Asianet Suvarna News Asianet Suvarna News

Honeymoon Tips: ಮೊದಲೇ ಈ ವಿಷ್ಯ ತಿಳ್ಕೊಂಡ್ರೆ ಹನಿಮೂನ್ ವೇಸ್ಟ್ ಆಗಲ್ಲ

ಹನಿಮೂನ್ ಜೀವನ ಪರ್ಯಂತ ನೆನಪಿರುವಂತಹದ್ದು. ಸಂಗಾತಿ ಪರಸ್ಪರ ಅರಿಯಲು ಸಿಗುವ ಉತ್ತಮ ಸಮಯವಿದು. ಇದು ವ್ಯರ್ಥವಾದ್ರೆ ಬೇಸರವಾಗೋದು ಸಹಜ. ಹನಿಮೂನ್ ಪ್ರಣಯ ಜೋರಾಗಿರ್ಬೇಕೆಂದ್ರೆ ಕೆಲ ಟಿಪ್ಸ್ ತಿಳಿದಿರಬೇಕು. 
 

Knew Before Planning Our Honeymoon
Author
First Published Dec 17, 2022, 3:03 PM IST

ನವದಂಪತಿಗೆ ಹನಿಮೂನ್ ಹೆಸರು ಕೇಳ್ತಿದ್ದಂತೆ ಮನಸ್ಸು ಅರಳುತ್ತದೆ. ಸಂಗಾತಿ ಜೊತೆ ಸುಂದರ ಸಮಯ ಕಳೆಯುವ ಅವಕಾಶ ಹನಿಮೂನ್ ನಲ್ಲಿ ಸಿಗುತ್ತದೆ. ಹನಿಮೂನ್ ಯಾವಾಗ್ಲೂ ಮಧುರವಾಗಿರಬೇಕು, ಸದಾ ಅದರ ನೆನಪಿರಬೇಕೆಂದು ಎಲ್ಲರೂ ಬಯಸ್ತಾರೆ. ಇದೇ ಕಾರಣಕ್ಕೆ ತಮಗಿಷ್ಟದ ಹನಿಮೂನ್ ಪ್ಲೇಸ್ ಆಯ್ಕೆ ಮಾಡಿಕೊಳ್ತಾರೆ. ಹನಿಮೂನ್ (Honeymoon) ಎಂದಾಗ ಸಾಮಾನ್ಯವಾಗಿ ಎಲ್ಲರೂ ಅಂದುಕೊಳ್ಳೋದು ಕುಟುಂಬದಿಂದ ದೂರವಾಗಿ, ಸಂಗಾತಿ ಜೊತೆ ರೋಮ್ಯಾನ್ಸ್ (Romance) ಮಾಡ್ತಾ ಸುಂದರ ಕ್ಷಣಗಳನ್ನು ಕಳೆಯೋದು ಎಂದು. ಹನಿಮೂನ್ ಪ್ರಣಯ ಮತ್ತು ಉತ್ಸಾಹದಿಂದ ತುಂಬಿರುತ್ತದೆ ಎಂದು ಎಲ್ಲರೂ ಭಾವಿಸ್ತಾರೆ. ಇದು ನೂರಕ್ಕೆ ನೂರು ಸತ್ಯ. ಆದ್ರೆ ಅನೇಕ ಬಾರಿ ನಾವು ಅಂದುಕೊಂಡಂತೆ ಮಧುಚಂದ್ರ ಇರೋದಿಲ್ಲ. ಸಣ್ಣ ಪುಟ್ಟ ಸಮಸ್ಯೆಯಿಂದ ಹಿಡಿದು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. 

ಹನಿಮೂನ್ ಗೆ ತೆರಳುವ ಮೊದಲು ನಾವು ಕೆಲ ಸಂಗತಿಯನ್ನು ತಿಳಿದಿರಬೇಕು. ಸ್ನೇಹಿತರು ಅಥವಾ ಕುಟುಂಬಸ್ಥರು ಹನಿಮೂನ್ ಎಂಜಾಯ್ ಮಾಡಿ ಎಂದಷ್ಟೆ ಹೇಳ್ತಾರೆ ವಿನಃ ಹನಿಮೂನ್ ಪ್ಲಾನ್ ಬಗ್ಗೆ ಹೇಳೋದಿಲ್ಲ. ನಿಮ್ಮ ಹನಿಮೂನ್ ದಿ ಬೆಸ್ಟ್ ಆಗಿರಬೇಕು ಅಂದ್ರೆ ನೀವು ಮೊದಲೇ ಯೋಜನೆ (Plan) ರೂಪಿಸೋದು ಬಹಳ ಮುಖ್ಯ. ಆಗ ನಿಮ್ಮಿಬ್ಬರ ಮಧ್ಯೆ ಯಾವುದೇ ಸಮಸ್ಯೆ ಬರೋದಿಲ್ಲ. ನಾವಿಂದು ಹನಿಮೂನ್ ಗೆ ಹೋಗುವ ಮೊದಲು ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.

ಮೊದಲನೇಯದಾಗಿ ಪ್ಲಾನ್ ಮುಖ್ಯ: ಮದುವೆ (Marriage) ಫಿಕ್ಸ್ ಆಗಿದೆ ಎಂದಾಗ್ಲೇ ನೀವು ಹನಿಮೂನ್ ಗೆ ಪ್ಲಾನ್ ಮಾಡಲು ಶುರು ಮಾಡಬಹುದು. ಸ್ಥಳದ ಬಗ್ಗೆ ಇಂಟರ್ ನೆಟ್ ಮೂಲಕ ಮಾಹಿತಿ ಪಡೆಯಿರಿ. ಅಲ್ಲಿನ ವಾತಾವರಣ ಹೇಗಿದೆ ಎಂಬುದನ್ನು ತಿಳಿದಿರಿ. ಅಲ್ಲಿ ಚಳಿಯಿದ್ದು, ನೀವು ಬೇಸಿಗೆ ಬಟ್ಟೆ ಪ್ಯಾಕ್ ಮಾಡಿದ್ರೆ ಸಮಸ್ಯೆಯಾಗುತ್ತದೆ. ಆತುರದಲ್ಲಿ ನೀವು ಪ್ಲಾನ್ ಮಾಡಿದಾಗ ಅಲ್ಲಿ ಸರಿಯಾಗಿ ರೂಮ್ ಸಿಗೋದಿಲ್ಲ. ಹನಿಮೂನ್ ನಲ್ಲಿ ಒಂದೊಂದೇ ಸಮಸ್ಯೆ ಕಾಡಿದಾಗ ಸಂಗಾತಿ ಜೊತೆ ಉತ್ತಮ ಸಮಯ ಕಳೆಯಲು ಸಾಧ್ಯವಾಗೋದಿಲ್ಲ. 

Cancer ಮಹಿಳೆ ಮನವೊಲಿಸುವುದು ಇಷ್ಟು ಸುಲಭನಾ!!

ಟಿಕೆಟ್ ಬುಕ್ಕಿಂಗ್ ಮುಖ್ಯ: ಯಾವ ಸ್ಥಳಕ್ಕೆ ಹೋಗಬೇಕೆಂದು ನೀವು ಯೋಚಿಸಿರುತ್ತೀರೋ ಆ ಸ್ಥಳಕ್ಕೆ ಹೋಗಲು ಎಷ್ಟು ಹಣ ಬೇಕು ಎಂಬುದನ್ನು ನೋಡಿ. ಮೊದಲೇ ಟಿಕೆಟ್ ಬುಕ್ ಮಾಡಿ. ನೀವು ಎರಡು ತಿಂಗಳ ಮೊದಲೇ ಟಿಕೆಟ್ ಬುಕ್ ಮಾಡಿದ್ರೆ ಟಿಕೆಟ್ ದರ ಕಡಿಮೆಯಿರುತ್ತದೆ. ಆತುರದಲ್ಲಿ ಪ್ಲಾನ್ ಮಾಡಿದ್ರೆ ಎಲ್ಲವೂ ಯಡವಟ್ಟಾಗುತ್ತದೆ. ಟಿಕೆಟ್ ಗೆ ವಿನಾಃ ಕಾರಣ ಹಣ ಸುರಿಯಬೇಕು. ಇದನ್ನು ಅನೇಕ ದಂಪತಿ ನಿರ್ಲಕ್ಷ್ಯ ಮಾಡ್ತಾರೆ.  

ನಿಮ್ಮ ಜೊತೆಗಿರಲಿ ಸಂಗಾತಿ: ಹನಿಮೂನ್ ಗೆ ನೀವೊಬ್ಬರೇ ಹೋಗ್ತಿಲ್ಲ. ಜೊತೆಗೆ ಸಂಗಾತಿ ಬರ್ತಿರುವ ಕಾರಣ ನಿಮ್ಮ ಪ್ಲಾನ್ ನಲ್ಲಿ ಅವರನ್ನು ಸೇರಿಸಿ. ಅವರಿಗೊಂದಿಷ್ಟು ಕೆಲಸ ನೀಡಿ. ಏನು ಮಾಡ್ಬೇಕು, ಏನು ಮಾಡಬಾರದು ಎಂಬುದನ್ನು ಮುಕ್ತವಾಗಿ ಚರ್ಚಿಸಿ. ಹನಿಮೂನ್ ಸ್ಥಳಕ್ಕೆ ಹೋದ್ಮೇಲೆ ಅನವಶ್ಯಕ ಚರ್ಚೆಗಳಿಗೆ ಆಸ್ಪದ ನೀಡಬೇಡಿ. 

Dream Meaning: ಬಾಯ್ ಫ್ರೆಂಡ್ ಸತ್ತ ಕನಸು ಬಿದ್ರೆ ಟೆನ್ಷನ್ ಬೇಡ

ನಿಮ್ಮಿಷ್ಟ ಪೂರೈಸಿಕೊಳ್ಳಿ: ಕೆಲವರು ಪ್ಯಾಕೇಜ್ ಟೂರ್ ನಲ್ಲಿ ಹನಿಮೂನ್ ಗೆ ಹೋಗುವ ಪ್ಲಾನ್ ಮಾಡ್ತಾರೆ. ಟ್ರಾವೆಲ್ ಏಜೆನ್ಸಿ ಹೇಳಿದ ಅಥವಾ ತೋರಿಸಿದ ಸ್ಥಳವನ್ನು ಮಾತ್ರ ನೋಡಿ ಬರ್ತಾರೆ. ಹಣಕೊಟ್ಟು ಹೋಗಿರುವ ನೀವು ಅಲ್ಲಿನ ಸ್ಥಳದ ಬಗ್ಗೆ ತಿಳಿದಿರಿ. ಸಂಗಾತಿ ಜೊತೆ ಅದನ್ನು ಕೂಡ ನೋಡಿ ಎಂಜಾಯ್ ಮಾಡಿ. ಬರೀ ಏಜೆನ್ಸಿ ಮಾಡಿದ ಪ್ಲಾನ್ ಗೆ ಅಂಟಿಕೊಳ್ಳಬೇಡಿ.

ಹಣದ ಬಗ್ಗೆ ಇರಲಿ ಗಮನ: ಹನಿಮೂನ್ ಗೆ ಇದ್ದಷ್ಟು ಹಣ ಸುರಿಯಬೇಕಾಗಿಲ್ಲ. ನೀವು ಮೊದಲೇ ಖರ್ಚಿನ ಪ್ಲಾನ್ ಮಾಡಿ ಹೋಗೋದು ಒಳ್ಳೆಯದು. ಅನೇಕರಿಗೆ ಹನಿಮೂನ್ ಮುಗಿಸಿ ಬರುವಷ್ಟರಲ್ಲಿ ಖಾತೆ ಖಾಲಿಯಾಗಿರುತ್ತದೆ. ಇದು ಮುಂದೆ ಸಮಸ್ಯೆ ತರುತ್ತದೆ. ಅನವಶ್ಯಕ ಖರ್ಚುಗಳನ್ನು ನೀವು ತಪ್ಪಿಸಬೇಕು. 

Follow Us:
Download App:
  • android
  • ios