Asianet Suvarna News Asianet Suvarna News

'ಇವಳು ಭಯಂಕರಿ ಸುಂದ್ರಿ' ಅಂದ್ರು ಆನಂದ್‌ ಮಹೀಂದ್ರಾ: ಅದ್ಯಾವ ಹೆಣ್ಣಿಗೆ ಈ ಹೊಗಳಿಕೆ?

5 ವರ್ಷದ ಬಾಲಕಿಯೊಬ್ಬಳಿಗೆ 95 ವರ್ಷವಾದಾಗ ಹೇಗೆ ಕಾಣಿಸುತ್ತಾಳೆ? ಅವಳನ್ನು ಅಷ್ಟು ದೀರ್ಘ ಕಾಲ ಯಾರೂ ವಾಚ್‌ ಮಾಡಲು ಸಾಧ್ಯವಿಲ್ಲ. ಆದರೆ, ಕೃತಕ ಬುದ್ಧಿಮತ್ತೆಯಿಂದ ಜೀವನದ ಪ್ರತಿಯೊಂದು ಹಂತದಲ್ಲೂ ಆಕೆಯ ಮುಖಭಾವ ಹೇಗಿರುತ್ತದೆ ಎನ್ನುವ ಚಿತ್ರಣ ಕಟ್ಟಿಕೊಡಲಾಗಿದೆ. ಇದಕ್ಕೆ ಉದ್ಯಮಿ ಆನಂದ್‌ ಮಹೀಂದ್ರಾ ಅವರು ಸಹ ಅದ್ಭುತವಾಗಿ ಕಮೆಂಟ್‌ ಮಾಡಿದ್ದಾರೆ. 
 

Viral Video: Anand Mahindra said Hauntingly beautiful
Author
First Published Apr 27, 2023, 5:52 PM IST | Last Updated Apr 27, 2023, 5:52 PM IST

ವಯಸ್ಸಾಗುವಿಕೆಯೊಂದು ವಿಸ್ಮಯ ಪ್ರಕ್ರಿಯೆ. ಪ್ರತಿಯೊಂದು ವಯಸ್ಸಿನಲ್ಲೂ ವ್ಯಕ್ತಿಯ ಮುಖಭಾವ, ಕೆನ್ನೆಯ ಭಾಗ, ದೇಹದಲ್ಲಿ ವ್ಯತ್ಯಾಸವಾಗುತ್ತದೆ. ಏಷ್ಟೋ ವರ್ಷಗಳ ಬಳಿಕ ಒಬ್ಬರನ್ನು ನೋಡಿದಾಗ ಹೋಲಿಕೆ ಕಂಡುಬಂದರೂ ಗುರುತು ಸಿಕ್ಕದಷ್ಟು ಬದಲಾಗುವುದು ಇದಕ್ಕೇ. ಆದರೆ, ಈ ಪ್ರಕ್ರಿಯೆಯನ್ನು ಇಷ್ಟು ಕಾಲ ಹಿಡಿದಿಡುವುದು ಕಷ್ಟವಾಗಿತ್ತು. ಕೆಲವೇ ವರ್ಷಗಳ ಮೊದಲು ಫೋಟೊಗಳಲ್ಲಿ ಮಕ್ಕಳ ಬೆಳವಣಿಗೆಯನ್ನು ಹಿಡಿದಿಟ್ಟುಕೊಳ್ಳುವುದು ಪಾಲಕರ ಪ್ರಯತ್ನವಾಗಿತ್ತು. ಆದರೆ, ಇದು ಅತ್ಯಾಧುನಿಕ ಕಾಲ. ವಯಸ್ಸಾಗುವಿಕೆಯನ್ನು ಕಾಣಲು ಫೋಟೊಗಳೇ ಬೇಕಿಲ್ಲ. ಕೃತಕ ಬುದ್ಧಿಮತ್ತೆಯೇ ಸಾಕು. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮೂಲಕ 5 ವರ್ಷದ ಹುಡುಗಿಯಿಂದ 95 ವರ್ಷದ ಅಜ್ಜಿಯವರೆಗಿನ ಮುಖಭಾವ ಹೇಗಿರುತ್ತದೆ ಎನ್ನುವುದನ್ನು ಸೃಷ್ಟಿಲಾಗಿದೆ. ಇದು ಎಷ್ಟು ಅದ್ಭುತವಾಗಿ ಮೂಡಿಬಂದಿದೆ ಎಂದರೆ ನಮ್ಮ ದೇಶದ ಖ್ಯಾತ ಉದ್ಯಮಿ ಆನಂದ್‌ ಮಹೀಂದ್ರಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. “ಭಯಪಡಿಸುವಷ್ಟು ಸುಂದರʼ ಎಂಬುದಾಗಿ ಅವರು ಈ ವಿಡಿಯೋಕ್ಕೆ ಕಾಮೆಂಟ್‌ ಮಾಡಿದ್ದಾರೆ.


ಕೈಗಾರಿಕೋದ್ಯಮಿ (Industrialist) ಆನಂದ್‌ ಮಹೀಂದ್ರಾ (Anand Mahidnra) ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಸಕ್ರಿಯವಾಗಿರುತ್ತಾರೆ. ಮಹೀಂದ್ರಾ ಗ್ರೂಪ್‌ (Mahindra Group) ಮುಖ್ಯಸ್ಥರ ಟ್ವಿಟರ್‌ ಖಾತೆ (Twitter Account) ಅಚ್ಚರಿಯ ವಿಚಾರಗಳ ಕುರಿತು ಯಾವಾಗಲೂ ಸಕ್ರಿಯವಾಗಿರುತ್ತದೆ. ವಿಶೇಷವೆನ್ನಿಸುವ ಚಿತ್ರಗಳು, ವಿಡಿಯೋ, ಸುದ್ದಿಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಮೂಲಕ ಹಲವು ಮಾದರಿಯನ್ನು ರೂಪಿಸಲಾಗುತ್ತದೆ. ಯಾರೋ ಒಬ್ಬ ಇಂಜಿನಿಯರ್‌ ಅತ್ಯದ್ಭುತ ಮಾಡೆಲ್‌ ಅನ್ನು ಕೃತಕ ಬುದ್ಧಿಮತ್ತೆ ಮೂಲಕ ಸೃಷ್ಟಿಸಿದರೆ ಮತ್ಯಾರೋ ಒಬ್ಬರು ಕೃತಕ ಬುದ್ಧಿಮತ್ತೆ  (Artificial Intelligence) ತಂತ್ರಜ್ಞಾನವನ್ನು (Technology) ಬಳಸಿಕೊಂಡು ಭವಿಷ್ಯದ ಜೀವನವನ್ನು ರೂಪಿಸುತ್ತಾರೆ. ಹೀಗೆ, ಏನೇನೋ ಪ್ರಯೋಗಗಳು ಇದನ್ನಾಧರಿಸಿ ನಡೆಯುತ್ತಿವೆ. ಇದೀಗ, ಕೃತಕ ಬುದ್ಧಿಮತ್ತೆಯ ಮೂಲಕ ಹುಡುಗಿಯೊಬ್ಬಳ (Girl) ಮುಖವನ್ನು ವಯಸ್ಸಿಗೆ ತಕ್ಕಂತೆ ರೂಪಿಸಿರುವುದು ಎಲ್ಲರ ಗಮನ ಸೆಳೆದಿದೆ. ಉದ್ಯಮಿ ಆನಂದ್‌ ಮಹೀಂದ್ರಾ ಅವರೂ ಸಹ ಇದಕ್ಕೆ ವಿಶೇಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 5 ವರ್ಷದ ಹುಡುಗಿ 95 ವರ್ಷವಾಗುವ ಸಮಯಕ್ಕೆ ಹೇಗಿರುತ್ತಾಳೆ ಎನ್ನುವುದನ್ನು ತೋರಿಸುವ ಈ ವಿಡಿಯೋ (Video) ಭಯಂಕರ ಎನಿಸುವಷ್ಟು ಚೆನ್ನಾಗಿದೆ ಎಂದು ಹೇಳಿದ್ದಾರೆ.

37 ಸಾವಿರ ಅಡಿ ಎತ್ತರದಲ್ಲಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರ ಡಾನ್ಸ್‌: ವೈರಲ್ ವಿಡಿಯೋ

ಮಾನವೀಯ ಮುಖ
“ಈ ಪೋಸ್ಟ್‌ ಕೃತಕ ಬುದ್ಧಿಮತ್ತೆಯಿಂದ ರೂಪಿಸಲಾದ ಚಿತ್ರಣವನ್ನು ನೀಡುತ್ತದೆ. ಇಷ್ಟೊಂದು ಸುಂದರವಾದ (Beautiful) ಮತ್ತು ಮಾನವೀಯ (Humanity) ಮುಖವುಳ್ಳದ್ದನ್ನು ಸೃಷ್ಟಿಸುವ ಕೃತಕ ಬುದ್ಧಿಮತ್ತೆಯ ಶಕ್ತಿಯ ಬಗ್ಗೆ ನಾನು ಭಯಪಡುತ್ತಿಲ್ಲʼ ಎಂದು ಅವರು ಹೇಳಿಕೊಂಡಿದ್ದಾರೆ. 

ಎಐ ಭವಿಷ್ಯ
ಟ್ವಿಟರ್‌ ಬಳಕೆದಾರರು ಈ ವಿಡಿಯೋಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಭಿನ್ನ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲ, ಇದು ಕೃತಕ ಬುದ್ಧಿಮತ್ತೆಯ ಭವಿಷ್ಯದ (Future) ಕುರಿತಾದ ಚರ್ಚೆಯನ್ನೂ ಹುಟ್ಟುಹಾಕಿದೆ. ಇದರ ಸಾಧ್ಯಾಸಾಧ್ಯತೆಯ (Possibilities) ಕುರಿತು ಹಲವರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವರು ಕಳವಳವನ್ನೂ ತೋರಿದ್ದಾರೆ. ಪೋಸ್ಟ್‌ ಮಾಡಿದ ಬಳಿಕ ಈ ವಿಡಿಯೋ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಸಾವಿರಾರು ಬಾರಿ ಶೇರ್‌ (Share) ಆಗಿದೆ. “ಇದು ಭಾರೀ ಸುಂದರ ಅಷ್ಟೇ ಸ್ಫೂರ್ತಿ ತುಂಬುವಂತಹ ಕಾರ್ಯ. ಆದರೆ ಇದನ್ನೇ ತೀವ್ರವಾಗಿ ನಂಬಿಕೊಳ್ಳಬಾರದು ಮತ್ತು ವಾಸ್ತವವನ್ನು (Real) ಮರೆಯಬಾರದುʼ ಎಂದು ಯಾರೋ ಹೇಳಿದ್ದಾರೆ. 

Trending News : ಕೂದಲಿಗೆ ಬಣ್ಣ ಹಚ್ತಿದ್ದಂತೆ ಸೌಂದರ್ಯ ಕಂಡು ನಕ್ಕು ನಕ್ಕು ಸುಸ್ತಾದ ಅಜ್ಜಿ

ಮೂರನೆಯ ವ್ಯಕ್ತಿಯೊಬ್ಬರು ಹೇಳಿದ್ದಾರೆ, ವಿದ್ಯುತ್ತಿನಂತೆ (Electricity) ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲೂ ಜೀವನವನ್ನೇ ಬದಲಿಸುವ ಅವಕಾಶಗಳಿವೆ. ಯಾರಾದರೂ ತಮ್ಮ ಎಕ್ಸ್‌ ಯುವಿ ವಾಹನದಲ್ಲಿ ನಿದ್ರಿಸುತ್ತ ಚಾಲನೆ ಮಾಡಲು ಆರಂಭಿಸಿದಾಗ ಅಪಘಾತವಾಗುವುದನ್ನು ತಪ್ಪಿಸಲು ಅದರ ಬಗ್ಗೆ ಎಚ್ಚರಿಕೆ ನೀಡುವಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಾಧ್ಯ. ಇದರ ಸಾಮರ್ಥ್ಯಕ್ಕೆ (Capacity) ಮಿತಿ ಇಲ್ಲʼ.

 

Latest Videos
Follow Us:
Download App:
  • android
  • ios