Asianet Suvarna News Asianet Suvarna News

ಭಾರತದಲ್ಲಿ ಹೆಚ್ಚಾಗ್ತಿದೆ Green Dating ! ಏನಿದು ಟ್ರೆಂಡ್?

ಪರಿಸರದ ಬಗ್ಗೆ ಜನರಲ್ಲಿ ಕಾಳಜಿ ಹೆಚ್ಚಾಗ್ತಿದೆ. ಅನೇಕರು ಪರಿಸರ ರಕ್ಷಣೆಗೆ ಮುಂದಾಗ್ತಿದ್ದಾರೆ. ಪ್ರೀತಿ ಜೊತೆ ಪರಿಸರ ಕಾಳಜಿ ಸೇರಿದ್ರೆ ಅದರ ಫಲಿತಾಂಶ ದುಪ್ಪಟ್ಟಾಗುತ್ತೆ. ಹಾಗಾಗಿಯೇ ಜನರು ಗ್ರೀನ್ ಡೇಟಿಂಗ್ ಗೆ ಆಸಕ್ತಿ ತೋರುತ್ತಿದ್ದಾರೆ.
 

Green dating becomes trend in India what is it
Author
Bangalore, First Published Jun 8, 2022, 4:56 PM IST

ವಿಶ್ವ ಪರಿಸರ ದಿನ (World Environment Day ) ಕೇವಲ ಜೂನ್ 5ಕ್ಕೆ ಮಾತ್ರ ಸೀಮಿತವಾಗಿರಬಾರದು. ಪ್ರತಿ ದಿನವೂ ಪರಿಸರ ರಕ್ಷಣೆಗೆ ಮಹತ್ವ ನೀಡ್ಬೇಕು. ಬಾಯಿಯಲ್ಲಿ ಹೇಳಿದ್ರೆ ಸಾಲದು, ಅದನ್ನು ಕಾರ್ಯರೂಪಕ್ಕೆ ತರಬೇಕು. ಪರಿಸರ ರಕ್ಷಣೆ ಮನೆ, ಮನಗಳಲ್ಲಿ ಆದ್ರೆ ಮಾತ್ರ ಪರಿಸರ ನಾಶವನ್ನು ತಪ್ಪಿಸಬಹುದು. ಇದಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರೇಮಿಗಳು ಕೈ ಜೋಡಿಸಿರೋದು ವಿಶೇಷ. ಜೂನ್ 5ರಂದು ನಡೆದ ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಅನೇಕ ಜೋಡಿ ಇದಕ್ಕೆ ಮಹತ್ವ ನೀಡಿದ್ದಾರೆ. ಈ ಮೂಲಕ ಗ್ರೀನ್ ಡೇಟಿಂಗ್ (Green Dating) ಗೆ ಒತ್ತು ನೀಡ್ತಿದ್ದಾರೆ. ನೀವೂ ಕೂಡ ಗ್ರೀನ್ ಡೇಟಿಂಗ್ ಶುರು ಮಾಡ್ಬಹುದು. ಇದು ನಿಮ್ಮಿಬ್ಬರ ಬಂಧವನ್ನು ಗಟ್ಟಿಗೊಳಿಸುವ ಜೊತೆಗೆ ಪರಿಸರ ರಕ್ಷಣೆಗೆ ದಾರಿ ಮಾಡಿಕೊಡುತ್ತದೆ. 

ಗ್ರೀನ್ ಡೇಟಿಂಗ್ ಅಂದ್ರೇನು ? : ಆನ್ಲೈನ್ ಡೇಟಿಂಗ್ ಹೇಗೆ ಹೆಚ್ಚಾಗಿದೆಯೋ ಗ್ರೀನ್ ಡೇಟಿಂಗ್ ಕೂಡ ಪ್ರಸಿದ್ಧಿ ಪಡೆಯುತ್ತಿದೆ. ಡೇಟಿಂಗ್ ಜೊತೆ ಪರಿಸರ ರಕ್ಷಣೆಗೆ ಮಹತ್ವ ನೀಡುವುದೇ ಇದರ ಉದ್ದೇಶ. ಜೋಡಿ, ಪರಿಸರಕ್ಕೆ ಹಾನಿಯಾಗುವ ವಸ್ತುಗಳ ಬಳಕೆಯನ್ನು ನಿಷೇಧಿಸುವುದು, ಪಾರ್ಕ್ ಸೇರಿದಂತೆ ಮರ – ಗಿಡಗಳಿರುವ ಪ್ರದೇಶದಲ್ಲಿ ಸುತ್ತಾಡಿ, ಅದ್ರ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದು, ಪರಿಸರ ರಕ್ಷಿಸುವ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡುವುದು, ಒಟ್ಟಿಗೆ ಸೇರಿ ಗಿಡಗಳನ್ನು ಬೆಳೆಸುವುದು ಇವೆಲ್ಲವೂ ಗ್ರೀನ್ ಡೇಟಿಂಗ್. ನೀವೂ ಗ್ರೀನ್ ಡೇಟಿಂಗ್ ಪ್ಲಾನ್ ನಲ್ಲಿದ್ದರೆ ನಾವು ನಿಮಗೊಂದಿಷ್ಟು ಸಲಹೆ ನೀಡ್ತೇವೆ. ಅದನ್ನು ಪಾಲಿಸುವ ಮೂಲಕ ನೀವೂ ಪರಿಸರಕ್ಕೆ ಒಂದಿಷ್ಟು ಕೊಡುಗೆ ನೀಡ್ಬಹುದು.

ಉಡುಗೊರೆ (Gift) : ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದರ ಮಹತ್ವವನ್ನು ನಿಮ್ಮ ಸಂಗಾತಿಗೆ ನೀವು ತಿಳಿಸಬೇಕಿದೆ. ಈ ದಿನಗಳಲ್ಲಿ ಅನೇಕ ದಂಪತಿ ತಮ್ಮ ಸಂಗಾತಿಗೆ ಮರುಬಳಕೆ ಮಾಡಬಹುದಾದ ಕಾಫಿ ಮಗ್‌ಗಳು, ಚೀಲಗಳು ಅಥವಾ ಒಳಾಂಗಣ ಸಸ್ಯಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಏಕೆಂದರೆ ಇದು ಅವರಲ್ಲಿ ಪರಿಸರವಾದವನ್ನು ಹೆಚ್ಚಿಸುವುದಲ್ಲದೆ ಆ ಮಾರ್ಗವನ್ನು ಅನುಸರಿಸಲು ಪ್ರೋತ್ಸಾಹಿಸುತ್ತದೆ. ನೀವೂ ಕೂಡ ನಿಮ್ಮ ಸಂಗಾತಿಗೆ ಉಡುಗೊರೆ ರೂಪದಲ್ಲಿ ಪರಿಸರ ರಕ್ಷಣೆ ವಸ್ತುಗಳನ್ನು ನೀಡಬಹುದು. 

ಪಿಕ್ನಿಕ್ (Picnic) : ಪ್ರೇಮಿಗಳು ರೆಸ್ಟೋರೆಂಟ್, ಕೆಫೆಯಲ್ಲಿ ಕುಳಿತುಕೊಳ್ತಾರೆ. ಅದರ ಬದಲು ಉದ್ಯಾನವನದಲ್ಲಿ ಕುಳಿತುಕೊಳ್ಳಬಹುದು. ಸ್ನೇಹಿತರ ಜೊತೆಯೂ ನೀವು ಪಾರ್ಕ್ ಗೆ ಪಿಕ್ನಿಕ್ ಪ್ಲಾನ್ ಮಾಡಬಹುದು. ಇದು ಪರಿಸರ ಜಾಗೃತಿ ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ. ಪಿಕ್ನಿಕ್ ವೇಳೆ ನೀವು ಕೆಲ ಪರಿಸರ ರಕ್ಷಣೆ ವಿಧಾನಗಳನ್ನು ತಿಳಿಬಹುದು. ಹಾಗೆ ಜೈವಿಕ ವಿಘಟನೀಯ ಕಪ್‌ಗಳು ಮತ್ತು ಪ್ಲೇಟ್‌ಗಳನ್ನು ಸಹ ಬಳಸಬಹುದು. ನಿಮ್ಮ ಈ ಕೆಲಸ ನಿಮ್ಮ ಸ್ನೇಹಿತರನ್ನು ಅರಿವಿಲ್ಲದೆ ಸೆಳೆಯುತ್ತದೆ.

Parenting Tips: ಸೊಳ್ಳೆ ಕಚ್ಚಿಸ್ಕೊಂಡು ಮಗು ಅಳ್ತಿದ್ರೆ ಇಲ್ಲಿವೆ ಟಿಪ್ಸ್

ರೋಮ್ಯಾಂಟಿಕ್ ವಾಕ್ ಮತ್ತು ಸೈಕ್ಲಿಂಗ್ : ಜನರ ವಾಕಿಂಗ್ ಆಸಕ್ತಿ ಹೆಚ್ಚಾಗಿದೆ. ಅನೇಕರು ಸೈಕ್ಲಿಂಗ್ ಮಾಡಲು ಇಷ್ಟಪಡುತ್ತಾರೆ. ಇದು ಸುಂದರವಾದ ನೋಟವನ್ನು ಆನಂದಿಸಲು ಮತ್ತು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಕಾರಿನ ಪ್ರಯಾಣ, ಟ್ರಾಫಿಕ್ ಕಿರಿಕಿರಿಯುಂಟು ಆಡುತ್ತದೆ. ಅದರ ಬದಲು ನೀವೂ ಸಂಗಾತಿ ಜೊತೆ ಸೈಕಲ್ ನಲ್ಲಿ ಡೇಟಿಂಗ್ ಗೆ ಹೋಗ್ಬಹುದು. ಇದು ರೋಮ್ಯಾಂಟಿಕ್ ಆಗಿರುತ್ತದೆ. ಇದು ನಿಮ್ಮ ಜೀವನಶೈಲಿಯನ್ನು ಬದಲಾಯಿಸುವುದಲ್ಲದೆ, ಮೊದಲಿಗಿಂತ ಹೆಚ್ಚು ಕ್ರಿಯಾಶೀಲರಾಗುವಂತೆ ಮಾಡುತ್ತದೆ. ನಿಮ್ಮ ಈ ಸ್ಟೈಲ್ ಸಂಗಾತಿಯನ್ನು ಖಂಡಿತವಾಗಿ ಸೆಳೆಯುತ್ತದೆ.

ಹೋಟೆಲ್‌ಗೆ ಬಾ ಎಂದ ಪೊಲೀಸ್, ಚಾಟ್ ಮಾಡಿದ್ದು ಹೆಂಡ್ತಿ ಅಂತಾ ಗೊತ್ತಾದಾಗ ಶಾಕ್!

ಪರಿಸರದ ಬಗ್ಗೆ ಹೆಚ್ಚಾಗ್ತಿದೆ ಕಾಳಜಿ : ಅನೇಕ ಜನರು ಮನೆಯಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡಲು ಇಷ್ಟಪಡ್ತಿದ್ದಾರೆ. ಅದಕ್ಕಾಗಿ ತಮ್ಮ ಸಂಗಾತಿಯನ್ನು  ಪ್ರೇರೇಪಿಸುತ್ತಿದ್ದಾರೆ. ಫ್ಲಾಟ್ ಖರೀದಿ ಪ್ಲಾನ್ ನಲ್ಲಿರುವ ಜನರು, ಮನೆ ಸುತ್ತ ಮರ – ಗಿಡವಿದ್ಯಾ ಎಂದು ನೋಡ್ತಾರೆ. ಹಸಿರಿರುವ ಜಾಗವನ್ನು ಹೆಚ್ಚು ಇಷ್ಟಪಡ್ತಾರೆ. ನೀವು ಕೂಡ ಇದೆಲ್ಲದಕ್ಕೂ ಆದ್ಯತೆ ನೀಡುವ ಮೂಲಕ ಗ್ರೀನ್ ಡೇಟಿಂಗ್ ಶುರು ಮಾಡ್ಬಹುದು. 

Follow Us:
Download App:
  • android
  • ios