ಮತ್ತೊಂದು ಖ್ಯಾತನಾಮರ ಸಂಬಂಧ ಮುರಿದು ಬಿದ್ದಿದೆ. ಉದ್ಯಮಿ ಎಲಾನ್ ಮಸ್ಕ್ ಜೊತೆ ಅಫೇರ್ ಇಟ್ಟುಕೊಂಡ ಕಾರಣಕ್ಕೆ ಗೂಗಲ್ ಸಹ ಸಂಸ್ಥಾಪಕ ತನ್ನ ಪತ್ನಿಗೆ ಡಿವೋರ್ಸ್ ನೀಡಿದ್ದಾರೆ. 

ನ್ಯೂಯಾರ್ಕ್(ಸೆ.16) ಉದ್ಯಮಿ ಎಲಾನ್ ಮಸ್ಕ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಟ್ವಿಟರ್ ನಿಯಮ ಬದಲಾವಣೆ, ಶ್ರೀಮಂತರ ಪಟ್ಟಿ, ಉದ್ಯಮ ಸೇರಿದ ಕಾರಣವಲ್ಲ. ಇದೀಗ ಸುಂದರ ಸಂಸಾರದ ನಡುವೆ ಬಿರುಗಾಳಿ ಎಬ್ಬಿಸಿದ ಕಾರಣಕ್ಕೆ ಎಲಾನ್ ಮಸ್ಕ್ ಮತ್ತೆ ಟ್ರೆಂಡ್ ಆಗಿದ್ದಾರೆ. ತನ್ನ ಪತ್ನಿಗೆ ಎಲಾನ್ ಮಸ್ಕ್ ಜೊತೆ ಅಫೇರ್ ಇದೆ ಅನ್ನೋ ಕಾರಣಕ್ಕೆ ಗೂಗಲ್ ಸಹ ಸಂಸ್ಥಾಪಕ ಸರ್ಗೆ ಬ್ರಿನ್ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡಿದ್ದಾರೆ. ಕೋರ್ಟ್ ಸರ್ಗೆ ಬ್ರಿನ್ ಹಾಗೂ ನಿಕೋಲ್ ಶನಹಾನ್ ಡಿವಿರೋಸ್‌ಗೆ ಅಂಕಿತ ಹಾಕಿದೆ.

2022ರಲ್ಲೇ ಎಲಾನ್ ಮಸ್ಕ್ ಹಾಗೂ ನಿಕೋಲ್ ಶಹನಾನ್ ನಡುವೆ ಗಾಢವಾದ ಸಂಬಂಧವಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ನಿಕೋಲ್ ಹಾಗೂ ಮಸ್ಕ್ ಗೆಳೆಯರಾಗಿದ್ದರು. ಆದರೆ ಈ ಗೆಳೆತನ ಅಕ್ರಮ ಸಂಬಂಧವಾಗಿ ಮಾರ್ಪಟ್ಟಿತ್ತು ಅನ್ನೋದು ಮಾಜಿ ಪತಿ ಸರ್ಗೆ ಬ್ರಿನ್ ಆರೋಪ. ಇದಕ್ಕೆ ಪುಷ್ಠಿ ನೀಡುವ ಹಲವು ದಾಖಲೆಗಳನ್ನು ಸರ್ಗೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮಾಧ್ಯಮಗಳಲ್ಲೂ ಮಸ್ಕ್ ಹಾಗೂ ನಿಕೋಲ್ ನಡುವಿನ ಅಫೇರ್ ಸುದ್ದಿಯಾಗಿತ್ತು.

ಗೂಗಲ್‌ ಸಹ ಸಂಸ್ಥಾಪಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಲಾನ್‌ ಮಸ್ಕ್..?

ಗೆಳೆಯರಾಗಿದ್ದ ಸರ್ಗೆ ಹಾಗೂ ಮಸ್ಕ್ ಹಲವು ಬಾರಿ ಸುದ್ದಿಯಾಗಿದ್ದಾರೆ. ಎಲಾನ್ ಮಸ್ಕ್ ಸಂಕಷ್ಟದಲ್ಲಿದ್ದಾರೆ ಹಲವು ಬಾರಿ ಸರ್ಗೆ ಬ್ರಿನ್ ನೆರವು ನೀಡಿದ್ದರು. 2021ರಿಂದ ನಿಕೋಲ್ ಪತಿ ಸರ್ಗೆಗಿಂತ ಹೆಚ್ಚು ಮಸ್ಕ್ ಜೊತೆ ಆತ್ಮೀಯವಾಗಿದ್ದರು. ಹಲವು ಸುತ್ತಿನ ಮಾತುಕತೆ ಬಳಿಕ ಇಬ್ಬರು ಪರಸ್ಪರ ಬೇರ್ಪಟ್ಟಿದ್ದಾರೆ. 2018 ನವೆಂಬರ್ 11 ರಂದು ಗೂಗಲ್ ಸಹ ಸಂಸ್ಥಾಪಕ ಸರ್ಗೆ ಬ್ರಿನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಿಕೋಲ್ ಶನಹಾನ್ ಕೈಹಿಡಿದ ಸರ್ಗೆ ಕಳೆದ ಮೂರು ವರ್ಷ ಜೊತೆಯಾಗಿದ್ದರು. ಇವರಿಗೆ ಹೆಣ್ಣು ಮಗುವಿದೆ. 2015ರ ಯೋಗ ಕಾರ್ಯಕ್ರಮದಲ್ಲಿ ಇವರಿಬ್ಬರು ಭೇಟಿಯಾಗಿದ್ದರು. 

ಭಾರತದ ಈ ನೀಲಿಕಣ್ಣಿನ ಬೆಡಗಿ ಎಲಾನ್‌ ಮಸ್ಕ್‌ ಸೀಕ್ರೆಟ್ ಗರ್ಲ್‌ಫ್ರೆಂಡ್, ಅವಳಿ ಮಕ್ಕಳೂ ಇದ್ದಾರೆ!

ಮಸ್ಕ್ ತಂದೆ ಕಳವಳ: ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿರುವ ನನ್ನ ಪುತ್ರನನ್ನು ಯಾವುದೇ ಸಮಯದಲ್ಲಿ ಹತ್ಯೆ ಮಾಡಬಹುದು ಎಂದು ಎಲಾನ್‌ ಮಸ್‌್ಕರ ತಂದೆ ಎರ್ರಾಲ್‌ ಮಸ್‌್ಕ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕ ಸರ್ಕಾರ ನಿರ್ಧಾರಗಳಲ್ಲಿ ಎಲಾನ್‌ ಮಸ್‌್ಕ ಪಾತ್ರದ ಕುರಿತು ಇತ್ತೀಚೆಗೆ ಪ್ರಕಟವಾದ ವರದಿಯೊಂದರ ಹಿನ್ನೆಲೆಯಲ್ಲಿ ಎರ್ರಾಲ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಕ್ರೇನ್‌ ಯುದ್ದದ ವಿಷಯದಲ್ಲಿ ಈಗಾಗಲೇ ಮಸ್‌್ಕ ರಷ್ಯಾದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೊತೆಗೆ ಸರ್ಕಾರದ ಮೇಲೆ ಅವರ ಪ್ರಭಾವದ ವಿಷಯದ ಕೂಡಾ ಹತ್ಯೆಗೆ ಕಾರಣವಾಗಬಹುದು ಎಂದು ಎರ್ರಾಲ್‌ ಹೇಳಿದ್ದಾರೆ. ರಷ್ಯಾ ಯುದ್ಧದ ವೇಳೆ ಮಸ್‌್ಕ ಉಕ್ರೇನ್‌ಗೆ ಉಚಿತ ಇಂಟರ್ನೆಟ್‌ ಒದಗಿಸಿದ್ದರು.