊದಲ ರಾತ್ರಿಗೆ ವ್ಯವಸ್ಥೆ ಮಾಡ್ತಾರೆ. ಹಾಗೆಯೇ ಮದುವೆಯಾದ ಮೇಲೆ ಹನಿಮೂನ್‌ನ್ನು (Honeymoon) ಎಂಜಾಯ್ ಮಾಡಲು ಪ್ರತಿ ದಂಪತಿಯೂ ಇಷ್ಟಪಡುತ್ತಾರೆ. ಇದಕ್ಕಾಗಿ ಸ್ಪೆಷಲ್ ಡ್ರೆಸ್, ಡೆಕೊರೇಷನ್, ಡೆಸ್ಟಿನೇಶನ್‌ ಎಲ್ಲವನ್ನೂ ಸಿದ್ಧಪಡಿಸುತ್ತಾರೆ. ಯಾಕೆಂದರೆ ಇದು ತಮ್ಮ ಸಂಗಾತಿಯೊಂದಿಗೆ ಏಕಾಂತದಲ್ಲಿ ಸಮಯ ಕಳೆಯಲು ಉತ್ತಮ ಸಮಯವಾಗಿರುತ್ತೆ. ಆದ್ರೆ ಇಲ್ಲೊಬ್ಬ ವರ (Groom) ಮಾತ್ರ ಹನಿಮೂನ್‌ ದಿನ ಖುಷಿಯಾಗಿರುವುದು ಬಿಟ್ಟು ಪಕ್ಕದ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ. ಅದಕ್ಕೇನು ಕಾರಣ ಗೊತ್ತಾ ?

Add Asianetnews Kannada as a Preferred SourcegooglePreferred

ನಾಚಿಕೆಯಾಯಿತು ಎಂದು ಹನಿಮೂನ್ ದಿನ ಬಚ್ಚಿಟ್ಟುಕೊಂಡನಂತೆ ವರ
ವಧು ವರರಿಗೆ ಹನಿಮೂನ್ ಅನ್ನೋದು ಸುಂದರ ಕ್ಷಣವಾಗಿರುತ್ತದೆ. ಈ ಸಂದರ್ಭ ಪರಸ್ಪರ ಜೊತೆಯಲ್ಲೇ ಸಮಯ ಕಳೆದು ಅರ್ಥ ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದೆಡೆ ಆಶ್ಚರ್ಯ ಪಡುವಂತ ಘಟನೆ ನಡೆದಿದೆ. ಹನಿಮೂನ್ ರಾತ್ರಿಯಂದು ವಧು (Bride) ಕಾಯುತ್ತಾ ಕುಳಿತಿದ್ದರೆ, ವರ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪಕ್ಕದ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾನೆ. ಎಲ್ಲರೂ ಸ್ನೇಹಿತರಿಗೆ, ಕುಟುಂಬಸ್ಥರಿಗೆ ಕರೆ ಮಾಡಿ ಹೈರಾಣಾಗಿದ್ದಾರೆ. ಕೊನೆಗೆ ವರ ಪಕ್ಕದ ಮನೆಯಲ್ಲಿ (Neightbour) ಬಚ್ಚಿಟ್ಟುಕೊಂಡಿದ್ದಾನೆ ಅನ್ನೋ ವಿಷಯ ತಿಳಿದುಬಂತು.

Honeymoon Tips: ಮೊದಲೇ ಈ ವಿಷ್ಯ ತಿಳ್ಕೊಂಡ್ರೆ ಹನಿಮೂನ್ ವೇಸ್ಟ್ ಆಗಲ್ಲ

ಹುಡುಗಿ ಸಹ ಗಂಟೆಗಟ್ಟಲೆ ಕಾದು ಸುಸ್ತಾಗಿದ್ದಳು. ಮನೆ ಮಂದಿ ಸಹ ವರನನ್ನು ಹುಡುಕಿ ಹುಡುಕಿ ಹೈರಾಣಾಗಿದ್ದರು. ಕೊನೆಗೂ ವರ ಸಿಕ್ಕಿದ ಕಾರಣ ಸಮಾಧಾನವಾಗಿದೆ. ಜೊತೆಗೆ ಯಾಕೆ ಆತ ಹಾಗೆ ಮಾಡಿದ ಎಂಬುದು ಎಲ್ಲರಲ್ಲೂ ಗೊಂದಲ ಮೂಡಿಸಿದೆ. ಈ ವೇಳೆ ಪೋಷಕರು (Parents) ಹುಡುಗನ ಬಳಿಕ ಯಾಕೆ ಹೀಗೆ ಹನಿಮೂನ್ ದಿನ ಓಡಿ ಹೋಗಿದ್ದೆಂದು ಪ್ರಶ್ನಿಸಿದ್ದಾರೆ. ಅದಕ್ಕೆ ವರ ನನಗೆ ತುಂಬಾ ನಾಚಿಕೆ (Shy)ಯಾಯಿತು. ಮುಜುಗರದಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಿದೆ ಎಂದಿದ್ದಾನೆ 

ಹನಿಮೂನ್ ವೇಳೆ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಓಡಿ ಹೋದ ಹೆಂಡ್ತಿ
ಮದ್ವೆಯಾಗಿ ಹನಿಮೂನ್‌ಗೆ ಹೋದ ಸಂದರ್ಭದಲ್ಲಿ ಹೆಂಡತಿ, ಗಂಡನಿಗೆ (Groom) ಮತ್ತು ಬರುವ ಔಷಧಿ (Medicine) ನೀಡಿ ಪ್ರಿಯಕರನ ಜೊತೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿತ್ತು.ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿಗಢದ ಗುರುದ್ವಾರ ರಸ್ತೆಯ ನಿವಾಸಿ ಸತ್ಯಂ ಎಂಬವರು ಆಗ್ರಾ ಕ್ಯಾಂಟ್ ನಿವಾಸಿ ದೀಪಾಸಿ ಅವರನ್ನು ನವೆಂಬರ್‌ನಲ್ಲಿ ವಿವಾಹವಾಗಿದ್ದರು. ದಂಪತಿಗಳು (Couple) ಕೆಲ ವಾರಗಳ ಜೊತೆಯಾಗಿ ಖುಷಿಯಾಗಿಯೇ ಇದ್ದರು. ಮದುವೆಯಾದ ಹೊಸತರಲ್ಲಿ ನೆಂಟರಿಷ್ಟರ ಮನೆಗೆ ಜೊತೆಯಾಗಿಯೇ ಹೋಗಿ ಬಂದಿದ್ದರು. ಆ ನಂತರ ನವವಿವಾಹಿತ ದಂಪತಿಗಳು (Married couple) ಡಿಸೆಂಬರ್ ನಲ್ಲಿ ಹನಿಮೂನ್‌ಗೆ ಬುಕ್ ಮಾಡಿದ್ದರು.

Honeymoon ಮುಗಿದ್ಮೇಲೆ ಹೆಂಡ್ತಿ ವಿಚಿತ್ರವಾಗಿ ಆಡ್ತಾಳಂತೆ, ಡಿವೋರ್ಸ್ ಕೊಡ್ಲಾ ಕೇಳ್ತಿದ್ದಾನೆ ಇವನು!

ಈ ನಡುವೆ ಹೋಟೆಲ್ ನಲ್ಲಿ ಚಹಾ ಕುಡಿದ ಬಳಿಕ ಸತ್ಯಂ ಪ್ರಜ್ಞೆ ಕಳೆದುಕೊಂಡ ಎನ್ನಲಾಗಿದೆ. ಆಗ ದೀಪಾಸಿ ತನ್ನ ಸಾಮಾನು ಸರಂಜಾಮುಗಳನ್ನು ಪ್ಯಾಕ್ ಮಾಡಿ ಬ್ಯಾಗ್ ಮತ್ತು ಹಣದೊಂದಿಗೆ ಹೋಟೆಲ್ ನಿಂದ ಓಡಿ ಹೋಗಿದ್ದಾಳೆ. ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಸತ್ಯಂಗೆ ಪ್ರಜ್ಞೆ ಮರಳಿದಾಗ ದೀಪಾಸಿ ರೂಮಿನಲ್ಲಿ ಇಲ್ಲದ್ದನ್ನು ತಿಳಿದು ಗಾಬರಿಯಾದರು. ಹೋಟೆಲ್ ಸಿಬ್ಬಂದಿಯ ಬಳಿ ಪತ್ನಿಯ ಬಗ್ಗೆ ವಿಚಾರಿಸಿದಾಗ, ಅವರು ಸಂಜೆ ಏಳು ಗಂಟೆ ಸುಮಾರಿಗೆ ದೀಪಾಸಿ ಹೋಲ್‌ನಿಂದ ಹೊರಗೆ ಹೋಗಿದ್ದಾಳೆ ಎಂಬುದನ್ನು ತಿಳಿಸಿದ್ದಾರೆ.