Parenting Tips: ಸೊಳ್ಳೆ ಕಚ್ಚಿಸ್ಕೊಂಡು ಮಗು ಅಳ್ತಿದ್ರೆ ಇಲ್ಲಿವೆ ಟಿಪ್ಸ್
ಇಡೀ ದಿನ ಸೊಳ್ಳೆ ಬ್ಯಾಟ್ ಹಿಡಿದ್ಕೊಂಡು ನಿಂತ್ರೂ ಸೊಳ್ಳೆ ಓಡಿಸೋದು ಕಷ್ಟ. ಗೊತ್ತಿಲ್ಲದೆ ಬಂದು ಮಗುವಿಗೆ ಕಚ್ಚಿ ಹೋಗುವ ಸೊಳ್ಳೆ, ಕೀಟದ ಕಾಟಕ್ಕೆ ಪಾಲಕರು ಬೇಸತ್ತಿರುತ್ತಾರೆ. ಸೊಳ್ಳೆ ಕಚ್ಚಿದ್ಮೇಲೆ ಗುಳ್ಳೆಯಾಗಿ ದೊಡ್ಡ ಸಮಸ್ಯೆಯಾಗುತ್ತದೆ. ಅದಕ್ಕೆ ಇಲ್ಲಿದೆ ಪರಿಹಾರ.
ಬೇಸಿಗೆ (Summer) ಮುಗಿದು ಮಳೆ (Rain) ಗಾಲ ಶುರುವಾಗ್ತಿದ್ದಂತೆ ಸೊಳ್ಳೆ (Mosquito), ಕೀಟಗಳ ಕಾಟ ಶುರುವಾಗುತ್ತದೆ. ಎಷ್ಟೇ ಎಚ್ಚರಿಕೆ ವಹಿಸಿದ್ರೂ, ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿದ್ರೂ ಅವುಗಳನ್ನು ತಡೆಯೋದು ಕಷ್ಟ. ಮಾರುಕಟ್ಟೆಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಅನೇಕ ಕೆಮಿಕಲ್ ಗಳು ಲಭ್ಯವಿದೆ. ಆದ್ರೆ ಅದು ಆರೋಗ್ಯದ ಮೇಲೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಸಂಜೆ ಸಮಯದಲ್ಲಿ ಸೊಳ್ಳೆಗಳ ಕಾಟ ಹೆಚ್ಚು. ದೊಡ್ಡವರು ಹಾಗೂ ಸ್ವಲ್ಪ ದೊಡ್ಡ ಮಕ್ಕಳು ಸೊಳ್ಳೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಯತ್ನ ನಡೆಸ್ತಾರೆ. ಆದ್ರೆ ಎರಡುವರೆ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೊಳ್ಳೆ ಅಥವಾ ಕೀಟ ಕಚ್ಚಿದ್ದು ಗೊತ್ತಾಗೋದಿಲ್ಲ. ನೋವಾದಾಗ್ಲೇ ಅವು ಅಳಲು ಶುರು ಮಾಡ್ತವೆ. ಮಕ್ಕಳು ಅಳೋದನ್ನು ನೋಡಿ ಮನೆಯವರು ಕಂಗಾಲಾಗ್ತಾರೆ. ಮಗುವಿಗೆ ಏನಾಯ್ತು ಎಂಬುದು ಅವರಿಗೆ ತಿಳಿಯೋದಿಲ್ಲ. ಅನೇಕ ಬಾರಿ ಈ ಸೊಳ್ಳೆ ಹಾಗೂ ಕೀಟ ಕಚ್ಚಿದ ನಂತ್ರ ಮಕ್ಕಳ ಮೈಮೇಲೆ ಗುಳ್ಳೆಗಳೇಳುತ್ತವೆ. ಇದಕ್ಕೂ ಮಾರುಕಟ್ಟೆಯಲ್ಲಿ ಸಾಕಷ್ಟು ಕ್ರೀಂ ಲಭ್ಯವಿದೆ. ಆದ್ರೆ ಮಕ್ಕಳ ಸ್ಕಿನ್ ತುಂಬಾ ಸೂಕ್ಷ್ಮವಾಗಿರುತ್ತದೆ. ಯಾವ ಕ್ರೀಂ ಮಕ್ಕಳ ದೇಹಕ್ಕೆ ಆಗಿ ಬರುತ್ತದೆ ಎಂಬುದನ್ನು ತಿಳಿಯುವುದು ಕಷ್ಟ. ನೀವು ಬಳಸಿದ ಕ್ರೀಂ ಮಕ್ಕಳಿಗೆ ಅಲರ್ಜಿಯಾಗ್ಬಹುದು. ಹಾಗಾಗಿ ಸೊಳ್ಳೆ ಅಥವಾ ಕೀಟ ಕಚ್ಚಿದಾಗ ಮಕ್ಕಳ ಮೈಮೇಲಾಗುವ ಗುಳ್ಳೆಯನ್ನು ಕೆಲವು ನೈಸರ್ಗಿಕ ತೈಲದ ಮೂಲಕ ಹೋಗಲಾಡಿಸಬಹುದು.
ನೈಸರ್ಗಿಕ ತೈಲ : ಲೋಷನ್ ಹಾಗೂ ಕ್ರೀಂಗಳಿಗೆ ರಾಸಾಯನಿಕಗಳನ್ನು ಬೆರೆಸಿರಲಾಗುತ್ತದೆ. ಆದ್ರೆ ನೈಸರ್ಗಿಕ ತೈಲಕ್ಕೆ ಯಾವುದೇ ರೀತಿಯ ರಾಸಾಯನಿಕವನ್ನು ಬೆರೆಸಿರೋದಿಲ್ಲ. ಸಸ್ಯದ ಎಲೆ, ಬೇರು ಅಥವಾ ಬೀಜಗಳಿಂದ ಇದನ್ನು ತಯಾರಿಸಲಾಗಿರುತ್ತದೆ. ಈ ಎಣ್ಣೆಗಳು ಸುರಕ್ಷಿತ ಹೌದು ಆದ್ರೆ ಇದನ್ನು ಬಳಸುವ ಮೊದಲು ಪ್ಯಾಚ್ ಪರೀಕ್ಷೆ ಮಾಡಿ ನಂತ್ರ ಬಳಸಿ.
ನೈಸರ್ಗಿಕ ತೈಲಗಳು ಯಾವುವು ಗೊತ್ತಾ? :
ರೋಸ್ಮರಿ ಎಣ್ಣೆ : ಇದು ನೈಸರ್ಗಿಕ ಎಣ್ಣೆಯಾಗಿದೆ. ಸೊಳ್ಳೆ ಕಚ್ಚಿದ ಜಾಗದಲ್ಲಿ ಅಥವಾ ಕೀಟ ಕಚ್ಚಿದ ಜಾಗಕ್ಕೆ ರೋಸ್ಮರಿ ಎಣ್ಣೆಯನ್ನು ಹಚ್ಚಬೇಕು. ಇದ್ರಿಂದ ನೋವು ಕಡಿಮೆಯಾಗುತ್ತದೆ. ಹಾಗೆಯೇ ಚರ್ಮ ಊದಿಕೊಳ್ಳುವುದಿಲ್ಲ.
ಲ್ಯಾವೆಂಡರ್ ಎಣ್ಣೆ : ಲ್ಯಾವೆಂಡರ್ ವಾಸನೆ ಎಲ್ಲರನ್ನೂ ಆಕರ್ಷಿಸುತ್ತದೆ. ಇದ್ರ ಹೂವು ಹೆಚ್ಚು ಪ್ರಸಿದ್ಧಿ ಪಡೆದಿದೆ. ಲ್ಯಾವೆಂಡರ್ ಎಣ್ಣೆಯೂ ಪರಿಣಾಮಕಾರಿ. ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಈ ಲ್ಯಾವೆಂಡರ್ ಎಣ್ಣೆಯು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
ವಾಕಿಂಗ್ ಗೊತ್ತು, ಇನ್ಫಿನಿಟಿ ವಾಕಿಂಗ್ ಇನ್ನೂ ಒಳ್ಳೇದಂತೆ !
ಟೀ ಟ್ರೀ ಆಯಿಲ್ : ಟೀ ಟ್ರೀ ಎಣ್ಣೆಯನ್ನು ಮಕ್ಕಳಿಗೆ ಕೀಟ ಕಚ್ಚಿದಾಗ ಬಳಸಬಹುದು. ಟೀ ಟ್ರೀ ಎಣ್ಣೆಯಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳ ಹೊರತಾಗಿ ಆಂಟಿಫಂಗಲ್ ಗುಣಲಕ್ಷಣವಿದೆ. ಟೀ ಟ್ರೀ ಆಯಿಲ್, ಸೋಂಕನ್ನು ಬೆಳೆಯದಂತೆ ತಡೆಯುತ್ತದೆ ಮತ್ತು ತುರಿಕೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಸೊಳ್ಳೆ ಅಥವಾ ಕೀಟ ಕಚ್ಚಿದಾಗ ವಿಪರೀತ ತುರಿಕೆಯಾಗುತ್ತದೆ. ತುರಿಕೆ ಗಾಯ ಮಾಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಮಕ್ಕಳಿಗೆ ಈ ಎಣ್ಣೆಯನ್ನು ನೀವು ಬಳಸಬಹುದು.
ತುಳಸಿ ಎಣ್ಣೆ : ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ತುಳಸಿ ಎಣ್ಣೆ ಸಮೃದ್ಧವಾಗಿದೆ. ಈ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಂಡು ಸೊಳ್ಳೆ ಅಥವಾ ಕೀಟ ಕಡಿತದ ಜಾಗಕ್ಕೆ ಹಚ್ಚಿ. ಇದು ಸೋಂಕನ್ನು ತಡೆಯುವುದಲ್ಲದೆ ನೋವನ್ನು ಕಡಿಮೆ ಮಾಡುತ್ತದೆ.
ನೀವು ಆಫೀಸ್ colleague ಜೊತೆ ಡೇಟಿಂಗ್ ಮಾಡ್ತಿದೀರಾ? ಹಾಗಿದ್ರೆ ಇದನ್ನ ಓದ್ಲೇಬೇಕು
ಕರ್ಪೂರದ ಎಣ್ಣೆ : ಕೀಟ ಕಚ್ಚಿ ನೋವಾದ್ರೆ ಮಕ್ಕಳಿಗೆ ಕರ್ಪೂರದ ಎಣ್ಣೆಯನ್ನು ಕೂಡ ಬಳಸಬಹುದು. ನೇರವಾಗಿ ಕರ್ಪೂರದ ಎಣ್ಣೆಯನ್ನು ಬಳಸಬಾರದು. ತೆಂಗಿನ ಎಣ್ಣೆಗೆ ಕರ್ಪೂರದ ಎಣ್ಣೆಯನ್ನು ಎರಡು ಹನಿ ಹಾಕಿ ನಂತ್ರ ಗಾಯವಾದ ಜಾಗಕ್ಕೆ ಹಚ್ಚಬೇಕು. ಇದ್ರಿಂದ ನೋವು ಕಡಿಮೆಯಾಗಿ ಮಗು ಅಳು ನಿಲ್ಲಿಸುತ್ತದೆ.