45 ನಿಮಿಷ ಜೋಡಿಯ ರೊಮ್ಯಾನ್ಸ್ ಲೈವ್, ಧಾರ್ಮಿಕ ಕಾರ್ಯಕ್ರಮಕ್ಕೆ ಬಂದವರಿಗೆ ಶಾಕ್!
* ಜೂಮ್ ಕಾಲ್‌ನಲ್ಲಿ ದಂಪತಿಯ ಎಡವಟ್ಟು
* ಕ್ಯಾಮೆರಾ ಆಫ್ ಮಾಡದೇ ರೊಮ್ಯಾನ್ಸ್
* ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಕಿಂಗ್ ದೃಶ್ಯ
ಮಿನ್ನಿಯಾಪೊಲಿಸ್(ಮೇ.30) ಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ಮೀಟಿಂಗ್‌ಗಳ ಟ್ರೆಂಡ್ ಹೆಚ್ಚಾಗಿದೆ. ಅಲ್ಲಿ ಜನರು ವಾಸ್ತವಿಕವಾಗಿ ಪರಸ್ಪರ ಸಂಪರ್ಕಿಸುತ್ತಾರೆ. ಆದರೆ ಆನ್‌ಲೈನ್‌ನಲ್ಲಿ ನಡೆದ ಮೀಟಿಂಗ್‌ನಲ್ಲಿ ಜೋಡಿಯೊಂದು ಎಡವಟ್ಟು ಮಾಡಿಕೊಂಡಿದೆ. ಈ ತಮ್ಮ ಸಣ್ಣ ತಪ್ಪಿನಿಂದ ಎಲ್ಲರ ಎದುರು ಮುಜುಗರ ಅನುಭವಿಸಿದ್ದಾರೆ.
ವಾಸ್ತವವಾಗಿ, ದಂಪತಿ ಜೂಮ್ ಕರೆ ಮೂಲಕ ಯಹೂದಿಗಳ (ಟೆಂಪಲ್ ಬೆತ್ ಎಲ್‌ನ ಬ್ಯಾಟ್ ಮಿಟ್ಜ್ವಾ) ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಇನ್ನೂ ಹಲವರು ಉಪಸ್ಥಿತರಿದ್ದರು. ದಂಪತಿ ಹೊರತುಪಡಿಸಿ, ಎಲ್ಲರೂ ತಮ್ಮ ಕ್ಯಾಮೆರಾ ಮತ್ತು ಸ್ಪೀಕರ್‌ಗಳನ್ನು ಆನ್ ಮಾಡಿದ್ದಾರೆ. ದಂಪತಿ ತಾವು ಮ್ಯೂಟ್ ಆಗಿದ್ದೇವೆ, ವೀಡಿಯೊ ಕೂಡ ಆಫ್ ಆಗಿದೆ ಎಂದು ಭಾವಿಸಿದ್ದಾರೆ.
ಆದರೆ ಹೀಗೆ ಭಾವಿಸಿ ಅವರು ದೊಡ್ಡ ತಪ್ಪು ಮಾಡಿದ್ದಾರೆ. ವಾಸ್ತವವಾಗಿ ಜೂಮ್ ಕರೆ ಸಮಯದಲ್ಲಿ ದಂಪತಿ ವೀಡಿಯೊ ಆನ್ ಆಗಿತ್ತು ಮತ್ತು ಅವರ ಖಾಸಗಿ ಕ್ಷಣಗಳು ಕ್ಯಾಮರಾದಲ್ಲಿ ರೆಕಾರ್ಡ್ ಆಗಿವೆ. ಆಶ್ಚರ್ಯ ಎಂಬಂತೆ ಈ ದಂಪತಿ 45 ನಿಮಿಷ ರೋಮ್ಯಾನ್ಸ್ ಮಾಡುತ್ತಿದ್ದರು. ತನ್ನ ಕ್ಯಾಮರಾ ಆನ್ ಆಗಿದೆ ಎಂಬುದೇ ಅವನಿಗೆ ತಿಳಿದಿರಲಿಲ್ಲ.
ಆದರೆ, ಈ ನಡುವೆ ಕೆಲವರು ಅವರನ್ನು ಸನ್ನೆ ಮಾಡಿ ತಡೆಯಲು ಯತ್ನಿಸಿದರಾದರೂ ದಂಪತಿ ಗಮನ ಹರಿಸಲಿಲ್ಲ. ಆದರೆ ಅಂತಿಮವಾಗಿ ಈ ವಿಚಾರದಲ್ಲಿ ಯಾರೋ ಪರ್ಸನಲ್ ಮೆಸೇಜ್ ಮಾಡಿದ್ದರಿಂದ ದಂಪತಿಗೆ ಮುಜುಗರ ಎದುರಿಸಿದ್ದಾರೆ.
ಘಟನೆ ಅಮೆರಿಕದ ಮಿನ್ನಿಯಾಪೊಲಿಸ್‌ನಲ್ಲಿ ನಡೆದಿದೆ. ದಂಪತಿ ಗುರುತು ಬಹಿರಂಗಗೊಂಡಿಲ್ಲ. ವೀಡಿಯೊದಲ್ಲಿ, ದಂಪತಿ ಬೆತ್ತಲೆಯಾಘಿ ತಿರುಗಾಡುತ್ತಾ ರೋಮ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ.
ಆದಾಗ್ಯೂ, ಜೂಮ್ ಕರೆಯಲ್ಲಿ ದಂಪತಿ ಇಂತಹ ಸ್ಥಿತಿಯಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಇಂತಹ ಹಲವು ಘಟನೆಗಳು ಈ ಹಿಂದೆಯೂ ಮುನ್ನೆಲೆಗೆ ಬಂದಿವೆ. ವಾಸ್ತವವಾಗಿ, ಕೊರೋನಾ ಅವಧಿಯಲ್ಲಿ ಆನ್‌ಲೈನ್ ಸಭೆಗಳ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಜನರು ದೈಹಿಕ ಸಂಭಾಷಣೆಗಿಂತ ವರ್ಚುವಲ್ ಮೀಟಿಂಗ್‌ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ, ಇದರಿಂದ ಕೋವಿಡ್ ಅಪಾಯವನ್ನು ತಪ್ಪಿಸಬಹುದು.