ನನ್ನ ಉತ್ತರಾಧಿಕಾರಿ ಭಾರತೀಯ: ದಲೈ ಲಾಮಾ ಹೇಳಿಕೆಯಿಂದ ದಂಗಾದ ಚೀನಾ!

ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರಿಂದ ಮಹತ್ವದ ಘೋಷಣೆ| ತಮ್ಮ ಉತ್ತರಾಧಿಕಾರಿ ಭಾರತೀಯನಾಗಬಹುದು ಎಂದ ದಲೈ ಲಾಮಾ| ತಮ್ಮ ಸಾವಿನ ಬಳಿಕ ಚೀನಾ ಉತ್ತರಾಧಿಕಾರಿ ನೇಮಿಸಿದರೆ ಒಪ್ಪಲ್ಲ ಎಂದ ಧರ್ಮಗುರು| 14ನೇ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅಂತರಾಳದ ಮಾತು|

Dalai Lama Says His Successor May Come From India

ಧರ್ಮಶಾಲಾ(ಮಾ.19): ನನ್ನ ಉತ್ತರಾಧಿಕಾರಿ ಬಹುಶಃ ಭಾರತೀಯನಾಗಿರಬಹುದು ಎಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ.

'ನನ್ನ ಸಾವಿನ ಬಳಿಕ ನಾನು ಭಾರತದಲ್ಲೇ ಮರುಹುಟ್ಟು ಪಡೆಯುತ್ತೇನೆ ಎಂದಿರುವ ದಲೈ ಲಾಮಾ, ಒಂದು ವೇಳೆ ನನ್ನ ಸಾವಿನ ಬಳಿಕ ಚೀನಾ ಹೊಸ ಧರ್ಮಗುರು ನೇಮಕ ಮಾಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭವಿಷ್ಯದಲ್ಲಿ ಭಾರತೀಯ ಬೌದ್ಧಗುರುವೋರ್ವರು ಧರ್ಮಶಾಲಾದ ಜವಾಬ್ದಾರಿ ಹೊರಬಹುದು. ಇದು ತಮ್ಮ ಆಶಯ ಕೂಡ ಎಂದು ಟಿಬೆಟ್‌ನ ರಾಜಧಾನಿ ಲಾಸಾದಿಂದ ಭಾರತಕ್ಕೆ ಶರಣಾರ್ಥಿಯಾಗಿ ಬಂದ 60ನೇ ವರ್ಷಾಚರಣೆ ವೇಳೆ ದಲೈ ಲಾಮಾ ಹೇಳಿದ್ದಾರೆ.

1935ರಲ್ಲಿ ಜನಿಸಿದ 14ನೇ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರನ್ನು ತಮ್ಮ ಪೂರ್ವಿಕ ಧರ್ಮಗುರುಗಳ ಪುರ್ನಜನ್ಮ ಎಂದೇ ಭಾವಿಸಲಾಗುತ್ತದೆ. ಇನ್ನು ದಲೈ ಲಾಮಾ ಅವರ ಹೇಳಿಕೆಯಿಂದ ಚೀನಾಗೆ ಮುಜುಗರವಾಗಿದ್ದು, ತನ್ನ ಭವಿಷಸ್ಯದ ಯೋಜನೆಗೆ ಈಗಲೇ ಅಡ್ಡಗಾಲು ಹಾಕಿದ ಧರ್ಮಗುರು ಬಗ್ಗೆ ಅಸಮಾಧಾನ ಹೊರಹಾಕಿದೆ.

Latest Videos
Follow Us:
Download App:
  • android
  • ios