Asianet Suvarna News Asianet Suvarna News

ಅಮ್ಮನ ಪ್ರೀತಿಗೆ ಸರಿಸಾಟಿ ಎಲ್ಲಿ? ಮರಿಗಳಿಗಾಗಿ ಚಿಕನ್ ಪ್ಯಾಕೇಟನ್ನೇ ಎಗರಿಸಿದ ತಾಯಿ ಬೆಕ್ಕು

ಇಲ್ಲೊಂದು ಕಡೆ ಮಕ್ಕಳಿಗಾಗಿ ಕೋಳಿ ಮಾಂಸ ತುಂಬಿದ್ದ ಕವರ್‌ನ್ನು ಬೆಕ್ಕೊಂದು ಮೆಲ್ಲನೆ ಎಗರಿಸಿ ತಂದು ಮರಿಗಲ ಬಳಿ ಇಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

mothers love Cat drags chicken packet to kittens which were too heavy to carry video goes viral in social Media akb
Author
First Published Sep 22, 2023, 10:30 AM IST

ಮನುಷ್ಯರೇ ಆಗಲಿ ಪ್ರಾಣಿಗಳೇ ಆಗಲಿ ತಾಯಿ ತಾಯಿಯೇ. ಇದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಮರಿಗಳಿರುವ ಪ್ರಾಣಿಗಳು ಹಕ್ಕಿಗಳು ಒಂದು ತುತ್ತು ತಿನಿಸು ಸಿಕ್ಕರೂ ಅವುಗಳನ್ನು ಮರಿಗಳಿಗಾಗಿ ತಂದು ನೀಡುತ್ತವೆ. ಮರಿಗಳ ಮೇಲೆ ತಾಯಿ ಮಮತೆ ತೋರುವ ಅವುಗಳಿಗೆ ತಾನು ಹಸಿದಿದ್ದರೂ ತಿನ್ನದೇ ಎಲ್ಲೋ ಸಿಕ್ಕ ಆಹಾರವನ್ನು ತಂದು ನೀಡುವ ಹಲವು ವೀಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಕಡೆ ಮಕ್ಕಳಿಗಾಗಿ ಕೋಳಿ ಮಾಂಸ ತುಂಬಿದ್ದ ಕವರ್‌ನ್ನು ಬೆಕ್ಕೊಂದು ಮೆಲ್ಲನೆ ಎಗರಿಸಿ ತಂದು ಮರಿಗಳ ಬಳಿ ಇಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೀಡಿಯೋವನ್ನು @catshouldnt ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು,  ಒಂದು ಕೋಟಿಗೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಬೆಕ್ಕೊಂದು ಅಂಗಡಿಯೊಂದರಲ್ಲಿ ಮಾರಾಟಕ್ಕೆ ಪ್ಯಾಕ್ ಮಾಡಿ ಇಟ್ಟಿದ್ದ ಕೋಳಿ ಮಾಂಸವಿರುವ ಬ್ಯಾಗೊಂದನ್ನು ಎಗರಿಸಿದೆ. ಈ ವೇಳೆ ಅಂಗಡಿ ಮಾಲೀಕ, ಬೆಕ್ಕಿಗಿಂತ ದೊಡ್ಡದಾದ ಈ ಚಿಕನ್ ಮಾಂಸದ ಪ್ಯಾಕೇಟ್‌ನ್ನು ಬೆಕ್ಕು ಎಲ್ಲಿಗೆ ಹೊತ್ತೊಯ್ಯುತ್ತಿದೆ ಎಂದು ಅದರ ಹಿಂದೆಯೇ ಕ್ಯಾಮರಾ ಹಿಡಿದು ಹೋದವರಿಗೆ ಅಚ್ಚರಿ ಕಾದಿದೆ. ಅಲ್ಲಿ ಮೂರು ನಾಲ್ಕು ಮರಿಗಳಿರುವ ಬೆಕ್ಕಿನ ದೊಡ್ಡ ಸಂಸಾರವೇ ಇದೆ.  ಬೆಕ್ಕು ತನ್ನಿಂದ ಹೊತ್ತೊಯ್ಯಲು ಸಾಧ್ಯವಿಲ್ಲದ ಈ ಮಾಂಸದ ಬ್ಯಾಗ್‌ನ್ನು ಬಾಯಿಯಲ್ಲಿ ಎಳೆದುಕೊಂಡೆ ಹೋಗಿ ತನ್ನ ಮರಿಗಳಿರುವ ಸ್ಥಳ ತಲುಪಿ ಮಾಂಸದ ಪ್ಯಾಕೇಟ್‌ನ್ನು ಮರಿಗಳ ಮುಂದಿಟ್ಟಿದೆ. ಈ ಚಿಕನ್ ಪ್ಯಾಕೇಟ್ ಭಾರವಿರುವ ಕಾರಣ ಬೆಕ್ಕು ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಳ್ಳುವುದನ್ನು ವೀಡಿಯೋದಲ್ಲಿ ನೋಡಬಹುದು. 

ವಿಶ್ವದ ಫ್ಯಾಷನ್‌ ಲೋಕವನ್ನು ಆಳುತ್ತಿರುವ ಪುಟಾಣಿ ಸೂಪರ್‌ ಮಾಡೆಲ್‌ಗಳಿವರು...

ಟರ್ಕಿಶ್‌ ಬೆಕ್ಕೊಂದು ತನ್ನ ಮರಿಗಳ ಹೊಟ್ಟೆ ತುಂಬಿಸಲು ಸೂಪರ್ ಮಾರ್ಕೆಟ್‌ನಿಂದ (Super Market) ಚಿಕನ್‌ ಮಾಂಸವಿದ್ದ ಬ್ಯಾಗ್ ಎಗರಿಸಿತು ಎಂದು ಬರೆದು @catshouldnt ಈ  ವೀಡಿಯೋವನ್ನು ಪೋಸ್ಟ್ ಮಾಡಿದೆ. ವೀಡಿಯೋ ನೋಡಿದ ಬಹುತೇಕ ಎಲ್ಲರೂ ಭಾವುಕರಾಗಿದ್ದು ತಾಯಿ ಪ್ರೀತಿಗೆ ಭೇಷ್ ಎಂದಿದ್ದಾರೆ. ವೀಡಿಯೋ ನೋಡಿದ ಕೆಲವರು ಇದು ಬೆಕ್ಕು ಆಗಿರುವ ಕಾರಣ ಕಳ್ಳತನ ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮಕ್ಕಳ ಹೊಟ್ಟೆ ತುಂಬಿಸುವುದಕ್ಕಾಗಿ ಬಹಳ ಕಷ್ಟ ಪಡುತ್ತಿರುವ ಶ್ರಮಜೀವಿ ತಾಯಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಕ್ಕಳಿಗಾಗೊ ಚಿಕನ್ (Chicken) ತಂದ ಅಮ್ಮ ಗ್ರೇಟ್‌ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಪ್ರಾಣಿಯೇ ಆಗಿರಲಿ ಮನುಷ್ಯರೇ ಆಗಲಿ ಅಮ್ಮ ಅಮ್ಮನೇ. ತನ್ನ ಮಕ್ಕಳಿಗಾಗಿ ಈ ಅಮ್ಮಂದಿರು ಏನು ಬೇಕಾದರೂ ಮಾಡುತ್ತಾರೆ ಎಂಬುದನ್ನು ಈ ವೀಡಿಯೋ ಮತ್ತೊಮ್ಮೆ ಸಾಬೀತುಪಡಿಸಿದೆ

ತಾಯಿ ಪ್ರೇಮ ಸಾರುವ ಈ ಸುಂದರ ವೀಡಿಯೋವನ್ನು ನೀವು ಒಮ್ಮೆ ನೋಡಿ...

ಕಣ್ಣರಿಯದಿದ್ದರೆ ಕರುಳರಿಯದೇ... 3 ವರ್ಷದ ನಂತರ ವೇಷ ಮರೆಸಿ ಬಂದ ಮಗ

 

Follow Us:
Download App:
  • android
  • ios