Asianet Suvarna News Asianet Suvarna News

'ಮೈಂಡ್‌ ಎಸೆಯೋ ಗೂಗ್ಲಿಗಳಿಗೆ ಬೌಲ್ಡ್ ಆಗ್ಬೇಡಿ!'

ಇಲ್ಲಿರೋದು ಸ್ಫೂರ್ತಿದಾಯಕ ಮಾತುಗಳು. ಗೌರ್ ಗೋಪಾಲ್‌ದಾಸ್ ಒಂದಿಷ್ಟು ಜನ ಕಾಲೇಜ್ ಹುಡುಗ್ರನ್ನ ಕೂಡಿಸಿಕೊಂಡು ಮಾತಾಡಿದ್ದು. ಜೋಶ್ ತುಂಬಿದ ಈ ಮಾತುಗಳು ನಿಮ್ಮ ಅಲರಾಂ ಸ್ನೂಜ್‌ಗೆ ಹೋಗದಂತೆ ಕಾಯಲಿ.


 

gaur gopal das inspirational thoughts  with youngsters
Author
Bangalore, First Published Nov 18, 2019, 3:43 PM IST

ನಿಮ್ಮ ಲೈಫ್ ಅನ್ನು ಕ್ರಿಕೆಟ್ ಮ್ಯಾಚ್ ಅಂತ ಇಟ್ಕೊಳ್ಳಿ. ಮೈಂಡ್ ಅಥವಾ ಮನಸ್ಸು ಎಸೆಯೋ ಗೂಗ್ಲಿಗಳಿಗೆ ಹೇಗೆ ಬ್ಯಾಟ್ ಮಾಡ್ತೀರಾ, ನೆನಪಿಸಿ. ಬೆಳಗ್ಗೆ ಎಕ್ಸರ್‌ಸೈಸ್, ಜಾಗಿಂಗ್ ಮಾಡ್ಬೇಕು ಅಂತ ಹಿಂದಿನ ರಾತ್ರಿ ನಿರ್ಧರಿಸಿರುತ್ತೀರಿ. ಬೆಳಗಾಗುತ್ತೆ. ಹಿಂದಿನ ದಿನದ ನಿರ್ಧಾರ ನೆನಪಾಗುತ್ತೆ. ಇದೇ ಟೈಮ್ ನೋಡಿ ಮನಸು ಹೇಳುತ್ತೆ. ಏಳ್ಬೇಡ, ಇನ್ನೊಂದು ಸ್ವಲ್ಪ ಹೊತ್ತು ಮಲ್ಕೋ. ಓಕೆ ಅನ್ತೀವಿ, ಹೊದ್ಕೊಂಡು ಮಲಗ್ತೀವಿ.

   ***

ಅಪ್ಪ ಅಂತಾನೆ, ಪಕ್ಕದ್ಮನೆ ಸೋನು ನೋಡು, ಎಷ್ಟು ಚೆನ್ನಾಗ್ ಓಡ್ತಾಳೆ. ಇಡೀ ಕ್ಲಾಸ್‌ಗೇ ಫಸ್ಟ್ ಅವ್ಳ. ನೀನೂ ಇದೀಯಾ. ಪ್ರತೀ ಸಲ ತೆಗೆಯೋ ಮಾರ್ಕ್ ನೋಡಿದ್ರೆ.. ಸ್ಮಾರ್ಟ್ ಮಗ ಹೇಳ್ತಾನೆ, ನೀ ಹೇಳೋ ಮುಂಚಿನಿಂದಲೂ ಅವಳನ್ನೇ ನೋಡ್ತಿದ್ದೀನಪ್ಪಾ.. ಉಳಿದದ್ದು ಊಹಿಸಿಕೊಳ್ಳಿ.

   ***

ಎಷ್ಟು ಜನ ಬೆಳಗ್ಗೆ ಬೇಗ ಏಳ್ಬೇಕು ಅಂದುಕೊಂಡಿದ್ದೀರಾ?

ಎಷ್ಟು ಜನ ಇದಕ್ಕಾಗಿ ಅಲರಾಂ ಇಟ್ಟಿದ್ದೀರಾ?

ಎಷ್ಟು ಜನರಿಗೆ ನೀವಿಟ್ಟ ಅಲರಾಂ ಹೊಡ್ಕೊಳ್ಬೇಕು ಅಂತ ಇದೆ? (ಅಲರಾಂ ಹೊಡ್ಕೊಳ್ದೇ ಇರಲಿ ಅಂತಲೇ ಬಹಳ ಜನ ಬಯಸೋದು)

ಎಷ್ಟು ಜನ ಹೊಡಕೊಂಡ ಅಲರಾಂಅನ್ನು ಸ್ನೂಜ್‌ಗೆ ಹಾಕಿ ವಾಪಾಸ್ ಬಿದ್ಕೊಳ್ತೀರಾ?

ಈ ಎಲ್ಲ ಪ್ರಶ್ನೆಗೆ ಎಸ್ ಅನ್ನೋದು ನಿಮ್ಮ ಉತ್ತರ ಆಗಿದ್ರೆ ಮುಂದೆ ಓದಿ, ನೋ ಅಂದ್ರೂ ಸ್ವಲ್ಪ ಕಣ್ಣು ಹಾಯಿಸಿ.

ಮರ ನೆಟ್ಟು 3 ಪಟ್ಟು ಲಾಭ ಗಳಿಸಿ, ಕಾವೇರಿ ಉಳಿಸಿ

- ಯಾವಾಗ ಅಲರಾಂ ಹೊಡೆದುಕೊಳ್ಳುತ್ತೋ ಆಗ ಮನಸ್ಸು ಮೊದಲ ಗೂಗ್ಲಿ ಎಸೆಯುತ್ತೆ. ಸ್ನೂಜ್ ಮೋಡ್‌ಗೆ ಹಾಕಿ ಮಲಕ್ಕೋ ಅನ್ನುತ್ತೆ. ನೀವು ಸ್ನೂಜ್‌ಗೆ ಹಾಕಿದ್ದೇ ಕ್ಲೀನ್ ಬೌಲ್ಡ್ ಆಗಿ ಬಿಡ್ತೀರ!

- ಅಲರಾಮ್ ಅನ್ನು ಸ್ನೂಜ್ ಮೋಡ್‌ಗೆ ಹಾಕಿದಾಗ ಏನಾಗುತ್ತೆ, ನೀವು ಮೈಂಡ್ ಗೆ ಗೇಮ್‌ಅನ್ನು ಬಿಟ್ಟು ಕೊಡ್ತೀರಾ. ನಿಮ್ಮ ದಿನವೊಂದು ಇಂಥ ಸೋಲಿನಿಂದ ಆರಂಭವಾಗುತ್ತೆ. ಫಸ್ಟ್ ಬಾಲ್‌ಗೇ ಕ್ಲೀನ್ ಬೌಲ್ಡ್ ಆದಮೇಲೆ ಏನ್ ಮ್ಯಾಚ್ ನಡೆಯುತ್ತೆ!

- ಇದೆಲ್ಲ ಯಾಕೆ ಅಂದರೆ ನಿಮ್ ಮನಸ್ಸಿಗೆ ನೀವು ವಿನ್ ಆಗೋದು ಬೇಕಿಲ್ಲ. ಐದು ನಿಮಿಷ ಹೆಚ್ಚು ಮಲಗೋದೂ ತಪ್ಪಾ?

ಸೋಲೋದು ಕೆಟ್ಟದಲ್ಲ, ಐದು ನಿಮಿಷ ಹೆಚ್ಚು ಮಲಕೊಂಡ ಕೂಡಲೇ ಏನೂ ಆಗಲ್ಲ. ಸಮಸ್ಯೆ ಇರೋದು ಸೋಲುವ ಪರಂಪರೆಯನ್ನು ನೀವು ಬೆಳೆಸುತ್ತಾ ಹೋಗೋದರಲ್ಲಿ. ಈ ಮೂಲಕ ನೀವು ನಿಮಗೆ ಹೇಳ್ತೀರಾ, ನಿನ್ನೆ ರಾತ್ರಿ ಮಲಗುವಾಗ ಬೇಗ ಏಳ್ಬೇಕು ಅಂತ ಡಿಸೈಡ್ ಮಾಡಿದ್ದು ಮುಖ್ಯ ಅಲ್ಲ, ಮನಸ್ಸು ಏನು ಹೇಳುತ್ತೋ ಅದು ಇಂಪಾರ್ಟೆಂಟ್ ಅಂತ. ಇದು ಕೇವಲ ಬೆಳಗ್ಗೆ ಏಳೋ ವಿಷ್ಯ ಮಾತ್ರ ಅಲ್ಲ, ಇದು ಇಡೀ ಬದುಕಿಗೆ ಸಂಬಂಧಿಸಿದ್ದು. ಮನಸ್ಸು ಹೇಳಿದ್ದನ್ನೇ ಓಕೆ ಮಾಡ್ತಾ ಹೋದರೆ ಬದುಕಿಡೀ ಸೋಲೋದೇ ಆಗುತ್ತೆ.

ಟಿಬೆಟಿಯನ್‌ ಗುರು ದಲಾಯಿಲಾಮ ಮಂಗಳೂರಿಗೆ!

ನಿಮಗೆ ಐದು ಗಂಟೆಗೆ ಏಳಕ್ಕಾಗಲ್ವಾ ಪರವಾಗಿಲ್ಲ. ಐದೂವರೆಗೇ ಏಳಿ. ಅಲರಾಂ ಐದೂವರೆಗೇ ಇಡಿ. ಸ್ನೂಸ್‌ಗೆ ಅವಕಾಶ ಕೊಡಬೇಡಿ. ಲೈಫ್‌ನಲ್ಲಿ ಸ್ಲೆಡ್ಜಿಂಗ್ ಆದ್ರೆ.. ಕ್ರಿಕೆಟ್‌ನಲ್ಲಿ ಸ್ಲೆಡ್ಜಿಂಗ್ ಅಂತಿರುತ್ತೆ. ಫೀಲ್ಡ್‌ನಲ್ಲಿ ಮ್ಯಾಚ್ ನಡೆಯುತ್ತಿರುವಾಗ ಎದುರಾಳಿ ತಂಡದವರು ಬಂದು ಬ್ಯಾಟ್ಸ್‌ಮೆನ್‌ಗೆ ಬೈತಾರೆ, ಕೆಟ್ಟ ಶಬ್ದ ಹೇಳ್ತಾರೆ. ಅವ್ರ ಮನಸ್ಸನ್ನು ಸಂಪೂರ್ಣ ಹಾಳು ಮಾಡಿ, ಫೋಕಸ್ ತಪ್ಪುವಂತೆ ಮಾಡ್ತಾರೆ.

ಸಚಿನ್‌ನಂಥ ವ್ಯಕ್ತಿಗೆ ಇದು ಅಡ್ಡಿಯಾಗಲೇ ಇಲ್ಲ. ಏಕೆಂದರೆ ಕೂಲ್ ಮ್ಯಾನ್. ಈಗ ನಿಮ್ಮ ವಿಷ್ಯಕ್ಕೆ ಬರೋಣ. ನಡುರಸ್ತೆಯಲ್ಲಿ ಪಕ್ಕದ ಗಾಡಿಯವ ಬಂದು ರೇಗಿಸ್ತಾನೆ. ಕೆಟ್ಟ ಮಾತು ಹೇಳ್ತಾನೆ. ನೀವು ಸಚಿನ್ ಥರ ಕೂಲ್ ಆಗಿರ‌್ತೀರಾ, ಅಲ್ಲಾ ಸಂಪೂರ್ಣ ಮನಸ್ಸಿನ ಸ್ವಾಧೀನ ಕಳೆದುಕೊಂಡು ಎಗರಾಡಿ ಇಡೀ ದಿನ ವ್ಯಗ್ರರಾಗಿಯೇ ಇರ‌್ತೀರಾ..

ನನ್ನ ಉತ್ತರಾಧಿಕಾರಿ ಭಾರತೀಯ: ದಲೈ ಲಾಮಾ ಹೇಳಿಕೆಯಿಂದ ದಂಗಾದ ಚೀನಾ!

ಇದು ನಮ್ ತಪ್ಪಾ?

ಎದುರಿಗೊಬ್ಬ ಬಂದು ಬೈದರೆ ಅದು ನಿಮ್ಮ ತಪ್ಪಲ್ಲ. ಅವರದ್ದೇ ತಪ್ಪು. ಆದರೆ ಅವರು ತಪ್ಪು ಮಾಡದ ಹಾಗೆ ಮಾಡೋದು ನಿಮಗೆ ಸಾಧ್ಯವಾ. ಎದುರಾಳಿಗಳು ಸ್ಲೆಡ್ಜಿಂಗ್ ಮಾಡೋದನ್ನು ತಡೆಯೋದಕ್ಕೆ ನಿಮ್ ಕೈಯಲ್ಲಿ ಆಗುತ್ತಾ. ಬೇಡ, ಮುಂದಿನ ಒಂದು ಕ್ಷಣವನ್ನು ನೀವು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾ.. ಇಲ್ಲ.

ಹಾಗಿದ್ದ ಮೇಲೆ ನಾವು ವ್ಯಗ್ರರಾಗಿ ಮ್ಯಾಚ್ ಹಾಳು ಮಾಡೋದು ಒಳ್ಳೆಯದಾ, ಸಚಿನ್ ಥರ ಕೂಲ್ ಆಗಿ ಮ್ಯಾಚ್ ವಿನ್ ಮಾಡೋದು ಬೆಸ್ಟಾ.. ವಾಟರ್ ಬಾಟಲ್, ಸೋಡಾ ಬಾಟಲ್ ಒಂದು ಸೋಡಾ ಬಾಟಲ್ ಕುಲುಕಿ. ಆಮೇಲೆ ಮುಚ್ಚಳ ಓಪನ್ ಮಾಡಿ. ಒಳಗಿರುವ ಸೋಡಾ ಚಿಮ್ಮಿ ಅಲ್ಲೆಲ್ಲ ರಾಡಿ ಮಾಡಿ ಬಿಡುತ್ತೆ. ಅದೇ ವಾಟರ್ ಬಾಟಲ್‌ಅನ್ನು ಎಷ್ಟೇ ಕುಲುಕಿಸಿ. ಆಮೇಲೆ ತೆರೆಯಿರಿ. ನೀರು ಒಳಗೇ ಇರುತ್ತೆ. ಈಗ ನಾವು ನಿರ್ಧರಿಸಬೇಕು, ನಾವು ಸೋಡಾ ಬಾಟಲ್ ಆಗ್ಬೇಕಾ.. ಜೀವ ಜಲ ತುಂಬಿರುವ ನೀರಿನ ಬಾಟಲ್ಲಾ ಅಂತ!

 

Follow Us:
Download App:
  • android
  • ios