ಅಜ್ಜ-ಅಜ್ಜಿ ಅತಿ ಮುದ್ದಿನಿಂದ ಮೊಮ್ಮಕ್ಕಳು ಹಾಳಾಗ್ತಾರಾ? Study ಹೇಳುವುದೇನು?
ಮಕ್ಕಳು ಅವ್ರ ಅಜ್ಜ – ಅಜ್ಜಿ ಜೊತೆ ಬೆಳೆಯಬೇಕು ಅಂತಾ ಅನೇಕರು ಹೇಳ್ತಾರೆ. ಅದು ನೂರಕ್ಕೆ ನೂರು ಸತ್ಯ. ಅವರಿಂದ ಮಕ್ಕಳು ಅನೇಕ ವಿಷ್ಯಗಳನ್ನು ಕಲಿಯುತ್ತಾರೆ ನಿಜ. ಆದ್ರೆ ಕೆಲವೊಮ್ಮೆ ಅಜ್ಜ – ಅಜ್ಜಿಯ ನಿರ್ಲಕ್ಷ್ಯ ಮೊಮ್ಮಕ್ಕಳ ಭವಿಷ್ಯ ಹಾಳು ಮಾಡುತ್ತದೆ.
ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಪತಿ (Husband) – ಪತ್ನಿ (Wife) ಇಬ್ಬರು ಕೆಲಸ ಮಾಡುವುದು ಅನಿವಾರ್ಯ. ಕೆಲಸ (Work) ದ ಕಾರಣಕ್ಕೆ ಪಾಲಕರಿಬ್ಬರೂ ಕಚೇರಿ (Office) ಗೆ ಹೋಗ್ತಾರೆ. ದಿನದ ಬಹುತೇಕ ಸಮಯದಲ್ಲಿ ಅವರು ಮನೆಯಿಂದ ಹೊರಗಿರ್ತಾರೆ. ಈ ಸಂದರ್ಭದಲ್ಲಿ ಮಕ್ಕಳು ದಿನವಿಡೀ ತಮ್ಮ ಅಜ್ಜ – ಅಜ್ಜಿಯೊಂದಿಗೆ ವಾಸಿಸುತ್ತಾರೆ. ಕೆಲಸಕ್ಕೆ ಹೋಗುವ ಪಾಲಕರು, ಮಕ್ಕಳು ಹೀಗಿರಬೇಕು, ಹಾಗಿರಬೇಕೆಂದುಕೊಳ್ತಾರೆ. ಆದ್ರೆ ಅದ್ಯಾವುದೂ ಆಗುವುದಿಲ್ಲ. ಅದಕ್ಕೆ ಅನೇಕ ಕಾರಣವಿದೆ. ಜರ್ನಲ್ ಆಫ್ ಚಿಲ್ಡ್ರನ್ ಅಂಡ್ ಮೀಡಿಯಾ ನಡೆಸಿದ ಅಧ್ಯಯನದಲ್ಲಿ ಆಘಾತಕಾರಿ ಹಾಗೂ ಅಚ್ಚರಿಯ ವಿಷ್ಯ ಹೊರಬಿದ್ದಿದೆ. ವರದಿ ಪ್ರಕಾರ, ತಮ್ಮ ಅಜ್ಜ – ಅಜ್ಜಿ ಜೊತೆ ವಾಸಿಸುವ ಮೊಮ್ಮಕ್ಕಳು ದಿನವಿಡಿ ಟಿವಿ, ಮೊಬೈಲ್ ಅಥವಾ ಇನ್ನಾವುದೇ ಗ್ಯಾಜೆಟ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ ಎಂಬುದು ಬಹಿರಂಗವಾಗಿದೆ. ಎರಡರಿಂದ ಏಳು ವರ್ಷ ವಯಸ್ಸಿನ ಮಕ್ಕಳು, ಅಜ್ಜ – ಅಜ್ಜಿ ಜೊತೆ ಹೇಗೆ ಸಮಯ ಕಳೆಯುತ್ತಾರೆ ಎಂಬುದನ್ನು ಸಂಶೋಧಕರು ಸಮೀಕ್ಷೆ ನಡೆಸಿದ್ದಾರೆ. ಈ ಮಕ್ಕಳು ದಿನಕ್ಕೆ ಸುಮಾರು ಎರಡು ಗಂಟೆಗಳ ಕಾಲ ಗ್ಯಾಜೆಟ್ ಪರದೆಯ ಮುಂದೆ ಕುಳಿತುಕೊಳ್ಳುತ್ತಾರೆ ಎಂಬುದನ್ನು ಈ ವೇಳೇ ಸಂಶೋಧಕರು ಪತ್ತೆ ಮಾಡಿದ್ದಾರೆ.
ಗ್ಯಾಜೆಟ್ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದ್ರಿಂದ ಮಕ್ಕಳ ಕಣ್ಣು, ದೇಹ ಆಕಾರ ಮತ್ತು ಆರೋಗ್ಯ ಹಾಳಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರತಿದಿನ ಎರಡು ಗಂಟೆಗಳ ಕಾಲ ಟಿವಿ ಮುಂದೆ ಕುಳಿತುಕೊಂಡರೆ ಮಕ್ಕಳ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ನೀವೇ ಊಹಿಸಿ.
ಎಷ್ಟು ಸ್ಕ್ರೀನ್ ಟೈಮ್ (Screen Time) ಇರಬೇಕು ? : ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ, ಮಕ್ಕಳು ದಿನಕ್ಕೆ ಒಂದು ಗಂಟೆ ಮಾತ್ರ ಪರದೆಯನ್ನು ನೋಡಬೇಕು. ಆದ್ರೆ ಅಜ್ಜ – ಅಜ್ಜಿ ಜೊತೆ ವಾಸಿಸುವಾಗ ಮಕ್ಕಳು ಇದರ ಡಬಲ್ ಟೈಂ ಟಿವಿ ಅಥವಾ ಮೊಬೈಲ್ ವೀಕ್ಷಣೆ ಮಾಡ್ತಾರೆ.
45 ನಿಮಿಷ ಜೋಡಿಯ ರೊಮ್ಯಾನ್ಸ್ ಲೈವ್, ಧಾರ್ಮಿಕ ಕಾರ್ಯಕ್ರಮಕ್ಕೆ ಬಂದವರಿಗೆ ಶಾಕ್!
ಅಜ್ಜ – ಅಜ್ಜಿ, ಮಕ್ಕಳು ಮಾಡಿದ ನಿಯಮ ಮುರಿಯೋದು ಏಕೆ ? : ಅಜ್ಜ - ಅಜ್ಜಿಯರೊಂದಿಗಿನ ಮಕ್ಕಳ ಪರದೆಯ ಸಮಯದ ಬಗ್ಗೆ ಸಂಶೋಧಕರು ಆಳವಾದ ಅಧ್ಯಯನವನ್ನು ಮಾಡಿದ್ದಾರೆ. ಅಜ್ಜ – ಅಜ್ಜಿಗೆ ಇಂದಿನ ಡಿಜಿಟಲ್ ಪ್ರಪಂಚದ ಬಗ್ಗೆ ಹೆಚ್ಚು ತಿಳಿದಿಲ್ಲ. ಅವನಿಗೆ ಟ್ಯಾಬ್ಲೆಟ್ ಮತ್ತು ವಿಡಿಯೋ ಗೇಮ್‌ಗಳ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಇವು ಮಕ್ಕಳಿಗೆ ಹಾನಿಯುಂಟು ಮಾಡುತ್ತವೆ ಎಂಬುದು ಅವರಿಗೆ ಗೊತ್ತಾಗುವುದಿಲ್ಲ. ಹಾಗಾಗಿ ಅವರು, ಮೊಮ್ಮಕ್ಕಳು ಟಿವಿ ನೋಡ್ತಿದ್ದರೆ ಅವರನ್ನು ತಡೆಯುವುದಿಲ್ಲ.
ಇಷ್ಟೇ ಅಲ್ಲ ಸಂಶೋಧಕರು, ಅಜ್ಜ - ಅಜ್ಜಿಯರು ಯಾರ ಮನೆಯಲ್ಲಿ ಟಿವಿ ವೀಕ್ಷಣೆಗೆ ಹೆಚ್ಚು ಸಮಯ ನೀಡ್ತಾರೆ ಎಂಬದನ್ನೂ ಸಂಶೋಧನೆ ಮಾಡಲಾಗಿದೆ. ಸಂಶೋಧಕರ ಪ್ರಕಾರ, ಮಕ್ಕಳ ಮನೆಗಿಂತ ತಮ್ಮ ಸ್ವಂತ ಮನೆಯಲ್ಲಿ ಅಜ್ಜ – ಅಜ್ಜಿ ರೂಲ್ಸ್ ಮುರಿಯೋದು ಹೆಚ್ಚಂತೆ.
ಇದನ್ನು ಏಕೆ ಮಾಡ್ತಾರೆ? : ಸಂಶೋಧಕರ ಪ್ರಕಾರ, ಅಜ್ಜ – ಅಜ್ಜಿಗೆ ಮೊಮ್ಮಕ್ಕಳನ್ನು ರಂಜಿಸಲು ಯಾವುದೇ ಮಾರ್ಗವಿರುವುದಿಲ್ಲ. ಹಾಗೆ ಅವರಿಗೆ ಬಹುಬೇಗ ಸುಸ್ತಾಗುತ್ತದೆ. ಮೊಮ್ಮಕ್ಕಳ ಜೊತೆ ಆಟವಾಡುವಷ್ಟು ಶಕ್ತಿ ಇರುವುದಿಲ್ಲ. ಅವರಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಇದೇ ಕಾರಣಕ್ಕೆ ಅವರು ಮೊಮ್ಮಕ್ಕಳಿಗೆ ಟಿವಿ ಅಥವಾ ಮೊಬೈಲ್ ನೀಡಲು ಮುಂದಾಗ್ತಾರೆ. ಇದ್ರಿಂದ ಮೊಮ್ಮಕ್ಕಳಿಗೆ ಸಮಯ ಕಳೆಯುತ್ತದೆ ಎಂದು ಬಯಸುತ್ತಾರೆ.
ಅಶ್ಲೀಲ ಬೈಗುಳದ ಪೋರ್ನ್ ಇಂಡಸ್ಟ್ರಿ ಇದೆ ಅಮೆರಿಕದಲ್ಲಿ, ಏನದು?
ಪೋಷಕರು ಏನು ಮಾಡ್ಬೇಕು ? : ಪಾಲಕರು, ತಮ್ಮ ತಂದೆ – ತಾಯಿಗೆ ಈ ವಿಷ್ಯವನ್ನು ಸರಿಯಾಗಿ ವಿವರಿಸಬೇಕು. ಟಿವಿ ವೀಕ್ಷಣೆ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳ್ಬೇಕು. ಹಾಗೆ ಗ್ಯಾಜೆಟ್ ವೀಕ್ಷಣೆಗೆ ಸಮಯ ನಿಗದಿ ಮಾಡ್ಬೇಕು. ಆ ಸಮಯದ ನಂತ್ರ ಗ್ಯಾಜೆಟ್ ತೆಗೆದಿಡುವಂತೆ ಪಾಲಕರಿಗೆ ಸೂಚನೆ ನೀಡ್ಬೇಕು. ಹಾಗೆ ಆ ನಿಯಮ ಸೂಕ್ತವಾಗಿ ಜಾರಿಗೆ ಬಂದಿದೆಯಾ ಎಂಬುದನ್ನು ಪರೀಕ್ಷಿಸಬೇಕು.