ಆನ್‌ಲೈನ್ ಚಾಟ್‌ಗಳ ಮೂಲಕ ಲೈಂಗಿಕ ತೃಪ್ತಿ ಪಡೆಯುವುದು ಸಂಗಾತಿಗೆ ಮೋಸ ಮಾಡಿದಂತೆಯೇ? ಓದುಗರೊಬ್ಬರು ಲೈಂಗಿಕ ತಜ್ಞರೊಂದಿಗೆ ಈ ಸಂಶಯವನ್ನು ಹಂಚಿಕೊಂಡಿದ್ದಾರೆ. ತಜ್ಞರು ಇದಕ್ಕೆ ಸೂಕ್ತ ಉತ್ತರ ನೀಡಿದ್ದಾರೆ.
ಪ್ರಶ್ನೆ: ನಾನು ವಿವಾಹಿತೆ. ಮೂವತ್ತು ವರ್ಷ. ವಾರಕ್ಕೊಮ್ಮೆ ಮಿಲನ ಹೊಂದುತ್ತೇವೆ. ಗಂಡನಿಗೆ ಅದರಲ್ಲಿ ನನ್ನಷ್ಟು ಆಸಕ್ತಿಯಿಲ್ಲ. ಇತ್ತೀಚೆಗೆ ನನಗೆ ಒಬ್ಬಾತ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯವಾದ. ಆತನೊಂದಿಗೆ ಚಾಟ್ ಮಾಡುತ್ತ, ಕಾಮಸುಖದ ವಿಷಯ ಬಂತು. ಆತನೂ ನಾನೂ ಆ ಬಗ್ಗೆ ತುಂಬಾ ಹರಟಿಕೊಂಡೆವು. ಮಾತಿನಲ್ಲೇ ದೈಹಿಕ ಮಿಲನದ ಚಟುವಟಿಕೆಯೆಲ್ಲ ನಡೆದುಹೋಯಿತು. ಅದು ನಂಗೆ ತುಂಬಾ ಸುಖ ಕೊಟ್ಟಿತು. ಇದು ನಡೆದ ಬಳಿಕ, ನನ್ನ ಸಂಗಾತಿಗೇ ಮೋಸ ಮಾಡ್ತಿದೀನಾ ಅನಿಸ್ತಿದೆ. ನನಗೆ ಆ ಆನ್‌ಲೈನ್ ಪುರುಷನ ಜೊತೆಗೆ ಹೋಗುವ ಯಾವ ಆಸಕ್ತಿಯೂ ಇಲ್ಲ. ಆದರೆ ಅವನ ಜೊತೆ ಹರಟೆ ಹೊಡೆದಾಗ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ಸಿಗುವ ಸುಖ ಸಿಕ್ಕಿದಂತೆ ಅನಿಸುತ್ತದೆ. ಇದು ತಪ್ಪಾ?
ಉತ್ತರ: ನಿಮ್ಮ ಪ್ರಶ್ನೆ ಉತ್ತರ ನೀಡುವುದು ಸ್ವಲ್ಪ ಟ್ರಿಕ್ಕೀ. ಗಂಡನಿಂದ ಸುಖ ಸಿಗುತ್ತಿಲ್ಲ ಎಂದು ನೀವು ಭಾವಿಸಿದ್ದೀರಿ. ಅದನ್ನು ಆನ್‌ಲೈನ್ ಗಂಡಸಿನ ಮೂಲಕ ಪಡೆಯುತ್ತಿದ್ದೀರಿ. ಇದರಲ್ಲಿ ಮೇಲ್ನೋಟಕ್ಕೆ ಯಾವ ತಪ್ಪೂ ಕಾಣಿಸುವುದಿಲ್ಲ. ಆದರೆ ಇದನ್ನು ಇನ್ನೂ ಸ್ವಲ್ಪ ಆಳವಾಗಿ ಯೋಚಿಸಿ ನೋಡಿ. ಆನ್‌ಲೈನ್‌ನಲ್ಲಿ ನಿಮಗೆ ಸುಖ ನೀಡುತ್ತಿರುವವನು ಯಾರು ಎಂಬ ಪರಿಚಯ ನಿಮಗಿಲ್ಲ. ಅದು ಪುರುಷನೂ ಇರಬಹುದು, ಸ್ತ್ರೀಯೂ ಇರಬಹುದು ಅಥವಾ ಅದೊಂದು ಯಂತ್ರವೂ ಇರಬಹುದು. ಯಾಕೆಂದರೆ ಇತ್ತೀಚೆಗೆ ಹೀಗೆ ಆನ್‌ಲೈನ್‌ನಲ್ಲಿ ತೃಪ್ತಿ ನೀಡಬಲ್ಲ ಬಾಟ್‌ಗಳೂ ತಯಾರಾಗಿವೆ. ಇಂಥ ಸುಳ್ಳು ಕಲ್ಪನೆಗಳ ಮೂಲಕ ನಿಮ್ಮ ಕಾಮ ಸುಖದ ಬದುಕನ್ನು ಯಾಕೆ ಕಟ್ಟಿಕೊಳ್ಳುತ್ತೀರಿ. ಅದರ ಬದಲಾಗಿ ನಿಮ್ಮ ಗಂಡನನ್ನೇ ನಿಮ್ಮ ಲೈಂಗಿಕತೆಯ ನಿರೀಕ್ಷೆಗಳಿಗೆ ತಕ್ಕಂತೆ ಸಜ್ಜುಗೊಳಿಸಿ. ನಿಜವಾದ ಜಗತ್ತಿನಲ್ಲಿ ಇರುವ ಸುಖ ವರ್ಚುವಲ್ ಜಗತ್ತಿನಲ್ಲಿ ಇರುವುದಿಲ್ಲ.
ನಿಮ್ಮ ಲೈಂಗಿಕ ಚಾಟ್‌ನ ಸುಳಿವು ನಿಮ್ಮ ಗಂಡನಿಗೆ ತಿಳಿದರೆ ಏನಾಗಬಹುದು? ಈ ಅಪಾಯ ಇದ್ದೇ ಇದೆ. ಇದರಿಂದ ನಿಮ್ಮ ದಾಂಪತ್ಯದಲ್ಲಿ ಬಿರುಕು ಮೂಡಬಹುದು. ಹಾಗಾದರೆ ನಿಮ್ಮ ಲೈಂಗಿಕ ತೃಪ್ತಿಗೆ ಮತ್ತಷ್ಟು ಕಂಟಕವಾಗುತ್ತದೆ. ಅಥವಾ ನಿಮ್ಮ ಜಾಗದಲ್ಲಿ ನಿಮ್ಮ ಗಂಡನನ್ನೇ ಕಲ್ಪಿಸಿಕೊಂಡು ನೋಡಿ. ನಿಮ್ಮ ಬದಲಾಗಿ ನಿಮ್ಮ ಗಂಡ ಆನ್‌ಲೈನ್ ಸ್ತ್ರೀಯೊಬ್ಬಳ ಜೊತೆಗೆ ಇಂಥ ಸುಖ ಪಡೆಯುತ್ತಿದ್ದರೆ ನೀವು ಸಹಿಸುತ್ತಿದ್ದಿರಾ? ಅದು ತಪ್ಪು ಎಂದ ಮೇಲೆ ಇದೂ ತಪ್ಪು ತಾನೆ? ಹಾಗೆಂದು ತಪ್ಪಿನ ಭಾವನೆಯಲ್ಲೇ ಕೊರಗುತ್ತ ಇರಬೇಡಿ. ಪಶ್ಚಾತ್ತಾಪ ಬೇಕಿಲ್ಲ. ಗಂಡನನ್ನೇ ನಿಮ್ಮ ಕಲ್ಪನೆಯ ಪುರುಷನನ್ನಾಗಿ ರೂಪಿಸಿಕೊಳ್ಳಿ. ಅವರೊಂದಿಗೆ ಸುಖಿಸಿ. ಹಾಗೇ ನಿಮ್ಮ ಗಂಡನ ಕಲ್ಪನೆಗಳೂ ನಿಮ್ಮ ಬಗ್ಗೆ ಹಲವು ಇರಬಹುದು. ನೀವು ಕೂಡ ನಿಮ್ಮ ಗಂಡನ ಕಲ್ಪನೆಗಳಿಗೆ ಸರಿಹೊಂದಲು, ಅವರಿಗೆ ತಕ್ಕ ಸುಖ ನೀಡಲು ಯತ್ನಿಸಿ. ಹೊಸ ಭಂಗಿಗಳನ್ನೂ ಹೊಸ ಜಾಗಗಳನ್ನೂ ಅನ್ವೇಷಿಸಿ. ಲೈಂಗಿಕ ಬದುಕಿಗೆ ಮಸಾಲೆ ತುಂಬಿಸಿ. ಆಗ ಈ ದ್ವಂದ್ವ ಇರುವುದಿಲ್ಲ.
ಈ ಸುದ್ದಿ ಪುರುಷರಿಗೆ ಮಾತ್ರ! ಅಹ್ಲಾದಕರ ಜೀವನಕ್ಕೆ ಸೂಪರ್ ಟಿಪ್ಸ್ ಕೊಟ್ಟ ಹೊಸ ಅಧ್ಯಯನ
ಪ್ರಶ್ನೆ: ನನ್ನ ಜಿ- ಸ್ಪಾಟ್ ಎಲ್ಲಿದೆ ಎಂದು ಕಂಡುಹಿಡಿಯುವುದು ಹೇಗೆ?
ಉತ್ತರ: ಜಿ ಸ್ಪಾಟ್ ಬಗ್ಗೆ ಹಲವರಿಗೆ ಹಲವು ಬಗೆಯ ಗೊಂದಲ ಇದೆ. ಜಿ-ಸ್ಪಾಟ್ ಅಂದರೆ, ಸ್ತ್ರೀ ಲೈಂಗಿಕತೆಯ ಸಂದರ್ಭದಲ್ಲಿ ಅತ್ಯಂತ ಹೆಚ್ಚಿನ ಸುಖ ಪಡೆಯುವ ಗುಪ್ತಾಂಗದ ಒಂದು ಒಳಭಾಗ. ಕೆಲವು ತಜ್ಞರು ಅಂಥದೊಂದು ಅಂಗವೇ ಇಲ್ಲ ಎಂದೂ ಹೇಳುತ್ತಾರೆ. ಇಡೀ ಗುಪ್ತಾಂಗ ಸಂಭೋಗದ ಸುಖವನ್ನು ಪಡೆಯುತ್ತದೆ ಎನ್ನುತ್ತಾರೆ. ಆದರೆ ಹೆಚ್ಚಿನವರು, ಅಂಥದೊಂದು ಸ್ಪಾಟ್ ನಿಜವಾಗಿಯೂ ಅಂಗದ ಒಳಭಾಗದಲ್ಲಿ ಮೇಲುಗಡೆ ಇರುತ್ತದೆ- ಪ್ರತಿಯೊಬ್ಬರಿಗೂ ಸ್ವಲ್ಪ ವ್ಯತ್ಯಾಸ ಇರಬಹುದು ಎಂದು ಗುರುತಿಸುತ್ತಾರೆ. ಆದರೆ ಇದೆಲ್ಲ ನಿಮಗೆ ಅಷ್ಟೊಂದು ಮುಖ್ಯವಾಗಬೇಕಾದ್ದಿಲ್ಲ. ನಿಜಕ್ಕೂ ನಿಮ್ಮ ಗಂಡ ಅಥವಾ ಸಂಗಾತಿ ನಿಮ್ಮ ಆ ಸ್ಪಾಟನ್ನು ಕಂಡುಹಿಡಿಯಲು ಶಕ್ತನಾಗಿದ್ದರೆ, ಆಗ ನೀವು ಖುಷಿಪಡಬೇಕು. ಇಲ್ಲವಾದರೆ ನೀವು ಅದರ ಬಗ್ಗೆ ನಿಮ್ಮದೇ ಅನ್ವೇಷಣೆ ಮುಂದುವರಿಸುವುದು ಹಾಗೂ ನಿಮ್ಮ ಸಂಗಾತಿಗೆ ಅದನ್ನು ಕಂಡುಹಿಡಿಯುವ ಕಲೆಯನ್ನು ಕಲಿಸಿಕೊಡುವುದು ಮುಖ್ಯ ಆಗಬಹುದು!
ಇದು ಅಂತ್ಯವೋ, ಆರಂಭವೋ? ಡಿವೋರ್ಸ್ ನಂತ್ರ ಖುಷಿಯಾಗಿರ್ತಾರೆ ಅನೇಕ ಮಹಿಳೆಯರು
