Child Care tips in Kannada: ಮಕ್ಕಳಿಗೆ ಇಂಜೆಕ್ಷನ್ ಹಾಕೋದು ದೊಡ್ಡ ತಲೆನೋವಿನ ಕೆಲಸ. ಹಾಗಂತ ವ್ಯಾಕ್ಸಿನೇಷನ್ ಬಿಡೋ ಹಾಗಿಲ್ಲ. ಮಕ್ಕಳ ಆರೋಗ್ಯಕ್ಕೆ ಲಸಿಕೆ ಅವಶ್ಯಕ. ಸೂಜಿ ನೋಡ್ತಿದ್ದಂತೆ ಮಗು ಅಳ್ಬಾರದು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡಿ. 

ಕತ್ತಿ, ಚೂರಿ ಹಿಡಿದು ಹೊಡೆದಾಟಕ್ಕೆ ಇಳಿಯೋ ಅನೇಕರಿಗೆ ಸೂಜಿ (Needle) ಕಂಡ್ರೆ ಭಯ (Fear). ಇಂಜೆಕ್ಷನ್ ಅಂದ್ರೆ ಅನೇಕ ವಯಸ್ಕರು ಕೂಡ ಹೆದರ್ತಾರೆ. ಇನ್ನು ಮಕ್ಕಳ (Children) ನ್ನು ಕೇಳ್ಬೇಕೆ? ಮಕ್ಕಳಿಗೂ ಇಂಜೆಕ್ಷನ್ ಗೂ ಅಜಗಜಾಂತರ. ಮಕ್ಕಳು ಕನಸಿನಲ್ಲೂ ಇಂಜೆಕ್ಷನ್ ನೆನಪು ಮಾಡಿಕೊಂಡು ಅಳ್ತಾರೆ. ಬಾಲ್ಯದಲ್ಲಿ ಇಂಜೆಕ್ಷನ್ ಹಾಕೋದು ಅವಶ್ಯಕ. ಚುಚ್ಚುಮದ್ದನ್ನು ಸರಿಯಾದ ಸಮಯಕ್ಕೆ ಹಾಕಿಸಿದ್ರೆ ಅನೇಕ ರೋಗಗಳಿಂದ ಮಕ್ಕಳನ್ನು ದೂರವಿಡಬಹುದು. ವ್ಯಾಕ್ಸಿನೇಷನ್ ಭವಿಷ್ಯದಲ್ಲಿ ಅಪಾಯಕಾರಿ ಕಾಯಿಲೆಗಳಿಂದ ಅವರನ್ನು ರಕ್ಷಿಸುತ್ತದೆ. ಅನೇಕ ಬಾರಿ ವ್ಯಾಕ್ಸಿನೇಷನ್ ಸಮಯದಲ್ಲಿ ಮಗು ಅಳೋದನ್ನು ನೋಡಲು ಪಾಲಕರಿಗೆ ಸಾಧ್ಯವಾಗೋದಿಲ್ಲ. ಕೆಲ ಮಕ್ಕಳು ಸೂಜಿ ಕಾಣ್ತಿದ್ದಂತೆ ಓಡಿ ಹೋಗ್ತಾರೆ. ಅವರ ಕಾಲು – ಕೈ ಹಿಡಿದುಕೊಳ್ಳೋದು ಪಾಲಕರಿಗೆ ದೊಡ್ಡ ಸವಾಲಾಗುತ್ತದೆ. ಮಕ್ಕಳಿಗೆ ಇಂಜೆಕ್ಷನ್ ಭಯವಾಗ್ಬಾರದು ಎಂದ್ರೆ ಕೆಲ ಸುಲಭ ಮಾರ್ಗಗಳನ್ನು ಪಾಲಿಸಬೇಕು.

ಮಗುವಿಗೆ ವ್ಯಾಕ್ಸಿನೇಷನ್ ಭಯವನ್ನು ಹೇಗೆ ಕಡಿಮೆ ಮಾಡಿ: 

ಮಗುವಿಗೆ ಸತ್ಯ ಹೇಳಿ: ಇಂಜೆಕ್ಷನ್ ಇದೆ, ವೈದ್ಯರ ಬಳಿ ಹೋಗ್ಬೇಕು ಅಂದ್ರೆ ಯಾವ ಮಕ್ಕಳು ಬರೋದಿಲ್ಲ. ಇದೇ ಕಾರಣಕ್ಕೆ ಪಾಲಕರು ಮಕ್ಕಳಿಗೆ ಸುಳ್ಳು ಹೇಳ್ತಾರೆ. ಹಾಗೆ ಚುಚ್ಚುಮದ್ದು ನೋವುಂಟು ಮಾಡುವುದಿಲ್ಲ ಎಂದು ಮಕ್ಕಳನ್ನು ನಂಬಿಸುವ ಪ್ರಯತ್ನ ನಡೆಸ್ತಾರೆ. ಆದರೆ ಈ ಸುಳ್ಳನ್ನು ಹೇಳುವ ಬದಲು ಚುಚ್ಚುಮದ್ದು ನೋವು ಉಂಟುಮಾಡುತ್ತದೆ ಎಂಬ ಸತ್ಯವನ್ನು ಮಗುವಿಗೆ ಹೇಳುವುದು ಒಳ್ಳೆಯದು. ಕೆಲ ಸಮಯ ಮಾತ್ರ ಲಸಿಕೆ ನೋವು ನೀಡುತ್ತದೆ. ಆಮೇಲೆ ನೋವಿರುವುದಿಲ್ಲ ಎಂಬುದನ್ನು ಅವರಿಗೆ ಹೇಳ್ಬೇಕು. ಅಲ್ಲದೆ, ಚುಚ್ಚುಮದ್ದು ಹೇಗೆ ರೋಗಗಳಿಂದ ರಕ್ಷಿಸುತ್ತದೆ ಎಂಬುದನ್ನು ಅವರಿಗೆ ವಿವರಿಸಬೇಕು.

ಇದನ್ನೂ ಓದಿ: Parenting Tips: ಮಕ್ಕಳು ಸೋಮಾರಿಯಾ? ಆ್ಯಕ್ಟಿವ್ ಮಾಡಲು ಹೀಗ್ ಮಾಡಿ

ನಿದ್ರೆ ಮಾಡಿದಾಗ ಚುಚ್ಚು ಮದ್ದು : ಗಲಾಟೆ ಮಾಡುವ, ಕಿರುಚಾಡುವ ಮಕ್ಕಳಿಗೆ ನಿದ್ರೆಯಲ್ಲಿ ಚುಚ್ಚುಮದ್ದು ನೀಡಲು ಅನೇಕರು ಮುಂದಾಗ್ತಾರೆ. ಆದ್ರೆ ಇದು ಒಳ್ಳೆಯದಲ್ಲ. ಹಾಗೆ ಮಾಡಿದ್ರೆ ಮಗುವಿನ ಭಯ ಇನ್ನಷ್ಟು ಹೆಚ್ಚಾಗುತ್ತದೆ. ಅದು ರಾತ್ರಿ ಸರಿಯಾಗಿ ನಿದ್ರೆ ಮಾಡದೆ ಇರಬಹುದು. ಮಗು ಆರಾಮದಾಯಕ ಸ್ಥಿತಿಯಲ್ಲಿದ್ದಾಗ ಚುಚ್ಚುಮದ್ದನ್ನು ನೀಡ್ಬೇಕು. ಉದಾಹರಣೆಗೆ, ಮಗುವನ್ನು ಕುರ್ಚಿ ಮೇಲೆ ಕುಳಿಸಿ. ವೈದ್ಯಕೀಯ ಸಿಬ್ಬಂದಿಗೆ ಮಕ್ಕಳ ಜೊತೆ ಸ್ನೇಹಿತರಂತೆ ವರ್ತಿಸಲು ಹೇಳಿ. ಅವರು ಆ ಜಾಗದಲ್ಲಿ ಆರಾಮವಾಗಿ ಕುಳಿತಾಗ ನಿಧಾನವಾಗಿ ಚುಚ್ಚು ಮದ್ದನ್ನು ಹಾಕಬೇಕು. ಮಕ್ಕಳ ಪಕ್ಕದಲ್ಲಿ ಪಾಲಕರು ಕುಳಿತಿರಬೇಕು. ಇಲ್ಲವೆ ಮಕ್ಕಳನ್ನು ಮಡಿಲಿನಲ್ಲಿ ಕುಳಿಸಿಕೊಳ್ಳಬೇಕು. ಆಗ ಮಕ್ಕಳಿಗೆ ನಮ್ಮ ಜೊತೆ ಪಾಲಕರಿದ್ದಾರೆ ಎಂಬ ಭಾವನೆ ಬರುತ್ತದೆ. 

ಮಗುವಿಗೆ ಬಹುಮಾನ ನೀಡಿ : ವ್ಯಾಕ್ಸಿನೇಷನ್ ನಂತರ ನಿಮ್ಮ ಮಗುವಿನ ಶೌರ್ಯಕ್ಕಾಗಿ ನೀವು ಪ್ರಶಂಸಿಸುತ್ತೀರಿ. ಅಲ್ಲದೆ ಅವರ ನೆಚ್ಚಿನ ಚಾಕೊಲೇಟ್, ಐಸ್ ಕ್ರೀಮ್ ಅಥವಾ ಯಾವುದೇ ಆಟಿಕೆಗಳನ್ನು ಬಹುಮಾನವಾಗಿ ನೀಡಿ. ನೀವು ಈ ವಿಧಾನವನ್ನು ಅನುಸರಿಸಿದಾಗ ಮಗು ಚುಚ್ಚು ಮದ್ದಿಗೆ ಹೆಚ್ಚು ಗಲಾಟೆ ಮಾಡುವುದಿಲ್ಲ. ನೆಚ್ಚಿನ ವಸ್ತು ಸಿಗುತ್ತದೆ ಎಂಬ ಆಸೆಗೆ ನೋವು ಮರೆಯುತ್ತದೆ.

ಇದನ್ನೂ ಓದಿ: Parenting Tips : ಮಕ್ಕಳನ್ನು ಪ್ರತ್ಯೇಕ ರೂಮ್ ನಲ್ಲಿ ಮಲಗಿಸ್ತೀರಾ? ಒಮ್ಮೆ ಈ ಸ್ಟೋರಿ ಓದಿ

ಮಕ್ಕಳಿಗೆ ಇಷ್ಟವಾಗುವ ವಸ್ತು : ಇಂಜೆಕ್ಷನ್ ನೀಡುವ ವೇಳೆ ನೀವು ಮಕ್ಕಳ ಇಷ್ಟದ ಪುಸ್ತಕ ಅಥವಾ ಇಷ್ಟದ ಆಟಿಕೆ ಸಾಮಗ್ರಿಯನ್ನು ಜೊತೆಗೆ ತೆಗೆದುಕೊಂಡು ಹೋಗಿ. ಇಲ್ಲವೆ ಅವರಿಗಿಷ್ಟವಾಗುವ ಹಾಡನ್ನು ಹಾಕಿ. ಮಗು ಆ ಗುಂಗಿನಲ್ಲಿ ನೋವು ಮರೆಯುತ್ತದೆ. 

ಪಾಲಕರಿಗೆ ತಾಳ್ಮೆ ಇರಲಿ : ಮಕ್ಕಳು ಸಣ್ಣದಾಗಿ ಕಿರಿಕಿರಿ ಮಾಡ್ತಿದ್ದಂತೆ ಪಾಲಕರು ಕೋಪಗೊಳ್ತಾರೆ. ಇದು ಮಕ್ಕಳನ್ನು ಮತ್ತಷ್ಟು ಕೆರಳಿಸುತ್ತದೆ. ಮಕ್ಕಳಿಗೆ ಇಂಜೆಕ್ಷನ್ ಅಂದ್ರೆ ಕೆಲ ಪಾಲಕರು ಅಳ್ತಿರುತ್ತಾರೆ. ಪಾಲಕರನ್ನು ನೋಡಿ ಮಕ್ಕಳೂ ಅಳಲು ಶುರು ಮಾಡ್ತವೆ. ಅದೇ ಪಾಲಕರು ಸಂತೋಷವಾಗಿದ್ದರೆ, ನಗ್ತಿದ್ದರೆ, ಏನೂ ಆಗಲ್ಲ ಎನ್ನುವಂತಿದ್ದರೆ ಮಕ್ಕಳು ಕೂಡ ನಗ್ತಿರುತ್ತವೆ. ಇಂಜೆಕ್ಷನ್ ದೊಡ್ಡ ವಿಷ್ಯ ಎನ್ನಿಸುವುದಿಲ್ಲ.