ಮಂಗಳೂರು[ಆ.27]: ಟಿಬೆಟಿಯನ್‌ ಆಧ್ಯಾತ್ಮಿಕ ಗುರು ದಲಾಯಿಲಾಮ ಅವರು ಆ.29ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಮಧ್ಯಾಹ್ನ 12.20ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಆ.30ರಂದು ನಗರದ ಫಾದರ್‌ ಮುಲ್ಲರ್ಸ್‌ ಸಭಾಂಗಣದಲ್ಲಿ ನಡೆಯುವ ಅಖಿಲ ಭಾರತ ಕ್ಯಾಥೋಲಿಕ್‌ ಶಾಲಾ ಒಕ್ಕೂಟದ ರಾಷ್ಟ್ರೀಯ ಸಮಾವೇಶದಲ್ಲಿ ದಲಾಯಿಲಾಮ ಭಾಗವಹಿಸುವರು.

ನಮ್ಮವರೇ ದಲೈಲಾಮಾ ಉತ್ತರಾಧಿಕಾರಿ: ಭಾರತಕ್ಕೆ ಚೀನಾ ಪರೋಕ್ಷ ಎಚ್ಚರಿಕೆ!

ಅಂದು ನಗರದಲ್ಲಿ ವಾಸ್ತವ್ಯ ಹೂಡಿ, ಆ.31ರಂದು ಬೆಳಗ್ಗೆ 7 ಗಂಟೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ.