ಒನ್‌ ಸೈಡ್‌ ಲವ್‌ನಿಂದ ಕ್ವಿಕ್‌ ರಿಲೀಫ್‌ ಪಡೀಬಹುದು, ಹೇಗೆ ಗೊತ್ತಾ?

ಯಾರನ್ನೋ ಇಷ್ಟ ಪಡ್ತೀವಿ, ಅವರು ನಮ್ಮತ್ತ ತಿರುಗೂ ನೋಡಲ್ಲ. ಸೋ ನೆಕ್ಸ್ಟ್ ಏನು? ಇದರಿಂದ ಕ್ವಿಕ್‌ ಆಗಿ ಹೊರಬರೋದು ಹೇಗೆ? ಇಲ್ಲಿದೆ ಟ್ರಿಕ್ಸ್

 

Finding Peace from Unrequited Love Guide


ನಮ್‌ಲೈಫು ಫುಲ್‌ ಅನ್‌ಪ್ರೆಡಿಕ್ಟೇಬಲ್‌. ನಾಳಿನ ವಿಚಾರ ಬಿಡಿ, ಇನ್ನೊಂದು ಕ್ಷಣ ಬಿಟ್ಟು ಏನಾಗುತ್ತೆ ಅಂತ ದೇವ್ರಾಣೆಗೂ ಊಹಿಸೋದಕ್ಕಾಗಲ್ಲ. ಹೀಗಿರುವಾಗ ಎಂಥಾ ಸಭ್ಯ, ಸುಸಂಸ್ಕೃತ, ಮರ್ಯಾದಾ ಪುರುಷೋತ್ತಮ, ಪುರುಷೋತ್ತಮೆಯರಿಗೂ ಒಂದು ಸೆಕೆಂಡಲ್ಲಿ ಯಾರದೋ ಮೇಲೆ ಆಕರ್ಷಣೆ ಆಗಬಹುದು. ಆ ಆಕರ್ಷಣೆ ಕ್ರಶ್. ಅದು ಲವ್ವಾಗಿ ಪರಿವರ್ತನೆ ಆಗೋದಕ್ಕೆ ಜಾಸ್ತಿ ಟೈಮೇನೂ ಬೇಡ. ಮೊದಲೇ ಬೆಂಗಳೂರಲ್ಲಿ ಡೆಂಗ್ಯೂ ಜ್ವರ ಜಾಸ್ತಿ ಆಗ್ತಿದೆ. ಸೋ ಇದನ್ನು ಮೀರಿಸೋ ಪ್ರೇಮ ಜ್ವರ ಬಂದುಬಿಡಬಹುದು. ಇದು ಹೀಗೇ ಮುಂದೆ ಮುಂದೆ ಹೋಗ್ತಾ ಇರುತ್ತೆ. ನಮ್ಮ ಅರಿವಿಗೇ ಬರದೇ ಹಳ್ಳಕ್ಕೆ ಬೀಳ್ತನೇ ಇರ್ತೀವಿ. ಅದೆಷ್ಟು ಆಳ ಇದೆ ಅಂತ ಗೊತ್ತಾಗೋವಾಗ ಮಾತ್ರ ಮೇಲಕ್ಕೇಳಲಾಗದ ಪರಿಸ್ಥಿತಿಯಲ್ಲಿರುತ್ತೇವೆ.

ಯೆಸ್, ನಾವಿಲ್ಲಿ ಹೇಳೋದಕ್ಕೆ ಹೊರಟಿರೋದು ಒಂದು ಸೈಡ್‌ ಲವ್ವಿನ ಬಗ್ಗೆ. ನಾವು ಲೈಫಿನ ಒಂದಲ್ಲ ಒಂದು ಹಂತದಲ್ಲಿ ಇಂಥದ್ದೊಂದು ಪರಿಸ್ಥಿತಿ ಅನುಭವಿಸಿದವರೇ. ಆದರೆ ಹೊರಬರೋದಕ್ಕೆ ಎಷ್ಟು ಟೈಮು ತಗೊಂಡ್ವಿ ಅನ್ನೋದು ಇಲ್ಲಿ ಮ್ಯಾಟರು. ಯಾವಾಗಲೂ ನೀವು ಪ್ರೀತಿಸಿದ ವ್ಯಕ್ತಿ ನಿಮ್ಮನ್ನು ಪ್ರೀತಿಸಬೇಕೆಂದೇನಿಲ್ಲ. ಈ ಒನ್‌ಸೈಡ್‌ ಲವ್‌ನಿಂದಾಗಿ ನೀವು ನಿಮ್ಮ ಮನಸ್ಸನ್ನು, ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ ಅನ್ನೋ ಸಲಹೆಗಳು ನಿಮಗೆ ಜಗತ್ತಿನ ಮೂಲೆ ಮೂಲೆಗಳಿಂದ ಸಿಗುತ್ತಾ ಹೋಗುತ್ತವೆ. 

ಇದರ ಜೊತೆಗೆ ಇನ್ನೊಂದಿಷ್ಟು ಟಿಪ್ಸ್‌ ಸಿಗುತ್ತಾ ಹೋಗುತ್ತೆ. ಉದಾಹರಣೆಗೆ ನಿಮ್ಮ ಹೃದಯದಲ್ಲಿ ನಡೆಯುತ್ತಿರುವುದನ್ನು ನಿಮ್ಮ ಸ್ನೇಹಿತರು ಅಥವಾ ನಿಮ್ಮ ಆಪ್ತರ ಜೊತೆ ಹಂಚಿಕೊಳ್ಳಿ. ಇದು ನಿಮ್ಮ ಮನಸ್ಸನ್ನು ಹಗುರವಾಗಿಸುತ್ತದೆ. ಪ್ರತಿ ಕಷ್ಟದ ಸಮಯದಲ್ಲಿ, ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಮನಸ್ಸಿನಿಂದ ನಿಮಗೆ ನೋವುಂಟು ಮಾಡುವ ಎಲ್ಲಾ ವಿಷಯಗಳನ್ನು ತೆಗೆದುಹಾಕಬೇಕು, ಉತ್ತಮ ಆಹಾರವನ್ನು ಸೇವಿಸಬೇಕು, ಸಾಕಷ್ಟು ನಿದ್ರೆ ಮಾಡಬೇಕು, ಪ್ರತಿದಿನ ವ್ಯಾಯಾಮ ಮಾಡಬೇಕು ಮತ್ತು ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಬೇಕು. 

ನೀವು ಏನನ್ನು ಬಯಸುತ್ತಿದ್ದೀರೋ ಅದು ಸಾಧ್ಯವಿಲ್ಲ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಿ. ಅವರನ್ನು ಮರೆತು ಜೀವನದಲ್ಲಿ ಮುಂದೆ ಸಾಗಿ. ಹೊಸ ಜೀವನವನ್ನು ಪ್ರಾರಂಭಿಸಿ. ಹಳೆ ಪ್ರೀತಿಯ ಬಗ್ಗೆ ಯೋಚಿಸುವ ಬದಲು ನಿಮಗಾಗಿ ಸಮಯ ತೆಗೆದುಕೊಳ್ಳಿ. ನೀವು ಬೇರೆಯವರಿಗೆ ನೀಡಲು ಬಯಸಿದ ಎಲ್ಲಾ ಸಂತೋಷವನ್ನು ನಿಮಗಾಗಿ ಇಡಿ.

ಕೆಲವೊಮ್ಮೆ ಒನ್‌ಸೈಡೆಡ್‌ ಪ್ರೀತಿ ನಿಮ್ಮ ಸ್ವಾಭಿಮಾನವನ್ನು ಹಾನಿಗೊಳಿಸುತ್ತದೆ. ಈ ಕಾರಣದಿಂದಾಗಿ ಒಬ್ಬ ವ್ಯಕ್ತಿಯು ತನ್ನನ್ನು ತಾನೇ ತಪ್ಪಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾನೆ ಮತ್ತು ಜೀವನವನ್ನು ಕಳೆದುಕೊಳ್ಳುತ್ತಾರೆ. ಅನೇಕ ಬಾರಿ ಕೆಲವು ಜನರು ಏಕಪಕ್ಷೀಯ ಪ್ರೀತಿಯಲ್ಲಿ ನಿರಾಶೆಗೊಳ್ಳುತ್ತಾರೆ ಮತ್ತು ಅವರಲ್ಲಿ ನಕಾರಾತ್ಮಕ ಆಲೋಚನೆಗಳು ಬರಲು ಪ್ರಾರಂಭಿಸಿ ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಮದುವೆ ಮೊದಲ ರಾತ್ರಿ ಅನುಭವ ಬಿಚ್ಚಿಟ್ಟ ನವ ವಧು, ಇನ್ನೆಂದು ಹಾಗಾಗಲ್ಲ ಎಂದು ಶಪಥ!

ಕೆಲವೊಂದು ಸಂದರ್ಭಗಳಲ್ಲಿ ನೀವು ಎಷ್ಟೇ ಪ್ರಯತ್ನಿಸಿದರೂ ನೀವು ಇಷ್ಟಪಟ್ಟಿರುವ ವ್ಯಕ್ತಿಯ ನೆನಪಿನಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಅವರ ನೆನಪುಗಳು ಇನ್ನಷ್ಟು ಕಾಡಲಾರಂಭಿಸುತ್ತದೆ. ಅವರಿಲ್ಲದೆ ನಿಮ್ಮ ಜೀವನವನ್ನು ಊಹಿಸಲು ಕಷ್ಟವಾಗಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ನೀವು ಸಲಹೆಗಾರರು ಅಥವಾ ಮಾನಸಿಕ ವೈದ್ಯರೊಂದಿಗೆ ಕುಳಿತು ಮಾತನಾಡಬಹುದು. ನೀವು ಯೋಚಿಸುತ್ತಿರುವ ಎಲ್ಲವನ್ನೂ ಮತ್ತು ನಿಮಗೆ ಏನಾಗುತ್ತಿದೆ ಎಂಬುದನ್ನು ನೀವು ಅವರಿಗೆ ತಿಳಿಸಿ. ಇದರಿಂದ ವೈದ್ಯರು ನಿಮ್ಮನ್ನು ಈ ಗೊಂದಲದಿಂದ ಹೊರಬರಲು ಸಹಾಯ ಮಾಡುತ್ತಾರೆ. 

ಹೀಗೆ ಸಲಹೆ ಮೇಲೆ ಸಲಹೆಗಳು ಬರುತ್ತಾ ಹೋಗಬಹುದು. ಆದರೆ ನೀವು ಇಂಥದ್ದೊಂದು ಸ್ಟೇಜಿಂದ ಹೊರಬರಲು ಬೆಸ್ಟ್ ಮಾರ್ಗ ಅಂದರೆ ನಮ್ಮನ್ನು ನಾವು ಪ್ರೀತಿಸಲು ಕಲಿಯೋದು. ಲೈಫಲ್ಲಿ ಎಲ್ಲವನ್ನೂ ಹೊಸತರಿಂದ ಶುರುಮಾಡೋದು. ದಿನಾ ಎಂಟಕ್ಕೋ ಒಂಭತ್ತಕ್ಕೋ ಏಳುತ್ತಿದ್ದವರು ಐದು ಗಂಟೆಗೆ ಎದ್ದು ಯೋಗ, ಪ್ರಾಣಾಯಾಮ ಮಾಡಬಹುದು. ಅಧ್ಯಾತ್ಮ ಚಿಂತನೆಗಳು ನಿಮಗೆ ಫ್ಯಾಕ್ಟ್‌ ಏನು ಅನ್ನೋದನ್ನು ಸುಲಭವಾಗಿ ಅರ್ಥ ಮಾಡಿಸುತ್ತವೆ.

ಸೋ, ಆಲ್ ದಿ ಬೆಸ್ಟ್ ಫ್ರೆಂಡ್ಸ್‌. ಬೇಗ ನಿಮ್ಮ ಒನ್‌ ಲೈಡ್‌ ಲವ್ವಿಂದ ಅಲ್ಲ, ಅದು ಹುಟ್ಟಿಸಿರೋ ನೋವಿಂದ ಹೊರಬನ್ನಿ!

ಮುರಿದ ಸ್ನೇಹವನ್ನು ಮತ್ತೆ ಸಂಪಾದಿಸೋದು ಹೇಗೆ? ಇಲ್ಲಿವೆ ಟಿಪ್ಸ್
 

Latest Videos
Follow Us:
Download App:
  • android
  • ios