ಹೋಟೆಲ್‌ಗೆ ಬಾ ಎಂದ ಪೊಲೀಸ್, ಚಾಟ್ ಮಾಡಿದ್ದು ಹೆಂಡ್ತಿ ಅಂತಾ ಗೊತ್ತಾದಾಗ ಶಾಕ್!

ಫೇಸ್ ಬುಕ್ ನಲ್ಲಿ ಫೇಕ್ ಐಡಿ ಸೃಷ್ಟಿ ಮಾಡಿಕೊಂಡು ಮಹಿಳೆಯೊಬ್ಬಳು ಪೊಲೀಸ್ ಆಗಿರುವ ತನ್ನ ಗಂಡನೊಂದಿಗೆ ಸಂವಹನ ಆರಂಭಿಸಿದ್ದಳು. ಇಬ್ಬರ ನಡುವೆ ಮೊಬೈಲ್ ನಂಬರ್ ಕೂಡ ಶೇರ್ ಆದ ಬಳಿಕ ಚಾಟ್ ಕೂಡ ಆರಂಭವಾಗಿತ್ತು. ಫೇಸ್ ಬುಕ್ ನಲ್ಲಿ ಚಾಟ್ ಮಾಡುತ್ತಿರುವುದು ತನ್ನ ಹೆಂಡತಿಯೇ ಎನ್ನುವುದನ್ನು ಅರಿಯದ ಗಂಡ, ತನ್ನೊಂದಿಗೆ ಸೆಕ್ಸ್ ಮಾಡುವಂತೆ ಕಿಸ್ ನೀಡುವಂತೆ ಕೇಳಿದ್ದಾನೆ.
 

Come to the hotel the woman with whom the policeman was talking dirty on Facebook chat turned out to be his wife san

ಇಂದೋರ್ (ಜೂನ್ 7): ಪೊಲೀಸ್ ಕಾನ್ಸ್ ಟೇಬಲ್ (police constable) ಆಗಿದ್ದ ವ್ಯಕ್ತಿ, ಪ್ರತಿ ದಿನ ಫೇಸ್ ಬುಕ್ ನಲ್ಲಿ (Facebook) ಚಿನ್ನ, ರನ್ನ ಎಂದುಕೊಂಡು ಹುಡುಗಿಯೊಬ್ಬಳಿಗೆ ಮೆಸೇಜ್ ಕಳಿಸುತ್ತಿದ್ದ. ಆ ಕಡೆಯಿಂದಲೂ ಅದೇ ರೀತಿಯ ಪ್ರತಿಕ್ರಿಯೆಗಳು ಬರುತ್ತಿದ್ದವು. ದಿನ ಕಳೆದ ಹಾಗೆ ಆತ "ಹೋಟೆಲ್ ಬಾ' ಎಂದು ಫೇಸ್ ಬುಕ್ ನಲ್ಲಿ ಪರಿಚಯವಾದ ಹುಡುಗಿಗೆ ಮೆಸೇಜ್ ಕಳಿಸಿದ. ತನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ. ಆದರೆ, ಕೊನೆಗೆ ತಾನು ಮೆಸೇಜ್ ಮಾಡುತ್ತಿದ್ದ ಹುಡುಗಿ, ತನ್ನ ಹೆಂಡತಿಯೇ ಎಂದು ತಿಳಿದುಕೊಂಡಾಗ ನೆಲವೇ ಕುಸಿದು ಹೋದ ಅನುಭವ.

ಹೌದು, ಇಂಥದ್ದೊಂದು ಘಟನೆ ವರದಿಯಾಗಿರುವುದು ಮಧ್ಯಪ್ರದೇಶದ (MadhyaPradesh) ಇಂದೋರ್ ನಲ್ಲಿ (Indore) ಬೇರೆ ಹುಡುಗಿಯರ ಜೊತೆ ಗಂಡ ಹೇಗಿರುತ್ತಾನೆ ಎಂದು ತಿಳಿದುಕೊಳ್ಳಲು ಹೆಂಡತಿ ಮಾಡಿದ ಉಪಾಯ ಕೇಳಿ ಅಚ್ಚರಿ ಪಟ್ಟಿದ್ದಾರೆ. ತನ್ನ ಹೆಂಡತಿಯನ್ನು ಬೇರೆ ಹುಡುಗಿ ಎಂದು ತಪ್ಪಾಗಿ ಗ್ರಹಿಸಿಕೊಂಡಿದ್ದ ಪೊಲೀಸ್ ಕಾನ್ಸ್ ಟೇಬಲ್ ಅಕೆಯೊಂದಿಗೆ ಎಲ್ಲಾ ವಿಚಾರಗಳನ್ನು ಮಾತನಾಡಿದ್ದ.

ಇಂದೋರ್‌ನ ಸುಖ್ಲಿಯಾ ನಿವಾಸಿ ಮನೀಶಾ ಚವಂದ್ (Manisha Chavand) ಅವರು ಪಂಚಮ್ ಕಿ ಫಾಲ್‌ನಲ್ಲಿ ವಾಸಿಸುವ ಸತ್ಯಂ ಬೆಹ್ಲ್ (Satyam Bahl) ಎಂಬ ಯುವಕನನ್ನು 2019 ರಲ್ಲಿ ವಿವಾಹವಾಗಿದ್ದರು. ಕೆಲ ದಿನಗಳ ಕಾಲ ಸತ್ಯಂ,  ಮನೀಶಾಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ ಆ ನಂತರ ಚಿತ್ರಹಿಂಸೆ ಶುರುವಾಯಿತು. ದಿನ ಕಳೆದಂತೆ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದ. ಸಣ್ಣಪುಟ್ಟ ವಿಷಯಗಳಿಗೂ ಪತ್ನಿಯನ್ನು ಹಲವು ಗಂಟೆಗಳ ಕಾಲ ಬಾತ್ ರೂಂನಲ್ಲಿ ಬೀಗ ಹಾಕಿ ಕೂರಿಸುತ್ತಿದ್ದ. ಆಕೆಗೆ ಹೊಡೆದು ಬಡಿದು ಬರೀ ನೆಲದ ಮೇಲೆ ಗಂಟೆಗಟ್ಟಲೆ ಕಾಲ ಮಲಗುವಂತೆ ಹೇಳುತ್ತಿದ್ದ.

ಇದರಿಂದ ಬೇಸರಗೊಂಡಿದ್ದ ಹುಡುಗಿ ತನ್ನ ಪೋಷಕರಿಗೆ ದೂರು ನೀಡಿದ್ದಳು. ಆ ಬಳಿಕ ಪತಿಯ ಕುರಿತಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2020ರ ನವೆಂಬರ್ 28 ರಂದು ಎಫ್ಐಆರ್ ಅನ್ನೂ ದಾಖಲಿಸಲಾಗಿದ್ದು, ಪತಿಯು ಮನೆಯಲ್ಲಿ ಕೂತು ಪತ್ರಿಕೆ ಓದಲೂ ಕೂಡ ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಅದಲ್ಲದೆ, ವರದಕ್ಷಿಣೆಯ ರೂಪದಲ್ಲಿ ಬೈಕ್ ಕೊಡಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದ.  ಪ್ರಕರಣದಲ್ಲಿ ಪತಿಯನ್ನು ಬಂಧಿಸುವಂತೆಯೂ ಆದೇಶವಿತ್ತು. ಅದ್ಯ ಆರೋಪಿಯು ಜಾಮೀನಿನ ಮೇಲೆ ಹೊರಗಿದ್ದು, ಪ್ರಕರಣದ ವಿಚಾರಣೆ ನ್ಯಾಯಲಯದಲ್ಲಿ ನಡೆಯುತ್ತಿದೆ. 

ಹುಡುಗಿ ಸಂಬಂಧದಲ್ಲಿ ತಂಗಿಯಾಗಬೇಕು, ಮದ್ವೆ ಆಗ್ಲಾ ಬೇಡ್ವಾಅನ್ನೋದೆ ಕನ್‌ಫ್ಯೂಶನ್ !

ಗಂಡನ ಮನೆಯಲ್ಲಿದ್ದ ವೇಳೆಯಲ್ಲಿಯೇ ಮನೀಶಾ ನಕಲಿ ಫೇಸ್ ಬುಕ್ ಅಕೌಂಟ್ ಸೃಷ್ಟಿಸಿ ಗಂಡನಿಗೆ ರಿಕ್ವೆಸ್ಟ್ ಕಳಿಸಿದ್ದಳು. ಫೇಸ್ ಬುಕ್ ನಲ್ಲಿ ತನ್ನನ್ನು ತಾನು ಸಿಂಗಲ್ ಎಂದು ಹಾಕಿಕೊಂಡಿದ್ದ ಸತ್ಯಂ ಪ್ರತಿದಿನವವೂ ಆಕೆಯೊಂದಿಗೆ ಮೆಸೇಜ್ ಮಾಡುತ್ತಿದ್ದ. ಸ್ವಂತ ಪತ್ನಿಯನ್ನೇ ಆತ ಬೇರೊಬ್ಬ ಹುಡುಗಿ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದ ಸತ್ಯಂ, ತನ್ನೊಂದಿಗೆ ಸೆಕ್ಸ್ ಮಾಡುವಂತೆ ಕಿಸ್ ನೀಡುವಂತೆ ಮೆಸೇಜ್ ಹಾಕಿದ್ದ. ಮನೀಶಾ, ಫೇಸ್ ಬುಕ್ ನೊಂದಿಗೆ  ವಾಟ್ಸ್‌ಆ್ಯಪ್‌ನಲ್ಲಿನ ಚಾಟ್ ಅನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಪ್ರಸ್ತುತಪಡಿಸಿದ್ದು, ಜಿಲ್ಲಾ ನ್ಯಾಯಾಲಯವು ಇದನ್ನು ಪರಿಗಣಿಸುವುದಾಗಿ ಹೇಳಿದೆ.

ಸೊಲೊಗಾಮಿಯ ಅರ್ಥ ನಿಮಗೆ ತಿಳಿದಿದೆಯೇ? ಯಾಕೆ ಈ ಟ್ರೆಂಡ್ ಹೆಚ್ಚುತ್ತಿದೆ?

ಸಂತ್ರಸ್ತೆಯ ಆರೋಪದ ಮೇರೆಗೆ ಇಂದೋರ್ ಜಿಲ್ಲಾ ನ್ಯಾಯಾಲಯವು ಆರೋಪಿಯ ವಿರುದ್ಧ ಕೌಟುಂಬಿಕ ಹಿಂಸಾಚಾರದಿಂದ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಆದೇಶಿಸಿದೆ. ಅರ್ಜಿಯ ವಿಚಾರಣೆ ವೇಳೆ ಸೋಮವಾರ ಆಹಾರ ವೆಚ್ಚವಾಗಿ 2 ಲಕ್ಷ ರೂ., ಹಾಗೂ ಜೀವನಾಂಶಕ್ಕಾಗಿ ಮಹಿಳೆಗೆ ಪ್ರತಿ ತಿಂಗಳು 7 ಸಾವಿರ ರೂ.ಗಳನ್ನು ನೀಡುವಂತೆ ಪತಿಗೆ ನ್ಯಾಯಾಲಯ ಆದೇಶಿಸಿದೆ. 2020 ರಲ್ಲಿ ಸಂತ್ರಸ್ತೆ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ಅರ್ಜಿ ಸಲ್ಲಿಸಿದ್ದು, ಜಿಲ್ಲಾ ನ್ಯಾಯಾಲಯವು ಪತಿಗೆ ಮಾಸಿಕ 7000 ನೀಡುವಂತೆ ಆದೇಶಿಸಿದೆ ಎಂದು ವಕೀಲ ಕೃಷ್ಣ ಕುಮಾರ್ ಕುನ್ಹರೆ ತಿಳಿಸಿದರು. ಇಲ್ಲಿಯವರೆಗೆ 2 ಲಕ್ಷ 3 ಸಾವಿರ ಮೊತ್ತವನ್ನು ನೀಡಲಾಗಿದೆ.

Latest Videos
Follow Us:
Download App:
  • android
  • ios