ಮನೆಗೆ ಬೆಂಕಿ ಹಚ್ಚಿದ್ದ ಹಮಾಸ್ ಉಗ್ರರು, ಕಿಟಕಿಯಲ್ಲಿ ಮಗು ಮಲಗಿಸಿ ಬದುಕಳಿದ ಇಸ್ರೇಲ್ ಕುಟುಂಬ!
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ದಾರುಣ ಕತೆ ಒಂದೆಡೆಯಾದರೆ, ಕೂದಲೆಳೆ ಅಂತರದಲ್ಲಿ ಬದುಕಿ ಬಂದವರ ಹೋರಾಟ ಬೆಚ್ಚಿ ಬೀಳಿಸುತ್ತಿದೆ. ಇದೀಗ 9 ದಿನದ ಮಗು ಹಾಗೂ ಪೋಷಕರ ಜೀವನ್ಮರಣ ಹೋರಾಟ ತಿಳಿದುಕೊಳ್ಳಲಬೇಕು.
ಇಸ್ರೇಲ್(ಅ.25) ಇಸ್ರೇಲಿಗರು ತಮ್ಮ ಪವಿತ್ರ ಶಬ್ಬಾತ್ ಆಚರಣೆಯಲ್ಲಿ ತೊಡಗಿದ್ದರು. ಏಕಾಏಕಿ ಹಮಾಸ್ ಉಗ್ರರು ಪ್ಲಾನ್ ಮಾಡಿ ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಇಸ್ರೇಲ್‌ಗೆ ನುಗ್ಗಿದ ಉಗ್ರರ ಪಡೆ ಸಿಕ್ಕ ಸಿಕ್ಕವರನ್ನು ಹತ್ಯೆ ಮಾಡಿತ್ತು. ಕಿಬ್ಬುಟ್ಜ್ ವಲಯದಲ್ಲಿ ಮನಗೆ ನುಗ್ಗಿ ಮಾರಣಹೋಮ ನಡೆಸಿದ್ದರು. ಮನೆಗೆ ಬೆಂಕಿ ಹಚ್ಚಿ ಜೀವಂತ ಸುಟ್ಟಿದ್ದರು. ಮಕ್ಕಳ ರುಂಡವನ್ನೇ ಕತ್ತರಿಸಿದ್ದರು. ಇದು ಆಧುನಿಕ ಜಗತ್ತಿನಲ್ಲಿ ಕಂಡ ಅತ್ಯಂತ ಭೀಕರ ಉಗ್ರ ದಾಳಿ.ಹೀಗೆ ಕಿಬ್ಬುಟ್ಜ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸುತ್ತಿದ್ದಂತೆ ಬ್ರಿಟಿಷ್ ಕುಟುಂಬ ಮನೆಯೊಳಗಿನ ಸೇಫರ್ ಲಾಕರ್ ರೂಂನಲ್ಲಿ ಅವಿತುಕೊಂಡಿತು. ಆದರೆ ಕಬ್ಬಿಣದ ಬಾಗಿಲು ಮುರಿಯಲು ಸಾಧ್ಯವಾಗದ ಹಮಾಸ್ ಉಗ್ರರು ಮನೆಗೆ ಲಾಕ್ ಹಾಕಿ ಬೆಂಕಿ ಹಚ್ಚಿದ್ದರು. ಕ್ಷಣಾರ್ಧದಲ್ಲಿ ಮನೆಯೊಳಗೂ ಬೆಂಕಿ ಆವರಿಸಿಕೊಂಡಿತ್ತು. ಈ ವೇಳೆ ಪೋಷಕರು ಹಾಗೂ 9 ದಿನದ ಮಗು ಬದುಕಿ ಉಳಿದಿದ್ದೇ ಸಾಹಸ.
ಗಾಜಾ ಗಡಿಯ ಕಿಬುಟ್ಜ್‌ನ ನಿರಮ್ ಬಳಿ ಸುಂದರ ಮನೆಯಲ್ಲಿ ಬ್ರಿಟಿಷ್ ಕುಟಂಬ ವಾಸವಿತ್ತು. 9 ದಿನದ ಮಗುವಿನ ಜೊತೆ ಹಾಯಾಗಿದ್ದ ಕುಟುಂಬಕ್ಕೆ ಬರಸಿಡಿಲು ಎರಗಿತ್ತು. ಹಮಾಸ್ ಉಗ್ರರು ಕಿಬುಟ್ಜ್‌ನ ಪ್ರತಿ ಮನೆ ಮೇಲೆ ದಾಳಿ ಮಾಡುತ್ತಿದ್ದಾರೆ ಅನ್ನೋ ಸಂದೇಶ ಬಂದಿತ್ತು. ಹೊರಗಡೆ ಬಂದರೆ ಅಪಾಯ ಪಕ್ಕ. ಸಾಧ್ಯವಾದರೆ ಬಂಕರ್, ರಹಸ್ಯ ಕೋಣೆಯಲ್ಲಿ ಅವತಿಕೊಳ್ಳಿ ಅನ್ನೋ ಸೂಚನೆ ಇತ್ತು.
ಹಮಾಸ್ ವಿರುದ್ದ ದಾಳಿ ತೀವ್ರಗೊಳಿಸಿದ ಬೆನ್ನಲ್ಲೇ ಮತ್ತಿಬ್ಬರು ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆ!
ದಂಪತಿಗಳು ಒಳಗಿನ ಸೇಫ್ ಲಾಕರ್ ರೂಂ ಸೇರಿಕೊಂಡರು. ಇತ್ತ ಹಮಾಸ್ ಉಗ್ರರು ದಾಳಿ ಮಾಡುತ್ತಾ ಬ್ರಿಟಿಷ್ ದಂಪತಿ ಮನೆ ಮೇಲೂ ದಾಳಿ ಮಾಡಿದರು. ಲಾಕರ್ ರೂಂ ಬಾಗಿಲು ಮುರಿಯುವ ಪ್ರಯತ್ನ ಮಾಡಿದ ಉಗ್ರರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಉಗ್ರರು ಮನೆಯೊಳಗೆ ಬೆಂಕಿ ಹಚ್ಚಿ ಹೊರಗಿನಿಂದ ಲಾಕ್ ಮಾಡಿದ್ದಾರೆ. ಕನಿಷ್ಟ ಹೊಗೆಯಿಂದ ಉಸಿರಾಟದ ಸಮಸ್ಯೆಯಾಗಿ ಮನೆಯೊಳಗಿನವರು ಬದುಕಿ ಉಳಿಯುವ ಸಾಧ್ಯತೆ ಇಲ್ಲ ಅನ್ನೋದು ಉಗ್ರರ ಲೆಕ್ಕಾಚಾರವಾಗಿತ್ತು.
ಇತ್ತ 9 ದಿನದ ಮಗುವನ್ನು ಲಾಕರ್ ರೂಂನಲ್ಲಿ ಮಲಗಿಸಿದರೆ ಮನೆ ಹೊತ್ತಿ ಉರಿಯುತ್ತಿರುವ ಕಾರಣ ಮಗುವಿಗೆ ಉಸಿರಾಟದ ಸಮಸ್ಯೆಯಾಗುವುದು ಖಚಿತ. ಇತ್ತ ಪಕ್ಕದ ಕೋಣೆಯ ಕಿಟಕಿಯಲ್ಲಿ ಮಲಗಿಸಿದರೆ ಉಸಿರಾಟ ಸಮಸ್ಯೆಯಾಗಲ್ಲ. ಆದರೆ ಹಮಾಸ್ ಉಗ್ರರ ಕಣ್ಣಿಗೆ ಸುಲಭವಾಗಿ ಕಾಣಲಿದೆ. ಹೀಗಾದರೆ ಮಗು ಬದುಕಿಳಿಯುವ ಸಾದ್ಯತೆ ಇಲ್ಲ. ಆದರೆ ಗಟ್ಟಿ ನಿರ್ಧಾರ ಮಾಡಿದ ಪೋಷಕರು, ಮಗುವನ್ನು ಪಕ್ಕದ ಕೋಣೆಯ ಕಿಟಕಿಯಲ್ಲಿ ಮಲಗಿಸಿದ್ದಾರೆ. ಇದೇ ವೇಳೆ ದಂಪತಿ ತಮ್ಮ ಕುಟುಂಬಸ್ಥರಿಗೆ ಸಂದೇಶ ಕಳುಹಿಸಿದ್ದಾರೆ. ನಮ್ಮ ಮನ ಹೊತ್ತಿ ಉರಿಯುತ್ತಿದೆ. ನಾವ್ ಲಾಕರ್ ರೂಂಲ್ಲಿದ್ದೇವೆ. ನಮ್ಮನ್ನು ರಕ್ಷಿಸಿ ಎಂದು ಸಂದೇಶ ಕಳುಹಿಸಿದ್ದಾರೆ.
ಶಾಂತಿಯುತ ಬದುಕು ಬೇಕಿದ್ದರೆ ಒತ್ತೆಯಾಳು ಸ್ಥಳದ ಮಾಹಿತಿ ನೀಡಿ, ಗಾಜ ಜನತೆಗೆ ಇಸ್ರೇಲ್ ಆಫರ್!
ಬರೋಬ್ಬರಿ 6 ಗಂಟೆಗಳ ಕಾಲ ಮನೆ ಹೊರಗಡೆ ಸುತ್ತು ಮುತ್ತ ದಾಳಿ ನಡೆಯುತ್ತಲೇ ಇತ್ತು. ಇತ್ತ ಕೆಲ ಉಗ್ರರು ಮನೆ ಹೊರಗಡೆಯಿಂದ ಗುಂಡಿನ ದಾಳಿ ನಡೆಸಿದ್ದರು. ಆದರೆ ಕಿಟಕಿಯಲ್ಲಿ ಮಲಗಿಸಿದ ಮಗು ಉಗ್ರರ ಕಣ್ಣಿಗೆ ಬೀಳಲಿಲ್ಲ. ಇತ್ತ ಪೋಷಕರು ಲಾಕರ್ ರೂಂನಲ್ಲಿ ಹೊಗೆಯನ್ನೇ ಉಸಿರಾಟ ಮಾಡುತ್ತಾ ಅಸ್ವಸ್ಥರಾಗಿದ್ದಾರೆ. 6 ಗಂಟೆ ಬಳಿಕ ಇಸ್ರೇಲ್ ಸೇನೆ ರಕ್ಷಣೆಗೆ ಧಾವಿಸಿತ್ತು. ಬಳಿಕ ಸುರಕ್ಷಿತವಾಗಿ 9 ದಿನದ ಮಗುವಿನೊಂದಿಗೆ ಕುಟುಂಬವನ್ನು ರಕ್ಷಿಸಿದೆ.