Asianet Suvarna News Asianet Suvarna News

ಮುರಿದ ಸ್ನೇಹವನ್ನು ಮತ್ತೆ ಸಂಪಾದಿಸೋದು ಹೇಗೆ? ಇಲ್ಲಿವೆ ಟಿಪ್ಸ್

ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹ, ಸ್ನೇಹಿತರಿಗೊಂದು ವಿಶೇಷ ಸ್ಥಾನವಿದೆ. ಎಂದೋ ಮಾಡಿದ ತಪ್ಪಿಗೆ ಆಪ್ತ ಸ್ನೇಹಿತರನ್ನು ಕಳೆದುಕೊಂಡು ನೋವು ತಿನ್ನುತ್ತಿರುವ ಜನರಿದ್ದಾರೆ.  ಇನ್ನೂ ಅವಕಾಶ ಕೈತಪ್ಪಿ ಹೋಗಿಲ್ಲ. ಆತ ಸ್ನೇಹಕ್ಕೆ ಯೋಗ್ಯ ಎಂದಾದ್ರೆ ಒಂದು ಹೆಜ್ಜೆ ನೀವೇ ಮುಂದಿಡಿ.
 

How To Fix A Broken Friendship roo
Author
First Published Jun 28, 2024, 10:49 AM IST

ಬೇರ್ಪಡೋದು ಪ್ರತಿಯೊಬ್ಬರಿಗೂ ನೋವುಂಟುಮಾಡುತ್ತದೆ. ಅದ್ರಲ್ಲೂ ಆಪ್ತ ಸ್ನೇಹಿತರಿಂದ ಬೇರ್ಪಟ್ಟಾಗ ಅದು ನಿಮ್ಮ ಮನಸ್ಸನ್ನು ಇನ್ನಷ್ಟು ಆಳವಾಗಿ ಚುಚ್ಚುತ್ತದೆ. ಪ್ರತಿಯೊಂದು ಸಂಬಂಧದಂತೆ ಸ್ನೇಹದಲ್ಲೂ ಪ್ರೀತಿ, ಕೋಪವನ್ನು ನೀವು ನೋಡ್ಬಹುದು. ಇಬ್ಬರ ಮಧ್ಯೆ ಶುರುವಾದ ಸಣ್ಣ ಬಿರುಕು ಮುಂದೆ ದೊಡ್ಡದಾಗಿ ಇಬ್ಬರೂ ದೂರವಾಗುವ ಸಮಯ ಬರಬಹುದು. ಕಾರಣ ಯಾವುದೇ ಇರಬಹುದು, ಆಪ್ತ ಸ್ನೇಹಿತರು ದೂರವಾದಾಗ ಆರಂಭದಲ್ಲಿ ನೋವಾಗದೆ ಇರಬಹುದು. ಅವರ ಮೇಲೆ ಸಿಟ್ಟು ಬರಬಹುದು. ಅವರ ಕೆಲಸಗಳನ್ನು ಇಣುಕಿ ನೋಡಿ ನಂತ್ರ ಅವರ ಬಗ್ಗೆ ಬೇರೊಬ್ಬರ ಬಳಿ ಹುಳುಕು ಹೇಳುವ, ಅವರ ಕೆಲಸಕ್ಕೆ ಅಡ್ಡಿ ಮಾಡುವ ಕೆಲ ಸ್ನೇಹಿತರಿದ್ದಾರೆ. ಎಲ್ಲ ಸ್ನೇಹ ಹಾಗೂ ಸ್ನೇಹಿತರು ಹಾಗಲ್ಲ. ನಮ್ಮ ಜೀವನದಲ್ಲಿ ಒಬ್ಬ ವಿಶೇಷ ಸ್ನೇಹಿತರು ಇದ್ದೇ ಇರ್ತಾರೆ. ಅವರನ್ನು ಕಳೆದುಕೊಂಡ ಎಷ್ಟೋ ವರ್ಷದ ನಂತ್ರವೂ ಅವರು ನೆನಪಾಗ್ತಾರೆ. ನಿಮ್ಮ ಕಷ್ಟ – ಸುಖದಲ್ಲಿ ಭಾಗಿಯಾಗಿದ್ದ ಅವರನ್ನು ಮತ್ತೆ ಮಾತನಾಡಿಸಬೇಕೆಂಬ ಬಯಕೆ ನಿಮ್ಮನ್ನು ಕಾಡುತ್ತದೆ. ಅವರ ಜೊತೆ ಕಳೆದ ಸುಂದರ ಕ್ಷಣಗಳನ್ನು ನೆನೆದಾಗ ನಿಮ್ಮ ಮುಖದಲ್ಲೊಂದು ನಗು ಮೂಡುತ್ತದೆ. ಆಗ ಇಬ್ಬರು ಬೇರ್ಪಟ್ಟ ಕಾರಣ ಈಗ ಕ್ಷುಲ್ಲಕ ಎನ್ನಿಸಬಹುದು. ಮತ್ತೊಮ್ಮೆ ಆ ಸ್ನೇಹವನ್ನು ನಿಮ್ಮ ಮನಸ್ಸು ಬಯಸುತ್ತಿರುತ್ತದೆ. ಆ ಸ್ನೇಹಿತರನ್ನು ನಿಮ್ಮ ಜೀವನದಲ್ಲಿ ಮರಳಿ ಸ್ವಾಗತಿಸಲು ಬಯಸುತ್ತೀರಿ ಎಂದಾದ್ರೆ ಮತ್ತ್ಯಾಕೆ ತಡ. ಈಗ ನಾವು ಹೇಳುವ ಕೆಲ ಟಿಪ್ಸ್ ಬಳಸಿ, ನಿಮ್ಮ ಜೀವನದಲ್ಲಿ ಮತ್ತೆ ಸ್ನೇಹವೆಂಬ ಸಿಹಿ ಗಾಳಿ ಬೀಸುವಂತೆ ಮಾಡಿ.

ನಿಮ್ಮನ್ನೇ ನೀವು ಪ್ರಶ್ನೆ ಕೇಳಿಕೊಳ್ಳಿ : ನಿಮ್ಮ ಮನಸ್ಸು ಹಳೆ ಸ್ನೇಹಿತ (Friend) ನನ್ನು ಬಯಸ್ತಿದ್ದರೂ ಮೊದಲು ನಿಮ್ಮ ನಿರ್ಧಾರವನ್ನು ದೃಢಗೊಳಿಸಿ. ನಿಮ್ಮಲ್ಲಿಯೇ ಕೆಲ ಪ್ರಶ್ನೆಗಳನ್ನು ಕೇಳಿಕೊಳ್ಳಿ. ನೀವು ಅವರನ್ನು ಮಿಸ್ ಮಾಡಿಕೊಳ್ತಿದ್ದೀರಾ? ಅವರ ಜೊತೆ ಕಳೆದ ದಿನಗಳಲ್ಲಿ ಕೆಟ್ಟದ್ದೆಷ್ಟು, ಒಳ್ಳೆಯದೆಷ್ಟು, ನಿಮ್ಮನ್ನು ಅವರು ಉತ್ತಮ ವ್ಯಕ್ತಿ ಮಾಡಬಲ್ಲರೆ? ಈ ಎಲ್ಲ ಪ್ರಶ್ನೆಗಳಿಗೆ ಮೊದಲು ಉತ್ತರ (Answer) ಕಂಡುಕೊಳ್ಳಿ. 

ಕಾರಿನಲ್ಲಿ ಸೆಕ್ಸ್‌ ಆನಂದ ಅನುಭವಿಸೋಕೆ ಇಲ್ಲಿದೆ ಟಿಪ್ಸ್!

ಈ ಹಿಂದೆ ಮಾಡಿದ್ದ ಸ್ನೇಹಿತ ಮಾಡಿದ್ದ ತಪ್ಪು ಕ್ಷಮಿಸಲು ಯೋಗ್ಯವಾಗಿದೆಯೇ ಎಂಬುದನ್ನು ಆಲೋಚಿಸಿ. ಸ್ನೇಹಿತನ ಎಲ್ಲ ತಪ್ಪು ಕ್ಷಮಿಸಿ ನೀವು ಅವನ ಬಳಿ ಹೋಗೋದು, ನಿಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿದೆಯೇ, ನಿಮ್ಮ ವ್ಯಕ್ತಿತ್ವಕ್ಕೆ ಹಾನಿ ಮಾಡುತ್ತದೆಯೇ ಎಂಬುದನ್ನು ಚಿಂತಿಸಿ. ನಿಮ್ಮ ಮಾನಸಿಕ ಸ್ಥಿತಿ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತದೆ, ಒತ್ತಡ ಮತ್ತು ನಕಾರಾತ್ಮಕತೆ ಹೆಚ್ಚಿಸಬಲ್ಲದೆ ಎಂಬೆಲ್ಲವನ್ನೂ ಆಲೋಚನೆ ಮಾಡಿ. ಎಲ್ಲವೂ ಸಕಾರಾತ್ಮಕವಾಗಿದ್ದರೆ ಮುಂದಿನ ಹೆಜ್ಜೆ ಇಡಿ.

ಮೊದಲ ಹೆಜ್ಜೆ : ವ್ಯಕ್ತಿ ಮತ್ತೆ ಸ್ನೇಹ ಬೆಳೆಸಲು ಯೋಗ್ಯ ಎಂಬ ಭಾವನೆ ನಿಮಗೆ ಮೂಡಿದ್ರೆ ಒಂದು ಮೆಸ್ಸೇಜ್ ಅಥವಾ ಕಾಲ್ ಮಾಡಿ. ಆ ತಕ್ಷಣ ಆತ ಪ್ರತಿಕ್ರಿಯೆ ನೀಡುತ್ತಾನೆಂಬ ನಿರೀಕ್ಷೆ ಬೇಡ. ಹತ್ತು ದಿನಗಳ ನಂತ್ರ ಮತ್ತೆ ಪ್ರಯತ್ನ ಮಾಡಿ. ನಿಮ್ಮ ತಪ್ಪಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಿ. ನಿಮ್ಮನ್ನು ಸಮರ್ಥಿಸಿಕೊಳ್ಳುವ ಬದಲು ಆ ಘಟನೆಯಲ್ಲಿ ನಿಮ್ಮ ತಪ್ಪೆಷ್ಟಿದೆ ಎಂಬುದನ್ನು ಹೇಳಿ. ಹಾಗೆಯೇ ಅವರ ವಾದ ಮಂಡಿಸಲು ಸಮಯ ನೀಡಿ. ಅವರನ್ನು ಕ್ಷಮಿಸಲು ನಿಮ್ಮ ಮನಸ್ಸನ್ನು ಸಿದ್ಧವಾಗಿಟ್ಟುಕೊಳ್ಳಿ.  ಮತ್ತೆ ನಂಬಿಕೆ ಹುಟ್ಟಲು ಸಮಯ ಬೇಕು. ಆದ್ದರಿಂದ ನಿಮ್ಮ ಸ್ನೇಹಿತರ ಗಡಿಗಳನ್ನು ಗೌರವಿಸಿ. ಕ್ರಿಯೆಗಳ ಮೂಲಕ ನಿಮ್ಮ ಕಾಳಜಿಯನ್ನು ತೋರಿಸಿ. ಮತ್ತೆ ಸ್ನೇಹ ಬೆಳೆಯಲು ನೀವು ಸಮಯ ಹಾಗೂ ಶ್ರಮದ ಅಗತ್ಯವಿರುತ್ತದೆ ಎಂಬುದು ನೆನಪಿರಲಿ. 

ನಾಸಾದೊಂದಿಗೆ ಕೆಲಸ ಮಾಡಿದ್ದ ಭಾರತದ ಮ್ಯಾಥ್ಸ್ ಜೀನಿಯಸ್ ವಸಿಷ್ಠ ಬದುಕು ದುರಂತ ಹಾದಿ ಕಂಡಿದ್ದೇಕೆ?

ನೆನಪಿಡಬೇಕಾದ ಕೆಲ ಅಂಶ : ಸ್ನೇಹವನ್ನು ಮರುಸ್ಥಾಪಿಸುವ ಸಮಯದಲ್ಲಿ ನೀವು ತಾಳ್ಮೆ ಹೊಂದಿರಬೇಕು. ಸ್ನೇಹಿತರ ದೃಷ್ಟಿಕೋನ ಅರ್ಥ ಮಾಡಿಕೊಳ್ಳಬೇಕು. ಪರಸ್ಪರ ಪ್ರಯತ್ನ ಹಾಗೂ ಸಂವಹನ ಅಗತ್ಯವಾಗುತ್ತದೆ. 

Latest Videos
Follow Us:
Download App:
  • android
  • ios