ಮದುವೆ ಮೊದಲ ರಾತ್ರಿ ಅನುಭವ ಬಿಚ್ಚಿಟ್ಟ ನವ ವಧು, ಇನ್ನೆಂದು ಹಾಗಾಗಲ್ಲ ಎಂದು ಶಪಥ!

ಮದುವೆಯ ಮೊದಲ ರಾತ್ರಿ. ಬೆಡ್ ಶೃಂಗರಿಸಲಾಗಿತ್ತು. ರೋಮ್ಯಾಂಟಿಕ್ ಫೀಲ್‌ಗಾಗಿ ಅಲಂಕಾರ ಮಾಡಲಾಗಿತ್ತು. ಮೊದಲ ರಾತ್ರಿ ಕಳೆದಿದೆ. ಮರುದಿನ ಎಲ್ಲರ ಮುಂದೆ ನವ ವಧು ಮುಜುಗರ ಅನುಭವಿಸಿದ್ದಾಳೆ. ಅಷ್ಟಕ್ಕೂ ಮೊದಲ ರಾತ್ರಿ ಏನಾಗಿತ್ತು?

Newly Married Woman Share after first night embarrassing experience in Social Media ckm

ಮದುವೆ ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಮದುವೆ, ಮೊದಲ ರಾತ್ರಿ, ಹನಿಮೂನ್ ಸೇರಿದಂತೆ ಈ  ಕ್ಷಣಗಳನ್ನು ಸ್ಮರಣೀಯವಾಗಿಸಲು ಎಲ್ಲರು ಪ್ರಯತ್ನಿಸುತ್ತಾರೆ. ಹೀಗೆ ತನ್ನ ಮದುವೆ, ಮೊದಲ ರಾತ್ರಿಯೂ ಅಷ್ಟೇ ಸವಿಯಾಗಿರಬೇಕು ಎಂದು ನವ ವಧು ಬಯಸಿದ್ದಾಳೆ. ಇದಕ್ಕೆ ತಕ್ಕಂತೆ ನವ ಜೋಡಿಗಳು ಪ್ಲಾನ್ ಮಾಡಿದ್ದಾರೆ. ಸುದೀರ್ಘ ದಿನಗಳ ಕಾಯುವಿಕೆ, ಹಲವು ಸವಾಲುಗಳನ್ನು ಮೆಟ್ಟಿ ನಿಂತ ಜೋಡಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆ ಕ್ಷಣ ಸ್ಮರಣೀಯವಾಗಿಸಿದ ಜೋಡಿ ಫಸ್ಟ್ ನೈಟ್ ಕುತೂಹಲದಲ್ಲಿತ್ತು. ನವ ಜೋಡಿಗಳ ಪ್ಲಾನ್ ಪ್ರಕಾರ ಎಲ್ಲವೂ ನಡೆದಿತ್ತು. ಆದರೆ ನವ ಜೋಡಿ ಫಸ್ಟ್ ನೈಟ್ ಮಾತ್ರ ಉಲ್ಟಾ ಆಗಿದೆ. ಇಷ್ಟೇ ಅಲ್ಲ ಎಲ್ಲರ ಮುಂದೆ ತೀವ್ರ ಮುಜುಗರ ಅನುಭವಿಸಿದೆ. 

ನವ ತನ್ನ ಫಸ್ಟ್ ನೈಟ್ ಕುರಿತು ರೆಡಿಟ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. @Qarantinosfootfetish ಖಾತೆಯ ಈ ಮಾಹಿತಿ ಹಂಚಿಕೊಂಡಿದೆ. ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ ಹಲವು ಸವಾಲುಗಳನ್ನು ಎದುರಿಸಿ ಮದುವೆಯಾಗಲು ನಿರ್ಧರಿಸಿದ್ದಾರೆ. ಅದ್ಧೂರಿಯಾಗಿ ಮದುವೆ ಸಮಾರಂಭ ನಡದಿದೆ. ಆಪ್ತರು, ಗೆಳೆಯರು ಸೇರಿದಂತೆ ಹಲವರು ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.

ವಿದೇಶದ ಸಂಸ್ಕೃತಿಯಾಗಿರುವ ಕಾರಣ ಮದುವೆ ಸಮಾರಂಭ ಹೆಚ್ಚು ಹೊತ್ತು ಇರಲಿಲ್ಲ. ಮದುವೆ ಮುಗಿದಿದೆ. ಎಲ್ಲಾ ಮುಗಿಸಿ ನವ ಜೋಡಿ ಹಾಗೂ ಆಪ್ತ ಗೆಳೆಯರು ಮನೆಗೆ ಮರಳಿದ್ದಾರೆ. ಮೊದಲ ರಾತ್ರಿಗೆ ಇನ್ನು ಸಮಯವಿದೆ. ಹೀಗಾಗಿ ಇನ್ನುಳಿದ ಸಮಯವನ್ನು ಸಣ್ಣ ಪಾರ್ಟಿ ಮಾಡಿ ಎಂಜಾಯ್ ಮಾಡೋಣ ಅನ್ನೋ ಐಡಿಯಾ. ಈ ಲೋಚನೆಗೆ ನವ ವಧು ಸೇರಿದಂತೆ ಗೆಳೆಯರೂ ಒಕೆ ಎಂದಿದ್ದಾರೆ.

ಐವರು ಯುವಕರ ಜೊತೆ ವಧುವಿನ ಫಸ್ಟ್ ನೈಟ್- ಶಾಕಿಂಗ್ ನ್ಯೂಸ್ ಬೆಳಕಿಗೆ 

ಹತ್ತಿರದ ಬಾರ್‌ಗೆ ತೆರಳಿ ಪಾರ್ಟಿ ಆರಂಭಿಸಿದ್ದಾರೆ. ಮದುವೆ ಖುಷಿ ಒಂದಡೆಯಾದರೆ, ಎಲ್ಲವೂ ತಾವು ಅಂದುಕೊಂಡಂತೆ ನಡೆದಿದೆ ಅನ್ನೋದು ಮತ್ತೊಂದೆಡೆ. ಇತ್ತ ಅಪ್ತ ಗೆಳಯನ ಮದುವೆ ತಯಾರಿಗೆ ಫ್ರೆಂಡ್ಸ್ ಶ್ರಮವಹಿಸಿದ್ದರು. ಹೀಗಾಗಿ ಪಾರ್ಟಿ ಜೋರಾಗಿತ್ತು. ನವ ಜೋಡಿಗಳು ಒಂದೊಂದೆ ಗುಟುಕು ಏರಿಸುತ್ತಾ ಖುಷಿ ಪಟ್ಟರು.

ಒಂದೆಡೆರಡು ಪೆಗ್ ಹೀರುತ್ತಲೆ ನವ ವಧುವಿನ ಕಂಟ್ರೋಲ್ ತಪ್ಪಿದೆ. ಬಳಿಕ ಬ್ರೇಕ್ ನೀಡದೆ ಒಂದರ ಮೇಲೊಂದರಂತೆ ಮದ್ಯ ಹೀರಿದ್ದಾಳೆ. ಇತ್ತ ವರ ಕೂಡ ಕಡಿಮೆ ಇರಲಿಲ್ಲ. ಕೆಲ ಹೊತ್ತಿನ ಬಳಿಕ ವಧುವಿಗೆ ನಶೆ ಏರಿದೆ. ಭೂಮಿ ವೇಗವಾಗಿ  ತಿರುಗುವ ಅನುಭವ ಶುರುವಾಗಿದೆ. ಎಡವಟ್ಟಾಗಿದೆ ಎಂಬುದ ಅರಿತ ವರ ಹಾಗೂ ಆತನ ಗೆಳೆಯರು ಹೇಗಾದರು ಮಾಡಿ ಮನೆ ಸೇರಿಕೊಳ್ಳುವ ಪ್ಲಾನ್ ಮಾಡಿದ್ದಾರೆ.

ಪತ್ನಿಯನ್ನು ಎತ್ತಿಕೊಂಡ ಪತಿ ಹಾಗೂ ಆತನ ಗೆಳೆಯರು ಬಾರ್‌ನಿಂದ ಹೊರಬಂದಿದ್ದಾರೆ. ಅಷ್ಟರಲ್ಲೇ ವಾಂತಿ ಶುರುವಾಗಿದೆ. ಅಸ್ವಸ್ಥಗೊಂಡಿದ್ದಾಳೆ. ಇತ್ತ ಪೊಲೀಸರು ಆಗಮಿಸಿದ್ದಾರೆ. ಆಸ್ಪತ್ರೆ ದಾಖಲಿಸುವುದಾಗಿ ಸೂಚಿಸಿದ್ದಾರೆ. ಇತ್ತ ವರ ಮದುವೆಯಾದ ಮೊದಲ ದಿನವೇ ಆಸ್ಪತ್ರೆ ಬೇಡ ಎಂದು ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಿ ಕ್ಯಾಬ್ ಬುಕ್ ಮಾಡಿದ್ದಾರೆ.

ಮದುವೆಯಾಗಿ 12 ದಿನವಾದ್ರೂ ಸಿಗ್ಲಿಲ್ಲ ಆ ಭಾಗ್ಯ…ಕೊನೆಯಲ್ಲಿ ರಿವೀಲ್ ಆಯ್ತು ಕಹಿ ಸತ್ಯ

ಕ್ಯಾಬ್ ಮೂಲಕ ಮನೆಗೆ ಬಂದ ನವ ಜೋಡಿಗಳು ಹಾಗೂ ಗೆಳೆಯರು ಆಕೆಯನ್ನು ಮಲಗಿಸಿದ್ದಾರೆ. ಆದರೆ ಆಕೆಯ ವಾಂತಿ ಮಾತ್ರ ಮುಗಿದಿರಲಿಲ್ಲ. ತಡ ರಾತ್ರಿ ವರೆಗೂ ಹೀಗೆ ಮುಂದುವರಿದಿದೆ. ಪತಿ ಹಾಗೂ ಆತನ ಗೆಳೆಯರು ಎಲ್ಲವನ್ನು ಶುಚಿ ಮಾಡುವುದರೊಳಗೆ ಬೆಳಗಾಗಿತ್ತು. ಮರುದಿನ ಎದ್ದ ಪತ್ನಿಗೆ ಹ್ಯಾಂಗ್ ಓವರ್ ಸಮಸ್ಯೆ. ಸಂಜೆ ವೇಳೆ ಚೇತರಿಸಿಕೊಂಡ ನವ ವಧು, ಇನ್ನೆಂದು ಈ ರೀತಿ ಕುಡಿದು ರಂಪಾಟ ಮಾಡುವುದಿಲ್ಲ ಎಂದು ಶಪಥ ಮಾಡಿದ್ದಾಳೆ.
 

Latest Videos
Follow Us:
Download App:
  • android
  • ios