Asianet Suvarna News Asianet Suvarna News

Lesbian Relationship: ಈ ವಿಷ್ಯದಲ್ಲಿ ಹುಡುಗೀರು ಎಚ್ಚರವಾಗಿರೋದು ಅನಿವಾರ್ಯ

ಸೆಕ್ಸ್ ಬಗ್ಗೆ ಭಾರತದಲ್ಲಿ ಮಾತನಾಡೋದೆ ಬಹಳ ಅಪರೂಪ. ಅದ್ರಲ್ಲೂ ಸಲಿಂಗಕಾಮಿಗಳ ಬಗ್ಗೆ ಧ್ವನಿ ಎತ್ತಿದ್ರೆ ಅವರನ್ನೇ ಜನರು ದೂರವಿಡ್ತಾರೆ. ಇನ್ನು ಸಲಿಂಗಕಾಮಿಗಳ ಸ್ಥಿತಿಯನ್ನು ನಿಮಗೆ ವಿವರಿಸೋದು ಬೇಡ. ಆದ್ರೆ ನೀವು ಲೆಸ್ಬಿಯನ್ ಅಂತಾದ್ರೆ ಕೆಲವೊಂದು ವಿಷ್ಯವನ್ನು ತಿಳಿದಿರುವ ಅವಶ್ಯಕತೆಯಿದೆ. ಇಲ್ಲವೆಂದ್ರೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ.
 

Girls Must Be Aware About Common Issues Lesbian Relationship
Author
First Published Feb 3, 2023, 2:42 PM IST

ಸಲಿಂಗಕಾಮಿಗಳು ಈಗ್ಲೂ ತಮ್ಮ ಗುರುತಿಗಾಗಿ ಹೋರಾಟ ನಡೆಸ್ತಿದ್ದಾರೆ. ಭಾರತದಲ್ಲಿ ಸಲಿಂಗಕಾಮಿಗಳಿಗೆ ಸಾಮಾನ್ಯರಂತೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಅದಕ್ಕೆ ಸಾಕಷ್ಟು ವಿರೋಧಗಳು ಕೇಳಿ ಬರುತ್ತಿರುತ್ತವೆ. ಹುಡುಗ ಹುಡುಗನನ್ನೇ ಪ್ರೀತಿ ಮಾಡೋದ್ರಿಂದ ಅಥವಾ ಹುಡುಗಿ, ಹುಡುಗಿಯನ್ನೇ ಪ್ರೀತಿ ಮಾಡೋದ್ರಿಂದ ಅವರು ಸಮಾಜದಿಂದ ಪ್ರತ್ಯೇಕವಾಗಿರ್ತಾರೆ. ಅವರ ಪ್ರೀತಿ ಸಮಾಜಕ್ಕೆ ಅರ್ಥವಾಗೋದಿಲ್ಲ. ಇದೇ ಕಾರಣಕ್ಕೆ ಈ ಜನರು ಮಾನಸಿಕ ಒತ್ತಡ ಹಾಗೂ ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. 

ಪ್ರತಿ ವಿಚಾರದ ಬಗ್ಗೆಯೂ ಮುಕ್ತವಾಗಿ ಮಾತನಾಡುವ ಅವಶ್ಯಕತೆ ಇದೆ. ಪ್ರತಿಯೊಬ್ಬರಿಗೂ ತಮ್ಮಿಷ್ಟದ ವ್ಯಕ್ತಿಯನ್ನು ಪ್ರೀತಿ (Love) ಸುವ ಹಕ್ಕಿದೆ. ಹಾಗೆಯೇ ಆರೋಗ್ಯ (Health) ಕರ ಜೀವನ ನಡೆಸುವ ಅವಶ್ಯಕತೆಯಿದೆ. ಸಲಿಂಗಕಾಮಿ (Lesbian) ಗಳು ಕೂಡ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ನಾವಿಂದು ಲೆಸ್ಬಿಯನ್ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

Valentine's Day ಹತ್ರ ಬಂತು, ಬ್ರೇಕ್ ಅಪ್ ಮಾಡಿಕೊಳ್ಳೋ ಕ್ಲೂ ಸೋಷಿಯಲ್ ಮೀಡಿಯಾದಲ್ಲಿ ಸಿಗುತ್ತೆ!

ಸಲಿಂಗಕಾಮಿಗಳು ಈ ಸಮಸ್ಯೆಯಿಂದ ದೂರವಿರಿ : 

ಸಾಮಾಜದ ಕೆಟ್ಟ ಕಣ್ಣು ಹಾಗೂ ಮಾನಸಿಕ ಸಮಸ್ಯೆ : ಲೆಸ್ಬಿಯನ್ನರು ಖಿನ್ನತೆ ಮತ್ತು ಆತಂಕದ ಅಪಾಯವನ್ನು ಹೊಂದಿರುತ್ತಾರೆ. ಸಮಾಜದಲ್ಲಿ ಅವರ ಬಗ್ಗೆ ಜನರ ಮನೋಭಾವ ಬದಲಾಗುತ್ತದೆ. ಪ್ರೀತಿಪಾತ್ರರ ನಡವಳಿಕೆಯಲ್ಲಿ ಬದಲಾವಣೆ, ತಾರತಮ್ಯ ಕಾಣಿಸಿಕೊಳ್ಳುತ್ತದೆ. ಇದರಿಂದ ಸಲಿಂಗಕಾಮಿಗಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಇಷ್ಟದಂತೆ ಜೀವನ ನಡೆಸಬೇಕು ಎನ್ನುವವರು ಸಮಾಜದ ಮಾತಿಗೆ ಕಿವಿಗೊಡಬಾರದು.  

ಆತಂಕ – ಲೈಂಗಿಕ ಸೋಂಕು (Sexual Infection): ಅನುಚಿತ ವರ್ತನೆ ಮತ್ತು ಹಿಂಸೆಯನ್ನು ಕೂಡ ಲೆಸ್ಬಿಯನ್ ಅನುಭವಿಸುತ್ತಾರೆ. ಇದು ಅವರನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ. ಸಮಾಜದಿಂದ ಬೆಂಬಲ ಸಿಗದ ಕಾರಣ ಅವರಿಗೆ ಒಂಟಿತನ ಕಾಡುತ್ತದೆ. ರಾಷ್ಟ್ರೀಯ ಒಕ್ಕೂಟದ ವರದಿಯ ಪ್ರಕಾರ, ಶೇಕಡಾ 43.8 ರಷ್ಟು ಲೆಸ್ಬಿಯನ್ ಮಹಿಳೆಯರು ಅತ್ಯಾಚಾರ ಮತ್ತು ದೈಹಿಕ ಹಿಂಸೆಗೆ ಬಲಿಯಾಗುತ್ತಾರಂತೆ.
ಮಹಿಳೆಯರಿಗೆ ಲೈಂಗಿಕ ಸೋಂಕು ಕಾಡುವುದು ಹೆಚ್ಚು. ಲೆಸ್ಬಿಯನ್ ಮಹಿಳೆಯರಿಗೆ ಹ್ಯೂಮನ್ ಪ್ಯಾಪಿಲೋಮವೈರಸ್, ಬ್ಯಾಕ್ಟೀರಿಯಲ್ ವಜಿನೋಸಿಸ್ ಮತ್ತು ಟ್ರೈಕೊಮೋನಿಯಾಸಿಸ್ ಸೇರಿದಂತೆ ಕೆಲ ವೈರಸ್‌ಗಳು ಮಹಿಳೆಯರನ್ನು ಕಾಡುತ್ತದೆ. ಓರಲ್ ಸೆಕ್ಸ್, ಯೋನಿ, ಗುದ ಸೆಕ್ಸ್ ನಿಂದ ಈ ವೈರಸ್ ಬರುವ ಅಪಾಯವಿರುತ್ತದೆ. ಲೈಂಗಿಕ ಸಂಪರ್ಕದಿಂದ ಎಚ್ ಐವಿ ಅಪಾಯವೂ ಇದೆ. ಹಾಗಾಗಿ ಲೆಸ್ಬಿಯನ್ ಕೂಡ ಸಂತೋಷಕರ ಹಾಗೂ ಆರೋಗ್ಯಕರ ಜೀವನಕ್ಕೆ ಸುರಕ್ಷಿತ ಲೈಂಗಿಕತೆಯ ದಾರಿ ತುಳಿಯಬೇಕಿದೆ. ಮೌಖಿಕ ಸಂಭೋಗದ ಸಮಯದಲ್ಲಿ ಲ್ಯಾಟೆಕ್ಸ್ ಅನ್ನು ಬಳಸಬೇಕು. ಲೈಂಗಿಕ ಆಟಿಕೆಗಳನ್ನು ಬಳಸುವ ಮೊದಲು ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಬಳಕೆ ಮಾಡಬೇಕು. ಸಂಗಾತಿ ಯೋನಿ ದ್ರವ ದೇಹದ ಒಳಗೆ ಹೋಗದಂತೆ ನೋಡಿಕೊಳ್ಳಬೇಕು. ಗಾಯಗಳಾಗಿದ್ದರೆ ಅದ್ರ ಬಗ್ಗೆ ವಿಶೇಷ ಎಚ್ಚರಿಕೆವಹಿಸಬೇಕು.

ವಿಶ್ವಾಸಾರ್ಹತೆ (Credibiity) : ಎಸ್ ಟಿಡಿ ತಪ್ಪಿಸಲು ಬಯಸಿದ್ರೆ ಆರೋಗ್ಯಕರ ಹಾಗೂ ವಿಶ್ವಾಸಾರ್ಹ ಸಂಬಂಧ ಬೆಳೆಸಬೇಕು. ಅನೇಕ ಪಾಲುದಾರರ ಜೊತೆ ಸಂಬಂಧ ಬೆಳೆಸಬಾರದು. ಆಲ್ಕೋಹಾಲ್ ಮತ್ತು ಡ್ರಗ್ಸ್ ಸಹ ತ್ಯಜಿಸಬೇಕು. ಚುಚ್ಚುಮದ್ದಿನ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಸೂಜಿಗಳನ್ನು ಹಂಚಿಕೊಳ್ಳಬಾರದು.

ನಿಮ್ಮ ಗೆಳೆಯ ನಿಮ್ಮನ್ನು ನಿಜಕ್ಕೂ ಕೇರ್ ಮಾಡ್ತಾನಾ?

ಆರೋಗ್ಯ ಪರೀಕ್ಷೆ (Health Checkup) : ಸಲಿಂಗಕಾಮಿಗಳು ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ. ತಮ್ಮನ್ನು ಭಾವನಾತ್ಮಕವಾಗಿ ಹೆಚ್ಚು ಇಷ್ಟಪಡುವ ವ್ಯಕ್ತಿಯನ್ನು ಹುಡುಕುತ್ತಾರೆ. ಸೌಜನ್ಯದಿಂದ ವರ್ತಿಸುವ ವ್ಯಕ್ತಿಗೆ ಬಹುಬೇಗ ಆಕರ್ಷಿತರಾಗ್ತಾರೆ. ನೀವು ಭಾವನಾತ್ಮಕ ಸಂಬಂಧಕ್ಕೆ ಮಾತ್ರ ಮಹತ್ವ ನೀಡಬಾರದು. ಸಂಗಾತಿಗೆ ಕೆಲ ಪರೀಕ್ಷೆ ನಡೆಸುವ ಅಗತ್ಯವಿದೆ. ಅದ್ರಲ್ಲಿ ಎಚ್ ಐವಿ ಪರೀಕ್ಷೆ ಕೂಡ ಸೇರಿದೆ. ಇದಕ್ಕೆ ಯಾವುದೇ ಹಿಂಜರಿಕೆಯ ಅಗತ್ಯವಿಲ್ಲ. ಎಚ್ ಐವಿ ಪರೀಕ್ಷೆ ನಂತ್ರವೇ ಲೈಂಗಿಕ ಸಂಬಂಧ ಬೆಳೆಸಿ. ಗಂಭೀರವಾದ ಪಿತ್ತಜನಕಾಂಗದ ಸೋಂಕುಗಳು ಸೇರಿದಂತೆ ಎಸ್‌ಟಿಡಿಗಳು, ಹೆಪಟೈಟಿಸ್ ಎ ಮತ್ತು ಹೆಪಟೈಟಿಸ್ ಬಿ ವಿರುದ್ಧ ರಕ್ಷಣೆ ಪಡೆಯಲು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವ ಅವಶ್ಯಕತೆಯಿದೆ. ಇದು 26 ವರ್ಷ ವಯಸ್ಸಿನ ಮಹಿಳೆಯರಿಗೆ ಲಭ್ಯವಿದೆ.
 

Follow Us:
Download App:
  • android
  • ios