Asianet Suvarna News Asianet Suvarna News

ಡಿವೋರ್ಸ್ ತೆಗೆದುಕೊಳ್ಳೋ ಮುಂಚೆ ಸಾವಿರ ಸಲ ಯೋಚಿಸಿದರೆ ಸಾಲಲ್ಲ, ಈ ಕೆಲ್ಸಾನೂ ಮಾಡ್ಬೇಕು!

ಇಬ್ಬರ ಮಧ್ಯೆ ಸಂಬಂಧ ಸರಿ ಹೋಗ್ಲಿಲ್ಲ ಅದಕ್ಕೆ ವಿಚ್ಛೇದನ ತೆಗೆದುಕೊಳ್ತಿದ್ದೇನೆ ಎಂಬ ಮಾತು ಹೇಳೋದು ಸುಲಭ. ಆದ್ರೆ ಡಿವೋರ್ಸ್ ಪಡೆಯೋದು, ಪಡೆದ ನಂತ್ರದ ಜೀವನ ಹೇಳಿದಷ್ಟು ಸರಳವಲ್ಲ. ಹಾಗಾಗಿ ಹೆಜ್ಜೆ ಇಡುವ ಮೊದಲು ಈ ವಿಷ್ಯ ಗಮನಿಸಿ. 
 

Five Things To Learn Before Filing Divorce breaking up relationship is not easy roo
Author
First Published Nov 18, 2023, 2:10 PM IST

ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ವಿಚ್ಛೇದನ ಪ್ರಕರಣ ಹೆಚ್ಚಾಗ್ತಿದೆ. ವಿದೇಶದಲ್ಲಿ ಇದು ಸಾಮಾನ್ಯ. ಆದ್ರೆ ಭಾರತದ ಸಂಪ್ರದಾಯಕ್ಕೆ ಇದು ವಿರೋಧ ಅನ್ನೋದು ಮಾತ್ರ ವಿಷ್ಯವಲ್ಲ, ವಿದೇಶಿಗರು ಹಾಗೂ ಭಾರತೀಯರ ಜೀವನ ಶೈಲಿ ಭಿನ್ನವಾಗಿದೆ. ಕೌಟುಂಬಿಕ ಹಲ್ಲೆ, ಹಿಂಸೆ ಸೇರಿದಂತೆ ಗಂಭೀರ ಸಮಸ್ಯೆಯಲ್ಲಿ ವಿಚ್ಛೇದನ ಅನಿವಾರ್ಯ. ಆದ್ರ ಇದನ್ನು ಹೊರತುಪಡಿಸಿ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆಯುವ ಜನರು ವಿಚ್ಛೇದನದ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೊದಲು ನೂರು ಬಾರಿ ಆಲೋಚನೆ ಮಾಡ್ಬೇಕು. ತಾವು ಮಾಡ್ತಿರೋದು ಎಷ್ಟು ಸರಿ ಎಂಬ ಬಗ್ಗೆ ಅವಲೋಕನ ಮಾಡಬೇಕು. 

ವಿಚ್ಛೇದನ (Divorce) ಪ್ರಕ್ರಿಯೆ ಸುಲಭವಲ್ಲ. ಇಲ್ಲಿ ನಾನಾ ಸಮಸ್ಯೆಗಳು ಎದುರಾಗುತ್ತವೆ. ಮಹಿಳೆ ಅದ್ರಲ್ಲೂ ಕೆಲಸವಿಲ್ಲದ ಗೃಹಿಣಿ (Housewife) ಡಿವೋರ್ಸ್ ನಿರ್ಧಾರಕ್ಕೆ ಬರುವ ಮೊದಲು ಪ್ರತಿಯೊಂದು ಅಂಶವನ್ನು ಅರ್ಥ ಮಾಡಿಕೊಳ್ಳಬೇಕು. ವಿಚ್ಛೇದನಕ್ಕಿಂತ ಮೊದಲು ನೀವು ಯಾವೆಲ್ಲ ವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.

ಲವ್ ದೋಖಾಕ್ಕೆ ಚಾನ್ಸ್ ಕೊಡಲಿಲ್ಲ ಧಮೇಂದ್ರ, ಹೇಮಾ ಮಾಲಿನಿಗೆ ತಾಳಿ ಕಟ್ಟಲಿಲ್ಲ ಜಿತೇಂದ್ರ; ಶೋಭಾಳ ಕಥೆ ಏನಾಯ್ತು?

ವಿಚ್ಛೇದನಕ್ಕಿಂತ ಮೊದಲು ಈ ವಿಷ್ಯ ನೆನಪಿಡಿ : 

ವಿಚ್ಛೇನದ ಬಗ್ಗೆ ಕಾನೂನು (Law) ಸಲಹೆ : ನೀವು ಹೇಳಿದ ತಕ್ಷಣ ವಿಚ್ಛೇದನ ಸಿಗಲು ಸಾಧ್ಯವಿಲ್ಲ. ಕೋರ್ಟ್, ವಕೀಲರೆಂದು ನೀವು ಅಲೆಯಬೇಕಾಗುತ್ತದೆ. ಹಾಗಾಗಿ ಮೊದಲು ವಿಚ್ಛೇದನ ಪ್ರಕ್ರಿಯೆಯಲ್ಲಿ ಏನೆಲ್ಲ ಮಾಡಬೇಕು ಎಂಬುದನ್ನು ವಕೀಲರಿಂದ ತಿಳಿದುಕೊಳ್ಳಿ. ಹಕ್ಕುಗಳು, ಜವಾಬ್ದಾರಿಗಳು ಮತ್ತು ಒಳಗೊಂಡಿರುವ ಕಾನೂನು ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಿ. ಆ ನಂತ್ರವೇ ವಿಚ್ಛೇದನ ಅಗತ್ಯವಿದ್ಯೆ ಇಲ್ಲವೆ ಎಂಬ ನಿರ್ಧಾರಕ್ಕೆ ಬನ್ನಿ.

ಆರ್ಥಿಕ ಸ್ಥಿತಿ (Financial Status) : ಉದ್ಯೋಗದಲ್ಲಿರುವ ಮಹಿಳೆಗೆ ತಿಂಗಳ ಸಂಬಳ ಬರುತ್ತದೆ. ಅದೇ ಗೃಹಿಣಿ ಸೇವಿಂಗ್ ತುಂಬ ಕಡಿಮೆ. ಭಾರತದಲ್ಲಿ ಗೃಹಿಣಿಯರ ಕೈನಲ್ಲಿ ಹಣವಿರೋದಿಲ್ಲವೆಂದ್ರೂ ತಪ್ಪಿಲ್ಲ. ಎಲ್ಲದಕ್ಕೂ ಪತಿಯನ್ನು ಆಶ್ರಯಿಸುವವರಿದ್ದಾರೆ. ಮೊದಲು ನಿಮ್ಮ ಆರ್ಥಿಕ ಸ್ಥಿತಿ ಗಮನಿಸಿ. ನೀವು ಕನಿಷ್ಠ ಮೂರು ತಿಂಗಳಾದ್ರೂ ಜೀವನ ನಡೆಸುವಷ್ಟು ಹಣ ಹೊಂದಿರಬೇಕು. ನಿಮ್ಮೆಲ್ಲ ಆಸ್ತಿಯ ದಾಖಲೆಯನ್ನು ಒಂದೇ ಕಡೆ ಇಟ್ಟುಕೊಳ್ಳಿ. ವಿಚ್ಛೇದನದ ಸಮಯದಲ್ಲಿ ಇದನ್ನು ತೋರಿಸಬೇಕು. ಅಲ್ಲದೆ ಜೀವನಾಂಶ ಕೇಳಲು ಇದು ನೆರವಾಗುತ್ತದೆ.

ಮಧುಮೇಹಿಗಳ ಲೈಂಗಿಕ ಜೀವನ ಹೇಗಿದ್ದರೆ ಆರೋಗ್ಯಕ್ಕೆ ಒಳ್ಳೇದು? ಇಲ್ಲಿವೆ ಟಿಪ್ಸ್

ಮಕ್ಕಳಾದ್ಮೇಲೆ ವಿಚ್ಛೇದನ : ಮಕ್ಕಳಾದ್ಮೇಲೆ ವಿಚ್ಛೇದನ ಪಡೆಯೋದು ಸುಲಭವಲ್ಲ. ನೀವು ನಿಮಗಿಂತ ಮಕ್ಕಳ ಬಗ್ಗೆ ಹೆಚ್ಚು ಆಲೋಚನೆ ಮಾಡಬೇಕು. ಮಕ್ಕಳ ನಿರ್ವಹಣೆ ನಿಮ್ಮೊಬ್ಬರಿಂದಲೇ ಸಾಧ್ಯವೇ ಎಂಬುದನ್ನು ಕೋರ್ಟ್ ಪರಿಶೀಲಿಸುತ್ತದೆ. ನಿಮ್ಮ ವಕೀಲರಿಗೆ ಇದ್ರ ಎಲ್ಲ ಮಾಹಿತಿ ನೀವು ನೀಡಬೇಕಾಗುತ್ತದೆ. ಮಕ್ಕಳ ಓದು, ಅವರ ಜೀವನ ನಿರ್ವಹಣೆಗೆ ನಿಮ್ಮ ಬಳಿ ಹಣದ ಜೊತೆ ಸಮಯ, ತಾಳ್ಮೆ ಎಲ್ಲವೂ ಅಗತ್ಯವಿರುತ್ತದೆ. ಮಕ್ಕಳಾದ್ಮೇಲೆ ವಿಚ್ಛೇದನ ಪಡೆಯುವ ದಂಪತಿ ಆಗಾಗ ಭೇಟಿಯಾಗ್ಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಮಾನಸಿಕ ಬೆಂಬಲ ಮುಖ್ಯ (Moral Support) : ವಿಚ್ಛೇದನ ಪಡೆಯುವುದು ಸುಲಭವಲ್ಲ. ಟಿವಿಯಲ್ಲಿ ತೋರಿಸಿದಂತೆ ಕ್ಷಣದಲ್ಲಿ ವಿಚ್ಛೇದನ ಸಿಕ್ಕು ನೀವು ಹೊಸ ಜೀವನ ನಡೆಸಲು ಸಾಧ್ಯವಾಗೋದಿಲ್ಲ. ನಿಮ್ಮ ಮಾನಸಿಕ ಸ್ಥಿತಿ ಚೆನ್ನಾಗಿರಬೇಕು. ನಿಮ್ಮ ಕುಟುಂಬಸ್ಥರು, ಸ್ನೇಹಿತರ ಬೆಂಬಲ ಕೂಡ ಮುಖ್ಯವಾಗುತ್ತದೆ. ವಿಚ್ಛೇದನದ ನಂತ್ರ ನಿಮಗೆ ಒಂಟಿತನ, ಆತಂಕ ಕಾಡುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಆಪ್ತರು ನೆರವಿಗೆ ಬರ್ತಾರೆ.

ಎಲ್ಲವನ್ನೂ ನಿಭಾಯಿಸುವ ಶಕ್ತಿ : ಕೋರ್ಟ್ ನಲ್ಲಿ ನಿಮ್ಮ ಪರ ವಕೀಲರು ವಾದ ಮಾಡ್ಬಹುದು. ಆದ್ರೆ ವಕೀಲರಿಗೆ ನೀವು ಮಾಹಿತಿ ನೀಡ್ಬೇಕಾಗುತ್ತದೆ. ನಿಮಗೆ ಯಾವುದೇ ಪ್ರಶ್ನೆಗಳಿದ್ದರೂ ಅವರನ್ನು ಕೇಳಿ ಉತ್ತರ ಪಡೆಯಬೇಕಾಗುತ್ತದೆ. ಕಾನೂನು ಪ್ರಕ್ರಿಯೆಯಲ್ಲಿ ವಕೀಲರು ಸಹಾಯ ಮಾಡುತ್ತಾರೆ. ಆದ್ರೆ ನಿಮ್ಮ ವೈಯಕ್ತಿಕ ಜೀವನದಲ್ಲಿ ಅಂತಿಮ ನಿರ್ಧಾರ ನಿಮ್ಮದೆ ಆಗಿರುವ ಕಾರಣ ಆಲೋಚನೆ ಮಾಡಿ ತೀರ್ಮಾನಕ್ಕೆ ಬರುವುದು ಒಳ್ಳೆಯದು.  
 

Follow Us:
Download App:
  • android
  • ios