ನಿಮಗೆ ಸಂತೋಷವಾಗಿ ಇರೋಕೆ ಆಗ್ತಾ ಇಲ್ವಾ?
ಕೆಲವೊಮ್ಮೆ ಹಿಂಜರಿಕೆ ನಮ್ಮನ್ನು ಪೂರ್ತಿ ಸಂತೋಷ ಅನುಭವಿಸಲಾಗದಂತೆ ಮಾಡಿಬಿಡುತ್ತದೆ. ಎಲ್ಲಿ ಹೋದರೂ ಸಂತೋಷವಾಗಿರೋಕೆ ಏನೇನೋ ಅಡ್ಡಿ ಆತಂಕಗಳನ್ನು ನಾವೇ ಕಲ್ಪಿಸಿಕೊಳ್ಳುತ್ತಾ ಇರುತ್ತೇವೆ. ನಿಜಕ್ಕೂ ಹಾಗಿರೋಲ್ಲ. ನಾವು ನಾವೇ ಹಾಕಿಕೊಂಡ ಈ ಬೇಲಿಗಳನ್ನು ದಾಟಿದರೆ ಹ್ಯಾಪಿನೆಸ್ ಗ್ಯಾರಂಟಿ,
ಸೋಫಿಯಾ ಮೊದಲ ಬಾರಿಗೆ ಡ್ಯಾನ್ಸ್ ಮಾಡಿದಾಗ ಆಕೆಗೆ ಐವತ್ತು ವರ್ಷ. ಆಕೆ ಡ್ಯಾನ್ಸ್ ಕಲಿತಿರಲಿಲ್ಲ. ಆದರೆ ಡ್ಯಾನ್ಸ್ ಮಾಡುವ ಅಸೆ ಇದ್ದೇ ಇತ್ತು. ಆದರೆ, ಕಲಿಯದೆ ಡ್ಯಾನ್ಸ್ ಮಾಡಿದರೆ ಯಾರು ಏನಂದುಕೊಳ್ಳುತ್ತಾರೋ ಎಂಬ ಹಿಂಜರಿಕೆ ಆಕೆಯನ್ನು ಕಟ್ಟಿ ಹಾಕಿತ್ತು. ಹೈಸ್ಕೂಲ್ ಗೆಳತಿಯರು ಒಟ್ಟು ಸೇರಿ ಒಮ್ಮೆ ಗುಂಡು ಹಾಕಿದಾಗ, ಆಕೆಯ ಹಳೇ ಗೆಳೆಯ ಡ್ಯಾನ್ಸ್‌ಗೆ ಕರೆದ. ಮೊದಲ ಬಾರಿಗೆ ಆಕೆ ಮೈ ಚಳಿ ಬಿಟ್ಟು ನರ್ತಿಸಿದಳು. ಮೈಯೆಲ್ಲ ಹಗುರಾಗಿ ಎಲ್ಲೋ ಆಕಾಶದಲ್ಲಿ ತೇಲಿದ ಭಾವ. ಆಕೆಯ ಡ್ಯಾನ್ಸ್ ಮುಗಿದ ಬಳಿಕ ಗೆಳತಿಯರು ಕೇಳಿದರು- ಯಾವಾಗ ಡ್ಯಾನ್ಸ್ ಕಲಿತೆ ನೀನು?
ಮನೆಗೆಲಸವೇನಿದ್ರೂ ಪತ್ನಿಗೆ ಎನ್ನೋ ಪತಿ ನೀವಾ?
ಕೆಲವೊಮ್ಮೆ ಹಿಂಜರಿಕೆ ನಮ್ಮನ್ನು ಪೂರ್ತಿ ಸಂತೋಷ ಅನುಭವಿಸಲಾಗದಂತೆ ಮಾಡಿಬಿಡುತ್ತದೆ. ಎಲ್ಲಿ ಹೋದರೂ ಸಂತೋಷವಾಗಿರೋಕೆ ಏನೇನೋ ಅಡ್ಡಿ ಆತಂಕಗಳನ್ನು ನಾವೇ ಕಲ್ಪಿಸಿಕೊಳ್ಳುತ್ತಾ ಇರುತ್ತೇವೆ. ನಿಜಕ್ಕೂ ಹಾಗಿರೋಲ್ಲ. ನಾವು ನಾವೇ ಹಾಕಿಕೊಂಡ ಈ ಬೇಲಿಗಳನ್ನು ದಾಟಿದರೆ ಹ್ಯಾಪಿನೆಸ್ ಗ್ಯಾರಂಟಿ, ಹಾಗಿದ್ರೆ ನಮ್ಮನ್ನು ತಡೆಯೋದೇನು, ಅದರಿಂದ ಪಾರಾಗೋದು ಹೇಗೆ, ತಿಳಿಯೋಣ ಬನ್ನಿ.
ಜನ ಏನಂದ್ಕೋತಾರೋ!
ಇದು ಮೊದಲನೇ ಅಡ್ಡಿ. ಬಿಕಿನಿ ಹಾಕಿ ಬೀಚಿಗಿಳಿದರೆ ಜನ ಏನಂದುಕೋತಾರೋ, ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದರೆ ಏನು ತಿಳೀತಾರೋ, ಫ್ರೆಂಡ್ ಜೊತೆ ರಾತ್ರಿ ಗುಂಡು ಹಾಕಿದರೆ ಉಳಿದವು ಏನಂತಾರೋ- ಇದೆಲ್ಲ ಬಿಟ್ಹಾಕಿ. ಯಾಕೆಂದರೆ ಅಂದುಕೊಳ್ಳುವವರು ಅಂದುಕೊಳ್ಳುತ್ತಲೇ ಇರುತ್ತಾರೆ. ಕೆಲವು ಕ್ಷಣದ ಬಳಿಕ ಮರೆತೂ ಬಿಡುತ್ತಾರೆ, ಬೇರೊಂದು ಗಾಸಿಪ್‌ನಲ್ಲಿ ಮಗ್ನರಾಗುತ್ತಾರೆ, ಇಂಥವರಿಗಾಗಿ ನಿಮ್ಮ ಸಂತೋಷ ಕಳೆದುಕೊಳ್ಳುವುದು ಸರಿಯಾ? ವಿಚಾರ ಮಾಡಿ.
ದುಃಖದಿಂದ ನಿಮ್ಮನ್ನು ಮೇಲೆತ್ತುವ ಎರಡು ಕತೆಗಳು
ಮತ್ತದೇ ರೊಟೀನು, ಅದೇ ಬೇಜಾರು
ರೊಟೀನ್ ಅಥವಾ ಅದೇ ಅದೇ ದಿನಚರಿ ಎಂಬುದು ಯಾರಿಗಾದರೂ ಬೇಜಾರು ಹುಟ್ಟಿಸುವಂಥದ್ದು. ಹೊಸ ಸಂಗತಿಗಳನ್ನು ಟ್ರೈ ಮಾಡದೇ ಇದ್ದಾಗ, ಹೊಸ ಪ್ರಯತ್ನದಲ್ಲಿ ವಿಫಲನಾಗಬಹುದು ಎಂಬ ಆತಂಕದಿಂದ ಮಾಡದೆ ಉಳಿದಾಗಲೆಲ್ಲ ನಿಮ್ಮನ್ನು ಈ ಬೋರ್‌ಡಮ್ ಅಥವಾ ಏಕತಾನತೆ ಕವಿದುಬಿಡುತ್ತದೆ. ಹಳೆ ದಿನಚರಿಯನ್ನೇ ಹೊಸ ರೀತಿಯಲ್ಲಿ ಮಾಡಿದಾಗ ಉತ್ಸಾಹ, ಖುಷಿ ಮೂಡುತ್ತದೆ.
ಹೊಸ ಹೊಸಾ ಅನುಭವ
ಹೊಸ ಅನುಭವಗಳನ್ನು ಪಡೆಯಲು ಅಂಜುತ್ತೇವೆ. ಹೊಸ ಹಾದಿಗಳಲ್ಲಿ ನಡೆಯಲು ಭಯಪಡುತ್ತೇವೆ. ಇದೇ ನಮ್ಮ ಸೀಮಿತ ಅನುಭವಕ್ಕೂ ಬೋರ್‌ಗೂ ಕಾರಣ. ನಿತ್ಯ ಹೋಗುವ ದಾರಿಗಿಂತ ಬೇರೆ ದಾರಿಯಲ್ಲಿ ಆಫೀಸ್‌ಗೆ ಹೋದರೆ ಹೊಸ ಅನುಭವ ಆಗುವುದಿಲ್ಲವೇ? ಹಾಗೆ ಒಮ್ಮೊಮ್ಮೆಯಾದರೂ ಹೊಸ ರುಚಿ, ಹೊಸ ಕೋಣೆ, ಹೊಸ ಪ್ರೀತಿಯ ಭಂಗಿ, ಹೊಸ ಹೂವು, ಹೊಸ ವಾಕಿಂಗ್- ಇವೆಲ್ಲವೂ ಸಂತಸದಾಯಕವಾಗುತ್ತವೆ.
ವಸ್ತುಗಳೋ ಅನುಭವಗಳೋ?
ನಾವು ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ದುಬಾರಿ ವಸ್ತುಗಳನ್ನು ಕೊಳ್ಳಲು ಹೆಚ್ಚಾಗಿ ವ್ಯಯಿಸುತ್ತೇವೆ. ವಸ್ತುಗಳು ಬೇಕು, ಆದರೆ ಅನುಭವಗಳಿಗಿಂತ ಅವು ದೊಡ್ಡದಲ್ಲ. ನಾಲ್ಕಾರು ದಿನ ರಜೆ ಮಾಡಿ ಹೊಸದೊಂದು ಪ್ರದೇಶ ಸುತ್ತಾಡಿ ಗಳಿಸುವ ಖುಷಿ, ಅನುಭವ, ಜ್ಞಾನ ಇತ್ಯಾದಿಗಳನ್ನು ನಿಮ್ಮ ದೊಡ್ಡ ಟಿವಿ ಕೊಡಲಾರದು. ವಸ್ತುಗಳಿಗಿಂತಲೂ ಅನುಭವಗಳ ಮೇಲೆ ಹಣ ವಿನಿಯೋಗಿಸಿ.
ಸ್ವಾರ್ಥಿಯಾ ನೀವು? ಹೌದಾದ್ರೆ ನಿಮ್ಮ ಆಯಸ್ಸು ಕಡಿಮೆಯಾಗಬಹುದು, ಎಚ್ಚರ
ಆನ್‌ಲೈನ್‌ನಲ್ಲಿ ಹೆಚ್ಚು ಸಮಯ
ನಿಮಗೆ ಗೊತ್ತೇ ಇದೆ- ಆನ್‌ಲೈನ್‌ನಲ್ಲಿ ಅಥವಾ ಫೇಸ್‌ಬುಕ್ ಇತ್ಯಾದಿ ಸೈಟ್‌ಗಳಲ್ಲಿ ಜನ ಹಾಕೋದು ತಮ್ಮ ಲೈಫಿನ ಬೆಸ್ಟ್ ಸಂಗತಿಗಳ ಬಗ್ಗೆ ಮಾತ್ರ. ಇದನ್ನೇ ಮರು ಹೊತ್ತೂ ನೋಡ್ತಾ ಇದ್ದರೆ ನಿಮ್ಮ ಬಗ್ಗೆ ನಿಮಗೇ ನಾನು ಪ್ರಯೋಜನವಿಲ್ಲ, ನನಗೆ ಸಂತೋಷವಿಲ್ಲ ಅಂತೆಲ್ಲ ಅನಿಸಲು ಶುರುವಾಗುತ್ತದೆ, ಅದು ನಿಜವಲ್ಲ. ಆನ್‌ಲೈನ್ ಜಗತ್ತು ರಿಯಾಲಿಟಿಯಲ್ಲ. ಅದರ ಮೇಲೆ ಹೆಚ್ಚು ಸಮಯ ವ್ಯಯಿಸಬೇಡಿ. ಆಗ ನೀವು ಹಗುರಾಗುತ್ತೀರಿ, ಖುಷಿಯಾಗುತ್ತೀರಿ.
ಶ್ರೇಷ್ಠತೆಗಾಗಿ ಒದ್ದಾಟ
ಈ ಜಗತ್ತಿನಲ್ಲಿ ಯಾರೂ ಹಂಡ್ರಡ್ ಪರ್ಸೆಂಟ್ ಪರ್‌ಫೆಕ್ಟ್ ಅಲ್ಲ. ಯಾರ ಜೀವನವೂ ನೂರಕ್ಕೆ ನೂರು ಪರಿಪೂರ್ಣವಲ್ಲ. ಎಲ್ಲರೂ ಎಲ್ಲದನ್ನೂ ಹೊಂದಲು ಸಾಧ್ಯವಿಲ್ಲ. ನಮಗೆಷ್ಟು ಸಾಧ್ಯವೋ ಅಷ್ಟನ್ನು ಪಡೆದು, ಅದರಲ್ಲಿ ಸುಖವಾಗಿರಬೇಕು ಎಂಬುದು ಹಳೆಯ ವೇದಾಂತ ಆದರೂ ನಿಜ. ಪ್ರತೊಯೊಬ್ಬನೂ ಸುಧಾರಿಸಿಕೊಳ್ಳಲು, ಜೀವನ ಉತ್ತಮಪಡಿಸಿಕೊಳ್ಳಲು ಅವಕಾಶ ಇದ್ದೇ ಇದೆ.
ಅಜ್ಜಿ ಬಿಟ್ಹೋದ ಮೇಲೆ ಒಂಟಿ ಅನಿಸ್ತಿದೆ..ಬಾಂಧವ್ಯದ ಬೇನೆಗೆ ಮದ್ದು
ಗೆಳೆಯರ ಸಂಪರ್ಕದಲ್ಲಿರಿ
ಆನ್‌ಲೈನ್ ಸಂಪರ್ಕ ಎಂದರೆ ನಿಜವಾದ ಸಂಪರ್ಕವಲ್ಲ. ನಿಜಕ್ಕೂ ಆಪ್ತರಾದ ಗೆಳೆಯರ ಗೆಳತಿಯರ ಜೊತೆ ತಿಂಗಳಿಗೊಂದು ಭಾರಿಯಾದರೂ ಭೇಟಿ ಮಾಡಿ ಮುಕ್ತವಾಗಿ ಮಾತಾಡುವುದು ನಿಮ್ಮನ್ನು ಎಷ್ಟೋ ಹಗುರಾಗಿಸುತ್ತದೆ.
ನನಗಾಗಿ ಸ್ವಲ್ಪ ಸಮಯ
ಪ್ರತಿದಿನವೂ ಫ್ಯಾಮಿಲಿಗಾಗಿ ದುಡಿಯುತ್ತೀರಿ, ಗಂಡ, ಹೆಂಡತಿ, ಮಕ್ಕಳಿಗಾಗಿ ಸಮಯ ಕೊಡುತ್ತೀರಿ, ನಿಮಗಾಗಿ ಕೊಂಚ ಸಮಯ ಕೊಟ್ಟುಕೊಂಡದ್ದು ಇದೆಯಾ? ಯೋಚಿಸಿ. ನಿಮ್ಮ ಜೊತೆಗೆ ಕೆಲಕಾಲ ನೀವಷ್ಟೇ ಇರಿ. ಅದು ಕೊಡುವ ಸುಖ ಇನ್ಯಾವುದೂ ಕೊಡದು.