Parenting Tips: ಮಕ್ಕಳು ಸೋಮಾರಿಯಾ? ಆ್ಯಕ್ಟಿವ್ ಮಾಡಲು ಹೀಗ್ ಮಾಡಿ
ಇತ್ತೀಚಿನ ದಿನಗಳಲ್ಲಿ ಮಕ್ಕಳು ಸೋಮಾರಿಗಳಾಗ್ತಿದ್ದಾರೆ. ಮನೆಯಿಂದ ಹೊರಗೆ ಬರೋದೆ ಅಪರೂಪ ಎನ್ನುವಂತಾಗಿದೆ. ಇಡೀ ದಿನ ಟಿವಿ, ಮೊಬೈಲ್ ನೋಡುವ ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡೋದು ಸವಾಲಿನ ಕೆಲಸವಾಗಿದೆ.
ಮಕ್ಕಳು (Children) ಯಾವಾಗ ಬದಲಾಗ್ತಾರೆ ಅನ್ನೋದನ್ನು ಸುಲಭವಾಗಿ ಹೇಳಲು ಸಾಧ್ಯವಿಲ್ಲ. ಹಾಗೆ ಎಲ್ಲ ಮಕ್ಕಳು ಒಂದೇ ರೀತಿ ಇರೋದಿಲ್ಲ. ಕ್ಷಣ ಕ್ಷಣಕ್ಕೂ ಮಕ್ಕಳ ಮೂಡ್ (Mood) ಬದಲಾಗ್ತಿರುತ್ತದೆ. ಈಗ ಅತ್ತ ಮಗು ಅರೆ ಕ್ಷಣದಲ್ಲಿ ನಗಬಹುದು. ಕೆಲ ಮಕ್ಕಳಿಗೆ ಹೊರಗೆ ಹೋಗಿ ಆಟ (Game) ವಾಡಲು ಇಷ್ಟ. ಒಂದಿಷ್ಟು ಸ್ನೇಹಿತರ ಗುಂಪನ್ನು ಮತ್ತೆ ಕೆಲ ಮಕ್ಕಳು ಹೊಂದಿರುತ್ತಾರೆ. ಇನ್ನು ಕೆಲ ಮಕ್ಕಳು ಒಳಾಂಗಣ ಕ್ರೀಡೆಯನ್ನು ಇಷ್ಟಪಡ್ತಾರೆ. ಮತ್ತೆ ಕೆಲವರು ಕಲೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಇನ್ನೂ ಕೆಲ ಮಕ್ಕಳಿಗೆ ಆಟ, ಕಲೆ ಯಾವುದರಲ್ಲೂ ಆಸಕ್ತಿ ಇರುವುದಿಲ್ಲ. ಸದಾ ಮನೆಯಲ್ಲಿರುವ ಮಕ್ಕಳು, ಟಿವಿ, ಮೊಬೈಲ್, ನಿದ್ರೆಯಲ್ಲಿ ಕಾಲ ಕಳೆಯುತ್ತಾರೆ. ಬೇರೆ ಮಕ್ಕಳ ಚಟುವಟಿಕೆಗೆ ನಮ್ಮ ಮಕ್ಕಳ ಚಟುವಟಿಕೆ ಹೋಲಿಸಿ ಪಾಲಕರು ಚಿಂತಿತರಾಗ್ತಾರೆ. ಸೋಮಾರಿ ಮಕ್ಕಳನ್ನು ಹೇಗೆ ಕ್ರಿಯಾಶೀಲರನ್ನಾಗಿ ಮಾಡೋದು ಎಂಬ ಚಿಂತೆ ಅವರನ್ನು ಕಾಡುತ್ತದೆ. ನಿಮ್ಮ ಮಕ್ಕಳೂ ಸೋಮಾರಿಯಾಗಿದ್ರೆ ನಾವು ಕೆಲ ಟಿಪ್ಸ್ ಹೇಳ್ತೇವೆ ಅದನ್ನು ಪಾಲಿಸಿ, ನಿಮ್ಮ ಮಕ್ಕಳನ್ನು ಆಕ್ಟೀವ್ ಮಾಡಿ.
ಮಕ್ಕಳ ಸೋಮಾರಿತನ ಹೀಗೆ ಹೋಗಲಾಡಿಸಿ :
ಡಾನ್ಸ್ (Dance) : ಟಪಾಂಗುಚಿ ಸಾಂಗ್, ದೊಡ್ಡ ಸೌಂಡ್ ನಲ್ಲಿ ಹಾಡು ಕೇಳಿದ್ರೆ ಎಲ್ಲರಿಗೂ ಹೆಜ್ಜೆ ಹಾಕ್ಬೇಕೆನ್ನಿಸುತ್ತದೆ. ಡಾನ್ಸ್ ಕೂಡ ಒಂದು ರೀತಿಯ ವ್ಯಾಯಾಮ. ಮಕ್ಕಳ ಸೋಮಾರಿತನ ಹೋಗಲಾಡಿಸಲು ನೀವು ಮಕ್ಕಳನ್ನು ಡಾನ್ಸ್ ಕ್ಲಾಸಿಗೆ ಹಾಕಬಹುದು. ಇದು ಮಕ್ಕಳಿಗೆ ಒಳ್ಳೆ ವ್ಯಾಯಾಮ ನೀಡುತ್ತದೆ. ಹಾಗೆ ಅಲ್ಲೊಂದಿಷ್ಟು ಸ್ನೇಹಿತರು ಸಿಗ್ತಾರೆ. ಡಾನ್ಸ್ ನಲ್ಲಿ ಆಸಕ್ತಿ ಇಲ್ಲದ ಮಕ್ಕಳಿಗೂ ಕ್ರಮೇಣ ಆಸಕ್ತಿ ಬರಲು ಶುರುವಾಗುತ್ತದೆ. ಪ್ರತಿ ದಿನ ಡಾನ್ಸ್ ಕ್ಲಾಸ್ ಗೆ ಹೋಗುವ ಮಕ್ಕಳಿಗೆ ಅದು ದಿನಚರಿಯಾಗುತ್ತದೆ. ಆಗ ಟಿವಿ, ಮೊಬೈಲ್ ನೋಡುವ ಸಮಯ ಕಡಿಮೆಯಾಗುತ್ತದೆ. ಸೋಮಾರಿತನ ಹೇಳ ಹೆಸರಿಲ್ಲದೆ ಹೋಗುತ್ತೆ.
Parenting Tips : ಮಕ್ಕಳನ್ನು ಪ್ರತ್ಯೇಕ ರೂಮ್ ನಲ್ಲಿ ಮಲಗಿಸ್ತೀರಾ? ಒಮ್ಮೆ ಈ ಸ್ಟೋರಿ ಓದಿ
ಯಾವುದಕ್ಕೂ ಪಾಲಕರ ಬಲವಂತ ಬೇಡ : ಸಾಮಾನ್ಯವಾಗಿ ಬೇರೆ ಮಕ್ಕಳನ್ನು ನಮ್ಮ ಮಕ್ಕಳಿಗೆ ಹೋಲಿಕೆ (Comparison) ಮಾಡುವ ಪಾಲಕರು ಅವರನ್ನು ಉದಾಹರಣೆಯಾಗಿ ತೆಗೆದುಕೊಂಡು ಇವರಿಗೆ ಬೈತಾರೆ. ಮಕ್ಕಳಿಗೆ ಮನಸ್ಸಿಲ್ಲವೆಂದ್ರೂ ಅವರನ್ನು ಒಂದಿಷ್ಟು ಕ್ಲಾಸಿಗೆ ಹಾಕ್ತಾರೆ. ಇದು ತಪ್ಪು. ನಿಮ್ಮ ಮಕ್ಕಳಿಗೆ ಡಾನ್ಸ್ ನಲ್ಲಿ ಆಸಕ್ತಿ ಇಲ್ಲವೆಂದ್ರೆ ಒತ್ತಾಯ ಬೇಡ. ನಾಲ್ಕೈದು ದಿನಗಳ ಕ್ಲಾಸ್ ನಲ್ಲಿಯೇ ನಿಮಗೆ ಅವರ ಮನಸ್ಥಿತಿ ಅರ್ಥವಾಗುತ್ತದೆ. ಅವರನ್ನು ನೀವು ಅವರಿಷ್ಟದ ಕ್ಲಾಸ್ ಗೆ ಸೇರಿಸಬಹುದು. ಇಲ್ಲವೆ ನೀವೇ ಮನೆಯಲ್ಲಿ ತರಬೇತಿ ನೀಡ್ಬಹುದು.
ಇಂಥ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿ : ಮಕ್ಕಳನ್ನು ಕ್ರಿಯಾಶೀಲರನ್ನಾಗಿಸಲು ಡಾನ್ಸ್ ಹೊರತಾಗಿ ಅವರನ್ನು ಹಾಡಿನ ಕ್ಲಾಸ್ ಗೆ, ಚಿತ್ರಕಲೆ (Painting), ಈಜು (Swimming), ಕ್ರಿಕೆಟ್ (Cricket), ಕರಾಟೆ (Karate) ಅಥವಾ ಬ್ಯಾಡ್ಮಿಂಟನ್ (Badminton) ಸೇರಿದಂತೆ ಬೇರೆ ಕ್ಲಾಸ್‌ಗಳಿಗೆ ಹಾಕಬಹುದು. ಅದನ್ನು ಕಲಿಯುವಂತೆ ಅವರನ್ನು ಪ್ರೋತ್ಸಾಹಿಸಬಹುದು. ಮಕ್ಕಳಿಗೆ ದೈಹಿಕ ಚಟುವಟಿಕೆ (Physical Activity) ಬಹಳ ಮುಖ್ಯ. ಇದ್ರಿಂದ ಮಗುವಿನಲ್ಲಿ ಸೃಜನಶೀಲತೆ (Creativity) ಹೆಚ್ಚಾಗುತ್ತದೆ. ಮೊದಲಿಗಿಂತ ಹೆಚ್ಚು ಕ್ರಿಯಾಶೀಲರಾಗ್ತಾರೆ.
Child Care: ಮಕ್ಕಳಿಗೆ ನಾನ್ ವೆಜ್ ಕೊಡಬಹುದಾ? ಯಾವಾಗ ಏಕೆ?
ಲಘು ಆಹಾರ (Lite Food): ಮಕ್ಕಳ ಸೋಮಾರಿತನಕ್ಕೆ ಪಾಲಕರು ಮುಖ್ಯ ಕಾರಣ. ಮಕ್ಕಳ ಆರೋಗ್ಯದ ಹೆಸರಿನಲ್ಲಿ, ಮಕ್ಕಳು ತಿಂದುಂಡು ದಪ್ಪಗಾಗ್ಲಿ ಎನ್ನುವ ಕಾರಣಕ್ಕೆ ಹೆಚ್ಚಿನ ಆಹಾರವನ್ನು ತಿನ್ನಿಸ್ತಾರೆ. ಇದ್ರಿಂದ ಮಕ್ಕಳಿಗೆ ಸೋಮಾರಿತನ ಹೆಚ್ಚಾಗುತ್ತದೆ. ಕುಳಿತಲ್ಲಿಂದ ಏಳಲು ಮನಸ್ಸಾಗುವುದಿಲ್ಲ. ಮಕ್ಕಳಿಗೆ ಕೊಬ್ಬು, ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚಾಗಿ ನೀಡ್ಬೇಡಿ. ಇದು ಮಗುವಿನ ರಕ್ತದಲ್ಲಿನ ಸಕ್ಕರೆಯನ್ನು (Sugar in Blood) ಹೆಚ್ಚಿಸಿ ಸೋಮಾರಿತನ ತರಬಹುದು.
ಯೋಗ (Yoga): ಆರೋಗ್ಯಕರ ದೇಹಕ್ಕಾಗಿ ಯೋಗ ಮಾಡಲು ಮಕ್ಕಳನ್ನು ಪ್ರೇರೇಪಿಸಬೇಕು. ಯೋಗವು ಅವರ ಮನಸ್ಸನ್ನು ಚುರುಕುಗೊಳಿಸುತ್ತದೆ ಮತ್ತು ಸೋಮಾರಿತನವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಯೋಗ ಅಥವಾ ವ್ಯಾಯಾಮ ಮಾಡುವಂತೆ ಮಕ್ಕಳಿಗೆ ತಿಳಿಸಿ.