ಅಶ್ಲೀಲ ಬೈಗುಳದ ಪೋರ್ನ್ ಇಂಡಸ್ಟ್ರಿ ಇದೆ ಅಮೆರಿಕದಲ್ಲಿ, ಏನದು?
ಪೋರ್ನ್ (Porn) ಇಂಡಸ್ಟ್ರಿಯ ಜಗತ್ತಿನ ಒಳ್ಳ ಹೊರಗನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಜನರು ಕಣ್ಣು-ಬಾಯಿ ಬಿಟ್ಟುಕೊಂಡು ನೋಡುವ ಜಗತ್ತಿನಲ್ಲಿ ಏನೋನೋ ವಿಚಿತ್ರ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಹೊಸ ಹೊಸ ಟ್ರೆಂಡ್ (Trend) ಸೃಷ್ಟಿಯಾಗುತ್ತಿರುತ್ತದೆ. ಇವೆಲ್ಲಾ ಈ ವಿಚಿತ್ರ ಜಗತ್ತಿನೊಂದಿಗೆ ಕನೆಕ್ಟ್ ಆಗಿರೋರಿಗೆ ಮಾತ್ರ ಗೊತ್ತಿರುವ ವಿಷಯ. ಅಷ್ಟಕ್ಕೂ ಬಯ್ಯೋ ಪೋರ್ನ್ ಅಂತಿದೆ ಅಮೆರಿಕ (America)ದಲ್ಲಿ. ಏನದು?
ಕಳೆದ ಎರಡು ವರ್ಷಗಳ ಹಿಂದೆ ಇಡೇ ಜಗತ್ತೇ ಕೊರೋನಾ (Coronavirus) ಕಾಟದಿಂದ ಬಳಲಿತ್ತು. ಮನೆಯಲ್ಲಿಯೇ ಒಕ್ಕುಂಟಿಯಾಗಿದ್ದ ಮನಷ್ಯ, ಮನಸ್ಸನ್ನು ಮುದ ಗೊಳಿಸಲು ಹಿಡಿದ ದಾರಿಗಳು ಅನೇಕ. ಅಷ್ಟೇ ಅಲ್ಲ ಒಳಗಿದ್ದ ಭಾವನೆಗಳು, ಆಕ್ರೋಶ, ಸಿಟ್ಟು ಹೊರ ಹಾಕಲು ವಿವಿಧ ಮಾರ್ಗಗಳನ್ನು ಕಂಡು ಕೊಂಡಿದ್ದ. ಮನೆಯಲ್ಲಿ ಒಂಟಿ ಒಂಟಿಯಾಗಿರುವುದು ಯಾರಿದಾಗರೂ ಕಷ್ಟ ಬಿಡಿ. ಹಾಗೆ ಇರೋದು ಅನಿವಾರ್ಯವೆಂದಾಗ ಎಕ್ಸ್ ನೆನಪುಗಳು ಕಚಗುಳಿ ಇಡಲು ಶುರುವಾಗುತ್ತೆ. ಮೊದ ಮೊದಲು ಹಿತವಾಗಿಯೇ ಕಾಡುವ ನೆನಪುಗಳು, ನಂತರ ಇರಿಟೇಟ್ ಮಾಡಲು ಶುರು ಮಾಡುತ್ತದೆ. ಅವರಿಂದ ಅನುಭವಿಸಿದ ನೋವು, ಅವಮಾನಗಳು ಮನಸ್ಸನ್ನು ಹಿಂಡಿ ಹಿಪ್ಪೆಕಾಯಿ ಮಾಡಿ ಹಾಕುತ್ತೆ. ಕೆಲವರು ಅದನ್ನೆಲ್ಲ ಮರೆತು ಮಾಜಿ ಪ್ರಿಯಕರರನ್ನು ಮತ್ತೆ ಸಂಪರ್ಕಿಸುವ ಪ್ರಯತ್ನ ಮಾಡಿದರೆ, ಹೆಚ್ಚಿನವರು ಅವರ ವಿರುದ್ಧ ರಿವೆಂಜ್ ತೀರಿಸಿಕೊಳ್ಳಲು ಬಯಸುತ್ತಾರೆ.
ಇಂಥವರ ಮನಸ್ಥಿತಿಯನ್ನು ಪೋರ್ನ್ ಇಂಡಸ್ಟ್ರಿ ವಿಭಿನ್ನವಾಗಿ ಎನ್‌ಕ್ಯಾಶ್ ಮಾಡಿಕೊಳ್ಳುತ್ತಿದೆ. ಮೊದ ಮೊದಲು ವಿಚಿತ್ರ ಎನಿಸುತ್ತಿದ್ದ ಇಂಥ ಬೇಡಿಕೆಗಳಿಗೆ ಒಗ್ಗಿಕೊಳ್ಳಲೂ ಇಂಡಸ್ಟ್ರಿಯೂ ಟೈಮ್ ತೆಗೆದುಕೊಂಡಿದ್ದು ಸುಳ್ಳಲ್ಲ. ನಂತರ ಇದರಿಂದಾನೇ ಹಣದ ಹೊಳೆ ಹರಿಯಲು ಶುರುವಾಯಿತು. ಹೊಸದೊಂದು ಸ್ಟೈಟ್ ಪೋರ್ನ್ ಅಂತಾನೆ ಪದ್ಧತಿ ಜಾರಿಗೊಳಿಸಿತು.
ಪೋರ್ನೋಗ್ರಫಿ ಕೋರ್ಸ್, ವಿದ್ಯಾರ್ಥಿಗಳು ಜೊತೆಯಲ್ಲೇ ಕುಳಿತು ಅಶ್ಲೀಲ ಸಿನಿಮಾ ನೋಡ್ಬೋದು !
ಅಷ್ಟಕ್ಕೂ ಏನಿದು?
ಸಾಮಾನ್ಯವಾಗಿ ಅನೇಕರ ಜೀವನದಲ್ಲಿ ಗೆಳತಿ (Girl Friend) ಅತವಾ ಗೆಳೆಯನೊಂದಿಗೆ (Boy Friend) ಮೋಸ ಹೋಗಿರುತ್ತಾರೆ. ಅಂದರಿಂದ ಆಗೋ ನೋವು ಹೇಳ ತೀರದು. ಅದರಲ್ಲಿಯೂ ಕೆಲವರಂತೂ ಬೆನ್ನಿಗೇ ಚೂರಿ ಹಾಕಿರುತ್ತಾರೆ. ಕನಸಿನ ಗೋಪುರ ಕಟ್ಟಿಕೊಂಡು, ಜೀವನದ ಬಗ್ಗೆ ಕನಸು ಕಾಣುವಂತೆ ಮಾಡಿ, ಅದೇ ಗೋಪುರವನ್ನು ಅವರೇ ಕಾಲಿನಿಂದ ಒದ್ದು ಹೋಗಿರುತ್ತಾರೆ. ಇಂಥ ವೇದನೆಯನ್ನು ಅನುಭವಿಸೋದು ಯಾರಿಗಾದರೂ ನೋವಿನ ಸಂಗತಿಯೇ ಸರಿ. ಮರೀಬೇಕು ಅಂದುಕೊಂಡಷ್ಟು, ಈ ನೋವು ಮತ್ತೆ ಮತ್ತೆ ಕಾಡುತ್ತದೆ. ಆಕ್ರೋಶ, ಸಿಟ್ಟು (Anger) ಹೆಚ್ಚಿಸುತ್ತದೆ. ಮಾಡಿಸಿಕೊಂಡ ಅವಮಾನವನ್ನು ನೆನಪಿಸಿಕೊಂಡರೆ, ಮೈ ಕೈ ಪರಚಿಕೊಳ್ಳುವಂತಾಗುತ್ತದೆ.
ಒಂಥರಾ ಕರೀನಾ ಕಪೂರ್ (Kareena Kapoor) ಮತ್ತು ಶಾಹಿದ್ ಕಪೂರ್ (Shahid Kapoor) ಅಭಿನಯಿಸಿದ ಜಬ್ ವಿ ಮೆಟ್ (Jab We met) ಕಥೆಯಂತೆ. ಬಾಯ್ ಫ್ರೆಂಡ್‌ನಿಂದ ಮೂಲೆಗೆ ಎಸೆಯಲ್ಪಟ್ಟರೂ, ಅವನಿಂದ ಬೈಸಿಕೊಂಡರೂ, ಏನೇ ಮಾಡಿದರೂ ಅವಳಿಗೆ ಅವನ ನೆನಪಿನಿಂದ ಹೊರ ಬರಲು ಆಗುವುದೇ ಇಲ್ಲ. ಹೀರೋಯಿನ್ ತನ್ನ ಮನಸ್ಸಿನ ವೇದನೆಯನ್ನು ಕಡಿಮೆ ಮಾಡಿಕೊಂಡಿದ್ದು, ಹೊಸದಾಗಿ ಸಿಕ್ಕ ಬಾಯ್ ಫ್ರೆಂಡ್ ಶಾಹೀದ್ ಕಪೂರ್ ನೆರವಿನಿಂದ. ಹಳೇ ಬಾಯ್ ಫ್ರೆಂಡ್‌ಗೆ ಕಾಲ್ ಮಾಡಿ, ಬಾಯಿಗೆ ಬಂದಂತೆ, ಸಾಕಿನ್ನು ಅನ್ನುವಷ್ಟು ಬಯ್ಯುತ್ತಾಳೆ. ಆಗ ಅವಳ ಮನಸ್ಸಿನ ದುಗುಡ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಎಕ್ಸ್ ಅನ್ನು ಮನಸ್ಸಿನ ಮೂಲೆಯಿಂದ ಹೊರ ಕಳುಹಿಸಲು, ಅವರಿಗ ಬಾಯಿಗೆ ಬಂದ ಹಾಗೆ ಬಯ್ಯೋದು ಒಳ್ಳೆ ದಾರಿ ಅಂತಾಯಿತು. ಇದನ್ನೇ ಅಮೆರಿಕದ ಪೋರ್ನ್ ಇಂಡಸ್ಟ್ರಿ ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದೆ.
ಪೋರ್ನ್ ಕೋರ್ಸ್ ಆರಂಭಿಸಿದ ಕಾಲೇಜು, ವಿವಾದದ ಬಳಿಕ ನೀಲಿಚಿತ್ರದ ಕೋರ್ಸ್ ಗೆ ಗೇಟ್ ಪಾಸ್!
ಇದು ಕಾಸು ಕೊಟ್ಟು ಬಯಿಸಿ ಕೊಳ್ಳೋ ಕರ್ಮ!
ಈ ಸ್ಟೈಟ್ ಪೋರ್ನ್‌ಗೆ ಎಕ್ಸ್ ರೇಟೆಡ್ ನಟಿ ಅಥವಾ ನಟರೇ ಅರ್ಹರು. ಸಾಕಷ್ಟು ಅಶ್ಲೀಲ ಪದಗಳನ್ನು ಬಳಸಲು ಗೊತ್ತಿರಬೇಕು. ತಮ್ಮ ಎಕ್ಸ್‌ಗೆ ಹೊಸ ಫ್ರೆಂಡ್‌ನಿಂದ ಬಾಯಿಗೆ ಬಂದ ಹಾಗೆ ಬಯ್ಯಿಸಲಾಗಿತ್ತೆ. ಕ್ರಿಯೇಟಿವ್ ಆಗಿ ಬೈದಷ್ಟೂ ಡಿಮ್ಯಾಂಡ್ ಹೆಚ್ಚು. ಎಕ್ಸ ಬಾಯ್ ಫ್ರೆಂಡ್ ತನ್ನೊಟ್ಟಿಗೆ ದೈಹಿಕ ಸುಖ ಹೇಗೆ ಪಡೆದಿದ್ದು, ಆಮೇಲೆ ಹೇಗೆ ವಂಚಿಸಿದ ಅಂತೆಲ್ಲಾ ಬಯ್ಯೋ ಜೊತೆಗೆ ಅವನ ಮಂಚದ ಮೇಲೆ ಬಹಳ ವೀಕ್. ಶೀಘ್ರ ಸ್ಖಲನವಾಗುತ್ತಿತ್ತು. ಅದೂ ಇದು. ಸುಳ್ಳೋ, ಸತ್ಯವೋ ಒಟ್ಟಿನಲ್ಲಿ ಇದ್ದ ಬದ್ದ ಎಲ್ಲವನ್ನೂ ಸೇರಿಸಿ ಬಯ್ಯುವುದೇ ಈ ಪೊರ್ನ್ ಇಂಡಸ್ಟ್ರಿಯ ಹೊಸ ಟ್ರೆಂಡ್ (Trend). ಅವನಿಂದ ಯಾವತ್ತೂ ಸುಖ ಸಿಕ್ಕಿಲ್ಲ. ಅವನಿಗೆ ಹೊಸ ಭಂಗಿಗಳು ಗೊತ್ತಿರಲಿಲ್ಲ.
ಅವನ್ನೊಬ್ಬ ಮೂರ್ಖ ಅನ್ನುವ ಮೂಲಕ ಬೈಗುಳ ಎಂಡ್ ಆಗುತ್ತೆ. ನಗು ಬರುತ್ತೆ. ಹೀಗೆ ಬಯ್ತಾ ಬಯ್ತಾ ಮನಸ್ಸಿನ ದುಗುಡ ಹೊರ ಹೋಗಿ ಮನಸ್ಸು ನಿರಳಾವಾಗುತ್ತೆ. ಕಾಮುಕ ಪದಗಳನ್ನು ಬಳಸುವುದರಿಂದ ಪ್ರಚೋದನೆಗೆ ಒಳಗಾಗುತ್ತಾರೆ. ಇದು ಬೈಗುಳ ಪೋರ್ನ್‌ನ ವಿಚಿತ್ರ ಲಾಭ ಹಾಗೂ ಬಹುಮುಖಿ ಪ್ರಯೋಜನ.
ಹಾಗಂಥ ಇದೇನು ಹೊಸ ಪದ್ಧತಿಯಲ್ವಂತೆ. ಹಿಂದೆಯೂ ಇತ್ತಂತೆ. ಅದಕ್ಕೆ ಹಿಂಸಾರತಿ ಅತವಾ ಸ್ಯಾಡಿಸಂ ಎನ್ನುತ್ತಾರೆ. ಲೈಂಗಿಕವಾಗಿ ಹಿಂಸೆ ಆನಂದಿಸುವವರು ಸಂಗಾತಿಯಿಂದ ನಿಂದಿಸಿಕೊಂಡು ಅಥವಾ ಸಂಗಾತಿಯನ್ನು ನಿಂದಿಸಿ ಒಂದು ಬಗೆಯ ಸಂತೃಪ್ತಿ ಅನುಭವಿಸುವವರೂ ಇದ್ದಾರೆ. ಇದು ಕೂಡ ಸ್ಪೈಟ್ ಪೋರ್ನ್‌ನ ಮತ್ತೊಂದು ರೀತಿ ಅಷ್ಟೇ.